ಉಳ್ಳಾಲ: ನಿಟ್ಟೆ ಜಸ್ಟೀಸ್ ಕೆ.ಎಸ್ ಹೆಗ್ಡೆ ಚಾರಿಟಬಲ್ ಆಸ್ಪತ್ರೆ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಲಾದ ‘ವಿಮೆನ್ ಸ್ಕ್ರೀನಿಂಗ್ ಆಂಡ್ ವೆಲ್ನೆಸ್ ಕ್ಲಿನಿಕ್’ಗೆ ಚಾಲನೆ ನೀಡಿ ಮಹಿಳೆಯರ ಸಬಲೀಕರಣ ಎಂದರೆ ಪುರುಷರ ಪತನವಲ್ಲ ಎಂದು ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್ ಹೇಳಿದರು.
ಉರ್ವ ಪೊಲೀಸ್ ಠಾಣಾಧಿಕಾರಿ ಭಾರತಿ ಮಾತನಾಡಿ, ‘ಇಂದು ಮಹಿಳೆಯರ ಆತ್ಮಸ್ಥೈರ್ಯ ವೃದ್ಧಿಸುವ ದಿನ. ಒಂದು ಕಾಲದಲ್ಲಿ ಅವಕಾಶಗಳು ಸೀಮಿತವಾಗಿತ್ತು. ಸದ್ಯ ಅವಕಾಶಗಳು ಓವರ್ ಲೋಡ್ ಆಗಿವೆ. ಆದರೆ ಶೋಷಣೆಗಳು ಹೆಚ್ಚಿವೆ. ಸಾಮಾಜಿಕ ಜಾಲತಾಣಗಳ ಮೂಲಕ ವಂಚನೆಗೆ ಒಳಗಾಗುತ್ತಿದ್ದಾರೆ. ಸೈಬರ್ ಸಂಬಂಧಿತ ಪ್ರಕರಣಗಳಲ್ಲಿ ವಿದ್ಯಾವಂತ ಮಹಿಳೆಯರೇ ವಂಚನೆಗೊಳಗಾಗುತ್ತಿರುವುದು ವಿಪರ್ಯಾಸ’ ಎಂದರು.
ಶರೀರಶಾಸ್ತ್ರ ಹಾಗೂ ಲಿಂಗ ಸಂವೇದನೆ ಸಮಿತಿ ಮುಖ್ಯಸ್ಥೆ ಶೈಲಜಾ ಎಸ್.ಮೂಡಿತ್ತಾಯ, ಲೈಂಗಿಕ ದೌರ್ಜನ್ಯ ತಡೆ ಸಮಿತಿಯ ಸುಕನ್ಯಾ ಶೆಟ್ಟಿ, ಪ್ರೊಜೆಕ್ಷನ್ ಎನ್ಯುಟೆಕ್ ನಿರ್ದೇಶಕಿ ಪ್ರೊ. ಇಂದ್ರಾಣಿ ಕರುಣಾಸಾಗರ್, ಆರ್ಥಿಕ ಸಮಿತಿ ನಿರ್ದೇಶಕಿ ಸಿ.ಎ ವಿನುತಾ ಜೆ.ಶೆಟ್ಟಿ , ಸಿಬ್ಬಂದಿ ಅಭಿವೃದ್ಧಿ ಕೇಂದ್ರ ನಿರ್ದೇಶಕಿ ಸಪ್ನಾ ದೇಶಮುಖ್, ಪೀಡಿಯೋಡಾಂಟಿಕ್ಸ್ ವಿಭಾಗದ ಪ್ರೊ ಡಾ. ಅಮಿತಾ ಹೆಗ್ಡೆ, ಹ್ಯುಮ್ಯಾನಿಟಿವ್ ಇನ್ಚಾರ್ಜ್ ಪ್ರೊ. ಡಾ. ಸಾಯಿಗೀತಾ ಮುಖ್ಯ ಅತಿಥಿಗಳಾಗಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post