ಮಂಗಳೂರು : ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ನಡೆಸಿದ 2023ರ ವಾರ್ಷಿಕ ಪರೀಕ್ಷೆಯಲ್ಲಿ ಬಯೋಟೆಕ್ನಾಲಜಿ ವಿಭಾಗದಲ್ಲಿ 5ನೇ ಹಾಗೂ 6ನೇ ರ್ಯಾಂಕ್ ಗಳಿಸಿದ ಕುಮಾರಿ ಫೀನಾ ಹಕೀಮ್ ಮತ್ತು ಕುಮಾರಿ ಹರ್ಷಿತ ಶೆಟ್ಟಿಗಾರ್ ರವರಿಗೆ ಅಭಿನಂದನಾ ಕಾರ್ಯಕ್ರಮವನ್ನು ಪಿ.ಎ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಅದ್ಯಕ್ಷತೆಯನ್ನು ವಹಿಸಿದ ಪಿ.ಎ.ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ|| ರಮೀಝ್ ಎಂ.ಕೆ ರವರು ವಿದ್ಯಾರ್ಥಿಗಳು ಉದ್ಯೋಗಾವಕಾಶವನ್ನು ಹೇಗೆ ಸದುಪಯೋಗಪಡಿಸಿಕೊಳ್ಳಬೇಕು ಹಾಗೂ ಸಂಸ್ಥೆಯೆಲ್ಲ ವಿದ್ಯಾರ್ಥಿಗಳು ಮುಂದೆ ತಮ್ಮ ತಮ್ಮ ವಿಭಾಗದಲ್ಲಿ ಅತ್ಯಧಿಕ ರಾಂಕ್ ಗಳನ್ನು ಗಳಿಸುವ ಮೂಲಕ ಸಂಸ್ಥೆಗೆ ಹೆಸರನ್ನು ತರಬೇಕೆಂದು ಕಿವಿಮಾತನ್ನು ಹೇಳಿದರು. ಪಿ. ಎ. ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ|| ಸರ್ಫಾಝ್ ಹಾಸಿಮ್ ಜೆ .ಹಾಗೂ ಕಾಲೇಜಿನ ಹಳೆ ವಿದ್ಯಾರ್ಥಿ ಯಜ್ನೀಶ್ ರವರು ಮಾತನಾಡಿ ವಿದ್ಯಾರ್ಥಿಗಳ ಸಾಧನೆಯನ್ನು ಕೊಂಡಾಡಿದರು.
ಈ ಕಾರ್ಯಕ್ರಮದಲ್ಲಿ ಕುಮಾರಿ ಫೀನಾ ಹಕೀಮ್ ಮತ್ತು ಕುಮಾರಿ ಹರ್ಷಿತ ಶೆಟ್ಟಿಗಾರ್ ರವರನ್ನು ಸನ್ಮಾನಿಸಲಾಯಿತು. ಹಾಗೂ ಕಾಲೇಜಿನ ಪೇಸ್ ನ್ಯೂಸ್ ಬುಲೇಟಿನ್ 2023 ಸಂಚಿಕೆ 3 ನ್ನು ಬಿಡುಗಡೆಗೊಳಿಸಲಾಯಿತು .
ಪಿ.ಎ. ವಿದ್ಯಾಸಂಸ್ಥೆಯ ಎ.ಜಿ.ಯಂ. ಶ್ರೀ ಸರ್ಫುದ್ದೀನ್ ರವರು ಉಪಸ್ಥಿತರಿದ್ದರು. ಉಪಪ್ರಾಂಶುಪಾಲರಾದ ಡಾ|| ಶರ್ಮಿಳಾ ಕುಮಾರಿ ರವರು ಅತಿಥಿಗಳನ್ನು ಸ್ವಾಗತಿಸಿದರು. ಬಯೋಟೆಕ್ನಾಲಜಿ ವಿಭಾಗದ ಮುಖ್ಯಸ್ಥರಾದ ಡಾ|| ಕೃಷ್ಣ ಪ್ರಸಾದ್ ರವರು ಧನ್ಯವಾದ ಗೈದರು. ಎಂ.ಬಿ.ಎ ವಿಭಾಗದ ನಿರ್ದೇಶಕ ಹಾಗೂ ಡೀನ್, (ವಿದ್ಯಾರ್ಥಿ ಕಲ್ಯಾಣ ಅಧಿಕಾರಿ) ಡಾ|| ಸಯ್ಯದ್ ಅಮೀನ್, ಪಿ.ಎ. ಟ್ರಸ್ಟ್ ನ ವಿವಿಧ ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ, ಡಾ|| ಸರ್ಫಾಝ್ ಹಾಸಿಮ್ ಜೆ, ಫ್ರೋ. ಸೂಫಿ, ಡಾ|| ಸಲೀಮುಲ್ಲಾ ಖಾನ್, ಡಾ|| ಸಜೀಸ್ ರಘುನಾಥನ್ ಮತ್ತು ವಿವಿಧ ವಿಭಾಗದ ಮುಖ್ಯಸ್ಥರು, ಕಾಲೇಜಿನ ಶಿಕ್ಷಕ ವೃಂದದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೋ. ಇಸ್ಮಾಯಿಲ್ ಶಾಫಿ, ಬಯೋಟೆಕ್ನಾಲಜಿ ವಿಭಾದ ಡಾ|| ರೊನಾಲ್ಡ್ ವಾಲ್ಡರ್ ಹಾಗೂ ದೈಹಿಕ ಶಿಕ್ಷಣ ನಿರ್ಧೇಶಕರಾದ ಡಾ|| ಇಕ್ಬಾಲ್ ರವರು ಕಾರ್ಯಕ್ರಮವನ್ನು ಆಯೋಜಿಸಿದರು. ಕುಮಾರಿ ಬುಶೈರಾ ಕಾರ್ಯಕ್ರಮವನ್ನು ನಿರೂಪಿಸಿದರು.
Discover more from Coastal Times Kannada
Subscribe to get the latest posts sent to your email.
Discussion about this post