• About us
  • Contact us
  • Disclaimer
Saturday, May 2, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

2028ಕ್ಕೆ ರಮಾನಾಥ ರೈ ಅವರೇ ಬಂಟ್ವಾಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ; ಬಂಟ್ವಾಳ ಕಂಬಳದಲ್ಲಿ ಸಿಎಂ ಸಿದ್ದರಾಮಯ್ಯ ಘೋಷಣೆ

Coastal Times by Coastal Times
March 8, 2026
in ಕರಾವಳಿ
2028ಕ್ಕೆ ರಮಾನಾಥ ರೈ ಅವರೇ ಬಂಟ್ವಾಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ; ಬಂಟ್ವಾಳ ಕಂಬಳದಲ್ಲಿ ಸಿಎಂ ಸಿದ್ದರಾಮಯ್ಯ ಘೋಷಣೆ
38
VIEWS
WhatsappTelegramShare on FacebookShare on Twitter

ಮಂಗಳೂರು, ಮಾರ್ಚ್ 7: 2013-18ರ ನಮ್ಮ ಸರ್ಕಾರದ ಅವಧಿಯನ್ನು ಸುವರ್ಣ ಯುಗವೆಂದು ರಮಾನಾಥ ರೈಯವರು ಕರೆದಿದ್ದಾರೆ. ಯಾಕಂದ್ರೆ, ಬಂಟ್ವಾಳ ಕ್ಷೇತ್ರಕ್ಕೆ ಈ ಅವಧಿಯಲ್ಲಿ ಐದು ಸಾವಿರ ಕೋಟಿ ಅನುದಾನ ತಂದಿದ್ದಾರೆ. ಆದರೂ ಅವರನ್ನು ಇಲ್ಲಿನ ಜನ ಯಾಕೆ ಸೋಲಿಸಿದ್ರಿ ಅಂತ ಗೊತ್ತಾಗಲ್ಲ. ‌2028ರಲ್ಲಿ ರಮಾನಾಥ ರೈ ಮತ್ತೊಮ್ಮೆ ಚುನಾವಣೆಗೆ ನಿಲ್ತಾರೆ. ಆಗ ನೀವು ಹೆಚ್ಚು ಮತಗಳಿಂದ ರಮಾನಾಥ್ ರೈ ಗೆಲ್ಲಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ‌

ಬಂಟ್ವಾಳದ 15ನೇ ವರ್ಷದ ಮೂಡೂರು ಪಡೂರು ಜೋಡುಕರೆ ಕಂಬಳದಲ್ಲಿ ಭಾಗವಹಿಸಿದ ಸಿಎಂ ಸಿದ್ಧರಾಮಯ್ಯ, ದಕ್ಷಿಣ ಕನ್ನಡ ಜಿಲ್ಲೆ ಮತ್ತು ಬಂಟ್ವಾಳ ಕ್ಷೇತ್ರಕ್ಕೆ ರಮಾನಾಥ ರೈ ನೀಡಿದ ಕೊಡುಗೆಗಳನ್ನು ಸ್ಮರಿಸಿದರು.‌ 2013-18ರಲ್ಲಿ ಮುಖ್ಯಮಂತ್ರಿ ಆದ ಸಮಯದಲ್ಲಿ ಸರ್ಕಾರ ಹಣಕಾಸಿನ ಬಿಕ್ಕಟ್ಟನ್ನು ಎದುರಿಸಿರಲಿಲ್ಲ. ಆ ಸಂದರ್ಭದಲ್ಲಿ ರಮಾನಾಥ ರೈ ಮಂತ್ರಿಯಾಗಿದ್ದರು. ಆ ಕಾಲವನ್ನು ರಮಾನಾಥ ರೈ ಸುವರ್ಣ ಯುಗ ಅಂತಾ ಕರೆದಿದ್ದಾರೆ.

2028ಕ್ಕೆ ರೈ ಅವರೇ ಅಭ್ಯರ್ಥಿ: “ರಮಾನಾಥ ರೈ ಅವರು ಶಾಸಕ, ಸಚಿವರಾಗಿದ್ದಾಗ ಬಂಟ್ವಾಳ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದರೂ ಜನರು ಸೋಲಿಸಿರುವುದು ನೋವಿನ ಸಂಗತಿಯಾಗಿದೆ. ರಮಾನಾಥ ರೈ ಕ್ಷೇತ್ರಕ್ಕೆ ಐದು ಸಾವಿರ ಕೋಟಿ ರೂಪಾಯಿಯನ್ನು ಕಳೆದ ಅವಧಿಯಲ್ಲಿ ತರಿಸಿ ಅಭಿವೃದ್ಧಿ ಮಾಡಲಾಗಿತ್ತು. ಆದರೂ ಅವರನ್ನು ಕ್ಷೇತ್ರದ ಜನ ಸೋಲಿಸಿದರು. ಇದು ನೋವಿನ ಸಂಗತಿ ಅಲ್ವಾ? ಇನ್ನೊಂದು ಸಾರಿ ಅವರು ನಿಲ್ಲುತ್ತಾರೆ. 2028ಕ್ಕೆ ಮತ್ತೆ ಅಭ್ಯರ್ಥಿ ಆಗುತ್ತಾರೆ, ಪ್ರಾಮಾಣಿಕ ಸಚಿವರಲ್ಲಿ ರಮಾನಾಥ ರೈ ಕೂಡ ಒಬ್ಬರಾಗಿದ್ದರು. ಹೀಗಾಗಿ ಅವರು ಮತ್ತೆ ಗೆಲ್ಲಬೇಕು” ಎಂದರು.

ಬಳಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಿಎಂ “ಕಂಬಳ ಅತ್ಯಂತ ಜನಪ್ರಿಯ ಕ್ರೀಡೆ. ಇದಕ್ಕೆ ಎಲ್ಲ ಜಾತಿ, ಧರ್ಮೀಯರು ಸೇರುತ್ತಾರೆ. ಈ ಕ್ರೀಡೆಯನ್ನು ಉಳಿಸಿ, ಬೆಳೆಸುವುದು ನಮ್ಮ ಜವಾಬ್ದಾರಿ. ದಕ್ಷಿಣ ಕನ್ನಡದಲ್ಲಿ ಎಲ್ಲರೂ ಭಾಗವಹಿಸುವ ಕ್ರೀಡೆ. ಮಂಗಳೂರಿನ ಜನರು ಸಾಹಸಪ್ರವೃತ್ತಿ ಇರುವ ಕ್ರೀಡೆಯಾಗಿದ್ದು, ಇಲ್ಲಿ ಕೋಣಗಳನ್ನು ಮಕ್ಕಳ ಥರ ಸಾಕುತ್ತಾರೆ. 2028ಕ್ಕೂ ನಾವೇ ಅಧಿಕಾರಕ್ಕೆ ಬಂದೇ ಬರ್ತೀವಿ. ನಾವು ಅಧಿಕಾರದಲ್ಲಿದ್ದಾಗ ಕಂಬಳಕ್ಕೆ ಏನು ಪ್ರೋತ್ಸಾಹ ನೀಡಬೇಕೋ ಅದಕ್ಕೆ ಪ್ರೋತ್ಸಾಹ ನೀಡುತ್ತೇವೆ. ಕಂಬಳಕ್ಕೆ ಹಣಕಾಸಿನ ನೆರವನ್ನೂ ಕೊಡುತ್ತೇವೆ” ಎಂದು ತಿಳಿಸಿದರು.

ಬಳಿಕ ಕನೆಹಲಗೆಯ ಕೋಣಗಳ ಓಟವನ್ನು ಸಿಎಂ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿ, ಕಂಬಳಕ್ಕೆ ರಾಜ್ಯಮಟ್ಟದಲ್ಲಿ ಮಾನ್ಯತೆ ಇದೆ ಎಂದ ಸಿಎಂ ಮುಂದಿನ ವರ್ಷ ಬೆಂಜನಪದವು ಕ್ರೀಡಾಂಗಣ ನಿರ್ಮಾಣ ಮಾಡಲಾಗುವುದು ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಮನವಿಗೆ ಸ್ಪಂದಿಸಿ ಅವರು ಘೋಷಿಸಿದರು. ಕಂಬಳ ಅತ್ಯಂತ ಜನಪ್ರಿಯವಾದ ಕ್ರೀಡೆ, ಎಲ್ಲಾ ಜನರು ಭಾಗವಹಿಸುವ ಕ್ರೀಡೆ. ಕಂಬಳದ ಕೋಣಗಳನ್ನು ತಮ್ಮ ಮಕ್ಕಳ ರೀತಿ ಸಾಕುತ್ತಾರೆ. ವಯಸ್ಸಾದ ಬಳಿಕವೂ ಬಿಟ್ಟು ಕೊಡದೆ ಸಾಯುವ ವರೆಗೂ ಸಾಕುತ್ತಾರೆ‌‌. ಇದು ಕಂಬಳದಲ್ಲಿ ಕೋಣಗಳನ್ನು ಇಲ್ಲಿ‌ನ ಜನ ಎಷ್ಟು ಪ್ರೀತಿಸುತ್ತಾರೆಂಬುದನ್ಜು ತೋರಿಸುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು. ‌

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading...

Related

Discover more from Coastal Times Kannada

Subscribe to get the latest posts sent to your email.

Previous Post

ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ 7 ರನ್​ಗಳಿಂದ ರೋಚಕ ಗೆಲುವು ಸತತ ಎರಡನೇ ಬಾರಿಗೆ ಫೈನಲ್​ಗೇರಿದ ಟೀಂ ಇಂಡಿಯಾ

Next Post

ಮಂಗಳೂರು ರಿಫೈನರಿಯ ಘಟಕಗಳನ್ನು ಸ್ಥಗಿತಗೊಳಿಸಲಾಗಿದೆ ವದಂತಿ ತಳ್ಳಿಹಾಕಿದ ಎಂಆರ್‌ಪಿಎಲ್

Related Posts

ಬೈಕ್ – ಲಾರಿ ಮುಖಾಮುಖಿ ಡಿಕ್ಕಿ ; ಉಪ್ಪಿನಂಗಡಿ ಕಾಲೇಜು ವಿದ್ಯಾರ್ಥಿ ಸ್ಥಳದಲ್ಲೇ ಮೃತ್ಯು, ಗೆಳತಿ ಗಂಭೀರ
ಕರಾವಳಿ

ಬೈಕ್ – ಲಾರಿ ಮುಖಾಮುಖಿ ಡಿಕ್ಕಿ ; ಉಪ್ಪಿನಂಗಡಿ ಕಾಲೇಜು ವಿದ್ಯಾರ್ಥಿ ಸ್ಥಳದಲ್ಲೇ ಮೃತ್ಯು, ಗೆಳತಿ ಗಂಭೀರ

April 30, 2026
86
ಸ್ಟಾರ್ಟ್‌ಅಪ್ ಪರಿಸರಕ್ಕೆ ಹೊಸ ಚೈತನ್ಯ: ರೋಹನ್ ಕಾರ್ಪೊರೇಷನ್ ಮತ್ತು ರೇನ್ ಮೇಕರ್ಸ್ ವರ್ಕ್‌ಸ್ಪೇಸ್ ಸಂಯುಕ್ತ ಒಕ್ಕೂಟಕ್ಕೆ ಚಾಲನೆ
ಕರಾವಳಿ

ಸ್ಟಾರ್ಟ್‌ಅಪ್ ಪರಿಸರಕ್ಕೆ ಹೊಸ ಚೈತನ್ಯ: ರೋಹನ್ ಕಾರ್ಪೊರೇಷನ್ ಮತ್ತು ರೇನ್ ಮೇಕರ್ಸ್ ವರ್ಕ್‌ಸ್ಪೇಸ್ ಸಂಯುಕ್ತ ಒಕ್ಕೂಟಕ್ಕೆ ಚಾಲನೆ

April 28, 2026
3
Next Post
ಮಂಗಳೂರು ರಿಫೈನರಿಯ ಘಟಕಗಳನ್ನು ಸ್ಥಗಿತಗೊಳಿಸಲಾಗಿದೆ ವದಂತಿ ತಳ್ಳಿಹಾಕಿದ ಎಂಆರ್‌ಪಿಎಲ್

ಮಂಗಳೂರು ರಿಫೈನರಿಯ ಘಟಕಗಳನ್ನು ಸ್ಥಗಿತಗೊಳಿಸಲಾಗಿದೆ ವದಂತಿ ತಳ್ಳಿಹಾಕಿದ ಎಂಆರ್‌ಪಿಎಲ್

Discussion about this post

Recent News

ಮಹಿಳೆಯ ಅಂತ್ಯಕ್ರಿಯೆ ನಡೆಯುತ್ತಿದ್ದಾಗ ಬಂದ ಫೋನ್​ನಿಂದ ಬಯಲಾಯ್ತು ಸಾವಿನ ರಹಸ್ಯ

ಮಹಿಳೆಯ ಅಂತ್ಯಕ್ರಿಯೆ ನಡೆಯುತ್ತಿದ್ದಾಗ ಬಂದ ಫೋನ್​ನಿಂದ ಬಯಲಾಯ್ತು ಸಾವಿನ ರಹಸ್ಯ

May 1, 2026
1
ಬೆಂಗಳೂರು ದಿಢೀರ್ ಮಳೆಯ ಅಬ್ಬರಕ್ಕೆ ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿದು 7 ಮಂದಿ ಸಾವು, 5 ಲಕ್ಷ ಪರಿಹಾರ ಘೋಷಣೆ

ಬೆಂಗಳೂರು ದಿಢೀರ್ ಮಳೆಯ ಅಬ್ಬರಕ್ಕೆ ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿದು 7 ಮಂದಿ ಸಾವು, 5 ಲಕ್ಷ ಪರಿಹಾರ ಘೋಷಣೆ

April 30, 2026
18
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಮಹಿಳೆಯ ಅಂತ್ಯಕ್ರಿಯೆ ನಡೆಯುತ್ತಿದ್ದಾಗ ಬಂದ ಫೋನ್​ನಿಂದ ಬಯಲಾಯ್ತು ಸಾವಿನ ರಹಸ್ಯ

ಮಹಿಳೆಯ ಅಂತ್ಯಕ್ರಿಯೆ ನಡೆಯುತ್ತಿದ್ದಾಗ ಬಂದ ಫೋನ್​ನಿಂದ ಬಯಲಾಯ್ತು ಸಾವಿನ ರಹಸ್ಯ

May 1, 2026
ಬೆಂಗಳೂರು ದಿಢೀರ್ ಮಳೆಯ ಅಬ್ಬರಕ್ಕೆ ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿದು 7 ಮಂದಿ ಸಾವು, 5 ಲಕ್ಷ ಪರಿಹಾರ ಘೋಷಣೆ

ಬೆಂಗಳೂರು ದಿಢೀರ್ ಮಳೆಯ ಅಬ್ಬರಕ್ಕೆ ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿದು 7 ಮಂದಿ ಸಾವು, 5 ಲಕ್ಷ ಪರಿಹಾರ ಘೋಷಣೆ

April 30, 2026
ಬೈಕ್ – ಲಾರಿ ಮುಖಾಮುಖಿ ಡಿಕ್ಕಿ ; ಉಪ್ಪಿನಂಗಡಿ ಕಾಲೇಜು ವಿದ್ಯಾರ್ಥಿ ಸ್ಥಳದಲ್ಲೇ ಮೃತ್ಯು, ಗೆಳತಿ ಗಂಭೀರ

ಬೈಕ್ – ಲಾರಿ ಮುಖಾಮುಖಿ ಡಿಕ್ಕಿ ; ಉಪ್ಪಿನಂಗಡಿ ಕಾಲೇಜು ವಿದ್ಯಾರ್ಥಿ ಸ್ಥಳದಲ್ಲೇ ಮೃತ್ಯು, ಗೆಳತಿ ಗಂಭೀರ

April 30, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d