ವಾಶಿಂಗ್ಟನ್, ನ.6: ಅಮೆರಿಕ ಗಣರಾಜ್ಯದ 47ನೇ ಅಧ್ಯಕ್ಷರಾಗಿ 76ರ ಹರೆಯದ ಡೋನಾಲ್ಡ್ ಟ್ರಂಪ್ ಅಧಿಕಾರಕ್ಕೇರಿದ್ದಾರೆ. ಭಾರೀ ಪೈಪೋಟಿಯಿಂದ ಕೂಡಿದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್, ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರಿಗಿಂತ ಸ್ಪಷ್ಟ ಮುನ್ನಡೆ ಪಡೆದು ಗೆಲವು ಸಾಧಿಸಿದ್ದಾರೆ.
ಸದ್ಯದ ಅಪ್‌ಡೇಟ್ ಪ್ರಕಾರ ಟ್ರಂಪ್ 276 ಎಲೆಕ್ಟ್ರೋಲ್ ಮತಗಳನ್ನು ಪಡೆದಿದ್ದಾರೆ. ಗೆಲುವು ಸಾಧಿಸಲು 270 ಮತಗಳನ್ನು ಪಡೆಯಬೇಕಿದ್ದು, ಅದಕ್ಕಿಂತ ಆರು ಮತಗಳನ್ನು ಹೆಚ್ಚು ಪಡೆದುಕೊಂಡಿದ್ದಾರೆ. 51 ಪ್ರತಿಶತ ಮತಗಳನ್ನು ಟ್ರಂಪ್ ಪಡೆದಿದ್ದು, ಕಮಲಾ ಹ್ಯಾರಿಸ್ 47 ಪ್ರತಿಶತ ಮತ ಪಡೆದಿದ್ದಾರೆ.
ಯು.ಎಸ್.ನ 50 ರಾಜ್ಯಗಳು ಮತ್ತು ವಾಷಿಂಗ್ಟನ್ ಡಿಸಿ ಸೇರಿ ಒಟ್ಟು 538 ಮತಗಳು ಹಂಚಿಕೆಯಾಗಿದೆ. ಜಾರ್ಜಿಯಾ ಮತ್ತು ಪೆನ್ಸಿಲ್ವೇನಿಯಾದಂತಹ ನಿರ್ಣಾಯಕ ಸ್ವಿಂಗ್ ರಾಜ್ಯಗಳನ್ನು ಗೆದ್ದಿರುವ ಟ್ರಂಪ್ ಅಧ್ಯಕ್ಷ ಸ್ಥಾನವನ್ನು ಪಡೆಯಲು ಅಗತ್ಯವಿರುವ 270 ಚುನಾವಣಾ ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗಾದರೆ ಯಾವ ರಾಜ್ಯಗಳಲ್ಲಿ ಯಾರು ಗೆಲುವು ಸಾಧಿಸಿದರು ಎನ್ನುವ ಪಟ್ಟಿ ಇಲ್ಲಿದೆ.
ಡೊನಾಲ್ಡ್ ಟ್ರಂಪ್ ಗೆಲುವು ಸಾಧಿಸಿದ ರಾಜ್ಯಗಳು : ಅಲಬಾಮಾ, ಅಲಾಸ್ಕಾ, ಅರ್ಕಾನ್ಸಾಸ್, ಫ್ಲೋರಿಡಾ, ಜಾರ್ಜಿಯಾ, ಇದಾಹೊ, ಇಡಿಯಾನಾ, ಅಯೋವಾ, ಕಾನ್ಸಾಸ್, ಕೆಂಟುಕಿ, ಲೂಯಿಸಿಯಾನ, ಮಿಸಿಸಿಪ್ಪಿ, ಮಿಸೌರಿ, ಮೊಂಟಾನಾ, ನೆಬ್ರಸ್ಕಾ, ಉತ್ತರ ಕೆರೊಲಿನಾ, ಉತ್ತರ ಡಕೋಟಾ, ಓಹಿಯೋ, ಒಕ್ಲಹೋಮ, ಪೆನ್ಸಿಲ್ವೇನಿಯಾ, ದಕ್ಷಿಣ ಕೆರೊಲಿನಾ, ದಕ್ಷಿಣ ಡಕೋಟಾ, ಟೆನ್ನೆಸ್ಸೀ, ಟೆಕ್ಸಾಸ್, ಉತಾಹ್, ವಿಸ್ಕಾನ್ಸಿನ್, ಪಶ್ಚಿಮ ವರ್ಜೀನಿಯಾ, ವ್ಯೋಮಿಂಗ್.
ಕಮಲಾ ಹ್ಯಾರಿಸ್ ಗೆದ್ದ ರಾಜ್ಯಗಳು : ಕ್ಯಾಲಿಫೋರ್ನಿಯಾ, ಕೊಲೊರಾಡೋ, ಕನೆಕ್ಟಿಕಟ್, ಡೆಲವೇರ್, ಡಿಸ್ಟ್ರಿಕ್ಟ್ ಆಫ್ ಕೊಲಂಬಿಯಾ, ಹವಾಯಿ, ಇಲಿನಾಯ್ಸ್, ಮೇರಿಲ್ಯಾಂಡ್, ಮ್ಯಾಸಚೂಸೆಟ್ಸ್, ಮಿನ್ನೇಸೋಟ, ನ್ಯೂ ಹ್ಯಾಂಪ್‌ಶೈರ್, ನ್ಯೂಜೆರ್ಸಿ, ನ್ಯೂ ಮೆಕ್ಸಿಕೋ, ನ್ಯೂಯಾರ್ಕ್, ಒರೆಗಾನ್, ರೋಡ್ ಐಲೆಂಡ್, ವರ್ಮೊಂಟ್, ವರ್ಜೀನಿಯಾ, ವಾಷಿಂಗ್ಟನ್.
Discover more from Coastal Times Kannada
Subscribe to get the latest posts sent to your email.
Discussion about this post