ಮುಂಬೈ ಜೂ.08: ಚಾರ್ನಿ ರೋಡ್ ಹಾಸ್ಟೆಲ್ ಹತ್ಯಾಕಾಂಡದ ಎರಡು ದಿನಗಳ ನಂತರ ಮತ್ತೊಂದು ಘಟನೆ ಮುಂಬೈಯನ್ನು ಬೆಚ್ಚಿಬೀಳಿಸಿದೆ. ಇಲ್ಲಿನ ಮೀರಾ ರೋಡ್‌ನಲ್ಲಿ, ದೆಹಲಿಯ ಶ್ರದ್ಧಾ ವಾಕರ್ ಹತ್ಯೆಯಂತೆಯೇ ಒಂದು ಪ್ರಕರಣವು ಬೆಳಕಿಗೆ ಬಂದಿದೆ, ಇದರಲ್ಲಿ 36 ವರ್ಷದ ಮಹಿಳೆಯನ್ನು ಆಕೆಯ ಲಿವ್-ಇನ್-ಪಾರ್ಟ್‌ನರ್ ಕೊಲೆ ಮಾಡಿದ್ದಾನೆ, ನಂತರ ದೇಹವನ್ನು ‘ಹಲವಾರು ತುಂಡುಗಳಾಗಿ’ ಕತ್ತರಿಸಿದ್ದಾನೆ. ಆರೋಪಿಯು ತನ್ನ ಲಿವ್-ಇನ್-ಪಾರ್ಟ್ನರ್ನ ದೇಹದ ತುಂಡುಗಳನ್ನು ಪ್ರೆಶರ್ ಕುಕ್ಕರ್‌ನಲ್ಲಿ ಕುದಿಸಿ ಅವುಗಳನ್ನು ಸುಲಭವಾಗಿ ಮರೆಮಾಚಿದ್ದಾನೆ. ಸದ್ಯ ಮೃತದೇಹದ ಕೆಲ ತುಂಡುಗಳನ್ನು ವಶಪಡಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಪೊಲೀಸರ ಪ್ರಕಾರ, ಆರೋಪಿ ಮನೋಜ್ ಸಾಹ್ನಿ ಕಳೆದ 3 ವರ್ಷಗಳಿಂದ ಗೀತಾ ನಗರ 7 ನೇ ಹಂತದಲ್ಲಿರುವ ಗೀತಾ ಆಕಾಶ್ ದೀಪ್ ಬಿಲ್ಡಿಂಗ್‌ನ ಜೆ ವಿಂಗ್‌ನ 704 ಫ್ಲಾಟ್‌ನಲ್ಲಿ ಸಂತ್ರಸ್ತೆ ಸರಸ್ವತಿ ವೈದ್ಯ ಅವರೊಂದಿಗೆ ಲಿವ್-ಇನ್-ರಿಲೇಶನ್‌ಶಿಪ್‌ನಲ್ಲಿ ವಾಸಿಸುತ್ತಿದ್ದರು. ಮಹಿಳೆಗೆ ಬೇರೊಬ್ಬನೊಂದಿಗೆ ಅಕ್ರಮ ಸಂಬಂಧವಿದೆ ಎಂದು ಆರೋಪಿಗೆ ಕೆಲ ದಿನಗಳಿಂದ ಅನುಮಾನ ಮೂಡಿತ್ತು. ಈ ಅನುಮಾನದಿಂದ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. 2-3 ದಿನಗಳ ಹಿಂದೆ ಇಂತಹ ಒಂದು ವಿವಾದದಲ್ಲಿ ಆರೋಪಿ ಮಹಿಳೆಯನ್ನು ಕೊಂದು ನಂತರ ಕಟರ್‌ನಿಂದ ಆಕೆಯ ದೇಹವನ್ನು ಹಲವಾರು ತುಂಡುಗಳಾಗಿ ಕತ್ತರಿಸಿದ್ದ. ಆರೋಪಿ ಮನೋಜ್ ಸಾಹ್ನಿ (56) ಬುಧವಾರ ಸಂಜೆ ತನ್ನ ಬಾಡಿಗೆ ಅಪಾರ್ಟ್ಮೆಂಟ್ನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಗ ಪೊಲೀಸರು ಬಂಧಿಸಿದ್ದಾರೆ.
ಸಾಹ್ನಿ ದೇಹದ ಕೆಲವು ಭಾಗಗಳನ್ನು ಹಲವಾರು ತುಂಡುಗಳಾಗಿ ಕತ್ತರಿಸಿದ ಕಾರಣ ಪೊಲೀಸ್ ಅಧಿಕಾರಿಗಳಿಗೆ ಮೃತ ಯುವತಿಯ ಕಾಲುಗಳು ಮಾತ್ರ ಸಿಕ್ಕಿವೆ. 704ರ ಫ್ಲಾಟ್‌ನಿಂದ ದುರ್ವಾಸನೆ ಬರುತ್ತಿದೆ ಎಂದು ಕಟ್ಟಡದ ನಿವಾಸಿಗಳು ಬುಧವಾರ ಸಂಜೆ 7 ಗಂಟೆಗೆ ನಯಾನಗರ ಠಾಣೆಗೆ ದೂರು ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಮೀರಾ ರಸ್ತೆಯಲ್ಲಿರುವ ಈ ಅಪಾರ್ಟ್‌ಮೆಂಟ್ ತಲುಪಿದಾಗ, ಮನೋಜ್ ಸಾಹ್ನಿ ಬಾಗಿಲು ತೆರೆದಿದ್ದಾನೆ. ಪೊಲೀಸರನ್ನು ನೋಡಿ ಓಡಿಹೋಗಲು ಯತ್ನಿಸಿದ ಆತ ಅಲ್ಲಿದ್ದವರ ಸಹಾಯದಿಂದ ಸಿಕ್ಕಿಬಿದ್ದಿದ್ದಾನೆ. ಪೊಲೀಸರು ಫ್ಲಾಟ್‌ಗೆ ಪ್ರವೇಶಿಸಿದಾಗ ಸಂತ್ರಸ್ತೆಯ ದೇಹ ಮತ್ತು ಕಾಲುಗಳ 12 ರಿಂದ 13 ತುಂಡುಗಳು ಕಂಡುಬಂದಿವೆ. ಆರೋಪಿ ಕಳೆದ ಎರಡು ಮೂರು ದಿನಗಳಲ್ಲಿ ದೇಹದ ಕೆಲವು ಭಾಗಗಳನ್ನು ವಿಲೇವಾರಿ ಮಾಡಿದ್ದ ಎನ್ನಲಾಗಿದೆ.
ಮೃತದೇಹದ ತುಂಡುಗಳನ್ನು ಕುಕ್ಕರ್‌ನಲ್ಲಿ ಕುದಿಸಿ, ಪ್ಲಾಸ್ಟಿಕ್ ಚೀಲದಲ್ಲಿ ಮುಚ್ಚಿ ಇಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಉಪ ಪೊಲೀಸ್ ಕಮಿಷನರ್ (ವಲಯ 1) ಜಯಂತ್ ಬಜ್ಬಲೆ ಅವರು “ನಾವು ಸಾಹ್ನಿಯನ್ನು ಬಂಧಿಸಿದ್ದೇವೆ ಮತ್ತು ಕೊಲೆಯ ಹಿಂದಿನ ಉದ್ದೇಶ ಮತ್ತು ಅವನು ಅದನ್ನು ಹೇಗೆ ನಡೆಸಿದ್ದಾನೆ ಎಂಬುದನ್ನು ಕಂಡುಹಿಡಿಯಲು ತನಿಖೆ ನಡೆಸುತ್ತಿದ್ದೇವೆ” ಎಂದು ತಿಳಿಸಿರುವುದಾಗಿ ಮಾಧ್ಯಮ ವರದಿಗಳು ಉಲ್ಲೇಖಿಸಿವೆ.
ಇನ್ನು ಮನೋಜ್ ಸಾಹ್ನಿಗೆ ತನ್ನ ಕೃತ್ಯದ ಬಗ್ಗೆ ಯಾವುದೇ ಪಶ್ಚಾತಾಪವಿಲ್ಲ ಎಂದೂ ಪೊಲೀಸರು ತಿಳಿಸಿದ್ದಾರೆ . “ನಾವು ಅವರ ವಿರುದ್ಧ ಕೊಲೆ ಮತ್ತು ಸಾಕ್ಷ್ಯ ನಾಶಕ್ಕಾಗಿ ಎಫ್‌ಐಆರ್ ದಾಖಲಿಸುವ ಪ್ರಕ್ರಿಯೆಯಲ್ಲಿದ್ದೇವೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಪಾರ್ಟ್ಮೆಂಟ್ನಿಂದ ಮಾದರಿಗಳು ಮತ್ತು ಸಾಕ್ಷ್ಯಗಳನ್ನು ಸಂಗ್ರಹಿಸಲು ವಿಧಿವಿಜ್ಞಾನ ತಂಡವನ್ನು ಕರೆಯಲಾಗಿದೆ. ಇನ್ನು ಈ ದಂಪತಿ ಯಾರೊಂದಿಗೂ ಬೆರೆಯುತ್ತಿರಲಿಲ್ಲ ಎಂದು ಅಪಾರ್ಟ್‌ಮೆಂಟ್ ನಿವಾಸಿಗಳು ಪೊಲೀಸರಿಗೆ ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post