• About us
  • Contact us
  • Disclaimer
Wednesday, April 1, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ವಿವಾದಿತ ಪ್ರೊಬೇಷನರಿ ಅಧಿಕಾರಿ ಪೂಜಾ ಖೇಡ್ಕರ್‌ನ್ನು IASನಿಂದ ವಜಾ ಮಾಡಿದ ಕೇಂದ್ರ ಸರ್ಕಾರ

Coastal Times by Coastal Times
September 8, 2024
in ರಾಷ್ಟ್ರೀಯ ಸುದ್ದಿ
ವಿವಾದಿತ ಪ್ರೊಬೇಷನರಿ ಅಧಿಕಾರಿ ಪೂಜಾ ಖೇಡ್ಕರ್‌ನ್ನು IASನಿಂದ ವಜಾ ಮಾಡಿದ ಕೇಂದ್ರ ಸರ್ಕಾರ
38
VIEWS
WhatsappTelegramShare on FacebookShare on Twitter

ನವದೆಹಲಿ: ಅಧಿಕಾರ ದುರ್ಬಳಕೆ, ನಕಲಿ ದಾಖಲೆ ನೀಡಿದ ಆರೋಪದ ಮೇಲೆ ಅಮಾನತಾಗಿದ್ದ ಪ್ರೊಬೇಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರನ್ನು ಕೇಂದ್ರ ಸರ್ಕಾರ ಹುದ್ದೆಯಿಂದಲೇ ಬಿಡುಗಡೆ ಮಾಡಿದೆ. 1954 ರ ಐಎಎಸ್ (ಪ್ರೊಬೇಷನ್) ನಿಯಮಗಳ ಅಡಿಯಲ್ಲಿ ವಜಾಗೊಳಿಸಿ ಶನಿವಾರ ಆದೇಶ ಹೊರಡಿಸಿದೆ. ಮಹಾರಾಷ್ಟ್ರ ಖೇಡರ್​​ನ ಅಧಿಕಾರಿಯಾಗಿದ್ದ ಪೂಜಾ ಮನೋರಮಾ ಖೇಡ್ಕರ್​ ಅವರನ್ನು ಸೆಪ್ಟೆಂಬರ್​ 6 ರಿಂದ ಅನ್ವಯವಾಗುವಂತೆ ಐಎಎಸ್​ ಪ್ರೊಬೇಷನರಿ ಹುದ್ದೆಯಿಂದ ಬಿಡುಗಡೆ ಮಾಡಲಾಗಿದೆ ಎಂಬುದನ್ನು ಉನ್ನತ ಮೂಲಗಳು ಈಟಿವಿ ಭಾರತಕ್ಕೆ ತಿಳಿಸಿವೆ.

ಪೂಜಾ ವಿರುದ್ಧದ ಆರೋಪವೇನು?: ತರಬೇತಿ ನಿರತ ಐಎಎಸ್​ ಅಧಿಕಾರಿಯಾಗಿದ್ದಾಗ ಪೂಜಾ ಖೇಡ್ಕರ್​, ತಮ್ಮ ವೈಯಕ್ತಿಕ ಕಾರಿನ ಮೇಲೆ ‘ಮಹಾರಾಷ್ಟ್ರ ಸರ್ಕಾರ’ ಎಂದು ಅನಧಿಕೃತವಾಗಿ ಬರೆದುಕೊಂಡಿದ್ದಲ್ಲದೇ, ಕೆಂಪು ದ್ವೀಪವನ್ನು ಅಳವಡಿಸಿಕೊಂಡಿದ್ದರು. ಜೊತೆಗೆ ಅಧಿಕಾರಿಯೊಬ್ಬರ ಕಚೇರಿಯನ್ನು ಅಕ್ರಮವಾಗಿ ತಮ್ಮ ವಶದಲ್ಲಿರಿಸಿಕೊಂಡಿದ್ದರು. ಕಚೇರಿಗೆ ದುಬಾರಿ ವಸ್ತುಗಳನ್ನು ಸರ್ಕಾರದ ಖರ್ಚಿನಲ್ಲಿ ಖರೀದಿಸಿ ಅಳವಡಿಸಿದ್ದರು. ಇದಾದ ಬಳಿಕ ಅವರು ತಮ್ಮ ಗುರುತನ್ನು ಬದಲಿಸಿ ನಿಗದಿತ ಮಿತಿಯನ್ನು ಮೀರಿ ಅಕ್ರಮವಾಗಿ ಪರೀಕ್ಷೆ ಬರೆದಿದ್ದರು. ಜೊತೆಗೆ, ನೇಮಕಾತಿ ವೇಳೆ ನಕಲಿ ದಾಖಲೆ ನೀಡಿದ್ದಾರೆ ಎಂಬ ಆರೋಪವಿದೆ.

ಹುದ್ದೆಗಾಗಿ ಪೂಜಾ ಅವರು, ಇತರ ಹಿಂದುಳಿದ ವರ್ಗಗಳು (OBC) ಮತ್ತು ಅಂಗವಿಕಲ ಕೋಟಾದ ಮೀಸಲಾತಿ ದುರ್ಬಳಕೆ ಮಾಡಿಕೊಂಡಿದ್ದಾರೆ. ತಾವು ಅಂಗವಿಕಲೆ ಎಂದು ನಕಲಿ ದಾಖಲೆ ನೀಡಿದ್ದಾರೆ ಎಂಬ ಆರೋಪ ಮಾಡಲಾಗಿದೆ. ಆದರೆ, ಈ ಎಲ್ಲ ಆರೋಪಗಳನ್ನು ನಿರಾಕರಿಸಿರು ಪೂಜಾ ಅವರು, ಹೈಕೋರ್ಟ್​ ಮೆಟ್ಟಿಲೇರಿದ್ದಾರೆ. ಸದ್ಯ ಕೋರ್ಟ್​ನಲ್ಲಿ ಅರ್ಜಿ ವಿಚಾರಣೆಯಲ್ಲಿದೆ.

ಇತ್ತ, ಕೇಂದ್ರ ಲೋಕ ಸೇವಾ ಆಯೋಗ (ಯುಪಿಎಸ್‌ಸಿ) ಜುಲೈ 31 ರಂದು ಪೂಜಾ ಖೇಡ್ಕರ್​ ಅವರನ್ನು ಪ್ರೊಬೇಷನರಿ ಹುದ್ದೆಯಿಂದ ಅಮಾನತು ಮಾಡಿತ್ತು. ಜೊತೆಗೆ ಮುಂದಿನ ಎಲ್ಲ ಪರೀಕ್ಷೆಗಳಿಗೆ ನಿಷೇಧ ಹೇರಿತ್ತು. ರೈತರಿಗೆ ಬೆದರಿಕೆಯೊಡ್ಡಿದ ಆರೋಪದ ಮೇಲೆ ಆಕೆಯ (ಪೂಜಾ) ತಾಯಿಯ ಮೇಲೂ ಪುಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading...

Related

Discover more from Coastal Times Kannada

Subscribe to get the latest posts sent to your email.

Previous Post

ಬಂಟ್ವಾಳ: ಎರಡು ದಿನ ಹಿಂದಷ್ಟೇ ಮದುವೆಯಾಗಿದ್ದ ಯುವತಿ ಭೀಕರ ರಸ್ತೆ ಅಪಘಾತದಲ್ಲಿ ಸಾವು, ಪತಿ ಗಂಭೀರ

Next Post

ಕಿನ್ನಿಗೋಳಿ ; ರಸ್ತೆ ದಾಟುವಾಗ ತಾಯಿಯ ಮೇಲೆ ಮಗುಚಿ ಬಿದ್ದ ಆಟೋ, ಅಮ್ಮನ ಉಳಿಸಲು ಆಟೋವನ್ನೇ ಎತ್ತಿದ ಮಗಳು, ವಿಡಿಯೋ ವೈರಲ್

Related Posts

ಲ್ಯಾಂಡಿಂಗ್​ ವೇಳೆ ರನ್​ವೇನಲ್ಲಿದ್ದ ಟ್ರಕ್​ಗೆ ಡಿಕ್ಕಿ ಹೊಡೆದ ಏರ್ ಕೆನಡಾ ವಿಮಾನ ; 100ಕ್ಕೂ ಹೆಚ್ಚು ಜನರಿಗೆ ಗಾಯ
ರಾಷ್ಟ್ರೀಯ ಸುದ್ದಿ

ಲ್ಯಾಂಡಿಂಗ್​ ವೇಳೆ ರನ್​ವೇನಲ್ಲಿದ್ದ ಟ್ರಕ್​ಗೆ ಡಿಕ್ಕಿ ಹೊಡೆದ ಏರ್ ಕೆನಡಾ ವಿಮಾನ ; 100ಕ್ಕೂ ಹೆಚ್ಚು ಜನರಿಗೆ ಗಾಯ

March 24, 2026
45
LPG ಹೊತ್ತ 2 ಹಡಗುಗಳು ಹಾರ್ಮುಜ್ ಜಲಸಂಧಿ ದಾಟಿದ್ದು, ಇದೇ 16ರಂದು ಭಾರತ ತಲುಪಲಿವೆ ಕೇಂದ್ರ ಸರ್ಕಾರ
ರಾಷ್ಟ್ರೀಯ ಸುದ್ದಿ

LPG ಹೊತ್ತ 2 ಹಡಗುಗಳು ಹಾರ್ಮುಜ್ ಜಲಸಂಧಿ ದಾಟಿದ್ದು, ಇದೇ 16ರಂದು ಭಾರತ ತಲುಪಲಿವೆ ಕೇಂದ್ರ ಸರ್ಕಾರ

March 15, 2026
64
Next Post
ಕಿನ್ನಿಗೋಳಿ ; ರಸ್ತೆ ದಾಟುವಾಗ ತಾಯಿಯ ಮೇಲೆ ಮಗುಚಿ ಬಿದ್ದ ಆಟೋ, ಅಮ್ಮನ ಉಳಿಸಲು ಆಟೋವನ್ನೇ ಎತ್ತಿದ ಮಗಳು, ವಿಡಿಯೋ ವೈರಲ್

ಕಿನ್ನಿಗೋಳಿ ; ರಸ್ತೆ ದಾಟುವಾಗ ತಾಯಿಯ ಮೇಲೆ ಮಗುಚಿ ಬಿದ್ದ ಆಟೋ, ಅಮ್ಮನ ಉಳಿಸಲು ಆಟೋವನ್ನೇ ಎತ್ತಿದ ಮಗಳು, ವಿಡಿಯೋ ವೈರಲ್

Discussion about this post

Recent News

ರಿಜಿಸ್ಟರ್ ಮದ್ವೆಯಾದ ಒಂದೇ ತಿಂಗಳಲ್ಲಿ ಬೆಳ್ತಂಗಡಿಯ ಯುವ ಉದ್ಯಮಿ ವಿಷ ಸೇವಿಸಿ ಸಾವು

ರಿಜಿಸ್ಟರ್ ಮದ್ವೆಯಾದ ಒಂದೇ ತಿಂಗಳಲ್ಲಿ ಬೆಳ್ತಂಗಡಿಯ ಯುವ ಉದ್ಯಮಿ ವಿಷ ಸೇವಿಸಿ ಸಾವು

March 31, 2026
83
ಕಾರ್ಕಳ ಹಾಗೂ ಶಿರ್ವ ಪೊಲೀಸರ ಮೇಲೆ ಕಾರು ಚಲಾಯಿಸುವ ಮೂಲಕ ಕರ್ತವ್ಯಕ್ಕೆ ಅಡ್ಡಿ, ತನಿಖೆಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ಜಾಲ ಬಹಿರಂಗ, ಐವರ ಬಂಧನ

ಕಾರ್ಕಳ ಹಾಗೂ ಶಿರ್ವ ಪೊಲೀಸರ ಮೇಲೆ ಕಾರು ಚಲಾಯಿಸುವ ಮೂಲಕ ಕರ್ತವ್ಯಕ್ಕೆ ಅಡ್ಡಿ, ತನಿಖೆಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ಜಾಲ ಬಹಿರಂಗ, ಐವರ ಬಂಧನ

March 29, 2026
62
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ರಿಜಿಸ್ಟರ್ ಮದ್ವೆಯಾದ ಒಂದೇ ತಿಂಗಳಲ್ಲಿ ಬೆಳ್ತಂಗಡಿಯ ಯುವ ಉದ್ಯಮಿ ವಿಷ ಸೇವಿಸಿ ಸಾವು

ರಿಜಿಸ್ಟರ್ ಮದ್ವೆಯಾದ ಒಂದೇ ತಿಂಗಳಲ್ಲಿ ಬೆಳ್ತಂಗಡಿಯ ಯುವ ಉದ್ಯಮಿ ವಿಷ ಸೇವಿಸಿ ಸಾವು

March 31, 2026
ಕಾರ್ಕಳ ಹಾಗೂ ಶಿರ್ವ ಪೊಲೀಸರ ಮೇಲೆ ಕಾರು ಚಲಾಯಿಸುವ ಮೂಲಕ ಕರ್ತವ್ಯಕ್ಕೆ ಅಡ್ಡಿ, ತನಿಖೆಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ಜಾಲ ಬಹಿರಂಗ, ಐವರ ಬಂಧನ

ಕಾರ್ಕಳ ಹಾಗೂ ಶಿರ್ವ ಪೊಲೀಸರ ಮೇಲೆ ಕಾರು ಚಲಾಯಿಸುವ ಮೂಲಕ ಕರ್ತವ್ಯಕ್ಕೆ ಅಡ್ಡಿ, ತನಿಖೆಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ಜಾಲ ಬಹಿರಂಗ, ಐವರ ಬಂಧನ

March 29, 2026
ಉಡುಪಿ: ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ರೌಡಿ ಶೀಟರ್ ಸಹಿತ ಇಬ್ಬರು ಆರೋಪಿಗಳ ಗಡಿಪಾರು

ಉಡುಪಿ: ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ರೌಡಿ ಶೀಟರ್ ಸಹಿತ ಇಬ್ಬರು ಆರೋಪಿಗಳ ಗಡಿಪಾರು

March 28, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d