ಬಂಟ್ವಾಳ, ಜ.8: ವೇಷ ಧರಿಸಿ ವಿವಾದಕ್ಕೀಡಾಗಿ ತಲೆಮರೆಸಿಕೊಂಡಿದ್ದಾನೆ ಎನ್ನಲಾದ ಮದುಮಗ ಉಮರುಲ್ ಬಾಷಿತ್ ಎಂಬಾತ ವೀಡಿಯೊ ಮೂಲಕ ಕ್ಷೆಮೆ ಕೇಳಿದ್ದಾನೆ.
ಬುಧವಾರ ನಡೆದ ಮದುವೆ ದಿನ ರಾತ್ರಿ ವಧು ಮನೆಗೆ ತನ್ನ ಐವತ್ತಕ್ಕೂ ಹೆಚ್ಚು ಸ್ನೇಹಿತರ ಜೊತೆ ಬಂದ ಮದುಮಗ ವೇಷ ಧರಿಸಿದ್ದ ವೀಡಿಯೊ ವೈರಲಾಗಿತ್ತು.
ಘಟನೆಗೆ ಸಂಬಂಧಿಸಿ ಮದುಮಗ ಸಹಿತ ಇತರರ ವಿರುದ್ಧ ದೂರು ದಾಖಲಾಗಿದ್ದು, ಮದುಮಗ ಬಾತಿಷ್ ವೀಡಿಯೊ ಮೂಲಕ ಕ್ಷಮೆ ಕೇಳಿ, ವಿಷಾದ ವ್ಯಕ್ತಪಡಿಸಿದ್ದಾನೆ.
“ನಾನು ನನ್ನ ಸ್ನೇಹಿತರ ಜೊತೆ ಎಂಜಾಯ್ ಮಾಡುವುದಕ್ಕಾಗಿ ಈ ರೀತಿ ಮಾಡಿದ್ದೇನೆಯೇ ಹೊರತು ಯಾವುದೇ ಸಮುದಾಯಕ್ಕಾಗಲಿ, ಜನರ ನಂಬಿಕೆಗಾಗಲಿ ದ್ರೋಹ, ಅವಮಾನ ಮಾಡುವ ಉದ್ದೇಶ ನನಗಿಲ್ಲ” ಎಂದು ಹೇಳುತ್ತಾ ವಿಷಾದ ವ್ಯಕ್ತಪಡಿಸಿದ್ದಾನೆ.