• About us
  • Contact us
  • Disclaimer
Wednesday, October 14, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಮಂಗಳೂರು ಏರ್ ಪೋರ್ಟ್ ನಲ್ಲಿ ಟೂರಿಸ್ಟ್ ವಾಹನಗಳಿಂದ ದುಬಾರಿ ಶುಲ್ಕ ವಸೂಲಿ: ಟ್ಯಾಕ್ಸಿ ಚಾಲಕರಿಂದ 10 ದಿನಗಳ ಗಡುವು, ಅನಿರ್ದಿಷ್ಟಾವಧಿ ಧರಣಿ ಎಚ್ಚರಿಕೆ

Coastal Times by Coastal Times
October 14, 2026
in ಕರಾವಳಿ
ಮಂಗಳೂರು ಏರ್ ಪೋರ್ಟ್ ನಲ್ಲಿ ಟೂರಿಸ್ಟ್ ವಾಹನಗಳಿಂದ ದುಬಾರಿ ಶುಲ್ಕ ವಸೂಲಿ: ಟ್ಯಾಕ್ಸಿ ಚಾಲಕರಿಂದ 10 ದಿನಗಳ ಗಡುವು, ಅನಿರ್ದಿಷ್ಟಾವಧಿ ಧರಣಿ ಎಚ್ಚರಿಕೆ
18
VIEWS
WhatsappTelegramShare on FacebookShare on Twitter

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಎಂಐಎ) ವಾಣಿಜ್ಯ ವಾಹನಗಳಿಗೆ ನೂತನವಾಗಿ ಜಾರಿಗೊಳಿಸಲಾಗಿರುವ ರೂ.50 ಪ್ರವೇಶ ಶುಲ್ಕ ಹಾಗೂ ಹೆಚ್ಚಿಸಲಾದ ಪಿಕ್-ಅಪ್ ದರಗಳನ್ನು ವಿರೋಧಿಸಿ ಕರಾವಳಿಯ ಟ್ಯಾಕ್ಸಿ ಮತ್ತು ಮ್ಯಾಕ್ಸಿಕ್ಯಾಬ್​ ಚಾಲಕ- ಮಾಲೀಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಟ್ಯಾಕ್ಸಿಮೆನ್ ಮತ್ತು ಮ್ಯಾಕ್ಸಿಕೇಬ್ ಅಸೋಸಿಯೇಷನ್ ಅಧ್ಯಕ್ಷ ಆನಂದ್ ಕೆ. ಮಾತನಾಡಿ, “ನಾವು ಈಗಾಗಲೇ ಸಂಸದರು ಮತ್ತು ಸಂಬಂಧಪಟ್ಟ ಮೇಲಧಿಕಾರಿಗಳನ್ನು ಭೇಟಿ ಮಾಡಿ ಮನವಿ ನೀಡಿದ್ದೇವೆ. ಆದರೆ, ಯಾವುದೇ ಬೇಡಿಕೆ ಈಡೇರಿಲ್ಲ. ದೇಶದ ಎಲ್ಲೂ ಇಲ್ಲದ ಅವ್ಯವಸ್ಥೆಯನ್ನು ಇಲ್ಲಿ ಜಾರಿಗೆ ತಂದು ಟ್ಯಾಕ್ಸಿಗಳ ಮೇಲೆ ಹೊರೆ ಮಾಡುತ್ತಿದ್ದಾರೆ. ಮೊದಲು 10 ನಿಮಿಷ ಉಚಿತ ಕೊಡಿ, ಆಮೇಲೆ ಹೆಚ್ಚುವರಿ ಅವಧಿಗೆ ಶುಲ್ಕ ಪಡೆಯಿರಿ ಎಂದು ಕೇಳಿದ್ದೆವು.

ಇದಕ್ಕವರು ಒಪ್ಪಿದಂತೆ ನಾಟಕವಾಡಿ, ಈಗ ಏಕಾಏಕಿ ಅದನ್ನೂ ರದ್ದುಪಡಿಸಿ ಎಂಟ್ರಿಗೆ ರೂ.50 ಶುಲ್ಕ ಇಟ್ಟಿದ್ದಾರೆ. ಆಟೋ ರಿಕ್ಷಾಗಳಿಗೂ ಇದೇ ಶುಲ್ಕ ವಿಧಿಸುತ್ತಿದ್ದಾರೆ. ಖಾಸಗಿ ವಾಹನಗಳಿಗೆ ಕೊಡುವಂತೆ ನಮಗೂ 8 ನಿಮಿಷ ಉಚಿತ ಪ್ರವೇಶ ಕೊಡಬೇಕು. ಹೆಚ್ಚುವರಿಯಾಗಿ ಮಾಡಿರುವ ರೂ.180 ಪಿಕ್-ಅಪ್ ಶುಲ್ಕವನ್ನು ರೂ.100ಕ್ಕೆ ಇಳಿಸಬೇಕು. ಈ ರೂ.50 ಎಂಟ್ರಿ ಶುಲ್ಕವನ್ನು ತಕ್ಷಣವೇ ರದ್ದು ಮಾಡಬೇಕು. ಇದಕ್ಕೆ 10 ದಿನಗಳ ಗಡುವು ನೀಡುತ್ತಿದ್ದೇವೆ. ಬಗೆಹರಿಯದಿದ್ದರೆ ಉಭಯ ಜಿಲ್ಲೆಗಳ ಸಮಾನಮನಸ್ಕ ಸಂಘಟನೆಗಳೊಂದಿಗೆ ಸೇರಿ ಕೆಂಜಾರು ಬಳಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸುತ್ತೇವೆ” ಎಚ್ಚರಿಕೆ ನೀಡಿದ್ದಾರೆ.

ಮಂಗಳವಾರದಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಸೋಸಿಯೇಷನ್ ಉಡುಪಿ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಕೆ.ರಘುಪತಿ ಭಟ್, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲ್ವಿಚಾರಣೆ ನೋಡುತ್ತಿರುವ ಅದಾನಿ ಸಂಸ್ಥೆಯಿಂದ ಟೂರಿಸ್ಟ್ ವಾಹನಗಳಿಗೆ ಅನ್ಯಾಯಗಳಾಗುತ್ತಿವೆ. ಟೂರಿಸ್ಟ್ ವಾಹನಗಳು ಪಾರ್ಕಿಂಗ್ ಲಾಟ್ ಗೆ ಹೋಗದೇ ಇದ್ದರೂ ಗ್ರಾಹಕರನ್ನು ಪಿಕ್ ಅಪ್ ಮಾಡುವ ಸಂದರ್ಭದಲ್ಲಿ 180 ರೂ. ಶುಲ್ಕ ಪಾವತಿ ಮಾಡಬೇಕಾಗಿದೆ. ಇದರ ವಿರುದ್ದ ಈಗಾಗಲೇ ಕಾವೂರು ಜಂಕ್ಷನ್ ನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಿ ಅದಾನಿ ಸಂಸ್ಥೆ ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ಆದರೆ ಅವರು ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ. ಇದರ ನಡುವೆ ಅ.1ರಿಂದ ಗ್ರಾಹಕರನ್ನು ಡ್ರಾಪ್ ಮಾಡಿ ಹೊರಗೆ ಬರುವಾಗಲೂ 50 ರೂ. ವಸೂಲಿ ಮಾಡಲಾಗುತ್ತಿದೆ. ಖಾಸಗಿ ವಾಹನಗಳಿಗೆ ಈ ಶುಲ್ಕವಿಲ್ಲ ಎಂದು ಹೇಳಿದರು.

ಉಡುಪಿಯಲ್ಲಿ 4,000, ದ.ಕದಲ್ಲಿ 2,500 ಸೇರಿದಂತೆ ಒಟ್ಟು 6,500 ಮಂದಿ ಅಸೋಸಿಯೇಷನ್ ನಲ್ಲಿ ನೋಂದಾಯಿತ ಟೂರಿಸ್ಟ್ ಟ್ಯಾಕ್ಸಿಮೆನ್ ಗಳಿದ್ದಾರೆ. ಅಲ್ಲದೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಕಾಸರಗೋಡು, ಮಡಿಕೇರಿ, ಭಟ್ಕಳದಿಂದಲೂ ಟೂರಿಸ್ಟ್ ವಾಹನಗಳು ಬರುತ್ತವೆ. ಈ ರೀತಿ ನಿಯಮಬಾಹಿರವಾಗಿ ಶುಲ್ಕ ವಸೂಲಿ ಮಾಡುವುದನ್ನು 10 ದಿನಗಳೊಳಗೆ ನಿಲ್ಲಿಸದಿದ್ದರೆ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು. ಜಿಲ್ಲಾಡಳಿತ, ಕೇಂದ್ರ ಸರಕಾರ ಕೂಡಲೇ ಮಧ್ಯಪ್ರವೇಶಿಸಿ ನ್ಯಾಯಯುತವಾಗಿ ಬಾಡಿಗೆ ಮಾಡುತ್ತಿರುವವರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಅವರು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಅಸೋಸಿಯೇಷನ್ ನ ದ.ಕ. ಅಧ್ಯಕ್ಷ ಆನಂದ ಕೆ., ಪದಾಧಿಕಾರಿಗಳಾದ ಸುರೇಶ್ ಸಾಲ್ಯಾನ್, ರಮೇಶ್ ಕೆ.ಕೋಟ್ಯಾನ್, ಹರೀಶ್ ಶೆಟ್ಟಿ ಕುತ್ತಾರು, ರಾಜೇಶ್ ಉರ್ವಸ್ಟೋರ್, ಅಝೀಝ್ ದೇರಳಕಟ್ಟೆ, ಕರುಣಾಕರ್ ಕುಂಟಿಕಾನ, ರೋಶನ್ ಕಿನ್ನಿಗೋಳಿ ಉಪಸ್ಥಿತರಿದ್ದರು.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಸುಳ್ಯ: ತಡರಾತ್ರಿ ಮೀನು ಹಿಡಿಯಲು ಹೋಗಿದ್ದ ವೇಳೆ ಹಂದಿಗೆ ಇಟ್ಟಿದ್ದ ವಿದ್ಯುತ್ ತಂತಿಯನ್ನು ತುಳಿದು ಇಬ್ಬರು ಯುವಕರು ಸಾವು

Related Posts

ಸುಳ್ಯ: ತಡರಾತ್ರಿ ಮೀನು ಹಿಡಿಯಲು ಹೋಗಿದ್ದ ವೇಳೆ ಹಂದಿಗೆ ಇಟ್ಟಿದ್ದ ವಿದ್ಯುತ್ ತಂತಿಯನ್ನು ತುಳಿದು ಇಬ್ಬರು ಯುವಕರು ಸಾವು
ಕರಾವಳಿ

ಸುಳ್ಯ: ತಡರಾತ್ರಿ ಮೀನು ಹಿಡಿಯಲು ಹೋಗಿದ್ದ ವೇಳೆ ಹಂದಿಗೆ ಇಟ್ಟಿದ್ದ ವಿದ್ಯುತ್ ತಂತಿಯನ್ನು ತುಳಿದು ಇಬ್ಬರು ಯುವಕರು ಸಾವು

October 13, 2026
59
ಸೈಂಟ್ ಆಗ್ನೆಸ್ ಕಾಲೇಜು ವಿದ್ಯಾರ್ಥಿನಿಯರ ಪ್ರತಿಭಟನೆಗೆ ಸಂಬಂಧಿಸಿದಂತೆ ಆಡಳಿತ ಮಂಡಳಿಯ ಸ್ಪಷ್ಟೀಕರಣ
ಕರಾವಳಿ

ಸೈಂಟ್ ಆಗ್ನೆಸ್ ಕಾಲೇಜು ವಿದ್ಯಾರ್ಥಿನಿಯರ ಪ್ರತಿಭಟನೆಗೆ ಸಂಬಂಧಿಸಿದಂತೆ ಆಡಳಿತ ಮಂಡಳಿಯ ಸ್ಪಷ್ಟೀಕರಣ

October 13, 2026
80

Discussion about this post

Recent News

ಮಂಗಳೂರು ಏರ್ ಪೋರ್ಟ್ ನಲ್ಲಿ ಟೂರಿಸ್ಟ್ ವಾಹನಗಳಿಂದ ದುಬಾರಿ ಶುಲ್ಕ ವಸೂಲಿ: ಟ್ಯಾಕ್ಸಿ ಚಾಲಕರಿಂದ 10 ದಿನಗಳ ಗಡುವು, ಅನಿರ್ದಿಷ್ಟಾವಧಿ ಧರಣಿ ಎಚ್ಚರಿಕೆ

ಮಂಗಳೂರು ಏರ್ ಪೋರ್ಟ್ ನಲ್ಲಿ ಟೂರಿಸ್ಟ್ ವಾಹನಗಳಿಂದ ದುಬಾರಿ ಶುಲ್ಕ ವಸೂಲಿ: ಟ್ಯಾಕ್ಸಿ ಚಾಲಕರಿಂದ 10 ದಿನಗಳ ಗಡುವು, ಅನಿರ್ದಿಷ್ಟಾವಧಿ ಧರಣಿ ಎಚ್ಚರಿಕೆ

October 14, 2026
18
ಸುಳ್ಯ: ತಡರಾತ್ರಿ ಮೀನು ಹಿಡಿಯಲು ಹೋಗಿದ್ದ ವೇಳೆ ಹಂದಿಗೆ ಇಟ್ಟಿದ್ದ ವಿದ್ಯುತ್ ತಂತಿಯನ್ನು ತುಳಿದು ಇಬ್ಬರು ಯುವಕರು ಸಾವು

ಸುಳ್ಯ: ತಡರಾತ್ರಿ ಮೀನು ಹಿಡಿಯಲು ಹೋಗಿದ್ದ ವೇಳೆ ಹಂದಿಗೆ ಇಟ್ಟಿದ್ದ ವಿದ್ಯುತ್ ತಂತಿಯನ್ನು ತುಳಿದು ಇಬ್ಬರು ಯುವಕರು ಸಾವು

October 13, 2026
59
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಮಂಗಳೂರು ಏರ್ ಪೋರ್ಟ್ ನಲ್ಲಿ ಟೂರಿಸ್ಟ್ ವಾಹನಗಳಿಂದ ದುಬಾರಿ ಶುಲ್ಕ ವಸೂಲಿ: ಟ್ಯಾಕ್ಸಿ ಚಾಲಕರಿಂದ 10 ದಿನಗಳ ಗಡುವು, ಅನಿರ್ದಿಷ್ಟಾವಧಿ ಧರಣಿ ಎಚ್ಚರಿಕೆ

ಮಂಗಳೂರು ಏರ್ ಪೋರ್ಟ್ ನಲ್ಲಿ ಟೂರಿಸ್ಟ್ ವಾಹನಗಳಿಂದ ದುಬಾರಿ ಶುಲ್ಕ ವಸೂಲಿ: ಟ್ಯಾಕ್ಸಿ ಚಾಲಕರಿಂದ 10 ದಿನಗಳ ಗಡುವು, ಅನಿರ್ದಿಷ್ಟಾವಧಿ ಧರಣಿ ಎಚ್ಚರಿಕೆ

October 14, 2026
ಸುಳ್ಯ: ತಡರಾತ್ರಿ ಮೀನು ಹಿಡಿಯಲು ಹೋಗಿದ್ದ ವೇಳೆ ಹಂದಿಗೆ ಇಟ್ಟಿದ್ದ ವಿದ್ಯುತ್ ತಂತಿಯನ್ನು ತುಳಿದು ಇಬ್ಬರು ಯುವಕರು ಸಾವು

ಸುಳ್ಯ: ತಡರಾತ್ರಿ ಮೀನು ಹಿಡಿಯಲು ಹೋಗಿದ್ದ ವೇಳೆ ಹಂದಿಗೆ ಇಟ್ಟಿದ್ದ ವಿದ್ಯುತ್ ತಂತಿಯನ್ನು ತುಳಿದು ಇಬ್ಬರು ಯುವಕರು ಸಾವು

October 13, 2026
ಪೆಹಲ್ಗಾಮ್ ಹತ್ಯಾಕಾಂಡದ ಹೆಸರಿನಲ್ಲಿ ಡಿಜಿಟಲ್ ಅರೆಸ್ಟ್ ಮುಂಬೈ ಪೊಲೀಸ್ ಸೋಗಿನಲ್ಲಿ ಪುತ್ತೂರಿನ ವ್ಯಕ್ತಿಯೊಬ್ಬರಿಗೆ 1.3 ಕೋಟಿ ರೂ. ವಂಚನೆ!

ಪೆಹಲ್ಗಾಮ್ ಹತ್ಯಾಕಾಂಡದ ಹೆಸರಿನಲ್ಲಿ ಡಿಜಿಟಲ್ ಅರೆಸ್ಟ್ ಮುಂಬೈ ಪೊಲೀಸ್ ಸೋಗಿನಲ್ಲಿ ಪುತ್ತೂರಿನ ವ್ಯಕ್ತಿಯೊಬ್ಬರಿಗೆ 1.3 ಕೋಟಿ ರೂ. ವಂಚನೆ!

October 13, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d