ಬೆಳ್ತಂಗಡಿ: ಸಾಮಾಜಿಕ ಜಾಲತಾಣಗಳಲ್ಲಿ ಛಾಯಾಗ್ರಾಹಕರ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ ಯೂಟ್ಯೂಬರ್ ಶಿಲ್ಪ ಶೆಟ್ಟಿ ಮಂಗಳೂರು ಎಂಬವರ ವಿರುದ್ಧ ಕೇಸು ದಾಖಲಿಸುವಂತೆ ಬೆಳ್ತಂಗಡಿ ಪೊಲೀಸ್ ಠಾಣೆ ಉಪ ನಿರೀಕ್ಷಕರಿಗೆ ಬೆಳ್ತಂಗಡಿ ತಾಲೂಕು ಛಾಯಾಗ್ರಾಹಕರ ಸಂಘದ ವತಿಯಿಂದ ಅ. 13 ರಂದು ಮನವಿಯನ್ನು ನೀಡಲಾಯಿತು.
ಛಾಯಾಗ್ರಾಣವು ಕೌಶಲ್ಯ ಪರಿಶ್ರಮ ತಾಂತ್ರಿಕ ಜ್ಞಾನ ಮತ್ತು ವೃತ್ತಿಪರ ಬದ್ಧತೆಯನ್ನು ಒಳಗೊಂಡ ವೃತ್ತಿಯಾಗಿರುತ್ತದೆ ಜಾಲತಾಣಗಳಲ್ಲಿ ಇಂತಹ ಹೇಳಿಕೆಗಳು ವ್ಯಾಪಕವಾಗಿ ಸಾಧ್ಯತೆ ಇರುವುದರಿಂದ ಛಾಯಾಗ್ರಾಹಕರಲ್ಲಿ ನೋವನ್ನು ಉಂಟು ಮಾಡಿದೆ ಸಂಬಂಧ ಪಟ್ಟ ಇಲಾಖೆ ಇಂತಹ ಹೇಳಿಕೆಗಳನ್ನು ನೀಡುವವರನ್ನು ತಕ್ಷಣ ವಿಚಾರಿಸಿ ತಮಗೆ ನ್ಯಾಯವನ್ನು ಒದಗಿಸಿ ಕೊಡಬೇಕಾಗಿ ಬೆಳ್ತಂಗಡಿ ತಾಲೂಕು ಛಾಯಾಗ್ರಾಹಕರ ಸಂಘದ ವತಿಯಿಂದ ಒತ್ತಾಯಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.







Discussion about this post