ಕಾರ್ಕಳ, ಜ.09 : “ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ದುರಸ್ಥಿಯಲ್ಲಿದ್ದ ರಸ್ತೆಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ತಲಾ ಒಂದು ಕೋಟಿಯಂತೆ 17 ರಸ್ತೆಗಳ ಅಭಿವೃದ್ಧಿಗೆ 17.00 ಕೋಟಿ ರೂ ಅನುದಾನ ಬಿಡುಗಡೆಗೊಂಡಿರುತ್ತದೆ. ಈ ರಸ್ತೆಗಳ ಟೆಂಡರ್ ಪ್ರಕ್ರಿಯೇ ಮುಗಿದಿದ್ದು ತಕ್ಷಣ ಕಾಮಗಾರಿ ಆರಂಭಗೊಳ್ಳಲಿದೆ” ಎಂದು ಸಚಿವ ಎಸ್ ಸುನಿಲ್ ಕುಮಾರ್ ಅವರ ಕಛೇರಿ ಪ್ರಕಟಣೆ ತಿಳಿಸಿದೆ.
ಕಾಮಗಾರಿ ವಿವರ: ಕಾಂತಾವರ ಗ್ರಾಮದ ಮರಕಡ ರಸ್ತೆ ಅಭಿವೃದ್ಧಿ, ಬೆಳ್ಮಣ್ ಗ್ರಾಮದ ಅಬ್ಬನಡ್ಕದಿಂದ ಕಳಾಯಿ ರಸ್ತೆ ಅಭಿವೃದ್ಧಿ, ನಂದಳಿಕೆ ಗ್ರಾಮದ ಮವಿನ ಕಟ್ಟೆ ರಸ್ತೆ ಅಭಿವೃದ್ಧಿ, ಬೋಳ ಗ್ರಾಮದ ಕುಕ್ಕುದ ಕಟ್ಟೆ ರಸ್ತೆ ಅಭಿವೃದ್ಧಿ, ಮರ್ಣೆ ಗ್ರಾಮದ ಕೊಂಬಗುಡ್ಡೆ ಗುಂಡುಜೆ ಮದಗ ರಸ್ತೆ ಅಭಿವೃದ್ಧಿ, ಈದು ಗ್ರಾಮದ ಬೇಂಗಾಡಿ ಪೆಲತ್ತಕಟ್ಟೆ ರಸ್ತೆ ಅಭಿವೃದ್ಧಿ, ದುರ್ಗಾ ಗ್ರಾಮದ ಮಾಂಜ ಕೊರ್ನಾಲು ರಸ್ತೆ ಅಭಿವೃದ್ಧಿ, ಪಳ್ಳಿ ಗ್ರಾಮದ ಜ್ಞಾನಬೆಟ್ಟು ಕಟ್ಟೆಯಂಗಡಿ ಸಂಪರ್ಕ ರಸ್ತೆ ಅಭಿವೃದ್ಧಿ, ರೆಂಜಾಳ ಗ್ರಾಮದ ರೆಂಜಾಳ- ಕಳತ್ರಪಾದೆ ಸಂಪರ್ಕ ರಸ್ತೆ ಅಭಿವೃದ್ಧಿ, ನಲ್ಲೂರು ಗ್ರಾಮದ ಗಣಪತಿಕಟ್ಟೆ ಬಳಿಯಿಂದ ಮುಲ್ಲಡ್ಕ ಹುರ್ಲಾಡಿ ಹಂದ್ರಬೆಟ್ಟು ರಸ್ತೆ ಅಭಿವೃದ್ಧಿ, ಕಣಜಾರು ಗ್ರಾಮದ ಗುಂಡುಪಾದೆ ಭಟ್ರಬೈಲು ಸಂಪರ್ಕ ರಸ್ತೆ ಅಭಿವೃದ್ಧಿ, ಹಿರ್ಗಾನ ಗ್ರಾಮದ ಕಜೆ ರಸ್ತೆ ಅಭಿವೃದ್ಧಿ, ಹೆಬ್ರಿ ಗ್ರಾಮದ ಬಂಗಾರು ಗುಡ್ಡೆ ರಸ್ತೆ ಅಭಿವೃದ್ಧಿ, ಕಡ್ತಲ ಗ್ರಾಮದ ಮಾವಿನಕಟ್ಟೆಯಿಂದ ಜೆನ್ನಿಬೆಟ್ಟು ರಸ್ತೆ ಅಭಿವೃದ್ಧಿ, ಶಿವಪುರ ಗ್ರಾಮದ ಮುಕ್ಕಾಣಿ ಶಾಲೆಯಿಂದ ಕಲ್ಮುಂಡ ರಸ್ತೆ ಅಭಿವೃದ್ಧಿ, ಕುಕ್ಕುಂದೂರು ಗ್ರಾಮದ ಕೊಂಕೆ ಕಿನ್ಯರಕಟ್ಟ ರಸ್ತೆ ಅಭಿವೃದ್ಧಿ, ವರಂಗ ಗ್ರಾಮದ ಮುದೆಲ್ಕಡಿ-ಕಡ್ತಲ ಸಂಪರ್ಕ ರಸ್ತೆ ಅಭಿವೃದ್ಧಿ ಒಳಗೊಂಡಿವೆ.
Discover more from Coastal Times Kannada
Subscribe to get the latest posts sent to your email.
Discussion about this post