ಬಿಹಾರ: ಮುಸುಕುಧಾರಿಗಳ ತಂಡವೊಂದು ನಗರದ ಪ್ರತಿಷ್ಠಿತ ಚಿನ್ನಾಭರಣ ಮಳಿಗೆಯೊಂದಕ್ಕೆ ನುಗ್ಗಿ ಸಿಬ್ಬಂದಿಗಳನ್ನು ಬೆದರಿಸಿ ಮಳಿಗೆಯಲ್ಲಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿರುವ ಘಟನೆ ಬಿಹಾರದ ಅರಾದಲ್ಲಿ ಸೋಮವಾರ(ಮಾ.10) ಬೆಳಿಗ್ಗೆ ಸಂಭವಿಸಿದೆ.
ಮುಸುಕುಧಾರಿಗಳ ಕೃತ್ಯ ಚಿನ್ನಾಭರಣ ಮಳಿಗೆಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಬೆಳಿಗ್ಗೆ ಸುಮಾರು 10;15 ರ ಸುಮಾರಿಗೆ ಐದರಿಂದ ಆರು ಮಂದಿ ಮುಸುಕುಧಾರಿಗಳ ತಂಡ ಚಿನ್ನಾಭರಣ ಮಳಿಗೆಗೆ ನುಗ್ಗಿ ಅಲ್ಲಿನ ಸಿಬ್ಬಂದಿಗಳನ್ನು ಬಂಧೂಕಿನಿಂದ ಬೆದರಿಸಿ ಮಳಿಗೆ ಒಳಗಿದ್ದ ಚಿನ್ನಾಭರಣಗಳನ್ನು ಚೀಲಕ್ಕೆ ತುಂಬಿಸಿ ಜೊತೆಗೆ ಕೃತ್ಯಕ್ಕೆ ಅಡ್ಡಿ ಪಡಿಸಿದ ಸಿಬ್ಬಂದಿಗೆ ಹಲ್ಲೆ ನಡೆಸಿ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ದೋಚಿಕೊಂಡು ಹೋಗಿರುವುದು ಸೆರೆಯಾಗಿದೆ.
ಇನ್ನು ಘಟನೆಗೆ ಸಂಬಂಧಿಸಿ ಮಳಿಗೆಯ ಸಿಬ್ಬಂದಿಗಳು ಪೊಲೀಸ್ ಠಾಣೆಗೆ ಕರೆ ಮಾಡಿ ವಿಚಾರ ತಿಳಿಸಿದರೂ ಪೊಲೀಸರು ಸಕಾಲಕ್ಕೆ ಬರಲಿಲ್ಲ ಎಂದು ಮಳಿಗೆ ಸಿಬ್ಬಂದಿಗಳು ಆಕ್ರೋಶ ಹೊರ ಹಾಕಿದ್ದಾರೆ.
ಘಟನೆ ಸಂಬಂಧಿಸಿ ಮಾತನಾಡಿದ ಭೋಜ್‌ಪುರ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ರಾಜ್, ಚಿನ್ನಾಭರಣ ಮಳಿಗೆಗೆ ಸುಮಾರು ಐದರಿಂದ ಆರು ಮಂಜು ಮುಸುಕುಧಾರಿಗಳು ನುಗ್ಗಿ ಮಳಿಗೆ ಸಿಬ್ಬಂದಿಗಳನ್ನು ಬೆದರಿಸಿ ಚಿನ್ನಾಭರಣ ದರೋಡೆ ಮಾಡಿದ್ದಾರೆ ದೂರು ಬಂದ ಬಳಿಕ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದು ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಅಪರಾಧಿಗಳನ್ನು ಗುರುತಿಸಲು ಮತ್ತು ಶೀಘ್ರದಲ್ಲೇ ಅವರನ್ನು ಬಂಧಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು. ಅಲ್ಲದೆ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಲಾಗಿದೆ ಎಂದು ಅವರು ಹೇಳಿದರು.
Discover more from Coastal Times Kannada
Subscribe to get the latest posts sent to your email.
Discussion about this post