ಮಂಗಳೂರು, ಅ 08: ಅದು ಸರ್ಕಾರಿ ಪ್ರೌಢ ಶಾಲೆ.ಆ ಶಾಲೆಯ ಎಂಟನೇ ತರಗತಿ ಎಲ್ಲಾ ಶಿಕ್ಷಕರ ಫೇವರೇಟ್, ಎಂಟನೇ ತರಗತಿಯ ಒಳಗೆ ಹೋದರೆ ಶಿಕ್ಷಕರಿಗೆ ಕಾಣಸಿಗೋದು ಐವರು ಅವಳಿ ಜವಳಿಗಳು. ಈ ಅವಳಿ-ಜವಳಿ ವಿದ್ಯಾರ್ಥಿನಿಯರು ಇದೇ ಊರಿನ ಬೇರೆ ಬೇರೆ ಕುಟುಂಬಗಳಿಗೆ ಸೇರಿದವರು.
ಇಂತಹ ವಿಶೇಷ ತರಗತಿ ಇರೋದು ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜಿಪ ಮೂಡ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಎಂಟನೇ ತರಗತಿ. ಎಂಟನೇ ತರಗತಿಗೆ ಶಿಕ್ಷಕರು ಹೋದಾಗಲೆಲ್ಲಾ ಶಿಕ್ಷಕರಿಗೆ ಗೊಂದಲ ಆಗದ ದಿನಗಳಿಲ್ಲ. ತರಗತಿಯಲ್ಲಿ ತಪ್ಪು ಮಾಡಿರೋದು ಒಬ್ಬಳು, ಶಿಕ್ಷಕರು ಬೈಯೋದು ಇನ್ನೊಬ್ಬಳಿಗೆ. ಹೌದು ಈ ಗೊಂದಲ ಆಗಲು ಕಾರಣವೂ ಇದೆ. ಈ ತರಗತಿಯಲ್ಲಿ ಬಹುತೇಕ ಇರುವ ಮಕ್ಕಳೆಲ್ಲಾ ಅವಳಿ-ಜವಳಿ ಮಕ್ಕಳೇ. ಇದೇ ಕಾರಣಕ್ಕೆ ಈ ತರಗತಿಗೆ ಪಾಠ ಮಾಡಲು ತೆರಳುವ ಶಿಕ್ಷಕರಿಗೂ, ಮಕ್ಕಳಿಗೂ ಗೊಂದಲಕಾರಿ ಸನ್ನಿವೇಶ ನಿರ್ಮಾಣ ವಾಗಿದೆ.
ಈ ಬಾರಿಯ ಶೈಕ್ಷಣಿಕ ಸಾಲಿನಲ್ಲಿ ಈ ಶಾಲೆಯ ಎಂಟನೇ ತರಗತಿಯ ಮಕ್ಕಳೇ ಎಲ್ಲರ ಆಕರ್ಷಣೆಯ ಕೇಂದ್ರಬಿಂದುಗಳಾಗಿದ್ದಾರೆ.ಅಪರೂಪದಲ್ಲಿ ಅಪರೂಪವಾಗಿರುವ ಅವಳಿ ಜವಳಿ ಮಕ್ಕಳನ್ನು ನೋಡುವುದೇ ಶಿಕ್ಷಕರಿಗೆ ಒಂದು ಖುಷಿ. ಒಂದೇ ಕ್ಲಾಸಿನಲ್ಲಿ 5 ಜೋಡಿ ಅವಳಿ ಜವಳಿ ವಿದ್ಯಾರ್ಥಿಗಳು ಇದೀಗ ಎಲ್ಲರ ಮನೆ ಮಾತಾಗಿದ್ದಾರೆ.
ಅಯಿಷಾ ಝಿಬಾ-ಖತೀಝಾ ಝಿಯಾ, ಶ್ರಣವಿ-ಜಾನ್ಹವಿ, ಫಾತಿಮತ್ ಕಮಿಲ-ಫಾತಿಮತ್ ಸಮಿಲ, ಆಯಿಷಾ ರೈಫಾ- ಫಾತೀಮಾ ರೌಲ, ದುಲೈಕತ್ ರುಫಿದಾ- ಹಲೀಮತ್ ರಾಫಿದ ಒಂದೇ ತರಗತಿಯಲ್ಲಿ ಕಲಿಯುತ್ತಿರುವ ಅವಳಿ ಜವಳಿ ವಿದ್ಯಾರ್ಥಿಗಳಾಗಿದ್ದಾರೆ. ಐದು ಜೋಡಿ ಅವಳಿ ಮಕ್ಕಳಲ್ಲಿ ಒಂದು ಜೋಡಿ ಹಿಂದೂ ಸಮುದಾಯದ ಹಾಗೂ ಉಳಿದಂತೆ ನಾಲ್ಕು ಜೋಡಿ ಮಕ್ಕಳು ಮುಸ್ಲಿಂ ಸಮುದಾಯದಕ್ಕೆ ಸೇರಿದವರಾಗಿದ್ದಾರೆ.
ಒಮ್ಮೊಮ್ಮೆ ಸಹಪಾಠಿಗಳು ಗೊಂದಲಕ್ಕೀಡಾದ ಆಗುವ ಸಂದರ್ಭಗಳು ಕೂಡ ಬಂದಿವೆ. ಎಂಟನೇ ತರಗತಿಯ ಇತರ ಮಕ್ಕಳೆಲ್ಲಾ ಶಾಲೆ ಆರಂಭವಾದಂದಿನಿಂದ ತರಗತಿಯಲ್ಲಿರುವ ಐದು ಜೋಡಿ ಅವಳಿ-ಜವಳಿ ಮಕ್ಕಳನ್ನು ಸೂಕ್ಷ್ಮವಾಗಿ ಗಮನಿಸಿ ಒಬೊಬ್ಬರಲ್ಲಿ ಇರುವ ವ್ಯತ್ಯಾಸವನ್ನು ಕಂಡು ಹಿಡಿದ ಕಾರಣ ಆ ತರಗತಿಯ ಮಕ್ಕಳು ಅವಳಿಗಳನ್ನು ಗುರುತು ಪತ್ತೆಹಚ್ಚುತ್ತಾರೆ. ಆದರೆ ಇವರಲ್ಲಿ ಎರಡು ಜೋಡಿಯನ್ನು ಸಹಪಾಠಿಗಳಿಗೂ ಪತ್ತೆಹಚ್ಚಲು ಕಷ್ಟವಾಗುತ್ತದೆ. ಈ ಹಿಂದೆ ನಮ್ಮ ಪ್ರೌಢಶಾಲೆಯಲ್ಲಿ ಎಂಟು ಜೋಡಿ ಅವಳಿ-ಜವಳಿ ವಿದ್ಯಾರ್ಥಿಗಳು ಬೇರೆ ಬೇರೆ ತರಗತಿಯಲ್ಲಿ ಕಲಿತಿದ್ದರು’ ಎಂದು ಮುಖ್ಯಾಧ್ಯಾಪಕಿ ಆಲಿಸ್ ಪಾಯಿಸ್ ನೆನಪಿಸಿಕೊಂಡರು.
Discover more from Coastal Times Kannada
Subscribe to get the latest posts sent to your email.
Discussion about this post