• About us
  • Contact us
  • Disclaimer
Thursday, September 24, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಮಂಗಳೂರು: ನೇಪಾಳದಲ್ಲಿ ಕುಳಿತು ವಂಚಿಸುತ್ತಿದ್ದ ಚೀನಾ- ಭಾರತದ 11 ಆರೋಪಿಗಳ ಸೆರೆ, ದಿನಕ್ಕೆ ಒಂದು ಕೋಟಿ ಗಳಿಕೆ, 624 ಬ್ಯಾಂಕ್ ಖಾತೆ ಪತ್ತೆ

Coastal Times by Coastal Times
February 6, 2026
in ಕ್ರೈಮ್ ನ್ಯೂಸ್
ಮಂಗಳೂರು: ನೇಪಾಳದಲ್ಲಿ ಕುಳಿತು ವಂಚಿಸುತ್ತಿದ್ದ ಚೀನಾ- ಭಾರತದ 11 ಆರೋಪಿಗಳ ಸೆರೆ, ದಿನಕ್ಕೆ ಒಂದು ಕೋಟಿ ಗಳಿಕೆ, 624 ಬ್ಯಾಂಕ್ ಖಾತೆ ಪತ್ತೆ
101
VIEWS
WhatsappTelegramShare on FacebookShare on Twitter

ಮಂಗಳೂರು, ಫೆ.5 : ನೇಪಾಳದಲ್ಲಿ ಕುಳಿತು ಭಾರತೀಯರನ್ನು ಗುರಿಯಾಗಿಸಿ ನೂರಾರು ಕೋಟಿ ವಂಚಿಸುತ್ತಿದ್ದ ಸೈಬರ್ ವಂಚಕರ ತಂಡವೊಂದನ್ನು ಮಂಗಳೂರು ನಗರ ಸೆನ್ ಕ್ರೈಂ ಪೊಲೀಸರು ಪತ್ತೆಹಚ್ಚಿದ್ದು ನೇಪಾಳಿ ಪೊಲೀಸರ ಸಹಾಯದಲ್ಲಿ ಒಟ್ಟು 11 ಜನ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಗುರುವಾರ ತನ್ನ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ಬಂಧಿತರನ್ನು ಗುಜರಾತ್‌ನ ಮಕವನ್ ವಿಕ್ರಂ (25), ಪಶ್ಚಿಮ ಬಂಗಾಳದ ಸೌಮ್ಯಾಧಿತ್ಯ ಚಟ್ಟೋಪಾಧ್ಯಾಯ (21), ಜಾರ್ಖಂಡ್‌ನ ಪುಪ್ಲ ಶಿವಕುಮಾರ್ ರಾವ್ (32) ಮತ್ತು ರಾಜೇಶ್ ಮಂಡನ್ (30), ಮಿಥುನ್ ಕುಮಾರ್ ಮಂಗರಾಜ್ (38), ಉತ್ತರ ಪ್ರದೇಶದ ಗೌರವ್ ಪಾಂಡೆ (24) ಮತ್ತು ಹರ್ಷ ಮಿಸ್ರಾ (22) ಹಾಗೂ ಮುಹಮ್ಮದ್ ಆಕೀಬ್ ಅಲಿ (27), ನೌಶಾದ್ ಅಲಿ (34), ಬಿಹಾರ್‌ನ ರಾಜೀವ್ ರಂಜನ್ ಕುಮಾರ್ (30), ರಾಜಸ್ತಾನದ ಓಂ ಪ್ರಕಾಶ್ ಯಾದವ್ (37) ಎಂದು ಗುರುತಿಸಲಾಗಿದೆ.

ಆರೋಪಿಗಳಿಂದ 1 ಲ್ಯಾಪ್‌ಟಾಪ್, 21 ಮೊಬೈಲ್ ಪೋನ್‌ಗಳು, ವಿವಿಧ ಕಂಪನಿಯ 20 ಸಿಮ್‌ಕಾರ್ಡ್‌ಗಳು, ಬೇರೆ ಬೇರೆ ಬ್ಯಾಂಕ್‌ಗಳ 20 ಡೆಬಿಟ್-ಕ್ರೆಡಿಟ್ ಕಾರ್ಡ್‌ಗಳನ್ನು ವಶಪಡಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ. ನಗರದ ವ್ಯಕ್ತಿಯೊಬ್ಬರಿಂದ 1.38 ಕೋ.ರೂ.ವನ್ನು 10 ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡು ವಂಚನೆ ಮಾಡಿದ ಬಗ್ಗೆ ಮಂಗಳೂರು ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದರಂತೆ ತನಿಖೆ ನಡೆಸಿದ ಪೊಲೀಸರು 11 ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಉತ್ತರ ಭಾರತ ಮೂಲದ ಈ ವಂಚಕರು ನೇಪಾಳದಲ್ಲಿ ಕುಳಿತು ಭಾರತೀಯರನ್ನು ಟಾರ್ಗೆಟ್ ಮಾಡಿ ನೂರಾರು ಕೋ.ರೂ. ವಂಚನೆ ಮಾಡುತ್ತಿದ್ದರು. ಈ ತಂಡದಲ್ಲಿ 16 ಮಂದಿ ಭಾರತೀಯರು ಹಾಗೂ ಚೈನಾದ ಹಲವರಿದ್ದಾರೆ. ನೇಪಾಳದ ಪೊಲೀಸರು ಚೈನಾದ ವಂಚಕರನ್ನು ಬಂಧಿಸಿದ್ದಾರೆ. ಭಾರತೀಯ ವಂಚಕರ ಪೈಕಿ ಐವರು ತಲೆಮರೆಸಿ ಕೊಂಡಿದ್ದು ಅವರ ಪತ್ತೆ ಕಾರ್ಯ ಮುಂದುವರೆದಿದೆ ಎಂದರು.

ಆರೋಪಿಗಳ ಮೊಬೈಲ್ ಫೋನ್ ಹಾಗೂ ಲ್ಯಾಪ್‌ಟಾಪ್‌ಗಳನ್ನು ಪರಿಶೀಲಿಸಿದಾಗ 624 ಬ್ಯಾಂಕ್ ಖಾತೆಗಳ ವಿವರಗಳು ಕಂಡು ಬಂದಿದೆ. ಈ ಬ್ಯಾಂಕ್ ಖಾತೆಗಳ ಮೇಲೆ 4,580ಕ್ಕೂ ಅಧಿಕ NCRP PORTALನಲ್ಲಿ ಪ್ರಕರಣಗಳು ದಾಖಲಾಗಿದೆ. ಆ ಪೈಕಿ 1 ಬ್ಯಾಂಕ್ ಖಾತೆಯಲ್ಲಿ 167 ಕೋ.ರೂ. ವರ್ಗಾವಣೆಯಾಗಿದೆ. ಸೆನ್ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ವಂಚನೆಗೆ ಬಳಸಿದ 10 ಬ್ಯಾಂಕ್ ಖಾತೆಗಳಿಗೆ ಸುಮಾರು 30,70,26,725 ರೂ. ವರ್ಗಾವಣೆಯಾಗಿದೆ. ಉಳಿದ 623 ಬ್ಯಾಂಕ್ ಖಾತೆಗಳ ವಿವರಣೆಗಳನ್ನು ಪಡೆಯಲು ಬಾಕಿ ಇದೆ ಎಂದು ಮಾಹಿತಿ ನೀಡಿದ್ದಾರೆ.

ವಂಚಕರ ಒಂದು ತಂಡ ನೇಪಾಳದಲ್ಲಿ ಕುಳಿತು ಸಾಮಾಜಿಕ ಜಾಲತಾಣದ ಮೂಲಕ ಖಾತೆದಾರರನ್ನು ಮತ್ತು ಏಜೆಂಟ್‌ರನ್ನು ನೇಮಕ ಮಾಡಿಕೊಂಡು ವಂಚನೆಯ ಹಣವನ್ನು ವರ್ಗಾವಣೆ ಮಾಡುವುದು ಹಾಗೂ ಹಣವನ್ನು USDTನಲ್ಲಿ ಬದಲಾಯಿಸಿ ನಂತರ ವಿದೇಶಕ್ಕೆ ಕಳುಹಿಸುತ್ತಾರೆ. ವಂಚಕರ ಇನ್ನೊಂದು ತಂಡವು ಕಾಂಬೋಡಿಯಾ ಮತ್ತಿತರ ದೇಶಗಳಲ್ಲಿ ಕುಳಿತು ಹೂಡಿಕೆದಾರರನ್ನು ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕಿಸಿ ವಿದೇಶಗಳಿಗೆ ಕೆಲಸಕ್ಕೆ ಹೋಗಿರುವ ಭಾರತೀಯರನ್ನು ಕೂಡಿ ಹಾಕಿ ಅವರ ಮೂಲಕ ಸ್ಥಳೀಯ ಭಾಷೆಯಲ್ಲಿ ಹೂಡಿಕೆದಾರರಿಗೆ ಹೆಚ್ಚು ಹಣ ಗಳಿಸುವ ಆಮೀಷ ಒಡ್ಡಿ ವಿವಿಧ ಖಾತೆಗಳಿಗೆ ಹಣವನ್ನು ವರ್ಗಾವಣೆ ಮಾಡಿಸುತ್ತಿದ್ದಾರೆ. ಈ ಹಣದ ವಹಿವಾಟನ್ನು ನೇಪಾಳದಲ್ಲಿರುವ ತಂಡವು ನಿಯಂತ್ರಣ ಮಾಡುತ್ತಿರುವುದು ತನಿಖೆಯಿಂದ ತಿಳಿದುಬಂದಿದೆ. ಸೆನ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ದೂರುದಾರರಿಗೆ ನೀಡಿದ 10 ಬ್ಯಾಂಕ್ ಖಾತೆಗಳಲ್ಲಿ ದೇಶ್ಯಾದಂತ NCRP PORTAL ನಲ್ಲಿ ಸುಮಾರು 128 ಪ್ರಕರಣಗಳು ಮತ್ತು 36 ಎಫ್‌ಐಆರ್ ದಾಖಲಾಗಿರುತ್ತದೆ ಎಂದು ಸುಧೀರ್ ಕುಮಾರ್ ರೆಡ್ಡಿ ಮಾಹಿತಿ ನೀಡಿದ್ದಾರೆ.

ಕಾಂಬೋಡಿಯಾ ಮತ್ತು ದುಬೈಗಳಲ್ಲಿ ಕುಳಿತು ಭಾರತದ ನಾಗರಿಕರಿಗೆ ಮುಖ್ಯ ವಂಚಕರು ಅಪರಿಚಿತ ವಾಟ್ಸ್‌ಆ್ಯಪ್ ಮೊಬೈಲ್ ಸಂಖ್ಯೆಗಳ ಮೂಲಕ ಇನ್‌ಸ್ಟಾಗ್ರಾಂ, ಟೆಲಿಗ್ರಾಂ, ಫೇಸ್‌ಬುಕ್‌ಗಳ ಮೂಲಕ ಹೂಡಿಕೆದಾರರನ್ನು ಸಂಪರ್ಕಿಸಿ ಹೆಚ್ಚಿನ ಲಾಭಂಶ ನೀಡುವುದಾಗಿ ಆಮಿಷವೊಡ್ಡುತ್ತಾರೆ. ಹೂಡಿಕೆ ಮಾಡಿದ ಹಣಕ್ಕೆ ಹೆಚ್ಚಿನ ಲಾಭಾಂಶ ಬಂದಿರುವುದಾಗಿ ಆ್ಯಪ್ ಮೂಲಕ ತೋರಿಸುತ್ತಾರೆ. ಪ್ರಾರಂಭದಲ್ಲಿ ಸ್ವಲ್ಪಪ್ರಮಾಣದ ಲಾಭಾಂಶದ ಹಣ ನೀಡಿ ನಂಬಿಕೆ ಬರುವ ಹಾಗೆ ಮಾಡಿದ ನಂತರ ಉಳಿದ ಹಣನ್ನು ಡ್ರಾ ಮಾಡಬೇಕಾದರೆ ಹೆಚ್ಚಿನ ಹಣವನ್ನು ಹೂಡಿಕೆ ಮಾಡಬೇಕೆಂದು ಒತ್ತಾಯಿಸಿ ಹಣವನ್ನು ಹೂಡಿಕೆ ಮಾಡಿಸುತ್ತಾರೆ. ಈ ರೀತಿ ಪ್ರತಿದಿನ ಈ ತಂಡವು ಭಾರತೀಯರನ್ನು ಸುಮಾರು 60 ಲಕ್ಷದಿಂದ 1 ಕೋ.ರೂ.ವರೆಗೆ ಹೂಡಿಕೆ ಮಾಡಿಸುತ್ತದೆ.

ಕಮಿಷನ್ ಆಸೆಗೆ ಒಳಗಾಗಿ ಬ್ಯಾಂಕ್ ಖಾತೆಯನ್ನು ವಂಚಕರಿಗೆ ನೀಡಿದರೆ ಖಾತೆದಾರರು ಸಹ ಆರೋಪಿತರಾಗು ತ್ತಾರೆ. ಮುಖ್ಯ ವಂಚಕರು ವಿದೇಶದಲ್ಲಿ ಕುಳಿತು ನಿರ್ವಹಣೆ ಮಾಡುತ್ತಿರುವುದರಿಂದ ಪ್ರಮುಖ ಆರೋಪಿಗಿಂತ ಮೊದಲೇ ಕಮಿಷನ್ ಆಸೆಗೆ ಒಳಗಾದವರನ್ನು ಕಾನೂನು ಪ್ರಕಾರ ದಸ್ತಗಿರಿ ಮಾಡಲಾಗುತ್ತದೆ ಎಂದು ಪೊಲೀಸ್ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.

*ವಿದೇಶದಲ್ಲಿ ಕುಳಿತುಕೊಂಡು ಸಾಮಾಜಿಕ ಜಾಲತಾಣಗಳ ಮೂಲಕ ವಿವಿಧ ರೀತಿಯ ಆಕರ್ಷಿತ ಜಾಹೀರಾತು ಗಳನ್ನು ನೋಡಿ ಹೆಚ್ಚಿನ ಲಾಭಾಂಶದ ವಂಚನೆಗೆ ಒಳಗಾಗಬೇಡಿ. ಹೂಡಿಕೆ ಮಾಡುವಾಗ ನಕಲಿ ಸೆಬಿ ಸರ್ಟಿಪಿಕೆಟ್, ನಕಲಿ ಡಿಮೇಟ್ ಖಾತೆಗಳನ್ನು ನೋಡಿ ಮೋಸ ಹೋಗಬೇಡಿ. ಹೆಚ್ಚು ಹಣ ಗಳಿಸಬೇಕೆಂಬ ಆಸೆಗೆ ಬಿದ್ದ ಹೆಚ್ಚಿನ ಸಂಖ್ಯೆಯ ವಿದ್ಯಾವಂತರು ಇತ್ತಿಚೀನ ದಿನಗಳಲ್ಲಿ ಆನ್‌ಲೈನ್ ಹೂಡಿಕೆ, ಹಣ ದ್ವಿಗುಣ, ಟ್ರೇಡಿಂಗ್ ಹೂಡಿಕೆಯ ಜಾಲದಲ್ಲಿ ಸಿಲುಕಿ ಹಣವನ್ನು ಕಳೆದುಕೊಳ್ಳುತ್ತಿರುತ್ತಾರೆ. ಹಾಗಾಗಿ ಹೂಡಿಕೆ ಮಾಡಬೇಕಾದರೆ SEBI Registration ಆಗಿರುವ ಸಂಸ್ಥೆ ಅಥವಾ ಬ್ರೋಕರ್ ರವರಲ್ಲಿ ಡಿಮ್ಯಾಟ್ ಮತ್ತು ಟ್ರೇಡಿಂಗ್ ಅಕೌಂಟ್ ಮಾಡಿಸಬೇಕು ಎಂದು ಪೊಲೀಸ್ ಆಯುಕ್ತರು ಮನವಿ ಮಾಡಿದ್ದಾರೆ.

*ವಂಚನೆಯಾದ 1 ಗಂಟೆಯೊಳಗೆ 1930ಕ್ಕೆ ಕರೆ ಮಾಡಬೇಕು. ಹತ್ತಿರದ ಪೊಲೀಸ್ ಠಾಣೆಗೆ ತಕ್ಷಣ ದೂರು ನೀಡಬೇಕು. ಆನ್‌ಲೈನ್ ಗೇಮ್, ನಕಲಿ ಲೋನ್ ಆ್ಯಪ್, ನಕಲಿ ಪಾರ್ಟ್ ಟೈಮ್ ಜಾಬ್, ನಕಲಿ ಜಾಬ್ ಆಫರ್‌ಗಳಿಂದ ದೂರ ಇರಬೇಕು. APK ಫೈಲ್ ಮತ್ತು ಲಿಂಕ್‌ಗಳ ಬಗ್ಗೆ ಜಾಗೃತೆ ವಹಿಸಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಬರುವ ಜಾಹೀರಾತುಗಳು, ಆಕರ್ಷಿಕ ಹೂಡಿಕೆಗಳ ಬಗ್ಗೆ ಜಾಗರೂಕರಾಗಿರಬೇಕು. ಸಾಮಾಜಿಕ ಜಾಲತಾಣದಲ್ಲಿ ಪ್ರೀತಿ ಪ್ರೇಮ, ಗೆಳೆತನದ ಮೂಲಕ ಬ್ಯಾಂಕ್ ಖಾತೆಗಳನ್ನು ಮತ್ತು ಸಿಮ್‌ಗಳನ್ನು ನೀಡುವುದು, ಅರೆನಗ್ನ, ನಗ್ನಚಿತ್ರಗಳನ್ನು ಹಂಚಿಕೊಳ್ಳುವುದರಿಂದ ದೂರವಿರಿ ಎಂದು ಪೊಲೀಸ್ ಆಯುಕ್ತರು ಮನವಿ ಮಾಡಿದ್ದಾರೆ.

*ವಿಡೀಯೋ ಕಾಲ್ ಮೂಲಕ CBI, POLICE, JUDGES, CUSTOMS, SEBI, TRAI ಮುಂತಾದ ಇಲಾಖೆಗಳನ್ನು ಬಳಸಿಕೊಳ್ಳುವ ನಕಲಿ ಅಧಿಕಾರಿಗಳಂತೆ ನಟಿಸಿ ಬಂಧನ ಬೆದರಿಕೆ ನೀಡಿ ಹಣವನ್ನು ಲೂಟಿ ಮಾಡುವ ವ್ಯಕ್ತಿಗಳಿಂದ ದೂರವಿರಿ. ಆನ್‌ಲೈನ್ ಮೂಲಕ ಹೊಟೇಲ್, ಕ್ಯಾಬ್, ಫ್ಲೈಟ್ಸ್ ಬುಕ್ಕಿಂಗ್ ಮಾಡುವಾಗ ಎಚ್ಚರದಿಂದಿರಬೇಕು. ಗೂಗಲ್‌ನಲ್ಲಿ ಸಿಗುವಂತಹ ಯಾವುದೇ ಕಸ್ಟಮರ್ ಕೇರ್‌ಗಳ ಬಗ್ಗೆ ಎಚ್ಚರದಿಂದಿರಬೇಕು. ಯಾವುದೇ ಒಟಿಪಿಗಳನ್ನು ಶೇರ್ ಮಾಡಬಾರದು ಎಂದು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಸೂಚಿಸಿದ್ದಾರೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ನಂತೂರಿನಲ್ಲಿ ಸ್ಕೂಟರ್ ಗೆ ಖಾಸಗಿ ಬಸ್ ಡಿಕ್ಕಿ, ನೆಲಕ್ಕೆ ಬಿದ್ದ ಹಿಂಬದಿ ಸವಾರೆ ಮೇಲೆ ಹರಿದ ಬಸ್, ಯುವತಿ ದಾರುಣ ಸಾವು

Next Post

ಪುತ್ತೂರಿನಲ್ಲಿ ಒಂದು ಕ್ವಿಂಟಾಲ್ ಗಾಂಜಾ ವಶಕ್ಕೆ ; ಒರಿಸ್ಸಾ ಮೂಲದ ವ್ಯಕ್ತಿ ಸೇರಿ ಬೆಳ್ತಂಗಡಿಯ ಮೂವರು ಆರೋಪಿಗಳ ಬಂಧನ

Related Posts

ಶಾರ್ಜಾದಲ್ಲಿ ಕುಂದಾಪುರ ಮೂಲದ ಪ್ರಕಾಶ್ ಭೀಕರ ಕೊಲೆ: 9 ತುಂಡು ಮಾಡಿದ ಕಾರಿನ ಡಿಕ್ಕಿಯಲ್ಲಿ ತುಂಬಿಟ್ಟ ದುಷ್ಕರ್ಮಿಗಳು!
ಕ್ರೈಮ್ ನ್ಯೂಸ್

ಶಾರ್ಜಾದಲ್ಲಿ ಕುಂದಾಪುರ ಮೂಲದ ಪ್ರಕಾಶ್ ಭೀಕರ ಕೊಲೆ: 9 ತುಂಡು ಮಾಡಿದ ಕಾರಿನ ಡಿಕ್ಕಿಯಲ್ಲಿ ತುಂಬಿಟ್ಟ ದುಷ್ಕರ್ಮಿಗಳು!

September 22, 2026
125
ಮಂಗಳೂರು: ಡಾಟಾ ಎಂಟ್ರಿ ವರ್ಕ್ ಫ್ರಮ್ ಹೋಮ್ ಹೆಸರಲ್ಲಿ ಸೈಬರ್ ಖದೀಮರ ಖೆಡ್ಡಾ: 200 ರೂ. ಆಸೆಗೆ 9.33 ಲಕ್ಷ ಕಳೆದುಕೊಂಡ ಯುವತಿ
ಕ್ರೈಮ್ ನ್ಯೂಸ್

ಮಂಗಳೂರು: ಡಾಟಾ ಎಂಟ್ರಿ ವರ್ಕ್ ಫ್ರಮ್ ಹೋಮ್ ಹೆಸರಲ್ಲಿ ಸೈಬರ್ ಖದೀಮರ ಖೆಡ್ಡಾ: 200 ರೂ. ಆಸೆಗೆ 9.33 ಲಕ್ಷ ಕಳೆದುಕೊಂಡ ಯುವತಿ

September 22, 2026
42
Next Post
ಪುತ್ತೂರಿನಲ್ಲಿ ಒಂದು ಕ್ವಿಂಟಾಲ್ ಗಾಂಜಾ ವಶಕ್ಕೆ ; ಒರಿಸ್ಸಾ ಮೂಲದ ವ್ಯಕ್ತಿ ಸೇರಿ ಬೆಳ್ತಂಗಡಿಯ ಮೂವರು ಆರೋಪಿಗಳ ಬಂಧನ

ಪುತ್ತೂರಿನಲ್ಲಿ ಒಂದು ಕ್ವಿಂಟಾಲ್ ಗಾಂಜಾ ವಶಕ್ಕೆ ; ಒರಿಸ್ಸಾ ಮೂಲದ ವ್ಯಕ್ತಿ ಸೇರಿ ಬೆಳ್ತಂಗಡಿಯ ಮೂವರು ಆರೋಪಿಗಳ ಬಂಧನ

Discussion about this post

Recent News

ಬೀದರ್ ಶಾಹೀನ್ ವಿದ್ಯಾಸಂಸ್ಥೆಯಲ್ಲಿ ಆರೋಗ್ಯ ನಿರ್ಲಕ್ಷ್ಯ; ಕೋಮಾ ಸ್ಥಿತಿಯಲ್ಲಿ ಮಗಳ ಜೀವನ್ಮರಣ ಹೋರಾಟ, ಸಮಗ್ರ ತನಿಖೆಗೆ ಪೋಷಕರ ಒತ್ತಾಯ.!

ಬೀದರ್ ಶಾಹೀನ್ ವಿದ್ಯಾಸಂಸ್ಥೆಯಲ್ಲಿ ಆರೋಗ್ಯ ನಿರ್ಲಕ್ಷ್ಯ; ಕೋಮಾ ಸ್ಥಿತಿಯಲ್ಲಿ ಮಗಳ ಜೀವನ್ಮರಣ ಹೋರಾಟ, ಸಮಗ್ರ ತನಿಖೆಗೆ ಪೋಷಕರ ಒತ್ತಾಯ.!

September 23, 2026
43
ಶಾರ್ಜಾದಲ್ಲಿ ಕುಂದಾಪುರ ಮೂಲದ ಪ್ರಕಾಶ್ ಭೀಕರ ಕೊಲೆ: 9 ತುಂಡು ಮಾಡಿದ ಕಾರಿನ ಡಿಕ್ಕಿಯಲ್ಲಿ ತುಂಬಿಟ್ಟ ದುಷ್ಕರ್ಮಿಗಳು!

ಶಾರ್ಜಾದಲ್ಲಿ ಕುಂದಾಪುರ ಮೂಲದ ಪ್ರಕಾಶ್ ಭೀಕರ ಕೊಲೆ: 9 ತುಂಡು ಮಾಡಿದ ಕಾರಿನ ಡಿಕ್ಕಿಯಲ್ಲಿ ತುಂಬಿಟ್ಟ ದುಷ್ಕರ್ಮಿಗಳು!

September 22, 2026
125
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಬೀದರ್ ಶಾಹೀನ್ ವಿದ್ಯಾಸಂಸ್ಥೆಯಲ್ಲಿ ಆರೋಗ್ಯ ನಿರ್ಲಕ್ಷ್ಯ; ಕೋಮಾ ಸ್ಥಿತಿಯಲ್ಲಿ ಮಗಳ ಜೀವನ್ಮರಣ ಹೋರಾಟ, ಸಮಗ್ರ ತನಿಖೆಗೆ ಪೋಷಕರ ಒತ್ತಾಯ.!

ಬೀದರ್ ಶಾಹೀನ್ ವಿದ್ಯಾಸಂಸ್ಥೆಯಲ್ಲಿ ಆರೋಗ್ಯ ನಿರ್ಲಕ್ಷ್ಯ; ಕೋಮಾ ಸ್ಥಿತಿಯಲ್ಲಿ ಮಗಳ ಜೀವನ್ಮರಣ ಹೋರಾಟ, ಸಮಗ್ರ ತನಿಖೆಗೆ ಪೋಷಕರ ಒತ್ತಾಯ.!

September 23, 2026
ಶಾರ್ಜಾದಲ್ಲಿ ಕುಂದಾಪುರ ಮೂಲದ ಪ್ರಕಾಶ್ ಭೀಕರ ಕೊಲೆ: 9 ತುಂಡು ಮಾಡಿದ ಕಾರಿನ ಡಿಕ್ಕಿಯಲ್ಲಿ ತುಂಬಿಟ್ಟ ದುಷ್ಕರ್ಮಿಗಳು!

ಶಾರ್ಜಾದಲ್ಲಿ ಕುಂದಾಪುರ ಮೂಲದ ಪ್ರಕಾಶ್ ಭೀಕರ ಕೊಲೆ: 9 ತುಂಡು ಮಾಡಿದ ಕಾರಿನ ಡಿಕ್ಕಿಯಲ್ಲಿ ತುಂಬಿಟ್ಟ ದುಷ್ಕರ್ಮಿಗಳು!

September 22, 2026
ಮಂಗಳೂರು: ಡಾಟಾ ಎಂಟ್ರಿ ವರ್ಕ್ ಫ್ರಮ್ ಹೋಮ್ ಹೆಸರಲ್ಲಿ ಸೈಬರ್ ಖದೀಮರ ಖೆಡ್ಡಾ: 200 ರೂ. ಆಸೆಗೆ 9.33 ಲಕ್ಷ ಕಳೆದುಕೊಂಡ ಯುವತಿ

ಮಂಗಳೂರು: ಡಾಟಾ ಎಂಟ್ರಿ ವರ್ಕ್ ಫ್ರಮ್ ಹೋಮ್ ಹೆಸರಲ್ಲಿ ಸೈಬರ್ ಖದೀಮರ ಖೆಡ್ಡಾ: 200 ರೂ. ಆಸೆಗೆ 9.33 ಲಕ್ಷ ಕಳೆದುಕೊಂಡ ಯುವತಿ

September 22, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d