• About us
  • Contact us
  • Disclaimer
Thursday, November 12, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಬೀದರ್ ಶಾಹೀನ್ ವಿದ್ಯಾಸಂಸ್ಥೆಯಲ್ಲಿ ಆರೋಗ್ಯ ನಿರ್ಲಕ್ಷ್ಯ; ಕೋಮಾ ಸ್ಥಿತಿಯಲ್ಲಿ ಮಗಳ ಜೀವನ್ಮರಣ ಹೋರಾಟ, ಸಮಗ್ರ ತನಿಖೆಗೆ ಪೋಷಕರ ಒತ್ತಾಯ.!

Coastal Times by Coastal Times
September 23, 2026
in ಕರಾವಳಿ
ಬೀದರ್ ಶಾಹೀನ್ ವಿದ್ಯಾಸಂಸ್ಥೆಯಲ್ಲಿ ಆರೋಗ್ಯ ನಿರ್ಲಕ್ಷ್ಯ; ಕೋಮಾ ಸ್ಥಿತಿಯಲ್ಲಿ ಮಗಳ ಜೀವನ್ಮರಣ ಹೋರಾಟ, ಸಮಗ್ರ ತನಿಖೆಗೆ ಪೋಷಕರ ಒತ್ತಾಯ.!
56
VIEWS
WhatsappTelegramShare on FacebookShare on Twitter

ಮಂಗಳೂರು, ಸೆ.22: ಬೀದರಿನ ಶಾಹೀನ್ ವಿದ್ಯಾಸಂಸ್ಥೆಯಲ್ಲಿ ಇಸ್ಲಾಮಿಕ್ ಮತ್ತು ಪಿಯು-ಸಿಎ ಶಿಕ್ಷಣಕ್ಕಾಗಿ ಸೇರ್ಪಡೆಯಾಗಿ, ಹಾಸ್ಟೆಲಿನಲ್ಲಿ ಉಳಿದುಕೊಂಡಿದ್ದ ಮಂಗಳೂರಿನ ವಿದ್ಯಾರ್ಥಿನಿಯೊಬ್ಬಳು ಒಂದೂವರೆ ತಿಂಗಳಲ್ಲಿ ತೀವ್ರ ಅಸ್ವಸ್ಥಳಾಗಿ ಆಸ್ಪತ್ರೆಗೆ ದಾಖಲಾಗಿ ಕೋಮಾ ಸ್ಥಿತಿಗೆ ಹೋದ ಘಟನೆ ನಡೆದಿದ್ದು, ಹೆತ್ತವರು ಗಾಬರಿಗೊಂಡು ಶಾಹೀನ್ ಸಂಸ್ಥೆಯ ನಿರ್ಲಕ್ಷ್ಯದ ಬಗ್ಗೆ ತನಿಖೆಗೆ ಆಗ್ರಹಿಸಿದ್ದಾರೆ.

ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿದ್ಯಾರ್ಥಿನಿಯ ತಂದೆ ಅಶ್ವಾಕ್ ಶೇಕ್, ಹಾಸ್ಟೆಲ್‌ನಲ್ಲಿದ್ದ ವೇಳೆ ತಮ್ಮ ಪುತ್ರಿ ತೀವ್ರ ಅನಾರೋಗ್ಯ ಹಾಗೂ ಹೊಟ್ಟೆ ನೋವಿನಿಂದ ಬಳಲಿದ್ದರು. ಈ ವೇಳೆ ಹಾಸ್ಟೆಲ್‌ನ ನರ್ಸಿಂಗ್ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟರೂ ಸೂಕ್ತ ಸಮಯದಲ್ಲಿ ವೈದ್ಯಕೀಯ ಚಿಕಿತ್ಸೆ ಒದಗಿಸದೆ ಮತ್ತು ಆಸ್ಪತ್ರೆಗೆ ದಾಖಲಿಸದೆ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಆರೋಪಿಸಿದರು.

ಮಗಳು ಅನಾರೋಗ್ಯಕ್ಕೆ ಒಳಗಾಗಿರುವ ಮಾಹಿತಿ ತಿಳಿದು ಬಳಿಕ ಅವರನ್ನು ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಆನಂತರ, ಕೆಎಂಸಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದೇವೆ, ಈಗ ಕೋಮಾ ಸ್ಥಿತಿಗೆ ಹೋಗಿದ್ದಾಳೆ. ಟೈಫಾಯ್ಡ್ ಬಿಗಡಾಯಿಸಿದೆ ಎಂದು ವೈದ್ಯರು ಹೇಳುತ್ತಿದ್ದಾರೆ. 20 ದಿನಗಳ ಚಿಕಿತ್ಸೆಗೆ 35 ಲಕ್ಷಕ್ಕೂ ಹೆಚ್ಚು ಖರ್ಚು ಮಾಡಿದ್ದೇವೆ. ಇದರ ನಡುವೆ, ಆಗಸ್ಚ್ 15ರಂದು ಆರೋಗ್ಯ ಸಚಿವ ಯುಟಿ ಖಾದರ್ ಅವರನ್ನು ಕಂಡು ವಿಷಯ ತಿಳಿಸಿದ್ದೆವು. ಶಾಹೀನ್ ಸಂಸ್ಥೆಯ ನಿರ್ಲಕ್ಷ್ಯ ಮತ್ತು ಅಲ್ಲಿ ಇನ್ನೂ ಹಲವು  ಮಕ್ಕಳು ಟೈಫಾಯ್ಡ್ ಇನ್ನಿತರ ಕಾಯಿಲೆಗಳಿಂದ ಬಳಲುತ್ತಿರುವುದನ್ನು ಹೇಳಿದ್ದೆವು. ಆದರೆ ಖಾದರ್ ಅವರು ತನಗೆ ವಾಟ್ಸಪ್ ಮಾಡಿಯೆಂದು ಹೇಳಿದ್ದು ಬಿಟ್ಟರೆ ನಮ್ಮ ನೋವಿಗೆ ಸ್ಪಂದಿಸಿಲ್ಲ ಎಂದು ವಿದ್ಯಾರ್ಥಿನಿಯ ಹೆತ್ತವರಾದ ಅಶ್ಫಾಕ್ ಶೇಕ್ ಸುದ್ದಿಗೋಷ್ಟಿಯಲ್ಲಿ ನೋವು ಹೇಳಿಕೊಂಡಿದ್ದಾರೆ.

ಶಾಹೀನ್ ಸಂಸ್ಥೆಯ ಹಾಸ್ಟೆಲ್ ನವರ ನಿರ್ಲಕ್ಷ್ಯದಿಂದ ನನ್ನ ಮಗಳಿಗೆ ಈ ಸ್ಥಿತಿಯಾಗಿದೆ. ಏನೇ ಆರೋಗ್ಯ ತೊಂದರೆಯಾದರೂ ನಮಗೆ ಹೇಳಬೇಕಿತ್ತು. ಇಸ್ಲಾಮಿಕ್ ಶಿಕ್ಷಣ ಮತ್ತು ಪಿಯುಸಿಯಿಂದಲೇ ಸಿಎ ಶಿಕ್ಷಣ ಸಿಗುತ್ತದೆ ಎನ್ನುವ ಕಾರಣಕ್ಕೆ ಮಗಳನ್ನು ಅಲ್ಲಿಗೆ ಸೇರಿಸಿದ್ದೆವು. ಈಗ ಗೋಗರೆಯುವ ಸ್ಥಿತಿಯಾಗಿದೆ. ಮಗಳ ಜೀವ ಉಳಿಸುವುದೇ ಈಗ ಮುಖ್ಯವಾಗಿದ್ದು, ಶಾಹೀನ್ ಸಂಸ್ಥೆಯವರು ವೈದ್ಯಕೀಯ ಚಿಕಿತ್ಸೆಗಾಗಿ ನೆರವು ಕೊಡಬೇಕು. ಚಿಕಿತ್ಸೆಗಾಗಿ ಈಗಾಗಲೇ ಅನುಭವಿಸಿರುವ ಆರ್ಥಿಕ ಹೊರೆಗಾಗಿ ಮಾನವೀಯ ನೆಲೆಯಲ್ಲಿ ನೆರವು ಯಾಚಿಸುತ್ತಿದ್ದೇನೆ ಎಂದು ಹೇಳಿದರು.

ಮಂಗಳೂರಿಗೆ ಕರೆತಂದು ಚಿಕಿತ್ಸೆ ನೀಡುತ್ತಿದ್ದರೂ, ಶಾಹೀನ್ ಸಂಸ್ಥೆಯವರು ಮಗಳ ಸ್ಥಿತಿ ಹೇಗಿದೆ ಎಂದು ಈವರೆಗೂ ಕೇಳಿಲ್ಲ. ನಮಗೆ ಬೇಕಿರುವುದು ಆರೋಪ, ಪ್ರತ್ಯಾರೋಪ ಅಲ್ಲ. ಶಿಕ್ಷಣಕ್ಕಾಗಿ ಹಾಸ್ಟೆಲ್ ಸೇರಿಸಿದ ಬಳಿಕ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ಇಟ್ಟುಕೊಳ್ಳಬೇಕಲ್ವಾ.. ಶಾಹೀನ್ ಸಂಸ್ಥೆಯವರು ಯಾಕಾಗಿ ನಿರ್ಲಕ್ಷ್ಯ ವಹಿಸಿದ್ದಾರೆ, ಅಲ್ಲಿ ನೀಡಿರುವ ಚಿಕಿತ್ಸೆಯ ವಿವರಗಳೇನು, ವೈದ್ಯಕೀಯ ದಾಖಲೆಗಳನ್ನು ನೀಡಬೇಕು. ಇದರ ಬಗ್ಗೆ ಆರೋಗ್ಯ ಇಲಾಖೆ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ವಿದ್ಯಾರ್ಥಿನಿಯ ಕುಟುಂಬದ ಸೈಯದ್ ಶಾರೀಕ್, ಅನ್ಸಾರ್ ಅಲಿ, ಶೌಕತ್ ಉಪಸ್ಥಿತರಿದ್ದರು.

ಸಿಎಂ, ಶಿಕ್ಷಣ ಮಂತ್ರಿಗೂ ಮನವಿ : ರಾಜ್ಯದ ಆರೋಗ್ಯ ಸಚಿವ ಯು.ಟಿ.ಖಾದರ್ ಅವರ ಬಳಿಗೆ ಈ ವಿಚಾರವನ್ನು ತಿಳಿಸಿದ್ದೇವೆ. ಆದರೆ ಅವರು ಇದಕ್ಕೆ ಪೂರಕವಾಗಿ ಸ್ಪಂದಿಸಿಲ್ಲ. ಸೆ.15ರಂದು ಅವರ ವಾಟ್ಸಾಪ್‌ಗೂ ಮಾಹಿತಿ ಕೊಟ್ಟಿದ್ದೇವೆ. ನಮಗೆ ನೆರವು ಸಿಗುತ್ತಿಲ್ಲ. ಈಗಾಗಲೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಶಿಕ್ಷಣ ಸಚಿವರಿಗೂ ಮನವಿ ನೀಡುವ ಕೆಲಸ ಮಾಡಿದ್ದೇವೆ ಎಂದು ಅಶ್ಪಾಕ್ ಶೇಕ್ ಹೇಳಿದರು.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಶಾರ್ಜಾದಲ್ಲಿ ಕುಂದಾಪುರ ಮೂಲದ ಪ್ರಕಾಶ್ ಭೀಕರ ಕೊಲೆ: 9 ತುಂಡು ಮಾಡಿದ ಕಾರಿನ ಡಿಕ್ಕಿಯಲ್ಲಿ ತುಂಬಿಟ್ಟ ದುಷ್ಕರ್ಮಿಗಳು!

Next Post

ಉಡುಪಿ ಪೊಲೀಸರ ಬೃಹತ್ ಕಾರ್ಯಾಚರಣೆ; ಪ್ರತ್ಯೇಕ ಪ್ರಕರಣದಲ್ಲಿ 9 ಮಂದಿ ಆರೋಪಿಗಳ ಸೆರೆ, ಕೇರಳದಿಂದ ಡ್ರಗ್ಸ್ ಪೂರೈಕೆ ಪತ್ತೆ

Related Posts

ಮಾ ಮಂತ್ರ ವೆಂಚರ್ಸ್ ಬ್ಯಾನರ್ ಅಡಿಯಲ್ಲಿ ಪಿಕೆ ಪ್ರೊಡಕ್ಷನ್ ಅರ್ಪಿಸುವ, ಮಹಿಳಾ ನಿರ್ದೇಶನದ ಹೊಸ ತುಳು-ಕನ್ನಡ ಸಿನಿಮಾಕ್ಕೆ ಶೀಘ್ರದಲ್ಲೇ ಮುಹೂರ್ತ
ಕರಾವಳಿ

ಮಾ ಮಂತ್ರ ವೆಂಚರ್ಸ್ ಬ್ಯಾನರ್ ಅಡಿಯಲ್ಲಿ ಪಿಕೆ ಪ್ರೊಡಕ್ಷನ್ ಅರ್ಪಿಸುವ, ಮಹಿಳಾ ನಿರ್ದೇಶನದ ಹೊಸ ತುಳು-ಕನ್ನಡ ಸಿನಿಮಾಕ್ಕೆ ಶೀಘ್ರದಲ್ಲೇ ಮುಹೂರ್ತ

November 11, 2026
37
ಮಂಗಳೂರು: ಅತ್ತಾವರ ಕಟ್ಟೆ ಬಳಿ ಇರುವ ಲಾಡ್ಜ್‌ ಕೊಠಡಿಯಲ್ಲಿ ಆಕಸ್ಮಿಕ ಬೆಂಕಿ: ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ
ಕರಾವಳಿ

ಮಂಗಳೂರು: ಅತ್ತಾವರ ಕಟ್ಟೆ ಬಳಿ ಇರುವ ಲಾಡ್ಜ್‌ ಕೊಠಡಿಯಲ್ಲಿ ಆಕಸ್ಮಿಕ ಬೆಂಕಿ: ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ

November 10, 2026
30
Next Post
ಉಡುಪಿ ಪೊಲೀಸರ ಬೃಹತ್ ಕಾರ್ಯಾಚರಣೆ; ಪ್ರತ್ಯೇಕ ಪ್ರಕರಣದಲ್ಲಿ 9 ಮಂದಿ ಆರೋಪಿಗಳ ಸೆರೆ, ಕೇರಳದಿಂದ ಡ್ರಗ್ಸ್ ಪೂರೈಕೆ ಪತ್ತೆ

ಉಡುಪಿ ಪೊಲೀಸರ ಬೃಹತ್ ಕಾರ್ಯಾಚರಣೆ; ಪ್ರತ್ಯೇಕ ಪ್ರಕರಣದಲ್ಲಿ 9 ಮಂದಿ ಆರೋಪಿಗಳ ಸೆರೆ, ಕೇರಳದಿಂದ ಡ್ರಗ್ಸ್ ಪೂರೈಕೆ ಪತ್ತೆ

Discussion about this post

Recent News

ಗೋವಾದಿಂದ ಮಂಗಳೂರಿಗೆ ಅಕ್ರಮ ಮದ್ಯ ಸಾಗಾಟ ಹೆಜಮಾಡಿ ಟೋಲ್ ಬಳಿ ನಾಲ್ವರು ಆರೋಪಿಗಳ ಬಂಧನ

ಗೋವಾದಿಂದ ಮಂಗಳೂರಿಗೆ ಅಕ್ರಮ ಮದ್ಯ ಸಾಗಾಟ ಹೆಜಮಾಡಿ ಟೋಲ್ ಬಳಿ ನಾಲ್ವರು ಆರೋಪಿಗಳ ಬಂಧನ

November 12, 2026
42
ಬಂಟ್ವಾಳ ;ಯುವಕನಿಗೆ ಬೊಲೆರೋ ಡಿಕ್ಕಿ ಪಡಿಸಿ ಕೊಲೆಯತ್ನ, ಆರೋಪಿ ಜಗದೀಶ್ ಜೈನ್ ಬಂಧನ

ಬಂಟ್ವಾಳ ;ಯುವಕನಿಗೆ ಬೊಲೆರೋ ಡಿಕ್ಕಿ ಪಡಿಸಿ ಕೊಲೆಯತ್ನ, ಆರೋಪಿ ಜಗದೀಶ್ ಜೈನ್ ಬಂಧನ

November 12, 2026
17
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಗೋವಾದಿಂದ ಮಂಗಳೂರಿಗೆ ಅಕ್ರಮ ಮದ್ಯ ಸಾಗಾಟ ಹೆಜಮಾಡಿ ಟೋಲ್ ಬಳಿ ನಾಲ್ವರು ಆರೋಪಿಗಳ ಬಂಧನ

ಗೋವಾದಿಂದ ಮಂಗಳೂರಿಗೆ ಅಕ್ರಮ ಮದ್ಯ ಸಾಗಾಟ ಹೆಜಮಾಡಿ ಟೋಲ್ ಬಳಿ ನಾಲ್ವರು ಆರೋಪಿಗಳ ಬಂಧನ

November 12, 2026
ಬಂಟ್ವಾಳ ;ಯುವಕನಿಗೆ ಬೊಲೆರೋ ಡಿಕ್ಕಿ ಪಡಿಸಿ ಕೊಲೆಯತ್ನ, ಆರೋಪಿ ಜಗದೀಶ್ ಜೈನ್ ಬಂಧನ

ಬಂಟ್ವಾಳ ;ಯುವಕನಿಗೆ ಬೊಲೆರೋ ಡಿಕ್ಕಿ ಪಡಿಸಿ ಕೊಲೆಯತ್ನ, ಆರೋಪಿ ಜಗದೀಶ್ ಜೈನ್ ಬಂಧನ

November 12, 2026
ಮಾ ಮಂತ್ರ ವೆಂಚರ್ಸ್ ಬ್ಯಾನರ್ ಅಡಿಯಲ್ಲಿ ಪಿಕೆ ಪ್ರೊಡಕ್ಷನ್ ಅರ್ಪಿಸುವ, ಮಹಿಳಾ ನಿರ್ದೇಶನದ ಹೊಸ ತುಳು-ಕನ್ನಡ ಸಿನಿಮಾಕ್ಕೆ ಶೀಘ್ರದಲ್ಲೇ ಮುಹೂರ್ತ

ಮಾ ಮಂತ್ರ ವೆಂಚರ್ಸ್ ಬ್ಯಾನರ್ ಅಡಿಯಲ್ಲಿ ಪಿಕೆ ಪ್ರೊಡಕ್ಷನ್ ಅರ್ಪಿಸುವ, ಮಹಿಳಾ ನಿರ್ದೇಶನದ ಹೊಸ ತುಳು-ಕನ್ನಡ ಸಿನಿಮಾಕ್ಕೆ ಶೀಘ್ರದಲ್ಲೇ ಮುಹೂರ್ತ

November 11, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d