• About us
  • Contact us
  • Disclaimer
Tuesday, February 24, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ತುಮಕೂರು ಮಾಜಿ ಕಾರ್ಪೋರೇಟರ್​ ರಾಜೇಂದ್ರ ಕುಮಾರ್​ನ ಕಾಮದಾಹಕ್ಕೆ ಯುವತಿ ಬಲಿ!

Coastal Times by Coastal Times
March 9, 2022
in ಕ್ರೈಮ್ ನ್ಯೂಸ್
ತುಮಕೂರು ಮಾಜಿ ಕಾರ್ಪೋರೇಟರ್​ ರಾಜೇಂದ್ರ ಕುಮಾರ್​ನ ಕಾಮದಾಹಕ್ಕೆ ಯುವತಿ ಬಲಿ!
93
VIEWS
WhatsappTelegramShare on FacebookShare on Twitter

ತುಮಕೂರು: ಹೊಟ್ಟೆ ನೋವಿನಿಂದ ಬಳಲಿ ಬಳಲಿ 2021ರ ನವೆಂಬರ್​ 8 ರಂದು ಮೃತಪಟ್ಟ 18 ವರ್ಷದ ಬಾಲೆಯ ಕೇಸ್​ಗೆ ಸ್ಫೋಟಕ ತಿರುವು ಸಿಕ್ಕಿದೆ. ಯುವತಿಯ ಮೊಬೈಲ್​ನಲ್ಲಿ ರಹಸ್ಯ ಬಯಲಾಗಿದ್ದು, ತುಮಕೂರಿನ ಮಾಜಿ ಕಾರ್ಪೋರೇಟರ್ ಹಾಗೂ ಚರ್ಚ್ ಕಮಿಟಿ ಸದಸ್ಯ ರಾಜೇಂದ್ರ ಕುಮಾರ್​ನ ಕಾಮದಾಟ, ಹೇಯ ಕೃತ್ಯ ಕುರಿತು ಮೃತಳ ತಾಯಿ ಪೊಲೀಸರ ಮುಂದೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಗ್ರೆಸ್ ಪ್ರೀರ್ತನಾ ಮೃತ ಯುವತಿ. ಈಕೆಯ ತಾಯಿ ಸಂತೋಷ್ ಸ್ಟೆಲ್ಲಾ ತುಮಕೂರಿನ ನಗರ ಪೊಲೀಸ್ ಠಾಣೆಯಲ್ಲಿ ರಾಜೇಂದ್ರಕುಮಾರ್ ವಿರುದ್ಧ ದೂರು ನೀಡಿದ್ದಾರೆ. ತುಮಕೂರಿನ ಸಿ.ಎಸ್.ಐ. ವೆಸ್ಲಿ ಚರ್ಚ್​ನಲ್ಲಿ ಸಭಾಪಾಲನ ಸದಸ್ಯನಾಗಿದ್ದ ರಾಜೇಂದ್ರಕುಮಾರ್, 2013ರಿಂದ 2018ರ ಅವಧಿಯಲ್ಲಿ ತುಮಕೂರು ಪಾಲಿಕೆಯ ನಾಮಿನಿ ಸದಸ್ಯನಾಗಿದ್ದ. ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ. ತುಮಕೂರಿನ ಡಿಸಿ ಕಚೇರಿ ಬಳಿ ಟೈಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ಸಂತೋಷ್ ಸ್ಟೆಲ್ಲಾಗೆ 5 ವರ್ಷದ ಹಿಂದೆ ರಾಜೇಂದ್ರಕುಮಾರ್ ಪರಿಚಯವಾಗಿತ್ತು. ತನ್ನನ್ನು ಚರ್ಚ್ ಕಮಿಟಿ ಸದಸ್ಯನೆಂದು ಪರಿಚಯಿಸಿಕೊಂಡಿದ್ದ ರಾಜೇಂದ್ರ, ಕರೊನಾ ಲಾಕ್​ಡೌನ್​ ವೇಳೆ ಆಹಾರ ಸಾಮಗ್ರಿ ಕಿಟ್​ ನೀಡುವ ನೆಪದಲ್ಲಿ ಸ್ಟೆಲ್ಲಾರ ಮನೆಗೆ ಭೇಟಿ ನೀಡಿದ್ದ. ಆ ಮನೆಯಲ್ಲಿ ತಾಯಿ-ಮಗಳು ಇಬ್ಬರೇ ಇರುವುದನ್ನೇ ಬಂಡವಾಳ ಮಾಡಿಕೊಂಡ ರಾಜೇಂದ್ರ, ಸಹಾಯ ಮಾಡುವ ನೆಪದಲ್ಲಿ ಸಲುಗೆ ಬೆಳೆಸಿಕೊಂಡಿದ್ದ. ತಾಯಿಗೆ ಗೊತ್ತಾಗದಂತೆ ಮಗಳನ್ನು ಪುಸಲಾಯಿಸಿ ಹಲವು ಬಾರಿ ಲೈಂಗಿಕ ಸಂಪರ್ಕ ಬೆಳೆಸಿದ್ದ. ಪದೇ ಪದೆ ಗರ್ಭಪಾತದ ಮಾತ್ರೆಯನ್ನೂ ಕೊಡುತ್ತಿದ್ದ.

2021ರ ಅಕ್ಟೋಬರ್​ನಲ್ಲಿ ಯುವತಿ ಗ್ರೇಸ್ ಪ್ರೀರ್ತನಾಗೆ ಅಸಹಜ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ತುಮಕೂರಿನ ಎರಡ್ಮೂರು ಆಸ್ಪತ್ರೆಗೆ ಆಕೆಯನ್ನ ರಾಜೇಂದ್ರಕುಮಾರ್​ನೇ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದ. ಸ್ಟೆಲ್ಲಾ ಕೂಡ ಜತೆಗೆ ಹೋದರೂ ಆಕೆಯನ್ನು ಆಸ್ಪತ್ರೆಯ ಹೊರಗೇ ಇರುವಂತೆ ರಾಜೇಂದ್ರ ಸೂಚಿಸುತ್ತಿದ್ದ. ಮಗಳಿಗೆ ಏನಾಗಿದೆ ಎಂದು ಸ್ಟೆಲ್ಲಾಗೆ ಅರಿವೇ ಇರಲಿಲ್ಲ. ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡ ಪರಿಣಾಮ ಯುವತಿಯನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ವೇಳೆ ಮಗಳ ಬಳಿ ಏನಾಯ್ತವ್ವ? ನಿಜ ಹೇಳು ಎಂದು ತಾಯಿ ಕೇಳಿದ್ದಳು.

ಆಗ ಸತ್ಯ ಬಾಯ್ಬಿಟ್ಟ ಮಗಳು, ಇಷ್ಟಕ್ಕೆಲ್ಲ ಕಾರಣ ರಾಜೇಂದ್ರಕುಮಾರ್. ನನ್ನನ್ನು ಅವರ ಆಫೀಸ್​ಗೆ ಕರೆದೊಯ್ದು ಹಲವು ಬಾರಿ ಲೈಂಗಿಕವಾಗಿ ಬಳಸಿಕೊಂಡರು. ಎರಡ್ಮೂರು ಬಾರಿ ಅಬಾರ್ಷನ್​ ಮಾಡಿಸಿದರು. ಗರ್ಭಪಾತ ಆಗಲೆಂದು ಪದೇ ಪದೆ ಮಾತ್ರೆ ನುಂಗಿಸಿದ್ದರು… ಎಂದು ಕಣ್ಣೀರಿಟ್ಟಿದ್ದಳು. 2021ರ ನವೆಂಬರ್​ 8ರಂದು ಚಿಕಿತ್ಸೆ ಫಲಿಸದೆ ಯುವತಿ ಮೃತಪಟ್ಟಳು. ಈಕೆಯ ಶವವನ್ನು ತುಮಕೂರಿಗೆ ತೆಗೆದುಕೊಂಡು ಹೋಗಲು ತಾಯಿಗೆ ಅವಕಾಶ ಕೊಡದ ರಾಜೇಂದ್ರಪ್ರಸಾದ್​, ಬೆಂಗಳೂರಿನ ಶಾಂತಿನಗರದ ಬಳಿ ಇರುವ ಕ್ರಿಶ್ಚಿಯನ್ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ಮಾಡಿ ಪ್ರಕರಣ ಮುಚ್ಚಿಹಾಕಲು ಯತ್ನಿಸಿದ್ದ.

ವಾಪಸ್​ ಮನೆಗೆ ಬಂದ ವಾರದ ಬಳಿಕ ಮಗಳ ಮೊಬೈಲ್ ಪರಿಶೀಲಿಸಿದ ತಾಯಿಗೆ ಹಲವು ರಹಸ್ಯ ಗೊತ್ತಾಗಿದೆ. ಮಗಳ ಜತೆ ರಾಜೇಂದ್ರಕುಮಾರ್ ಮಾತನಾಡಿದ್ದ ಆಡಿಯೋ ರೆಕಾರ್ಡ್, ಫೋಟೋ, ವಿಡಿಯೋ ಪತ್ತೆಯಾಗಿದೆ. ಇದನ್ನು ಸಾಕ್ಷಿಯಾಗಿಟ್ಟುಕೊಂಡು ಮಗಳ ಸಾವಿನ ಬಗ್ಗೆ ಪ್ರಶ್ನಿಸಿದ ತಾಯಿಗೆ ರಾಜೇಂದ್ರಕುಮಾರ್ ಜೀವ ಬೆದರಿಕೆ ಹಾಕಿದ್ದ ಎಂದು ದೂರು ದಾಖಲಾಗಿದೆ. ಮಗಳ ಸಾವು ಕೊಲೆ ಎಂದು ಶಂಕಿಸಿ ತುಮಕೂರು ನಗರ ಪೊಲೀಸರಿಗೆ ಮಾ.8ರಂದು ತಾಯಿ ಸಂತೋಷ್ ಸ್ಟೆಲ್ಲಾ ದೂರು ನೀಡಿದ್ದಾಳೆ. ರಾಜೇಂದ್ರಕುಮಾರ್​ನನ್ನು ಪೊಲೀಸರು ಬಂಧಿಸಿದ್ದಾರೆ

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

Related

Discover more from Coastal Times Kannada

Subscribe to get the latest posts sent to your email.

Previous Post

ಅತ್ತೆ ಪಲ್ಲಂಗದಾಟ ಬಯಲು ಮಾಡಿದ್ದಕ್ಕೆ ಸೊಸೆ ಮೇಲೆ ಮಾರಣಾಂತಿಕ ಹಲ್ಲೆ .!

Next Post

ರೈಲು ಹತ್ತದಂತೆ ಪೆಪ್ಪರ್ ಸ್ಪ್ರೇ ಮಾಡಿದರು ಉಕ್ರೇನಿಗರು – ಕಹಿ ಅನುಭವ ಬಿಚ್ಚಿಟ್ಟ ಉಡುಪಿಯ ಆ್ಯನಿಫ್ರೆಡ್ ರಿಡ್ಲೆ ಡಿಸೋಜಾ

Related Posts

ಉಡುಪಿ; ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಳ್ಳಲು ಯತ್ನ ಪೊಲೀಸರಿಂದ ರಕ್ಷಣೆ
ಕ್ರೈಮ್ ನ್ಯೂಸ್

ಉಡುಪಿ; ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಳ್ಳಲು ಯತ್ನ ಪೊಲೀಸರಿಂದ ರಕ್ಷಣೆ

February 23, 2026
15
ಮಂಗಳೂರು: ಭೂಗತವಾಗಿ ಹಾಕಲಾಗಿದ್ದ ತಾಮ್ರದ ಕೇಬಲ್ ಕದ್ದು ಮಾರುತ್ತಿದ್ದ ಬಿಎಸ್‌ಎನ್‌ಎಲ್ ಉದ್ಯೋಗಿಗಳ ಸಹಿತ ಮೂವರ ಬಂಧನ
ಕ್ರೈಮ್ ನ್ಯೂಸ್

ಮಂಗಳೂರು: ಭೂಗತವಾಗಿ ಹಾಕಲಾಗಿದ್ದ ತಾಮ್ರದ ಕೇಬಲ್ ಕದ್ದು ಮಾರುತ್ತಿದ್ದ ಬಿಎಸ್‌ಎನ್‌ಎಲ್ ಉದ್ಯೋಗಿಗಳ ಸಹಿತ ಮೂವರ ಬಂಧನ

February 20, 2026
80
Next Post
ರೈಲು ಹತ್ತದಂತೆ ಪೆಪ್ಪರ್ ಸ್ಪ್ರೇ ಮಾಡಿದರು ಉಕ್ರೇನಿಗರು – ಕಹಿ ಅನುಭವ ಬಿಚ್ಚಿಟ್ಟ ಉಡುಪಿಯ ಆ್ಯನಿಫ್ರೆಡ್ ರಿಡ್ಲೆ ಡಿಸೋಜಾ

ರೈಲು ಹತ್ತದಂತೆ ಪೆಪ್ಪರ್ ಸ್ಪ್ರೇ ಮಾಡಿದರು ಉಕ್ರೇನಿಗರು - ಕಹಿ ಅನುಭವ ಬಿಚ್ಚಿಟ್ಟ ಉಡುಪಿಯ ಆ್ಯನಿಫ್ರೆಡ್ ರಿಡ್ಲೆ ಡಿಸೋಜಾ

Discussion about this post

Recent News

‘ಸಹಕಾರ ರತ್ನ” ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರ 77ನೇ ಹುಟ್ಟುಹಬ್ಬದ ಸಂಭ್ರಮ ಅಭಿವಂದನಾ ಕಾರ್ಯಕ್ರಮ

‘ಸಹಕಾರ ರತ್ನ” ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರ 77ನೇ ಹುಟ್ಟುಹಬ್ಬದ ಸಂಭ್ರಮ ಅಭಿವಂದನಾ ಕಾರ್ಯಕ್ರಮ

February 24, 2026
8
ಕೂಡಲೇ ಇರಾನ್ ಬಿಟ್ಟು ಹೊರಡಿ; ಅಮೆರಿಕದ ದಾಳಿಯ ಭೀತಿಯ ಬೆನ್ನಲ್ಲೇ ಭಾರತೀಯರಿಗೆ ರಾಯಭಾರ ಕಚೇರಿ ಸೂಚನೆ

ಕೂಡಲೇ ಇರಾನ್ ಬಿಟ್ಟು ಹೊರಡಿ; ಅಮೆರಿಕದ ದಾಳಿಯ ಭೀತಿಯ ಬೆನ್ನಲ್ಲೇ ಭಾರತೀಯರಿಗೆ ರಾಯಭಾರ ಕಚೇರಿ ಸೂಚನೆ

February 24, 2026
18
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

‘ಸಹಕಾರ ರತ್ನ” ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರ 77ನೇ ಹುಟ್ಟುಹಬ್ಬದ ಸಂಭ್ರಮ ಅಭಿವಂದನಾ ಕಾರ್ಯಕ್ರಮ

‘ಸಹಕಾರ ರತ್ನ” ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರ 77ನೇ ಹುಟ್ಟುಹಬ್ಬದ ಸಂಭ್ರಮ ಅಭಿವಂದನಾ ಕಾರ್ಯಕ್ರಮ

February 24, 2026
ಕೂಡಲೇ ಇರಾನ್ ಬಿಟ್ಟು ಹೊರಡಿ; ಅಮೆರಿಕದ ದಾಳಿಯ ಭೀತಿಯ ಬೆನ್ನಲ್ಲೇ ಭಾರತೀಯರಿಗೆ ರಾಯಭಾರ ಕಚೇರಿ ಸೂಚನೆ

ಕೂಡಲೇ ಇರಾನ್ ಬಿಟ್ಟು ಹೊರಡಿ; ಅಮೆರಿಕದ ದಾಳಿಯ ಭೀತಿಯ ಬೆನ್ನಲ್ಲೇ ಭಾರತೀಯರಿಗೆ ರಾಯಭಾರ ಕಚೇರಿ ಸೂಚನೆ

February 24, 2026
ಉಡುಪಿ; ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಳ್ಳಲು ಯತ್ನ ಪೊಲೀಸರಿಂದ ರಕ್ಷಣೆ

ಉಡುಪಿ; ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಳ್ಳಲು ಯತ್ನ ಪೊಲೀಸರಿಂದ ರಕ್ಷಣೆ

February 23, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d