ಕೊಚ್ಚಿನ್(ಮೇ 09) ಇದೊಂದು ವಿಚಿತ್ರದಲ್ಲಿ ವಿಚಿತ್ರ ಪ್ರಕರಣ. ಅತ್ತೆಯ ಅಕ್ರಮ ಸಂಬಂಧ ಬಯಲು ಮಾಡಿದ್ದಕ್ಕೆ ಸೊಸೆ ಮೇಲೆ ಮಾರಣಾಂತಿಕ ಹಲ್ಲೆ ಆಗಿದೆ. ಕೇರಳದ ತ್ರಿಶೂರ್ ಜಿಲ್ಲೆಯ ಕೊರಟ್ಟಿಯಿಂದ ಘಟನೆ ವರದಿಯಾಗಿದೆ. ಪೆರಂಬೂರು ಮೂಲದ ವೈಷ್ಣವಿ ಹಲ್ಲೆಗೆ ಒಳಗಾದವರು.
ವೈಷ್ಣವಿ ಅಂತಿಮ ವರ್ಷದ ಸಿವಿಲ್ ವಿದ್ಯಾರ್ಥಿನಿ. ದಾಳಿಯಿಂದ ಗಂಭೀರ ಗಾಯಗೊಂಡಿರುವ ವೈಷ್ಣವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೈಷ್ಣವಿ ಕೊರಟ್ಟಿಯ ಪಲಪಲ್ಲಿ ಮೊಜಿಕಿಲಂನ ಮುಕೇಶ್ ಎಂಬುವರನ್ನು ಆರು ತಿಂಗಳ ಹಿಂದೆ ವಿವಾಹವಾಗಿದ್ದರು. ಇದಾದ ಕೆಲವೇ ದಿನದಲ್ಲಿ ಅತ್ತೆಯ ಅಕ್ರಮ ಸಂಬಂಧದ ವಿಚಾರ ಗೊತ್ತಾಗಿದೆ. ಸಂಗತಿಯನ್ನು ಬಯಲು ಮಾಡಿದ್ದಕ್ಕೆ ಅತ್ತೆಯ ಪ್ರಿಯಕರ ವೈಷ್ಣವಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ.
ಹಲ್ಲೆ ಮಾಡಿದ ಅತ್ತೆಯ ಪ್ರಿಯಕರ ಮನೆಯಿಂದ ಮೂರು ಕಿಮೀ ದೂರದಲ್ಲಿ ನೆಲೆಸಿದ್ದಾನೆ. ಆತ ಮನೆಗೆ ಬರುವುದನ್ನು ತಡೆಯಲು ವೈಷ್ಣವಿ ಯತ್ನ ಮಾಡಿದ್ದೇ ಹಲ್ಲೆ ಮಾಡಲು ಮೂಲ ಕಾರಣ. ಮನೆಯವರ ಜತೆ ಮಾತನಾಡುತ್ತಿದ್ದ ನಿಂತಿದ್ದ ವೈಷ್ಣವಿ ಮುಖಕ್ಕೆ ಬಲವಾಗಿ ಹೊಡೆದಿದ್ದಾನೆ. ಪತ್ತಿ ರಕ್ಷಣೆಗೆ ಬಂದ ಮುಕೇಶ್ ಮೇಲೆಯೂ ಹಲ್ಲೆ ಮಾಡಿದ್ದಾನೆ. ಅತ್ತೆ ಮತ್ತು ಪತಿಯ ಸಹೋದರನಿಂದಲೂ ಕಿರುಕುಳ ಆಗುತ್ತಿತ್ತು ಎಂದು ವೈಷ್ಣವಿ ಹೇಳಿಕೆಯಲ್ಲಿ ತಿಳಿಸಿದ್ದಾಳೆ.
ಪತ್ನಿ ಅನುಭವಿಸಿದ ನರಕ ಯಾತನೆಯನ್ನು ಪತಿ ಸೋಶಿಯಲ್ ಮೀಡಿಯಾ ಪೇಜ್ ನಲ್ಲಿ ಬರೆದಿದ್ದು ಜನರು ಸಹ ಆಕ್ರೋಶ ಭರಿತರಾಗಿ ಪ್ರತಿಕ್ರಿಯೆ ನೀಡಿದ್ದು ಆರೋಪಿಗಳ ಬಂಧನಕ್ಕೆ ಒತ್ತಾಯಿಸಿದ್ದಾರೆ. ಹಲ್ಲೆ ಮಾಡಿದ ಆರೋಪಿ ತಲೆ ಮರೆಸಿಕೊಂಡಿದ್ದು ಬಂಧನಕ್ಕೆ ಬಲೆ ಬೀಸಲಾಗಿದೆ.
ಮದುವೆಯಾದ ದಿನದಿಂದಲೇ ಅತ್ತೆಯ ಅಕ್ರಮ ಸಂಬಂಧದ ವಿಚಾರ ಗೊತ್ತಾಗಿತ್ತು. ಇದೇ ಕಾರಣಕ್ಕೆ ಮನೆಯಲ್ಲಿ ಒಂದೆರಡು ಸಾರಿ ಮನಸ್ತಾಪಗಳು ಆಗಿದ್ದವು. ಮರ್ಯಾದೆಗೆ ಅಂಜಿ ಪ್ರಕರಣ ಹೊರಗೆ ಬಂದಿರಲಿಲ್ಲ. ಆದರೆ ಅತ್ತೆಯ ಬಾಯ್ ಫ್ರೆಂಡ್ ನಿರಂತರವಾಗಿ ಮನೆಗೆ ಆಗಮಿಸಲು ಶುರುಮಾಡಿದ್ದನ್ನು ಸೊಸೆ ವಿರೋಧಿಸಿದ್ದಳು. ಮನೆಯಲ್ಲಿ ಈಕೆಯ ಗಂಡ ಇಲ್ಲದಿರುವಾಗ ಹಿಂಸೆ ನೀಡುತ್ತಿದ್ದರು. ಈ ಎಲ್ಲ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಗಂಡ ಬರೆದಿದ್ದಾರೆ.