ಫುಟ್ಬಾಲ್ ಲೀಗ್ ಪಂದ್ಯಗಳಲ್ಲಿ, ಆಟಗಾರರು ಮೈದಾನದಲ್ಲಿ ಜಗಳ ಆಡುವುದು ಸರ್ವೆ ಸಾಮಾನ್ಯ. ಆದರೆ ಇತ್ತೀಚೆಗೆ ನಡೆದ ಅಮೆರಿಕನ್ ಲೀಗ್ಸ್ ಕಪ್ ಫೈನಲ್‌ನಲ್ಲಿ ಉರುಗ್ವೆಯ ತಂಡದ ಫುಟ್ಬಾಲ್ ಆಟಗಾರ ಲೂಯಿಸ್ ಸುವಾರೆಜ್ ಎದುರಾಳಿ ತಂಡದ ಸಹಾಯಕ ತರಬೇತುದಾರರ ಮೇಲೆ ಉಗುಳಿರುವ ಘಟನೆ ನಡೆದಿದ್ದ ಇದರ ವಿಡಿಯೋಗಳು ವೈರಲ್ ಆಗಿವೆ. ಲೂಯಿಸ್ ಸುವಾರೆಜ್ ಅವರ ಈ ಕೃತ್ಯದಿಂದಾಗಿ ಅವರನ್ನು ನಿಷೇಧಿಸಲಾಗಿದೆ. ಫುಟ್‌ಬಾಲ್‌ನಲ್ಲಿ ಹೀಗೆ ಸಂಭವಿಸಿದ್ದು ಇದೇ ಮೊದಲ ಬಾರಿ ಅಲ್ಲ. ಇದಕ್ಕೂ ಮುನ್ನ ಕ್ಲಬ್ ಫುಟ್‌ಬಾಲ್‌ನಲ್ಲಿ ಆಟಗಾರನೊಬ್ಬ ಎದುರಾಳಿ ತಂಡದ ಪ್ಲೇಯರ್ಗೆ ಕಚ್ಚಿ ಜನಾಂಗೀಯ ನಿಂದನೆ ಮಾಡಿದ್ದ ಘಟನೆಗಳು ನಡೆದಿವೆ.
ಸೆ.1 ರಂದು ಲೀಗ್ಸ್ ಕಪ್ ಫೈನಲ್ ಪಂದ್ಯದಲ್ಲಿ ಇಂಟರ್ ಮಿಯಾಮಿ ಮತ್ತು ಸಿಯಾಟಲ್ ಸೌಂಡರ್ಸ್ ತಂಡಗಳು ಮುಖಾಮುಖಿ ಆಗಿದ್ದವು. ಈ ಪಂದ್ಯದಲ್ಲಿ ಸಿಯಾಟಲ್ ತಂಡ ಇಂಟರ್ ಮಿಯಾಮಿಯನ್ನು 3-0 ಗೋಲುಗಳಿಂದ ಸೋಲಿಸಿತು. ಪಂದ್ಯದ ನಂತರ ಎರಡೂ ತಂಡಗಳು ಆಟಗಾರರ ನಡುವೆ ಮೈದಾನದಲ್ಲಿಯೇ ಪರಸ್ಪರ ಘರ್ಷಣೆ ಉಂಟಾಯ್ತು. ಈ ವೇಳೆ, ಮಿಯಾಮಿ ತಂಡದ ಸೆರ್ಗಿಯೊ ಬಸ್ಕ್ವೆಟ್ಸ್ ಎದುರಾಳಿ ಆಟಗಾರನ ಮೇಲೆ ದೈಹಿಕವಾಗಿ ದಾಳಿ ಮಾಡಿದರು. ಇದರಿಂದಾಗಿ ಎರಡೂ ತಂಡದ ಆಟಗಾರರ ಕೈ ಕೈ ಮಿಲಾಯಿಸಿ ಜಗಳಕ್ಕಿಳಿದ್ದರು. ಇದೇ ವೇಳೆ ಲೂಯಿಸ್ ಸುವಾರೆಜ್ ಸಿಯಾಟಲ್ ಸೌಂಡರ್ಸ್ ತಂಡದ ತರಬೇತುದಾರರನ ಜೊತೆಗೆ ವಾಗ್ವಾದಕ್ಕಿಳಿದಿದ್ದಾರೆ. ನಂತರ ಕೋಪದಲ್ಲಿ ಅವರ ಮೇಲೆ ಉಗುಳಿದ್ದಾರೆ.
Luis Suarez spits at a Seattle Sounders staff member
byu/Delmer9713 insoccer
ಪರಿಸ್ಥಿತಿ ಉದ್ವಿಘ್ನತೆಗೆ ತಲುಪುತ್ತಿದ್ದಂತೆ ಕೋಚ್ಗಳು ಮೈದಾನಕ್ಕೆ ಆಗಮಿಸಿ ಜಗಳವನ್ನು ತಡೆದರು. ಈ ಘಟನೆ ಬಳಿಕ ಸೆರ್ಗಿಯೊ ಬಸ್ಕ್ವೆಟ್ಸ್ ಅವರನ್ನು ಎರಡು ಪಂದ್ಯಗಳಿಗೆ ನಿಷೇಧಿಸಲಾಯಿತು. ಮತ್ತು ಮಿಯಾಮಿ ಡಿಫೆಂಡರ್ ಥಾಮಸ್ ಅವಿಲ್ಸ್ ಅವರ ವರ್ತನೆಗಾಗಿ ಮೂರು ಪಂದ್ಯಗಳಿಗೆ ನಿಷೇಧಿಸಲಾಯಿತು. ಜೊತೆಗೆ ಕೋಚ್ ಮೇಲೆ ಉಗಳಿದಕ್ಕಾಗಿ ಲೂಯಿಸ್ ಸುವಾರೆಜ್ ಅವರನ್ನು 6 ಪಂದ್ಯಗಳಿಗೆ ನಿಷೇಧಿಸಲಾಗಿದೆ. ಇದಲ್ಲದೆ, ಸೌಂಡರ್ಸ್ ತಂಡದ ಸಹಾಯಕ ಕೋಚ್ ಸ್ಟೀವನ್ ಲೆನ್ಹಾರ್ಟ್ ಅವರು ಮೈದಾನದಲ್ಲಿ ಅಸಭ್ಯ ವರ್ತನೆ ತೋರಿದಕ್ಕಾಗಿ ಐದು ಪಂದ್ಯಗಳಿಗೆ ಅಮಾನತುಗೊಳಿಸಲಾಗಿದೆ.
ಕ್ಷಮೆಯಾಚಿಸಿದ ಲೂಯಿಸ್ ಸುವಾರೆಜ್: ಘಟನೆ ಬಳಿಕ ಲೂಯಿಸ್ ಸುವಾರೆಜ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ, ‘ನಾನು ತಪ್ಪು ಮಾಡಿದೆ ಮತ್ತು ಅದಕ್ಕಾಗಿ ಕ್ಷಮೆಯಾಚಿಸುತ್ತೇನೆ, ನನಗೆ ಈ ಘಟನೆಯಿಂದ ಬೇಸರವಾಗುತ್ತಿದೆ, ಮತ್ತು ನನ್ನ ವರ್ತನೆಗೆ ಎಲ್ಲರಿಗೂ ಕ್ಷಮೆಯಾಚಿಸಲು ಬಯಸುತ್ತೇನೆ. ಇನ್ನೂ ಸಾಕಷ್ಟು ಋತುಗಳು ಉಳಿದಿವೆ. ಅಭಿಮಾನಿಗಳಿಗೆ ಅರ್ಹವಾದ ವಿಜಯವನ್ನು ನೀಡಲು ಪ್ರಯತ್ನಿಸುತ್ತೇವೆ ಎಂದಿದ್ದಾರೆ.
ಸುವಾರೆಜ್ ದಾಖಲೆ: ಈ ಋತುವಿನಲ್ಲಿ ಸುವಾರೆಜ್ 22 ಲೀಗ್ ಪಂದ್ಯಗಳಲ್ಲಿ ಆರು ಗೋಲುಗಳನ್ನು ಗಳಿಸಿದ್ದಾರೆ ಮತ್ತು 10 ಅಸಿಸ್ಟ್‌ಗಳನ್ನು ನೀಡಿದ್ದಾರೆ. ಇದಲ್ಲದೆ, ಅವರು ಆರು ಲೀಗ್ ಕಪ್ ಪಂದ್ಯಗಳಲ್ಲಿ ಮೂರು ಗೋಲುಗಳು ಮತ್ತು ಮೂರು ಅಸಿಸ್ಟ್‌ಗಳನ್ನು ನೀಡಿದ್ದಾರೆ.
Discover more from Coastal Times Kannada
Subscribe to get the latest posts sent to your email.








Discussion about this post