ಮಂಗಳೂರು: ಇಶಾ ಫೌಂಡೇಶನ್ ನ ಸಧ್ಗುರು ಗಳು ವಿಶ್ವಾದ್ಯಂತ ಹಮ್ಮಿಕೊಂಡಿರುವ Save Soil ಮಣ್ಣು ಉಳಿಸಿ ಅಭಿಯಾನ ಮಂಗಳೂರಿನ ಕೃಷಿ ವಿಜ್ಞಾನ ಕೇಂದ್ರದ ಆವರಣದೊಳಗೆ ಎಲ್ಲಾ ವಿಜ್ಯಾನಿ ಗಳ ಸಮ್ಮುಖದಲ್ಲಿಯೇ ನೆರವೇರಿತು. ಈ ಕಾರ್ಯಕ್ರಮದಲ್ಲಿ ಇಶಾ ಫೌಂಡೇಶನ್ ನ ಪರವಾಗಿ ಶ್ರೀಯುತ ಪ್ರವೀಣ್ ಕುಮಾರ್ ಇಶಾ ಹಠ ಯೋಗ ತರಬೇತು ದಾರರು ಮಂಗಳೂರು, ಪ್ರಿಯಲತ ಮಣ್ಣು ಉಳಿಸಿ ಅಭಿಯಾನದ ಸ್ವಯಂ ಸೇವಕರು ಮಂಗಳೂರು ಘಟಕ. ಹಾಗೂ ಕನ್ನಡ- ತುಳು ಚಿತ್ರ ನಿರ್ದೇಶಕರಾದ ದಿನಕರ್ ಜಿ ಯವರು ಭಾಗಿಯಾಗಿದ್ದರು.
ಮಣ್ಣಿನ ಗುಣಮಟ್ಟ ಕುಸಿಯುತ್ತಿರುವುದು ಹಾಗೂ ಮಣ್ಣು ಸಾಯುತ್ತಿರುವ ಬಗ್ಗೆ ಸದ್ಗುರುಗಳು ವಿಸ್ಕೃತವಾಗಿ ಮಾತಾಡಿರುವಂತಹ ವಿಡಿಯೋದ ತುಣುಕುಗಳನ್ನು ತೋರಿಸಲಾಯಿತು. ಪ್ರವೀಣ್ ಕುಮಾರ್ ಅವರು ಮಾತಾಡಿ ಮಣ್ಣಿನ ಉಳಿಸುವಿಕೆಯಲ್ಲಿ ಪ್ರತಿಯೊಬ್ಬ ನಾಗರಿಕರ ಪಾಲು ಇದೆ ಎಂದು ವಿವರವಾಗಿ ತಿಳಿಸಿದರು. ಸೇರಿದ ಎಲ್ಲಾ ಕೃಷಿ ಪರಿಕರ ವಿತರಕರು ತಮ್ಮ ನಿತ್ಯ ವ್ಯವಹಾರದ ಜೊತೆಗೆ ಮಣ್ಣನ್ನು ಉಳಿಸುವ ಕಾಳಜಿಯನ್ನು ಬೆಳೆಸುತ್ತೇವೆ ಎಂದು ಪ್ರಮಾಣ ಸ್ವೀಕರಿಸಿದರು. ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ ಆವರಣದೊಳಗೆ ಎಲ್ಲಾ ವಿಜ್ಞಾನಿಗಳ ಸಮ್ಮುಖದಲ್ಲಿ ಈ ಕಾರ್ಯಕ್ರಮ ನಡೆದಿರುವುದರಿಂದ ಮಣ್ಣು ಉಳಿಸಿ ಅಭಿಯಾನಕ್ಕೆ ಆನೆ ಬಲ ಬಂದಂತಾಗಿದೆ.
ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿ ಯಾಗಿರುವ ಡಾ. ಮಲ್ಲಿಕಾರ್ಜುನ ಎಲ್ ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿದ್ದರು. ಡಾ. ಕೇದಾರನಾಥ್ ಸಸ್ಯ ಸಂರಕ್ಷಣಾ ವಿಜ್ಞಾನಿ ಎಲ್ಲರನ್ನೂ ಸ್ವಾಗತಿಸಿದರು. ಹಿರಿಯ ವಿಜ್ಞಾನಿಗಳಾದ ಡಾ. ಟಿ ಜೆ ರಮೇಶ. ಕೃಷಿ ವಿಜ್ಞಾನ ಕೇಂದ್ರ ಮಂಗಳೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಾ. ಶಿವಕುಮಾರ್ ಪಶು ವಿಜ್ಞಾನಿ, ಡಾ. ಚೇತನ್ ಮೀನುಗಾರಿಕಾ ವಿಜ್ಞಾನಿ, ಡಾ. ರಶ್ಮಿ ಆರ್ ತೋಟಗಾರಿಕಾ ವಿಜ್ಞಾನಿ ಹಾಗೂ ಜಿಲ್ಲೆಯ ವಿವಿಧ ಭಾಗದ ಕೃಷಿ ಪರಿಕರ ಮಾರಾಟಗಾರರು ಭಾಗವಹಿಸಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post