• About us
  • Contact us
  • Disclaimer
Thursday, January 15, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಮಣಿಪಾಲ: ಕುತ್ತಿಗೆ ಸೀಳಿಕೊಂಡು ಹೊಟೇಲ್‌ ಕಾರ್ಮಿಕ ಆತ್ಮಹತ್ಯೆ?

Coastal Times by Coastal Times
December 7, 2024
in ಕ್ರೈಮ್ ನ್ಯೂಸ್
ಮಣಿಪಾಲ: ಕುತ್ತಿಗೆ ಸೀಳಿಕೊಂಡು ಹೊಟೇಲ್‌ ಕಾರ್ಮಿಕ ಆತ್ಮಹತ್ಯೆ?
14
VIEWS
WhatsappTelegramShare on FacebookShare on Twitter

ಮಣಿಪಾಲ: ಕುತ್ತಿಗೆ ಸೀಳಿಕೊಂಡು ರಕ್ತಸಿಕ್ತವಾದ ಮೃತದೇಹ ಮಣಿಪಾಲದ ಅನಂತ ಕಲ್ಯಾಣ ನಗರ ಮುಖ್ಯರಸ್ತೆಯ ಬದಿಯಲ್ಲಿ ಶುಕ್ರವಾರ ಬೆಳಗ್ಗೆ ಪತ್ತೆಯಾಗಿದೆ. ಹೊಟೇಲ್‌ ಕಾರ್ಮಿಕರಾಗಿದ್ದ ಕಾಸರಕೋಡ ನಿವಾಸಿ ಶ್ರೀಧರ (38) ಮೃತರು. ಬಿಯರ್‌ ಬಾಟಲಿಯಿಂದ ಕತ್ತು ಸೀಳಿ ಕೊಲೆಗೈದಿರಬಹುದು ಎಂದು ಮೊದಲು ಶಂಕಿಸಲಾಗಿದ್ದು, ಅದರಂತೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಆತನೇ ಕತ್ತು ಸೀಳಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ. ಅದರಂತೆ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರಿದಿದೆ ಎಂದು ಎಸ್‌ಪಿ ಡಾ| ಅರುಣ್‌ ಕೆ. ಅವರು ತಿಳಿಸಿದ್ದಾರೆ.

ಮಣಿಪಾಲದ ಹೊಟೇಲ್‌ವೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಶ್ರೀಧರ ಸಿಂಡಿಕೇಟ್‌ ಸರ್ಕಲ್‌ ಬಳಿ ತನ್ನ ಸಹೋದ್ಯೋಗಿಗಳೊಂದಿಗೆ ವಾಸ ಮಾಡಿಕೊಂಡಿದ್ದರು. ಬೆಳಗ್ಗೆ ಬೇಗನೆ ಎದ್ದುಕೊಂಡು ಹೋಗಿದ್ದ ಅವರು ಅನಂತಕಲ್ಯಾಣ ನಗರ ಮುಖ್ಯರಸ್ತೆಯ ಬಳಿ ಬಿಯರ್‌ ಬಾಟಲಿಯಲ್ಲಿ ಕತ್ತು ಸೀಳಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ತನ್ನನ್ನು ತಾನು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದು ಬಲು ಅಪರೂಪದ ಪ್ರಕರಣವಾಗಿದೆ. ಕಾರ್ಮಿಕ ಬಾಟಲಿಯನ್ನು ಹಿಡಿದುಕೊಂಡು ಬಂದಿದ್ದು, ಕೈಯಲ್ಲಿ ಚೀಲವೂ ಇತ್ತು. ಆದರೆ ಚೀಲದೊಳಗೆ ಏನೂ ಇರಲಿಲ್ಲ. ಚಪ್ಪಲಿ ಚೆಲ್ಲಾಪಿಲ್ಲಿಯಾಗಿ ಸ್ಥಳದಲ್ಲಿ ಬಿದ್ದಿತ್ತು. ಕೊಯ್ದಿರುವ ಭೀಕರತೆ ಹೇಗಿತ್ತೆಂದರೆ ಕತ್ತುಸೀಳಿ ಬಂದಿತ್ತು. ಅಮಲು ಪದಾರ್ಥ ಸೇವಿಸಿ ಆತ ಕೃತ್ಯವೆಸಗಿರಬಹುದು.

ಮೃತದೇಹದ ಪರೀಕ್ಷೆಯನ್ನು ಮಣಿಪಾಲ ಕೆಎಂಸಿಯಲ್ಲಿ ನಡೆಸಲಾಯಿತು. ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬ ಬಗ್ಗೆ ಸ್ಥಳೀಯರಲ್ಲಿಯೂ ಹಲವಾರು ಅನುಮಾನಗಳಿದ್ದು, ಸೂಕ್ತ ತನಿಖೆ ನಡೆಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಶವ ಪರೀಕ್ಷೆ ಮತ್ತು ಸಾಕ್ಷಿಗಳ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಕೆ. ಅರುಣ್‌ ಸ್ಥಳಕ್ಕೆ ಭೇಟಿ ನೀಡಿ ತಿಳಿಸಿದ್ದಾರೆ. ಮಣಿಪಾಲ ಠಾಣೆಯ ವೃತ್ತ ನಿರೀಕ್ಷಕ ದೇವರಾಜ್‌ ಟಿ.ವಿ. ಸಹಿತ ಸಿಬಂದಿ ಪರಿಶೀಲನೆ ನಡೆಸಿದರು.

ಘಟನೆ ನಡೆದ ಬಳಿಕ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ಯಾರೋ ಅಪರಿಚಿತರು ಪೂರ್ವ ದ್ವೇಷದಿಂದ ಆಯುಧದಿಂದ ಕುತ್ತಿಗೆಗೆ ಚುಚ್ಚಿ ಕೊಲೆ ಮಾಡಿರಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಕೊಲೆ ನಡೆಸಿದ ಬಗ್ಗೆ ಯಾವುದೇ ಕುರುಹು ಪತ್ತೆಯಾಗಿಲ್ಲ. ಅಲ್ಲದೆ ಆರೋಪಿಗಳು ಒಡಾಟ ಮಾಡಿದ ಬಗ್ಗೆಯೂ ವಿವರಗಳು ತಿಳಿದುಬಂದಿಲ್ಲ. ಅನಂತರ ತನಿಖೆ ಸಂದರ್ಭದಲ್ಲಿ ಕೊಲೆ ನಡೆದ ಆಸುಪಾಸಿನ ಸಿಸಿ ಟಿವಿಗಳನ್ನು ಪರಿಶೀಲಿಸಿದಾಗ ಮೃತ ವ್ಯಕ್ತಿಯು ಬಿಯರ್‌ ಬಾಟಲಿಯಿಂದ ತಾನೇ ಕುತ್ತಿಗೆ ಸೀಳಿಕೊಂಡಿರುವುದು ಪತ್ತೆಯಾಗಿದೆ ಎನ್ನಲಾಗಿದ್ದು, ಈ ದೃಷ್ಟಿಯಲ್ಲಿ ತನಿಖೆ ಮುಂದುವರಿದಿದೆ.

ಸಿಸಿ ಕೆಮರಾದಲ್ಲಿ ಕೃತ್ಯ ದಾಖಲು?
ರಸ್ತೆಯಲ್ಲಿ ನೆತ್ತರ ಕೋಡಿ ಹರಿದಿದ್ದು, ಮೃತದೇಹವನ್ನು ಕಂಡಾಗ ಮೇಲ್ನೋಟಕ್ಕೆ ಕೊಲೆಯಾಗಿರಬಹುದೆಂದು ಪೊಲೀಸರು ಅಂದಾಜಿಸಿದ್ದರು. ಬಳಿಕ ವಿವಿಧ ಆಯಾಮದಲ್ಲಿ ತನಿಖೆ ನಡೆಸಿದಾಗ ಆತ್ಮಹತ್ಯೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಸಿಂಡಿಕೇಟ್‌ ಸರ್ಕಲ್‌ನಿಂದ ಕಾಲ್ನಡಿಗೆಯಲ್ಲಿ ಅಗಮಿಸಿದ್ದ ಆತ ಏಕಾಏಕಿ ಕತ್ತು ಸೀಳಿಕೊಂಡಿದ್ದಾನೆ. ಈ ದೃಶ್ಯಾವಳಿಗಳು ಸ್ಥಳೀಯ ಅಂಗಡಿಯೊಂದರ ಸಿಸಿ ಕೆಮರಾದಲ್ಲಿ ದಾಖಲಾಗಿದೆ ಎನ್ನುತ್ತಾರೆ ಪೊಲೀಸರು. ಆದರೆ ತನಿಖೆಯ ದೃಷ್ಟಿಯಿಂದ ಆ ಸಿಸಿ ಟಿವಿ ದೃಶ್ಯಾವಳಿಗಳನ್ನು ಇನ್ನೂ ಬಹಿರಂಗಪಡಿಸಿಲ್ಲ.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

Related

Discover more from Coastal Times Kannada

Subscribe to get the latest posts sent to your email.

Previous Post

ಮಂಗಳೂರು: ಎಪಿಕೆ ಫೈಲ್‌ ಕಳುಹಿಸಿ ವಂಚನೆ ಪ್ರಕರಣ: ಸೈಬರ್‌ ವಂಚಕನ ಬಂಧನ

Next Post

ಮಂಜನಾಡಿ :ಮಧ್ಯರಾತ್ರಿ ಮನೆಯೊಳಗಡೆ ಗ್ಯಾಸ್ ಸ್ಫೋಟ; ತಾಯಿ, ಮಕ್ಕಳಿಗೆ ಗಂಭೀರ ಗಾಯ

Related Posts

ಬೆಳ್ತಂಗಡಿ: ದೇವಸ್ಥಾನಕ್ಕೆ ಹೊರಟಿದ್ದ ಬಾಲಕನ ಮೃತದೇಹ ಮನೆ ಸಮೀಪದ ಕೆರೆಯಲ್ಲಿ ಪತ್ತೆ
ಕ್ರೈಮ್ ನ್ಯೂಸ್

ಬೆಳ್ತಂಗಡಿ: ದೇವಸ್ಥಾನಕ್ಕೆ ಹೊರಟಿದ್ದ ಬಾಲಕನ ಮೃತದೇಹ ಮನೆ ಸಮೀಪದ ಕೆರೆಯಲ್ಲಿ ಪತ್ತೆ

January 14, 2026
57
ಮಂಗಳೂರು: ಕೃಷಿಕನ ಮೇಲೆ ಹಲ್ಲೆ, ಸುಲಿಗೆ ಯತ್ನ; ಆರೋಪಿಗಳ ವಿರುದ್ಧ ಕೋಕಾ ಕಾಯ್ದೆಯಡಿ ಪ್ರಕರಣ ದಾಖಲು
ಕ್ರೈಮ್ ನ್ಯೂಸ್

ಮಂಗಳೂರು: ಕೃಷಿಕನ ಮೇಲೆ ಹಲ್ಲೆ, ಸುಲಿಗೆ ಯತ್ನ; ಆರೋಪಿಗಳ ವಿರುದ್ಧ ಕೋಕಾ ಕಾಯ್ದೆಯಡಿ ಪ್ರಕರಣ ದಾಖಲು

January 13, 2026
39
Next Post
ಮಂಜನಾಡಿ :ಮಧ್ಯರಾತ್ರಿ ಮನೆಯೊಳಗಡೆ ಗ್ಯಾಸ್ ಸ್ಫೋಟ; ತಾಯಿ, ಮಕ್ಕಳಿಗೆ ಗಂಭೀರ ಗಾಯ

ಮಂಜನಾಡಿ :ಮಧ್ಯರಾತ್ರಿ ಮನೆಯೊಳಗಡೆ ಗ್ಯಾಸ್ ಸ್ಫೋಟ; ತಾಯಿ, ಮಕ್ಕಳಿಗೆ ಗಂಭೀರ ಗಾಯ

Discussion about this post

Recent News

ಮಂಗಳೂರು: ಕೆನರಾ ಸಾಂಸ್ಕೃತಿಕ ಅಕಾಡೆಮಿ ವತಿಯಿಂದ ಭಕ್ತಿ, ಸಂಸ್ಕಾರ ಮತ್ತು ಸಂಗೀತದ ದಿವ್ಯ ಸಂಗಮ; ಬಾಲ ಭಜನಾ ವೈಭವ

ಮಂಗಳೂರು: ಕೆನರಾ ಸಾಂಸ್ಕೃತಿಕ ಅಕಾಡೆಮಿ ವತಿಯಿಂದ ಭಕ್ತಿ, ಸಂಸ್ಕಾರ ಮತ್ತು ಸಂಗೀತದ ದಿವ್ಯ ಸಂಗಮ; ಬಾಲ ಭಜನಾ ವೈಭವ

January 15, 2026
19
ಮಂಗಳೂರು ನಗರಕ್ಕೆ ಹೆದ್ದಾರಿಯನ್ನು 6-ಲೇನ್ ಗೆ ವಿಸ್ತರಿಸುವ ಹಾಗೂ ಸರ್ವಿಸ್ ರಸ್ತೆ ನಿರ್ಮಿಸುವ ಯೋಜನೆ: ಎನ್‌ಎಚ್‌ಎಐನಿಂದ ಡಿಪಿಆರ್‌ಗೆ ಸಿದ್ಧತೆ

ಮಂಗಳೂರು ನಗರಕ್ಕೆ ಹೆದ್ದಾರಿಯನ್ನು 6-ಲೇನ್ ಗೆ ವಿಸ್ತರಿಸುವ ಹಾಗೂ ಸರ್ವಿಸ್ ರಸ್ತೆ ನಿರ್ಮಿಸುವ ಯೋಜನೆ: ಎನ್‌ಎಚ್‌ಎಐನಿಂದ ಡಿಪಿಆರ್‌ಗೆ ಸಿದ್ಧತೆ

January 15, 2026
50
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಮಂಗಳೂರು: ಕೆನರಾ ಸಾಂಸ್ಕೃತಿಕ ಅಕಾಡೆಮಿ ವತಿಯಿಂದ ಭಕ್ತಿ, ಸಂಸ್ಕಾರ ಮತ್ತು ಸಂಗೀತದ ದಿವ್ಯ ಸಂಗಮ; ಬಾಲ ಭಜನಾ ವೈಭವ

ಮಂಗಳೂರು: ಕೆನರಾ ಸಾಂಸ್ಕೃತಿಕ ಅಕಾಡೆಮಿ ವತಿಯಿಂದ ಭಕ್ತಿ, ಸಂಸ್ಕಾರ ಮತ್ತು ಸಂಗೀತದ ದಿವ್ಯ ಸಂಗಮ; ಬಾಲ ಭಜನಾ ವೈಭವ

January 15, 2026
ಮಂಗಳೂರು ನಗರಕ್ಕೆ ಹೆದ್ದಾರಿಯನ್ನು 6-ಲೇನ್ ಗೆ ವಿಸ್ತರಿಸುವ ಹಾಗೂ ಸರ್ವಿಸ್ ರಸ್ತೆ ನಿರ್ಮಿಸುವ ಯೋಜನೆ: ಎನ್‌ಎಚ್‌ಎಐನಿಂದ ಡಿಪಿಆರ್‌ಗೆ ಸಿದ್ಧತೆ

ಮಂಗಳೂರು ನಗರಕ್ಕೆ ಹೆದ್ದಾರಿಯನ್ನು 6-ಲೇನ್ ಗೆ ವಿಸ್ತರಿಸುವ ಹಾಗೂ ಸರ್ವಿಸ್ ರಸ್ತೆ ನಿರ್ಮಿಸುವ ಯೋಜನೆ: ಎನ್‌ಎಚ್‌ಎಐನಿಂದ ಡಿಪಿಆರ್‌ಗೆ ಸಿದ್ಧತೆ

January 15, 2026
ಬಿಕರ್ನಕಟ್ಟೆ ಬಾಲ ಯೇಸುವಿನ ಪುಣ್ಯಕ್ಷೇತ್ರದಲ್ಲಿ ವಾರ್ಷಿಕ ಹಬ್ಬಕ್ಕೆ ಹರಿದು ಬಂದ ಭಕ್ತಸಾಗರ

ಬಿಕರ್ನಕಟ್ಟೆ ಬಾಲ ಯೇಸುವಿನ ಪುಣ್ಯಕ್ಷೇತ್ರದಲ್ಲಿ ವಾರ್ಷಿಕ ಹಬ್ಬಕ್ಕೆ ಹರಿದು ಬಂದ ಭಕ್ತಸಾಗರ

January 14, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d