• About us
  • Contact us
  • Disclaimer
Saturday, November 7, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಕರ್ನಾಟಕವನ್ನೇ ಬೆಚ್ಚಿ ಬೀಳಿಸಿದ ಸರಣಿ ಕೊಲೆ ಪ್ರಕರಣ; ಕ್ಯಾಬ್ ಚಾಲಕ ಇಂದುಶೇಖರ್ ತನ್ನ ಪತ್ನಿ ಮತ್ತು ಆಕೆಯ ಕುಟುಂಬದ 7 ಜನರ ಹತ್ಯೆ

Coastal Times by Coastal Times
November 7, 2026
in ಕ್ರೈಮ್ ನ್ಯೂಸ್
ಕರ್ನಾಟಕವನ್ನೇ ಬೆಚ್ಚಿ ಬೀಳಿಸಿದ ಸರಣಿ ಕೊಲೆ ಪ್ರಕರಣ; ಕ್ಯಾಬ್ ಚಾಲಕ ಇಂದುಶೇಖರ್ ತನ್ನ ಪತ್ನಿ ಮತ್ತು ಆಕೆಯ ಕುಟುಂಬದ 7 ಜನರ ಹತ್ಯೆ
12
VIEWS
WhatsappTelegramShare on FacebookShare on Twitter

ಬೆಂಗಳೂರು: ರಾಜಾಜಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದ ಒಂದೇ ಕುಟುಂಬದ ಏಳು ಜನರ ಬರ್ಬರ ಹತ್ಯೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ತನ್ನ ಪತ್ನಿ ಸೇರಿದಂತೆ ಒಂದೇ ಕುಟುಂಬದ ಏಳು ಸದಸ್ಯರನ್ನ ವ್ಯವಸ್ಥಿತವಾಗಿ ಇಂದುಶೇಖರ್‌ ಸಂಚು ರೂಪಿಸಿ, ಹಂತ ಹಂತವಾಗಿ ಹತ್ಯೆಗೈದಿರುವ ಆಘಾತಕಾರಿ ಅಂಶಗಳು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿವೆ.

ಆರೋಪಿ ಇಂದುಶೇಖರ್‌ ಪ್ರಾಥಮಿಕ ವಿಚಾರಣೆಯ ಪ್ರಕಾರ, ಅಕ್ಟೋಬರ್ 14ರಿಂದ ನವೆಂಬರ್ 2ರವರೆಗೆ ಸುಮಾರು 15 ದಿನಗಳ ಅವಧಿಯಲ್ಲಿ ಏಳು ಮಂದಿಯ ಹತ್ಯೆ ನಡೆದಿದೆ. ಪ್ರತಿ ಹತ್ಯೆಗೂ ಮುನ್ನ ನಿದ್ದೆ ಮಾತ್ರೆ, ಮೃತದೇಹಗಳನ್ನ ಸಾಗಿಸಲು ಪ್ಲಾಸ್ಟಿಕ್ ಚೀಲ, ಕಟ್ಟಲು ಹಗ್ಗ ಸೇರಿದಂತೆ ಅಗತ್ಯ ವಸ್ತುಗಳನ್ನು ಖರೀದಿಸಿದ್ದ ಆರೋಪಿ, ಹತ್ಯೆಯ ನಂತರ ಮೃತದೇಹಗಳನ್ನ ಬೇರೆ ಬೇರೆ ಸ್ಥಳಗಳಿಗೆ ಸಾಗಿಸಿ ಸಾಕ್ಷ್ಯ ನಾಶಪಡಿಸಲು ಪ್ರಯತ್ನಿಸಿದ್ದಾನೆ. ಅಷ್ಟೇ ಅಲ್ಲದೇ, ಈ ಕೃತ್ಯಗಳಿಗೆ ಅಪ್ರಾಪ್ತ ಮಗಳ ಸಹಾಯವನ್ನೂ ಪಡೆದಿದ್ದಾನೆ ಎಂಬ ಆಘಾತಕಾರಿ ಸಂಗತಿ ಬಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೊದಲು ಪತ್ನಿಯ ಹತ್ಯೆ: ಅಕ್ಟೋಬರ್ 14ರಂದು ಪತ್ನಿ ಸುನೀತಾಳೊಂದಿಗೆ ಜಗಳವಾಡಿದ್ದ ಇಂದುಶೇಖರ್, ಆಕೆಯನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ. ಆ ಸಂಚಿನ ಭಾಗವಾಗಿ ಅಂದೇ ನಿದ್ದೆ ಮಾತ್ರೆಗಳು, ಮೃತದೇಹಗಳನ್ನು ತುಂಬಲು ಪ್ಲಾಸ್ಟಿಕ್ ಚೀಲಗಳು ಹಾಗೂ ಕಟ್ಟಲು ಹಗ್ಗವನ್ನು ಖರೀದಿಸಿದ್ದ.

ಅಕ್ಟೋಬರ್ 16ರ ಶುಕ್ರವಾರ ರಾತ್ರಿ ಪತ್ನಿ ಸುನೀತಾಳನ್ನು ಹತ್ಯೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದ ಆರೋಪಿ, ಮಾಂಸಾಹಾರದ ಅಡುಗೆ ಮಾಡಿ ಮದ್ಯ ಸೇವಿಸಿದ್ದ ಎನ್ನಲಾಗಿದೆ. ಬಳಿಕ ಮದ್ಯದಲ್ಲಿ ನಿದ್ದೆ ಮಾತ್ರೆ ಬೆರೆಸಿ ಪತ್ನಿಗೆ ನೀಡಿದ್ದ. ಆಕೆ ಪ್ರಜ್ಞೆ ತಪ್ಪುವವರೆಗೆ ಕಾದಿದ್ದ ಇಂದುಶೇಖರ್, ನಂತರ ರುಬ್ಬುವ ಕಲ್ಲಿನಿಂದ ತಲೆಗೆ ಬಲವಾಗಿ ಹೊಡೆದು ಹತ್ಯೆಗೈದಿದ್ದ. ಈ ಭೀಕರ ಕೃತ್ಯವನ್ನ ಅಪ್ರಾಪ್ತ ಮಗಳು ಕಣ್ಣಾರೆ ಕಂಡು ಆಘಾತಕ್ಕೊಳಗಾಗಿದ್ದಳು. ಬಳಿಕ ಮಗಳನ್ನು ತನ್ನ ಕೃತ್ಯಕ್ಕೆ ಸಹಕರಿಸುವಂತೆ ಮನವೊಲಿಸಿದ್ದ ಆರೋಪಿ, ಪತ್ನಿಯ ಮೃತದೇಹವನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಪ್ಯಾಕ್ ಮಾಡಿದ್ದ. ನಂತರ ಮೃತದೇಹವನ್ನ ಮನೆಯ ಬೆಡ್‌ರೂಮ್‌ನಲ್ಲಿ ಇರಿಸಿದ್ದ. ಸುನೀತಾ ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಅಕ್ಟೋಬರ್ 17ರಂದು ಅತ್ತೆ ರೂಪವತಿ ಮಗಳಿಗೆ ನಿರಂತರವಾಗಿ ಕರೆ ಮಾಡಿದ್ದರು. ಆದರೆ ಸುನೀತಾಳ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಹೀಗಾಗಿ ಅಳಿಯ ಇಂದುಶೇಖರ್‌ಗೆ ಕರೆ ಮಾಡಿದ್ದ ರೂಪವತಿ, ಮಗಳ ಬಗ್ಗೆ ವಿಚಾರಿಸಿದ್ದರು.

ಅತ್ತೆ ರೂಪವತಿಯ ಕೊಲೆ: ಈ ವೇಳೆ ಸುನೀತಾ ಮನೆಯಲ್ಲಿಯೇ ಇದ್ದಾಳೆ, ಮನೆಗೆ ಬನ್ನಿ ಎಂದು ಅತ್ತೆಯನ್ನು ಇಂದುಶೇಖರ್ ಆಹ್ವಾನಿಸಿದ್ದ. ಅದರಂತೆ ಅಕ್ಟೋಬರ್ 18ರ ಬೆಳಗ್ಗೆ ಭಾಷ್ಯಂ ಸರ್ಕಲ್ ಬಳಿಯಿರುವ ಅಳಿಯನ ಮನೆಗೆ ರೂಪವತಿ ಬಂದಿದ್ದರು. ಮಗಳು ಸುನೀತಾ ಎಲ್ಲಿ ಎಂದು ಪ್ರಶ್ನಿಸಿದಾಗ ಇಂದುಶೇಖರ್ ಸಮರ್ಪಕ ಉತ್ತರ ನೀಡದೆ ದ್ವಂದ್ವ ಮಾತುಗಳನ್ನಾಡಿದ್ದ. ಈ ಸಂದರ್ಭದಲ್ಲಿ ಅಪ್ರಾಪ್ತ ಮಗಳು ಕೂಡ ತಂದೆಯ ಕೃತ್ಯಕ್ಕೆ ಸಹಕರಿಸಿದ್ದಳು. ಅಜ್ಜಿಗೆ ಊಟ ಬಡಿಸುವ ನೆಪದಲ್ಲಿ ಮಾಂಸಾಹಾರ ನೀಡಿದ್ದಳು. ಈ ವೇಳೆ ಟಿವಿಯ ಸದ್ದನ್ನ ಜೋರಾಗಿ ಇಟ್ಟಿದ್ದ ಇಂದುಶೇಖರ್, ಊಟ ಮಾಡುತ್ತಿದ್ದ ರೂಪವತಿಯ ತಲೆಗೆ ಹಿಂದಿನಿಂದ ರುಬ್ಬುವ ಕಲ್ಲಿನಿಂದ ಹೊಡೆದು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಶವಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿದ ತಂದೆ-ಮಗಳು: ಬಳಿಕ ತಂದೆ-ಮಗಳು ಸೇರಿ ರೂಪವತಿಯ ಮೃತದೇಹವನ್ನೂ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಪ್ಯಾಕ್ ಮಾಡಿದ್ದರು. ಅಕ್ಟೋಬರ್ 19ರ ರಾತ್ರಿ ಸುನೀತಾ ಮತ್ತು ರೂಪವತಿಯ ಮೃತದೇಹಗಳನ್ನು ಕಾರಿನಲ್ಲಿ ಸಾಗಿಸಿದ್ದ ಆರೋಪಿ, ತಮಿಳುನಾಡಿನ ಸೇಲಂ ಮತ್ತು ಧರ್ಮಪುರಿ ನಡುವಿನ ಘಾಟ್ ಪ್ರದೇಶದಲ್ಲಿ ಎಸೆದಿದ್ದ. ಇಬ್ಬರ ಮೊಬೈಲ್‌ಗಳನ್ನು ತನ್ನ ಬಳಿಯೇ ಇಟ್ಟುಕೊಂಡು ಅನುಮಾನ ಬಾರದಂತೆ ನೋಡಿಕೊಂಡಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಪತ್ನಿ ಮತ್ತು ಅತ್ತೆಯ ಹತ್ಯೆಯ ಬಳಿಕ ಮುಂದಿನ ಗುರಿಯಾಗಿದ್ದು ಬಾವ ಶಿವಕುಮಾರ್ ಕುಟುಂಬ. ಅಕ್ಟೋಬರ್ 23ರಂದು ಶಿವಕುಮಾರ್ ತನ್ನ ಅಕ್ಕ ಹಾಗೂ ತಾಯಿಗೆ ಕರೆ ಮಾಡಿದ್ದರು. ಇಬ್ಬರಿಂದಲೂ ಯಾವುದೇ ಪ್ರತಿಕ್ರಿಯೆ ಸಿಗದ ಹಿನ್ನೆಲೆಯಲ್ಲಿ ಬಾವ ಇಂದುಶೇಖರ್‌ಗೆ ಕರೆ ಮಾಡಿದ್ದರು. ಆಗ ಸುನೀತಾ ಮತ್ತು ರೂಪವತಿ ಪ್ರವಾಸಕ್ಕೆ ತೆರಳಿದ್ದಾರೆ ಎಂದು ಸುಳ್ಳು ಹೇಳಿದ್ದ ಇಂದುಶೇಖರ್, ಮನೆಗೆ ಬಂದು ಊಟ ಮಾಡಿಕೊಂಡು ಹೋಗುವಂತೆ ಶಿವಕುಮಾರ್‌ರನ್ನ ಆಹ್ವಾನಿಸಿದ್ದ. ಆ ಮಾತನ್ನ ನಂಬಿದ ಶಿವಕುಮಾರ್, ಅಕ್ಟೋಬರ್ 24ರಂದು ಪತ್ನಿ ದಿವ್ಯಾ ಮತ್ತು ಮಗ ಪುನೀತ್ ಜೊತೆ ಅಕ್ಕನ ಮನೆಗೆ ಬಂದಿದ್ದರು.

ಶಿವಕುಮಾರ್, ದಿವ್ಯಾ, ಪುನೀತ್ ಹತ್ಯೆ; ಅಂದು ರಾತ್ರಿ ದಂಪತಿಗೆ ಮಾಂಸಾಹಾರದ ಊಟದೊಂದಿಗೆ ಮದ್ಯದಲ್ಲಿ ನಿದ್ದೆ ಮಾತ್ರೆ ಬೆರೆಸಿ ನೀಡಲಾಗಿತ್ತು. ಬಳಿಕ ದಿವ್ಯಾ ಮತ್ತು ಪುನೀತ್ ಬೆಡ್‌ರೂಮ್‌ನಲ್ಲಿ ಮಲಗಿದ್ದರೆ, ಶಿವಕುಮಾರ್ ಹಾಲ್‌ನಲ್ಲಿ ಮಲಗಿದ್ದರು. ಇದೇ ಸಮಯಕ್ಕಾಗಿ ಕಾಯುತ್ತಿದ್ದ ಇಂದುಶೇಖರ್, ರುಬ್ಬುವ ಕಲ್ಲಿನಿಂದ ಶಿವಕುಮಾರ್ ತಲೆಗೆ ಹೊಡೆದು ಹತ್ಯೆ ಮಾಡಿದ್ದ. ಬಳಿಕ ಅಪ್ಪ ಮಗಳು ಮೃತದೇಹವನ್ನು ಪ್ಯಾಕ್ ಮಾಡಿ ಅಡುಗೆ ಮನೆಯಲ್ಲಿಟ್ಟಿದ್ದರು‌. ಅಕ್ಟೋಬರ್ 25ರ ಬೆಳಗಿನ ಜಾವ ವಾಶ್‌ರೂಮ್‌ಗೆ ಹೋಗಲು ಎದ್ದಿದ್ದ ದಿವ್ಯಾ, ಪತಿ ಶಿವಕುಮಾರ್ ಕಾಣಿಸದಿದ್ದಾಗ ಅವರ ಬಗ್ಗೆ ವಿಚಾರಿಸಿದ್ದರು. ಈ ವೇಳೆ ಆಕೆಯ ತಲೆಗೆ ರುಬ್ಬುವ ಕಲ್ಲಿನಿಂದ ಇಂದುಶೇಖರ್ ಹೊಡೆದು ಹತ್ಯೆಗೈದಿದ್ದ. ತಾಯಿಯ ಕಿರುಚಾಟ ಕೇಳಿ ಅಲ್ಲಿಗೆ ಬಂದ ಬಾಲಕ ಪುನೀತ್‌ನನ್ನೂ ಹತ್ಯೆಗೈದಿದ್ದ. ನಂತರ ತಂದೆ-ಮಗಳು ಸೇರಿ ದಿವ್ಯಾ ಮತ್ತು ಪುನೀತ್ ಮೃತದೇಹಗಳನ್ನು ಪ್ಯಾಕ್ ಮಾಡಿದ್ದರು. ಅಕ್ಟೋಬರ್ 27ರ ಮಂಗಳವಾರ ಬೆಳಗಿನ ಜಾವ ಮೂವರ ಮೃತದೇಹಗಳನ್ನ ಕಾರಿನ ಡಿಕ್ಕಿಯಲ್ಲಿಟ್ಟುಕೊಂಡು ಮನೆಯಿಂದ ಹೊರಟಿದ್ದ ಇಂದುಶೇಖರ, ಮೈಸೂರಿನ ಚಾಮುಂಡಿ ಬೆಟ್ಟದ ಪ್ರದೇಶದಲ್ಲಿ ಶಿವಕುಮಾರ್ ಮತ್ತು ದಿವ್ಯಾ ಮೃತದೇಹಗಳನ್ನ ಎಸೆದಿದ್ದ. ಆದರೆ ಬಾಲಕ ಪುನೀತ್‌ನ ಮೃತದೇಹವನ್ನ ಬೆಂಗಳೂರಿಗೆ ವಾಪಸ್ ತಂದಿದ್ದ. ಇದೇ ವೇಳೆ ದಿವ್ಯಾಳ ಮೊಬೈಲ್‌ನಿಂದ ಆಕೆಯ ತಾಯಿಗೆ ಸಂದೇಶ ಕಳುಹಿಸಿ, ನಾವು ಪ್ರವಾಸಕ್ಕೆ ಬಂದಿದ್ದೇವೆ ಎಂದು ನಂಬಿಸುವ ಪ್ರಯತ್ನವನ್ನೂ ಮಾಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇಷ್ಟಕ್ಕೆ ನಿಲ್ಲದ ಇಂದುಶೇಖರ್, ಕುಟುಂಬದ ಮತ್ತಿಬ್ಬರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ. ಅಕ್ಟೋಬರ್ 31ರಂದು ಶಂಕರ್ ತನ್ನ ಅಕ್ಕ, ತಾಯಿ ಹಾಗೂ ಶಿವಕುಮಾರ್‌ಗೆ ಕರೆ ಮಾಡಿದ್ದರು. ಯಾರೂ ಕರೆ ಸ್ವೀಕರಿಸದ ಹಿನ್ನೆಲೆಯಲ್ಲಿ ಬಾವ ಇಂದುಶೇಖರ್‌ಗೆ ಕರೆ ಮಾಡಿದ್ದರು. ಈ ವೇಳೆ ಎಲ್ಲರೂ ಪ್ರವಾಸಕ್ಕೆ ತೆರಳಿದ್ದಾರೆ ಎಂದು ಸುಳ್ಳು ಹೇಳಿದ್ದ ಇಂದುಶೇಖರ್, ಶಂಕರ್ ಮತ್ತು ಅವರ ಪತ್ನಿಯನ್ನ ಮನೆಗೆ ಬಂದು ಊಟ ಮಾಡಿಕೊಂಡು ಹೋಗುವಂತೆ ಆಹ್ವಾನಿಸಿದ್ದ. ಅದರಂತೆ ನವೆಂಬರ್ 1ರಂದು ಶಂಕರ್, ಪತ್ನಿ ನಳಿನಿ ಮತ್ತು ಮಗ (ಪ್ರಸ್ತುತ ಬದುಕುಳಿದ ಅಪ್ರಾಪ್ತ)ನ ಜೊತೆ ಅಕ್ಕನ ಮನೆಗೆ ಬಂದಿದ್ದರು. ಅಂದು ರಾತ್ರಿ ದಂಪತಿಗೆ ಮಾಂಸಾಹಾರದ ಊಟದ ಜೊತೆಗೆ ಮದ್ಯದಲ್ಲಿ ನಿದ್ದೆ ಮಾತ್ರೆ ಬೆರೆಸಿ ನೀಡಿದ್ದ. ದಂಪತಿ ನಿದ್ದೆಗೆ ಜಾರಿದ ಬಳಿಕ ಶಂಕರ್ ಮತ್ತು ನಳಿನಿಯ ತಲೆಗೆ ರುಬ್ಬುವ ಕಲ್ಲಿನಿಂದ ಹೊಡೆದು ಹತ್ಯೆ ಮಾಡಿದ್ದ. ಬಳಿಕ ತಂದೆ-ಮಗಳು ಸೇರಿ ಇಬ್ಬರ ಮೃತದೇಹಗಳನ್ನೂ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಪ್ಯಾಕ್ ಮಾಡಿದ್ದರು. ಆದರೆ ಬಾಲಕನನ್ನ ತಕ್ಷಣವೇ ಹತ್ಯೆ ಮಾಡಿರಲಿಲ್ಲ. ಅಷ್ಟರಲ್ಲಾಗಲೇ ಬಾಲಕ ಪುನೀತ್‌ನ ಮೃತದೇಹ ಕಾರಿನ ಡಿಕ್ಕಿಯಲ್ಲಿಯೇ ಇತ್ತು. ನವೆಂಬರ್ 1ರ ರಾತ್ರಿ ಮೂರು ಮೃತದೇಹಗಳನ್ನು ವಿಲೇವಾರಿ ಮಾಡಲು ಇಂದುಶೇಖರ್ ಹೊರಟಿದ್ದ. ನವೆಂಬರ್ 2ರ ಸೋಮವಾರ ಬೆಳಗಿನ ಜಾವ ಶಿರಾಡಿ ಘಾಟ್ ಬಳಿ ಶಂಕರ್ ಮತ್ತು ನಳಿನಿಯ ಮೃತದೇಹಗಳನ್ನು ಎಸೆದಿದ್ದ. ಬಳಿಕ ಯಾರಿಗೂ ಸುಳಿವು ಸಿಗಬಾರದು ಎಂಬ ಉದ್ದೇಶದಿಂದ ಬಾಲಕ ಪುನೀತ್‌ನ ಮೃತದೇಹವನ್ನ ನಂದಿಬೆಟ್ಟದ ಬಳಿ ಎಸೆದಿದ್ದ. ಈ ವೇಳೆ ಶಂಕರ್ ಮತ್ತು ನಳಿನಿಯ ಮಗ ಕೂಡ ಆರೋಪಿಯ ಜೊತೆಗಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.

ಏಳು ಮಂದಿ ನಾಪತ್ತೆ; ಕುಟುಂಬಸ್ಥರಿಂದ ದೂರು : ಒಂದೇ ಕುಟುಂಬದ ಏಳು ಮಂದಿ ಹಲವು ದಿನಗಳಿಂದ ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಕುಟುಂಬಸ್ಥರಲ್ಲಿ ಆತಂಕ ಹೆಚ್ಚಾಗಿತ್ತು. ನವೆಂಬರ್ 2ರ ಸೋಮವಾರ ಸಂಜೆ ಕುಟುಂಬಸ್ಥರು ಶ್ರೀರಾಮಪುರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಲು ಮುಂದಾಗಿದ್ದರು. ರಾತ್ರಿ ತಡವಾದ ಕಾರಣ ಮರುದಿನ ಅಂದರೆ ನವೆಂಬರ್ 3ರಂದು ನಳಿನಿ ಅವರ ತಾಯಿ ತುಂಗಮ್ಮ ಅವರು ಏಳು ಮಂದಿ ನಾಪತ್ತೆಯಾಗಿರುವ ಕುರಿತು ಅಧಿಕೃತ ದೂರು ದಾಖಲಿಸಿದ್ದರು.

ದೂರು ದಾಖಲಿಸಿಕೊಂಡ ಶ್ರೀರಾಮಪುರ ಠಾಣೆ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದರು. ನಾಪತ್ತೆಯಾದವರ ಮೊಬೈಲ್ ಕರೆಗಳು, ಸಂಪರ್ಕದ ವಿವರಗಳು ಹಾಗೂ ಇತರ ತಾಂತ್ರಿಕ ಸಾಕ್ಷ್ಯಗಳನ್ನು ಪರಿಶೀಲನೆಗೆ ಒಳಪಡಿಸಿದ್ದರು. ಮೊಬೈಲ್ ಟವರ್ ಡಂಪ್ ಪರಿಶೀಲನೆ ವೇಳೆ ಮಹತ್ವದ ಸುಳಿವು ಸಿಕ್ಕಿತ್ತು. ಒಂದೇ ಸ್ಥಳದ ಮೊಬೈಲ್ ನೆಟ್‌ವರ್ಕ್ ವ್ಯಾಪ್ತಿಯಲ್ಲಿ ಆರು ಮಂದಿಯ ಮೊಬೈಲ್‌ಗಳು ಕಾಣಿಸಿಕೊಂಡಿದ್ದವು. ಈ ಪೈಕಿ ಆರೋಪಿ ಇಂದುಶೇಖರ್‌ನ ಮೊಬೈಲ್ ಸಂಖ್ಯೆಯೂ ಸಕ್ರಿಯವಾಗಿರುವುದು ಪೊಲೀಸರ ಗಮನಕ್ಕೆ ಬಂದಿತ್ತು. ಈ ಸುಳಿವಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಪೊಲೀಸರು ನವೆಂಬರ್ 4ರ ಬುಧವಾರ ಇಂದುಶೇಖರ್ ಮತ್ತು ಅಪ್ರಾಪ್ತ ಬಾಲಕಿಯನ್ನು ವಶಕ್ಕೆ ಪಡೆದಿದ್ದರು. ಇದೇ ವೇಳೆ ಆರೋಪಿಗಳ ಜೊತೆಗಿದ್ದ ಬಾಲಕನನ್ನ ರಕ್ಷಿಸಿದ್ದರು. ನಂತರ ವಿಚಾರಣೆ ನಡೆಸಿದಾಗ ಸುದೀರ್ಘ ಹತ್ಯಾಕಾಂಡದ ರಹಸ್ಯ ಬಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಟವರ್ ಡಂಪ್ ಮೂಲಕ ಸಿಕ್ಕಿಬಿದ್ದ ಹಂತಕರು! ದೂರು ದಾಖಲಿಸಿಕೊಂಡ ಶ್ರೀರಾಮಪುರ ಠಾಣೆ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದರು. ನಾಪತ್ತೆಯಾದವರ ಮೊಬೈಲ್ ಕರೆಗಳು, ಸಂಪರ್ಕದ ವಿವರಗಳು ಹಾಗೂ ಇತರ ತಾಂತ್ರಿಕ ಸಾಕ್ಷ್ಯಗಳನ್ನು ಪರಿಶೀಲನೆಗೆ ಒಳಪಡಿಸಿದ್ದರು. ಮೊಬೈಲ್ ಟವರ್ ಡಂಪ್ ಪರಿಶೀಲನೆ ವೇಳೆ ಮಹತ್ವದ ಸುಳಿವು ಸಿಕ್ಕಿತ್ತು. ಒಂದೇ ಸ್ಥಳದ ಮೊಬೈಲ್ ನೆಟ್‌ವರ್ಕ್ ವ್ಯಾಪ್ತಿಯಲ್ಲಿ ಆರು ಮಂದಿಯ ಮೊಬೈಲ್‌ಗಳು ಕಾಣಿಸಿಕೊಂಡಿದ್ದವು. ಈ ಪೈಕಿ ಆರೋಪಿ ಇಂದುಶೇಖರ್‌ನ ಮೊಬೈಲ್ ಸಂಖ್ಯೆಯೂ ಸಕ್ರಿಯವಾಗಿರುವುದು ಪೊಲೀಸರ ಗಮನಕ್ಕೆ ಬಂದಿತ್ತು. ಈ ಸುಳಿವಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಪೊಲೀಸರು ನವೆಂಬರ್ 4ರ ಬುಧವಾರ ಇಂದುಶೇಖರ್ ಮತ್ತು ಅಪ್ರಾಪ್ತ ಬಾಲಕಿಯನ್ನು ವಶಕ್ಕೆ ಪಡೆದಿದ್ದರು. ಇದೇ ವೇಳೆ ಆರೋಪಿಗಳ ಜೊತೆಗಿದ್ದ ಬಾಲಕನನ್ನ ರಕ್ಷಿಸಿದ್ದರು. ನಂತರ ವಿಚಾರಣೆ ನಡೆಸಿದಾಗ ಸುದೀರ್ಘ ಹತ್ಯಾಕಾಂಡದ ರಹಸ್ಯ ಬಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪತ್ನಿಯಿಂದ ಆರಂಭಿಸಿ ಅತ್ತೆ, ಬಾವ, ನಾದಿನಿ, ಮಕ್ಕಳು ಸೇರಿದಂತೆ ಏಳು ಮಂದಿಯನ್ನು ಹತ್ಯೆ ಮಾಡಿರುವ ಬಗ್ಗೆ ಆರೋಪಿ ಬಾಯ್ಬಿಟ್ಟಿದ್ದಾನೆ. ಸದ್ಯ ಪ್ರಕರಣದ ಪ್ರತಿಯೊಂದು ಆಯಾಮವನ್ನೂ ಪರಿಶೀಲಿಸಲಾಗುತ್ತಿದ್ದು, ಹತ್ಯೆಗಳ ಹಿಂದಿನ ನಿಖರ ಕಾರಣ, ಸಂಚಿನಲ್ಲಿ ಇತರರ ಪಾತ್ರ ಹಾಗೂ ಸಾಕ್ಷ್ಯ ನಾಶಪಡಿಸಲು ನಡೆಸಿದ ಪ್ರಯತ್ನಗಳ ಕುರಿತು ಹೆಚ್ಚಿನ ತನಿಖೆ ಮುಂದುವರಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related


Discover more from Coastal Times Kannada

Subscribe to get the latest posts sent to your email.

Previous Post

ಬೆಂಗಳೂರಿನಿಂದ ನಿಷೇಧಿತ LSD ಡ್ರಗ್ಸ್ ಸಪ್ಲೈ: 3 ಲಕ್ಷ ರೂ. ಮೌಲ್ಯದ ಡ್ರಗ್ಸ್ ಸ್ಟ್ರಿಪ್ ವಶ, ಇಬ್ಬರ ಬಂಧನ

Related Posts

ಬೆಂಗಳೂರಿನಿಂದ ನಿಷೇಧಿತ LSD ಡ್ರಗ್ಸ್ ಸಪ್ಲೈ: 3 ಲಕ್ಷ ರೂ. ಮೌಲ್ಯದ ಡ್ರಗ್ಸ್ ಸ್ಟ್ರಿಪ್ ವಶ, ಇಬ್ಬರ ಬಂಧನ
ಕ್ರೈಮ್ ನ್ಯೂಸ್

ಬೆಂಗಳೂರಿನಿಂದ ನಿಷೇಧಿತ LSD ಡ್ರಗ್ಸ್ ಸಪ್ಲೈ: 3 ಲಕ್ಷ ರೂ. ಮೌಲ್ಯದ ಡ್ರಗ್ಸ್ ಸ್ಟ್ರಿಪ್ ವಶ, ಇಬ್ಬರ ಬಂಧನ

November 5, 2026
18
ಮೂಡುಬಿದ್ರೆ: ರಸ್ತೆ ಗುಂಡಿ ಬಿದ್ದ ನೆಪದಲ್ಲಿ ರಾಜ್ಯ ಹೆದ್ದಾರಿ ಮೇಲೆ ತನ್ನ ಬೈಕ್ ಇಟ್ಟು ಸಂಚಾರಕ್ಕೆ ತಡೆ, ಮೂಡುಬಿದ್ರೆ ಬಳಿ ಹೈಡ್ರಾಮಾ ನಡೆಸಿದ ಆರೋಪಿ ಬಂಧನ
ಕ್ರೈಮ್ ನ್ಯೂಸ್

ಮೂಡುಬಿದ್ರೆ: ರಸ್ತೆ ಗುಂಡಿ ಬಿದ್ದ ನೆಪದಲ್ಲಿ ರಾಜ್ಯ ಹೆದ್ದಾರಿ ಮೇಲೆ ತನ್ನ ಬೈಕ್ ಇಟ್ಟು ಸಂಚಾರಕ್ಕೆ ತಡೆ, ಮೂಡುಬಿದ್ರೆ ಬಳಿ ಹೈಡ್ರಾಮಾ ನಡೆಸಿದ ಆರೋಪಿ ಬಂಧನ

November 4, 2026
74

Discussion about this post

Recent News

ಕರ್ನಾಟಕವನ್ನೇ ಬೆಚ್ಚಿ ಬೀಳಿಸಿದ ಸರಣಿ ಕೊಲೆ ಪ್ರಕರಣ; ಕ್ಯಾಬ್ ಚಾಲಕ ಇಂದುಶೇಖರ್ ತನ್ನ ಪತ್ನಿ ಮತ್ತು ಆಕೆಯ ಕುಟುಂಬದ 7 ಜನರ ಹತ್ಯೆ

ಕರ್ನಾಟಕವನ್ನೇ ಬೆಚ್ಚಿ ಬೀಳಿಸಿದ ಸರಣಿ ಕೊಲೆ ಪ್ರಕರಣ; ಕ್ಯಾಬ್ ಚಾಲಕ ಇಂದುಶೇಖರ್ ತನ್ನ ಪತ್ನಿ ಮತ್ತು ಆಕೆಯ ಕುಟುಂಬದ 7 ಜನರ ಹತ್ಯೆ

November 7, 2026
12
ಬೆಂಗಳೂರಿನಿಂದ ನಿಷೇಧಿತ LSD ಡ್ರಗ್ಸ್ ಸಪ್ಲೈ: 3 ಲಕ್ಷ ರೂ. ಮೌಲ್ಯದ ಡ್ರಗ್ಸ್ ಸ್ಟ್ರಿಪ್ ವಶ, ಇಬ್ಬರ ಬಂಧನ

ಬೆಂಗಳೂರಿನಿಂದ ನಿಷೇಧಿತ LSD ಡ್ರಗ್ಸ್ ಸಪ್ಲೈ: 3 ಲಕ್ಷ ರೂ. ಮೌಲ್ಯದ ಡ್ರಗ್ಸ್ ಸ್ಟ್ರಿಪ್ ವಶ, ಇಬ್ಬರ ಬಂಧನ

November 5, 2026
18
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002


Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಕರ್ನಾಟಕವನ್ನೇ ಬೆಚ್ಚಿ ಬೀಳಿಸಿದ ಸರಣಿ ಕೊಲೆ ಪ್ರಕರಣ; ಕ್ಯಾಬ್ ಚಾಲಕ ಇಂದುಶೇಖರ್ ತನ್ನ ಪತ್ನಿ ಮತ್ತು ಆಕೆಯ ಕುಟುಂಬದ 7 ಜನರ ಹತ್ಯೆ

ಕರ್ನಾಟಕವನ್ನೇ ಬೆಚ್ಚಿ ಬೀಳಿಸಿದ ಸರಣಿ ಕೊಲೆ ಪ್ರಕರಣ; ಕ್ಯಾಬ್ ಚಾಲಕ ಇಂದುಶೇಖರ್ ತನ್ನ ಪತ್ನಿ ಮತ್ತು ಆಕೆಯ ಕುಟುಂಬದ 7 ಜನರ ಹತ್ಯೆ

November 7, 2026
ಬೆಂಗಳೂರಿನಿಂದ ನಿಷೇಧಿತ LSD ಡ್ರಗ್ಸ್ ಸಪ್ಲೈ: 3 ಲಕ್ಷ ರೂ. ಮೌಲ್ಯದ ಡ್ರಗ್ಸ್ ಸ್ಟ್ರಿಪ್ ವಶ, ಇಬ್ಬರ ಬಂಧನ

ಬೆಂಗಳೂರಿನಿಂದ ನಿಷೇಧಿತ LSD ಡ್ರಗ್ಸ್ ಸಪ್ಲೈ: 3 ಲಕ್ಷ ರೂ. ಮೌಲ್ಯದ ಡ್ರಗ್ಸ್ ಸ್ಟ್ರಿಪ್ ವಶ, ಇಬ್ಬರ ಬಂಧನ

November 5, 2026
ಬೆಂಗಳೂರಿನಲ್ಲಿ ರೋಹನ್ ಕಾರ್ಪೋರೇಶನ್‌ನ ನೂತನ ಕಚೇರಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉದ್ಘಾಟನೆ- ನ. 6ರಿಂದ ಮೂರು ದಿನಗಳ ಪ್ರಾಜೆಕ್ಟ್ ಎಕ್ಸಿಬಿಷನ್; ವಿಶೇಷ ದರಗಳಲ್ಲಿ ಖರೀದಿಗೆ ಅವಕಾಶ

ಬೆಂಗಳೂರಿನಲ್ಲಿ ರೋಹನ್ ಕಾರ್ಪೋರೇಶನ್‌ನ ನೂತನ ಕಚೇರಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉದ್ಘಾಟನೆ- ನ. 6ರಿಂದ ಮೂರು ದಿನಗಳ ಪ್ರಾಜೆಕ್ಟ್ ಎಕ್ಸಿಬಿಷನ್; ವಿಶೇಷ ದರಗಳಲ್ಲಿ ಖರೀದಿಗೆ ಅವಕಾಶ

November 5, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

%d