• About us
  • Contact us
  • Disclaimer
Sunday, June 1, 2025
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಕಾರವಾರ ಬಳಿ ಮಧ್ಯ ರಾತ್ರಿ ಏಕಾಏಕಿ ಕುಸಿದ ಸೇತುವೆ, ನದಿಗೆ ಬಿದ್ದ ಲಾರಿ ಚಾಲಕನ ಜೀವ ರಕ್ಷಣೆ ಮಾಡಿದ ಪೊಲೀಸ್ ಸಿಬ್ಬಂದಿ

Coastal Times by Coastal Times
August 7, 2024
in ರಾಜ್ಯ
ಕಾರವಾರ ಬಳಿ ಮಧ್ಯ ರಾತ್ರಿ ಏಕಾಏಕಿ ಕುಸಿದ ಸೇತುವೆ, ನದಿಗೆ ಬಿದ್ದ ಲಾರಿ ಚಾಲಕನ ಜೀವ ರಕ್ಷಣೆ ಮಾಡಿದ ಪೊಲೀಸ್ ಸಿಬ್ಬಂದಿ
45
VIEWS
WhatsappTelegramShare on FacebookShare on Twitter

ಬೆಳಗಾವಿ, ಆಗಸ್ಟ್.07: ಮಧ್ಯ ರಾತ್ರಿ 1 ಗಂಟೆ ಸುಮಾರಿಗೆ ಕಾರವಾರ ನಗರದ ಕೋಡಿಭಾಗ್ ನಲ್ಲಿ ಕಾಳಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ 41 ವರ್ಷಗಳ ಹಳೆ ಸೇತುವೆ ಒಮ್ಮಿಂದ ಒಮ್ಮೆಲೆ ಕುಸಿದು ಬಿದ್ದ ಘಟನೆ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ಕೋಡಿಭಾಗ್ ಬಳಿ ಕಾರವಾರ ಹಾಗೂ ಗೋವಾ ನಡುವಿನ ರಾಷ್ಟ್ರೀಯ ಹೆದ್ದಾರಿ ಬಳಿ ನಿರ್ಮಿಸಿದ್ದ ಸೇತುವೆ ಕುಸಿದಿದೆ.

ರಾಷ್ಟ್ರೀಯ ಹೆದ್ದಾರಿ 66ರ ನಿರ್ಮಾಣದ ವೇಳೆ ಒಂದೇ ಒಂದು ಹೊಸ ಸೇತುವೆ ನಿರ್ಮಾಣ ಮಾಡಲಾಗಿತ್ತು. ಇನ್ನೊಂದು ಮಾರ್ಗಕ್ಕೆ ಹಳೆ ಸೇತುವೆಯನ್ನೇ ಬಳಸಲಾಗುತ್ತಿತ್ತು. ಐಆರ್​ಬಿ ಹೊಸ ಸೇತುವೆ ನಿರ್ಮಾಣ ಮಾಡಿರಲಿಲ್ಲ. 41 ವರ್ಷ ಹಳೆಯ ಸೇತುವೆಯನ್ನೇ ಬಳಸಲಾಗಿತ್ತು. ಆದರೆ ಮಧ್ಯ ರಾತ್ರಿ ಏಕಾಏಕಿ ಸೇತುವೆ ಕುಸಿದಿದೆ. ಈ ವೇಳೆ ಸೇತುವೆ ಮೇಲೆ ಲಾರಿ ಚಾಲನೆ ಮಾಡ್ತಿದ್ದ ತಮಿಳುನಾಡು ಮೂಲದ ಲಾರಿ ಚಾಲಕ ಬಾಲ್ ಮುರುಗನ್(37) ಸಮೇತ ತಮಿಳುನಾಡು ಮೂಲದ SSM ಟ್ರಾನ್ಸಪೋರ್ಟ ಕಂಪನಿಯ TN-52 AC -6880 ನೊಂದಣಿಯ ಖಾಲಿ ಟ್ರಕ್ ನದಿಗೆ ಬಿದ್ದಿದೆ. ಕಾಳಿ ನದಿಯಲ್ಲಿ ಬಿದ್ದ ಲಾರಿಯ ಮುಂಭಾಗದ ಗ್ಲಾಸ್ ಒಡೆದು ಕ್ಯಾಬಿನ್ ಮೇಲೆ ನಿಂತು ಚಾಲಕ ಬಾಲ ಮುರುಗನ್ ರಕ್ಷಣೆಗೆ ಕೂಗಿದ್ದರು. ಸದ್ಯ ಬೀಟ್ ಪೊಲೀಸರ ಮುಂಜಾಗೃತೆಯಿಂದ ಲಾರಿ ಚಾಲಕನ ಪ್ರಾಣ ಉಳಿದಿದೆ.

ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಎಸ್​ಪ ಪಿ ನಾರಾಯಣ ಹಾಗೂ ಪೊಲೀಸರ ತಂಡ ನದಿಗೆ ಇಳಿದು ಚಾಲಕನನ್ನು ರಕ್ಷಿಸಿದ್ದಾರೆ. ಸ್ಥಳೀಯ ಮೀನುಗಾರರು ಹಾಗೂ ಪೊಲೀಸ್ ಸಿಬ್ಬಂದಿ ಸೇರಿ ಬೋಟ್ ಮೂಲಕ ಲಾರಿ ಚಾಲಕನನ್ನ ರಕ್ಷಿಸಿದ್ದಾರೆ. ಗೋವಾದಿಂದ ಹುಬ್ಬಳ್ಳಿ ಕಡೆ ಮಧ್ಯರಾತ್ರಿ ತೆರಳುತಿದ್ದ ತಮಿಳುನಾಡು ಮೂಲದ ಟ್ರಕ್ ಸೇತುವೆ ಮೇಲೆ ತೆರಳುತಿದ್ದಂತೆ ಮೊದಲ ಭಾಗ ಕುಸಿದಿದೆ ನಂತರ ಮೂರು ಕಡೆ ಕುಸಿದಿದೆ. ಸದ್ಯ ಟ್ರಕ್ ಚಾಲಕನ ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನದಿಗೆ ನಿರ್ಮಿಸಿರುವ ಇನ್ನೊಂದು ಸೇತುವೆಯಲ್ಲಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಸೇತುವೆ ಕುಸಿತದಲ್ಲಿ ಇನ್ನಷ್ಟು ವಾಹನ ಬಿದ್ದಿರುವ ಶಂಕೆ ಹಿನ್ನೆಲೆ ನದಿಯಲ್ಲಿ ಕಾರ್ಯಾಚರಣೆ ಮುಂದುವರೆದಿದೆ. ಸ್ಥಳದಲ್ಲಿ ಪೊಲೀಸರು ಮೊಕ್ಕಾಂ ಹೂಡಿದ್ದಾರೆ.

ಇನ್ನು ಯಮನ್ ಇಂಡಿಯಾ ಎಂಬ ಕಂಪನಿಯಿಂದ 41 ವರ್ಷದ ಹಿಂದೆ ಈ ಸೇತುವೆಯನ್ನು ನಿರ್ಮಾಣ ಮಾಡಲಾಗಿತ್ತು. ಕಾರವಾರ ಹಾಗೂ ಗೋವಾ ನಡುವಿನ ರಾಷ್ಟ್ರೀಯ ಹೆದ್ದಾರಿ 66ರ ಬಳಿ ಕಾಳಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿತ್ತು. ಕಾರವಾರ ನಗರ ಠಾಣೆಯಲ್ಲಿ NHAI ಹಾಗೂ IRB ಕಂಪನಿ ವಿರುದ್ಧ ಪ್ರಕರಣ ದಾಖಲಾಗಿದೆ.

Share this:

  • Facebook
  • X

Like this:

Like Loading...

Related

Discover more from Coastal Times Kannada

Subscribe to get the latest posts sent to your email.

Previous Post

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಇಲೆಕ್ಟ್ರಿಕ್ ಆಟೋರಿಕ್ಷಾಗಳಿಗೆ ಸಂಚರಿಸಲು ಅನುಮತಿ

Next Post

ಇಬ್ಬರು ಹಿರಿಯ ಕಾಯಕ ಯೋಗಿಗಳಿಗೆ ( ಹಿರಿಯ ಉಡುಪಿ ಸೀರೆ ನೇಕಾರರಿಗೆ ) ಕದಿಕೆ ಟ್ರಸ್ಟ್ ನ ಅತ್ಯುನ್ನತ ” ನೇಕಾರ ರತ್ನ ” ಪ್ರಶಸ್ತಿ

Related Posts

ಕರಾವಳಿ ಕೋಮುಗಲಭೆ ವಿರುದ್ಧ ಮುಲಾಜಿಲ್ಲದೇ ಕ್ರಮ : ಗೃಹ ಸಚಿವ ಪರಮೇಶ್ವರ್​
ರಾಜ್ಯ

ಕರಾವಳಿ ಕೋಮುಗಲಭೆ ವಿರುದ್ಧ ಮುಲಾಜಿಲ್ಲದೇ ಕ್ರಮ : ಗೃಹ ಸಚಿವ ಪರಮೇಶ್ವರ್​

May 29, 2025
37
ಸ್ಯಾಮಿಸ್ ಡ್ರೀಮ್‌ಲ್ಯಾಂಡ್‌ನಿಂದ ಯುಗ ಪ್ರವರ್ತಕ ಅವಳಿ ಯೋಜನೆಗಳ ಅನಾವರಣ: ಗಣ್ಯರ ಸಮ್ಮುಖದಲ್ಲಿ, ಪತ್ರಿಕಾ ಸಮಾವೇಶದಲ್ಲಿ ಘೋಷಣೆ
ರಾಜ್ಯ

ಸ್ಯಾಮಿಸ್ ಡ್ರೀಮ್‌ಲ್ಯಾಂಡ್‌ನಿಂದ ಯುಗ ಪ್ರವರ್ತಕ ಅವಳಿ ಯೋಜನೆಗಳ ಅನಾವರಣ: ಗಣ್ಯರ ಸಮ್ಮುಖದಲ್ಲಿ, ಪತ್ರಿಕಾ ಸಮಾವೇಶದಲ್ಲಿ ಘೋಷಣೆ

May 22, 2025
26
Next Post
ಇಬ್ಬರು ಹಿರಿಯ ಕಾಯಕ ಯೋಗಿಗಳಿಗೆ ( ಹಿರಿಯ ಉಡುಪಿ ಸೀರೆ ನೇಕಾರರಿಗೆ )  ಕದಿಕೆ ಟ್ರಸ್ಟ್ ನ   ಅತ್ಯುನ್ನತ ” ನೇಕಾರ ರತ್ನ ”  ಪ್ರಶಸ್ತಿ

ಇಬ್ಬರು ಹಿರಿಯ ಕಾಯಕ ಯೋಗಿಗಳಿಗೆ ( ಹಿರಿಯ ಉಡುಪಿ ಸೀರೆ ನೇಕಾರರಿಗೆ ) ಕದಿಕೆ ಟ್ರಸ್ಟ್ ನ ಅತ್ಯುನ್ನತ " ನೇಕಾರ ರತ್ನ " ಪ್ರಶಸ್ತಿ

Discussion about this post

Recent News

ಮಂಗಳೂರು: ಆರೋಪಿಗಳಿಗೆ ಆಶ್ರಯ, ಸಹಕಾರ ನೀಡುವವರಿಗೆ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಖಡಕ್​ ವಾರ್ನಿಂಗ್

ಮಂಗಳೂರು: ಆರೋಪಿಗಳಿಗೆ ಆಶ್ರಯ, ಸಹಕಾರ ನೀಡುವವರಿಗೆ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಖಡಕ್​ ವಾರ್ನಿಂಗ್

June 1, 2025
17
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ ( ರಿ,) ಮೆಸ್ಕಾಂ ಉಪಾಧ್ಯಕ್ಷ  ಶ್ರೀ ಹೆಚ್. ಎಸ್. ಗುರುಮೂರ್ತಿಯವರಿಗೆ ಬೀಳ್ಕೊಡುಗೆ

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ ( ರಿ,) ಮೆಸ್ಕಾಂ ಉಪಾಧ್ಯಕ್ಷ ಶ್ರೀ ಹೆಚ್. ಎಸ್. ಗುರುಮೂರ್ತಿಯವರಿಗೆ ಬೀಳ್ಕೊಡುಗೆ

May 30, 2025
135
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಮಂಗಳೂರು: ಆರೋಪಿಗಳಿಗೆ ಆಶ್ರಯ, ಸಹಕಾರ ನೀಡುವವರಿಗೆ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಖಡಕ್​ ವಾರ್ನಿಂಗ್

ಮಂಗಳೂರು: ಆರೋಪಿಗಳಿಗೆ ಆಶ್ರಯ, ಸಹಕಾರ ನೀಡುವವರಿಗೆ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಖಡಕ್​ ವಾರ್ನಿಂಗ್

June 1, 2025
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ ( ರಿ,) ಮೆಸ್ಕಾಂ ಉಪಾಧ್ಯಕ್ಷ  ಶ್ರೀ ಹೆಚ್. ಎಸ್. ಗುರುಮೂರ್ತಿಯವರಿಗೆ ಬೀಳ್ಕೊಡುಗೆ

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ ( ರಿ,) ಮೆಸ್ಕಾಂ ಉಪಾಧ್ಯಕ್ಷ ಶ್ರೀ ಹೆಚ್. ಎಸ್. ಗುರುಮೂರ್ತಿಯವರಿಗೆ ಬೀಳ್ಕೊಡುಗೆ

May 30, 2025
ಉಳ್ಳಾಲದ ಮಂಜನಾಡಿ ಗ್ರಾಮದ ಮೊಂಟೆಪದವು ಮನೆ ಮೇಲೆ ಗುಡ್ಡ ಕುಸಿದು ಅಜ್ಜಿ‌-ಇಬ್ಬರು ಮೊಮ್ಮಕ್ಕಳು ಸಾವು, ನಾಲ್ವರ ರಕ್ಷಣೆ

ಉಳ್ಳಾಲದ ಮಂಜನಾಡಿ ಗ್ರಾಮದ ಮೊಂಟೆಪದವು ಮನೆ ಮೇಲೆ ಗುಡ್ಡ ಕುಸಿದು ಅಜ್ಜಿ‌-ಇಬ್ಬರು ಮೊಮ್ಮಕ್ಕಳು ಸಾವು, ನಾಲ್ವರ ರಕ್ಷಣೆ

May 30, 2025
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d