ಮಂಗಳೂರು: ವ್ಯಕ್ತಿಯೋರ್ವರಿಗೆ ಎಪಿಕೆ ಫೈಲ್ ಕಳುಹಿಸಿ ಅವರ ಪ್ಲಿಪ್‌ಕಾರ್ಟ್ ಖಾತೆ ಹ್ಯಾಕ್ ಮಾಡಿ ವಂಚಿಸಿದ ಸೈಬರ್ ವಂಚಕನೋರ್ವನನ್ನು ಮಂಗಳೂರಿನ ಸೆನ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೊಸದಿಲ್ಲಿ ನಿವಾಸಿ ಗೌರವ್ ಮಕ್ವಾನ್ (25) ಬಂಧಿತ ಆರೋಪಿ. ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಬಂಧಿತ ಆರೋಪಿಯಿಂದ 2 ಆಂಡ್ರಾಯ್ಡ ಫೋನ್, 5 ಐಫೋನ್-15, 2 ಇಯರ್‌ಪಾಡ್ ಹಾಗೂ ಕೃತ್ಯಕ್ಕೆ ಬಳಸಿದ್ದ ಮೊಬೈಲ್ ಫೋನ್ ಸೇರಿದಂತೆ 4 ಲ.ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿ ಇತರ ಆರೋಪಿಗಳ ಜತೆ ಸೇರಿ ಹಲವಾರು ಮಂದಿಗೆ ವಂಚಿಸಿರುವುದು ಬೆಳಕಿಗೆ ಬಂದಿದೆ.
ಮಂಗಳೂರಿನ ಸೆನ್ ಕ್ರೈಂ ಪೊಲೀಸ್ ಠಾಣೆಯ ಪಿಎಸ್‌ಐ ಗುರಪ್ಪ ಕಾಂತಿ ಹಾಗೂ ಪಿಸಿ ತಿಪ್ಪಾ ರೆಡ್ಡಿ ಅವರು ಪ್ರಕರಣ ದಾಖಲಾದ 48 ಗಂಟೆಯೊಳಗೆ ಆರೋಪಿಯನ್ನು ಹೊಸದಿಲ್ಲಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸೆನ್ ಠಾಣೆಯ ಎಸಿಪಿ ರವೀಶ್ ನಾಯಕ್ ಅವರ ನೇತೃತ್ವದಲ್ಲಿ ಇತರ ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿದಿದೆ.
ವಂಚಿಸಿದ್ದು ಹೇಗೆ? : ಯದುನಂದನ್ ಅವರ ವಾಟ್ಸ್‌ಆ್ಯಪ್‌ಗೆ VAHAN PARIVAHAN.apk ಎನ್ನುವ ಫೈಲ್ ಬಂದಿತ್ತು. ಅವರು ಅದು ಸಾರಿಗೆ ಇಲಾಖೆಗೆ ಸಂಬಂಧಿಸಿ ಲಿಂಕ್ ಆಗಿರಬಹುದು ಎಂಬ ಕಾರಣಕ್ಕೆ ಅದನ್ನು ಡೌನ್‌ಲೋಡ್ ಮಾಡಿಕೊಂಡಿದ್ದರು. ಆ ಕೂಡಲೇ ಅವರ ಪ್ಲಿಪ್‌ಕಾರ್ಟ್ ಖಾತೆ ಹ್ಯಾಕ್ ಆಗಿತ್ತು. ಸೈಬರ್ ವಂಚಕರು ಅವರ ಪ್ಲಿಪ್‌ಕಾರ್ಟ್ ಖಾತೆ ಬಳಸಿಕೊಂಡು ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್‌ಗಳಿಂದ 1.31 ಲ.ರೂ. ಮೌಲ್ಯದ ಎರಡು ಮೊಬೈಲ್ ಪೋನ್, 1 ಇಯರ್‌ಪಾಡ್ ಮತ್ತು ಗಿಫ್ಟ್ ವೋಚರ್‌ಗಳನ್ನು ಖರೀದಿಸಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post