ಮಂಗಳೂರು, ಮಾರ್ಚ್ 07: ಗಲ್ಫ್ ಯುದ್ಧದ ಕಾರಣ ಕಚ್ಚಾ ತೈಲದ ಕೊರತೆಯಿಂದ ಎಂಆರ್ ಪಿಎಲ್ ಘಟಕದ ಕೆಲವು ರಿಫೈನರಿ ಘಟಕಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳನ್ನು ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್) ಸಂಪೂರ್ಣ ತಳ್ಳಿಹಾಕಿದ್ದು ರಿಫೈನರಿಯ ಎಲ್ಲ ಕಾರ್ಯಾಚರಣೆಗಳು ಸಹಜ ರೀತಿಯಲ್ಲೇ ನಡೆಯುತ್ತಿವೆ ಎಂದು ಸ್ಪಷ್ಟಪಡಿಸಿದೆ.
ಸೋಶಿಯಲ್ ಮೀಡಿಯಾ ವದಂತಿ ಸುಳ್ಳು ಎಂದ ರಿಫೈನರಿ : ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ OilPrice.com ಪ್ರಕಟಿಸಿದ ಪೋಸ್ಟ್‌ನಲ್ಲಿ ಪರ್ಷಿಯನ್ ಗಲ್ಪ್ ಪ್ರದೇಶದ ಉದ್ವಿಗ್ನತೆಯಿಂದ ಕಚ್ಚಾ ತೈಲ ಸಾಗಣೆ ವಿಳಂಬವಾಗಿದ್ದು, ಮಂಗಳೂರಿನ 3 ಲಕ್ಷ ಬ್ಯಾರೆಲ್ ಸಾಮರ್ಥ್ಯದ ರಿಫೈನರಿಯ ಕೆಲವು ಘಟಕಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಹೇಳಲಾಗಿತ್ತು. ಆದರೆ ಈ ಮಾಹಿತಿ ತಪ್ಪಾಗಿದೆ ಎಂದು MRPL ಸ್ಪಷ್ಟಪಡಿಸಿದೆ. ಈ ರೀತಿಯ ವದಂತಿಗಳು ವಾಸ್ತವಕ್ಕೆ ದೂರವಾಗಿದ್ದು, MRPL ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿದೆ. ರಿಫೈನರಿ ಕಾರ್ಯಾಚರಣೆ ಮುಂದುವರಿಸಲು ಬೇಕಾದಷ್ಟು ಕಚ್ಚಾ ತೈಲವನ್ನು ಈಗಾಗಲೇ ವ್ಯವಸ್ಥೆ ಮಾಡಲಾಗಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.
Discover more from Coastal Times Kannada
Subscribe to get the latest posts sent to your email.







Discussion about this post