• About us
  • Contact us
  • Disclaimer
Monday, August 31, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಹಿಮ್ಮುಖವಾಗಿ ವಾಕಿಂಗ್​ ಮಾಡಲು ಪ್ರಯತ್ನಿಸಿದ್ದೀರಾ? ಈ ರೀತಿ ವಾಕಿಂಗ್​ ಮಾಡುವುದರಿಂದ ಕೆಲವು ವಿಶಿಷ್ಟ ಲಾಭಗಳಿವೆ!

Coastal Times by Coastal Times
March 10, 2025
in ಆರೋಗ್ಯ
ಹಿಮ್ಮುಖವಾಗಿ ವಾಕಿಂಗ್​ ಮಾಡಲು ಪ್ರಯತ್ನಿಸಿದ್ದೀರಾ? ಈ ರೀತಿ ವಾಕಿಂಗ್​ ಮಾಡುವುದರಿಂದ ಕೆಲವು ವಿಶಿಷ್ಟ ಲಾಭಗಳಿವೆ!
72
VIEWS
WhatsappTelegramShare on FacebookShare on Twitter

ಹಿಮ್ಮುಖ ವಾಕಿಂಗ್​ನ ಪ್ರಯೋಜನಗಳು: ವಾಕಿಂಗ್ ಎಲ್ಲರೂ ಮಾಡಬಹುದಾದ ಸುಲಭ ವ್ಯಾಯಾಮಗಳಲ್ಲಿ ಒಂದು. ಪ್ರತಿದಿನ ಸ್ವಲ್ಪ ಸಮಯ ವಾಕಿಂಗ್​ ಮಾಡುವುದರಿಂದ ದೇಹಕ್ಕೆ ಆರೋಗ್ಯಕರ ಮಾತ್ರವಲ್ಲದೆ, ಮಾನಸಿಕ ಶಾಂತಿಯೂ ಲಭಿಸುತ್ತದೆ. ಮಧುಮೇಹ, ರಕ್ತದೊತ್ತಡ, ಕೀಲು ನೋವು ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳನ್ನು ನಿಯಂತ್ರಿಸಲು ವಾಕಿಂಗ್​ ಸಹಾಯಕ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.

ನಡಿಗೆಯಲ್ಲಿ ಅನೇಕ ಪ್ರಕಾರಗಳಿವೆ. ಉದಾಹರಣೆಗೆ, ವೇಗದ ವಾಕಿಂಗ್​, ಸಾಮಾನ್ಯ ವಾಕಿಂಗ್​, ಓಟದ ರೀತಿಯ ವಾಕಿಂಗ್​. ಆದ್ರೆ, ನೀವು ಎಂದಾದರೂ ಹಿಮ್ಮುಖವಾಗಿ ವಾಕಿಂಗ್​ ಮಾಡಲು ಪ್ರಯತ್ನಿಸಿದ್ದೀರಾ? ಈ ರೀತಿ ವಾಕಿಂಗ್​ ಮಾಡುವುದರಿಂದ ಕೆಲವು ವಿಶಿಷ್ಟ ಲಾಭಗಳಿವೆ.

ನಾವು ಸಾಮಾನ್ಯವಾಗಿ ಮುಂದೆ ನಡೆಯುತ್ತೇವೆ. ಆದರೆ, ಹಿಮ್ಮುಖ ನಡಿಗೆ ಎಂದರೆ ಹಿಂದಕ್ಕೆ ನಡೆಯುವುದು. ಸಾಮಾನ್ಯ ನಡಿಗೆಯಲ್ಲಿ ನೀವು ಒಂದು ಹೆಜ್ಜೆ ಮುಂದಿಡುತ್ತಾ ಹೋಗುತ್ತೀರಿ. ಆಗ ಹಿಮ್ಮಡಿ ಮೊದಲು ನೆಲ ಮುಟ್ಟುತ್ತದೆ. ನಂತರ ಇಡೀ ಕಾಲು ನೆಲದ ಮೇಲೆ ಇರುತ್ತದೆ. ಆದರೆ, ಹಿಮ್ಮುಖ ವಾಕಿಂಗ್​ನಲ್ಲಿ, ಅದು ಸಂಪೂರ್ಣವಾಗಿ ವಿಭಿನ್ನವಾಗಿರುತ್ತದೆ. ನೀವು ಹಿಂದೆ ಹೆಜ್ಜೆ ಹಾಕಿದಾಗ ಮೊದಲು ಕಾಲ್ಬೆರಳು ನೆಲ ಮುಟ್ಟುತ್ತದೆ. ಆಗ ಮಾತ್ರ ಇಡೀ ಪಾದ ನೆಲವನ್ನು ಮುಟ್ಟುತ್ತದೆ. ಪ್ರತೀ ಹೆಜ್ಜೆ ಹಿಂದಕ್ಕೆ ಇಡುತ್ತಾ, ಹಿಮ್ಮುಖವಾಗಿ ನಡೆಯುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ ಎಂದು ವೈದ್ಯಕೀಯ ತಜ್ಞರು ತಿಳಿಸುತ್ತಾರೆ.

ಕ್ಯಾಲೊರಿಗಳು ಬರ್ನ್ ಆಗುತ್ತೆ: ತಜ್ಞರು ಹೇಳುವಂತೆ, ಹಿಮ್ಮುಖವಾಗಿ ನಡೆಯುವುದರಿಂದ ಸಾಮಾನ್ಯ ನಡೆಯುವುದಕ್ಕಿಂತ ಹೆಚ್ಚಿನ ಕ್ಯಾಲೊರಿಗಳು ಬರ್ನ್ ಆಗುತ್ತವೆ. ಅಮೆರಿಕನ್ ಕಾಲೇಜ್ ಆಫ್ ಸ್ಪೋರ್ಟ್ಸ್ ಮೆಡಿಸಿನ್ ಪ್ರಕಾರ, ಗಂಟೆಗೆ 3.5 ಮೈಲುಗಳ ಸಾಮಾನ್ಯ ವೇಗದಲ್ಲಿ ವಾಕಿಂಗ್​ ಮಾಡುವುದರಿಂದ 4.3 MET ಕ್ಯಾಲೊರಿಗಳು ಸುಡುತ್ತವೆ. ಹಿಮ್ಮುಖವಾಗಿ ವಾಕಿಂಗ್​ ಮಾಡುವುದರಿಂದ 6.0 MET ಕ್ಯಾಲೊರಿಗಳು ಬರ್ನ್​ ಆಗುತ್ತವೆ ಎಂದು ತಿಳಿದಿದೆ. ವೇಗವಾಗಿ ನಡೆಯುವುದಕ್ಕಿಂತ ರಿವರ್ಸ್ ವಾಕಿಂಗ್ ನಿಮಿಷಕ್ಕೆ ಶೇ 40ಕ್ಕಿಂತ ಹೆಚ್ಚಿನ ಕ್ಯಾಲೊರಿಗಳನ್ನು ಬರ್ನ್ ಆಗುತ್ತದೆ ಎಂದು ಸಂಶೋಧನೆ ತಿಳಿಸುತ್ತದೆ.

ಸಂಧಿವಾತ ಇರುವವರಿಗೆ ಉತ್ತಮ: ಈ ಹಿಮ್ಮುಖ ನಡಿಗೆಯು ಅಸ್ಥಿಸಂಧಿವಾತ ಮತ್ತು ಜುವೆನೈಲ್ ರುಮಟಾಯ್ಡ್ ಸಂಧಿವಾತ ಇರುವವರಿಗೆ ಪ್ರಯೋಜನಕಾರಿ. ಇದು ವಿಶೇಷವಾಗಿ ಸ್ನಾಯುಗಳನ್ನು ಬಲಪಡಿಸುತ್ತದೆ ಹಾಗೂ ಮೊಣಕಾಲು, ಬೆನ್ನು ನೋವು ಇರುವವರಿಗೆ ಪರಿಹಾರ ನೀಡುತ್ತದೆ. ಹಿಮ್ಮುಖ ನಡಿಗೆಯು ವಾಕಿಂಗ್​ನ ವೇಗ ಹಾಗೂ ಸಮತೋಲನ ಸುಧಾರಿಸುತ್ತದೆ ಎಂದು ತಜ್ಞರು ವಿವರಿಸುತ್ತಾರೆ.

ಸ್ಥಿರತೆ ಹೆಚ್ಚಿಸುತ್ತದೆ: ಈ ರೀತಿಯ ವಾಕಿಂಗ್​ ಮಾಡುವುದರಿಂದ ವಿಶೇಷವಾಗಿ ತೊಡೆಯ ಹಿಂಭಾಗದ ಸ್ನಾಯುಗಳನ್ನು ಬಲಪಡಿಸುತ್ತದೆ. ಇದರ ಜೊತೆಗೆ ಸ್ನಾಯುಗಳ ನಡುವಿನ ಸ್ಥಿರತೆ ಮತ್ತು ಸಮನ್ವಯವು ಸುಧಾರಿಸುತ್ತದೆ. ಪರಿಣಾಮವಾಗಿ ಬೀಳುವ ಅಪಾಯ ಕಡಿಮೆಯಾಗುತ್ತದೆ. ಇದು ವಿಶೇಷವಾಗಿ ವಯಸ್ಸಾದವರಿಗೆ ಪ್ರಯೋಜನಕಾರಿಯಾಗಿದೆ ಎಂದು ತಜ್ಞರು ಹೇಳುತ್ತಾರೆ.

ಕೀಲು ನೋವು ಕಡಿಮೆ ಮಾಡುತ್ತದೆ: ಹಿಮ್ಮುಖ ನಡಿಗೆಯು ಕೀಲುಗಳ ಮೇಲಿನ ಒತ್ತಡ ಕಡಿಮೆ ಮಾಡುತ್ತದೆ ಹಾಗೂ ಸ್ನಾಯುಗಳನ್ನು ಬಲಪಡಿಸುತ್ತದೆ. ಬೆನ್ನು ನೋವು, ಕುತ್ತಿಗೆ ನೋವು ಹಾಗೂ ಗಾಯಗಳಿಂದ ಅವರು ಬೇಗನೆ ಚೇತರಿಸಿಕೊಳ್ಳುತ್ತಾರೆ. ಸಮತೋಲನ ಹೆಚ್ಚಾಗುತ್ತದೆ ಹಾಗೂ ದೇಹದ ಒಟ್ಟಾರೆ ಆರೋಗ್ಯವು ಸುಧಾರಿಸುತ್ತದೆ ಎಂದು ತಜ್ಞರು ಬಹಿರಂಗಪಡಿಸುತ್ತಾರೆ. (ಸಂಶೋಧನಾ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ).

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಪ್ರತಿಷ್ಠಿತ ಚಿನ್ನಾಭರಣ ಮಳಿಗೆಯ ಸಿಬ್ಬಂದಿಗಳನ್ನು ಬೆದರಿಸಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿದ ಮುಸುಕುಧಾರಿಗಳು

Next Post

ಸಂತ ಜೋಸೆಫ್ ವಾಜ್ ಪುಣ್ಯ ಕ್ಷೇತ್ರ, ಮುಡಿಪು ಇದರ ಬೆಳ್ಳಿ ಹಬ್ಬದ ಪ್ರಯುಕ್ತ ಕಾಲ್ನಡಿಗೆ ಜಾಥ “ನಮ್ಮ ನಡಿಗೆ ಮುಡಿಪು ಪುಣ್ಯ ಕ್ಷೇತ್ರದ ಕಡೆಗೆ”

Related Posts

ರಾಜ್ಯಾದ್ಯಂತ ತಂಬಾಕು, ಗುಟ್ಕಾ ಹಾಗೂ ಪಾನ್ ಮಸಾಲ ಒಂದು ವರ್ಷ ನಿಷೇಧಿಸಿ ರಾಜ್ಯ ಸರ್ಕಾರ ಆದೇಶ
ಆರೋಗ್ಯ

ರಾಜ್ಯಾದ್ಯಂತ ತಂಬಾಕು, ಗುಟ್ಕಾ ಹಾಗೂ ಪಾನ್ ಮಸಾಲ ಒಂದು ವರ್ಷ ನಿಷೇಧಿಸಿ ರಾಜ್ಯ ಸರ್ಕಾರ ಆದೇಶ

August 12, 2026
39
ಆಫ್ರಿಕಾದಲ್ಲಿ ಎಬೋಲಾ ವೈರಸ್ ಹರಡುತ್ತಿರುವ ಹಿನ್ನೆಲೆ: ಮಾರ್ಗಸೂಚಿ ಬಿಡುಗಡೆ, ಬೆಂಗಳೂರಿಗೆ ಬರುವವರಿಗೆ 21 ದಿನ ಕ್ವಾರಂಟೈನ್
ಆರೋಗ್ಯ

ಆಫ್ರಿಕಾದಲ್ಲಿ ಎಬೋಲಾ ವೈರಸ್ ಹರಡುತ್ತಿರುವ ಹಿನ್ನೆಲೆ: ಮಾರ್ಗಸೂಚಿ ಬಿಡುಗಡೆ, ಬೆಂಗಳೂರಿಗೆ ಬರುವವರಿಗೆ 21 ದಿನ ಕ್ವಾರಂಟೈನ್

May 23, 2026
54
Next Post
ಸಂತ ಜೋಸೆಫ್ ವಾಜ್ ಪುಣ್ಯ ಕ್ಷೇತ್ರ, ಮುಡಿಪು ಇದರ ಬೆಳ್ಳಿ ಹಬ್ಬದ ಪ್ರಯುಕ್ತ ಕಾಲ್ನಡಿಗೆ ಜಾಥ “ನಮ್ಮ ನಡಿಗೆ ಮುಡಿಪು ಪುಣ್ಯ ಕ್ಷೇತ್ರದ ಕಡೆಗೆ”

ಸಂತ ಜೋಸೆಫ್ ವಾಜ್ ಪುಣ್ಯ ಕ್ಷೇತ್ರ, ಮುಡಿಪು ಇದರ ಬೆಳ್ಳಿ ಹಬ್ಬದ ಪ್ರಯುಕ್ತ ಕಾಲ್ನಡಿಗೆ ಜಾಥ “ನಮ್ಮ ನಡಿಗೆ ಮುಡಿಪು ಪುಣ್ಯ ಕ್ಷೇತ್ರದ ಕಡೆಗೆ”

Discussion about this post

Recent News

ಮಂಗಳೂರು: ಮೆಸ್ಕಾಂನಲ್ಲಿ 390 ಪವರ್‌ಮೇನ್ ಗಳ ನೇಮಕ, ಇನ್ನೂ ಕೂಡಾ165 ಮಂದಿಯನ್ನು ನೇಮಕ ಮಾಡಲಾಗುವುದು: ಹರೀಶ್ ಕುಮಾರ್

ಮಂಗಳೂರು: ಮೆಸ್ಕಾಂನಲ್ಲಿ 390 ಪವರ್‌ಮೇನ್ ಗಳ ನೇಮಕ, ಇನ್ನೂ ಕೂಡಾ165 ಮಂದಿಯನ್ನು ನೇಮಕ ಮಾಡಲಾಗುವುದು: ಹರೀಶ್ ಕುಮಾರ್

August 30, 2026
25
ಜಿಲ್ಲಾ ಕಾರಾಗೃಹದಲ್ಲಿ ಪಿಎಂಐ ಮಂಗಳೂರು ಘಟಕದಿಂದ ರಕ್ಷಾಬಂಧನ ಆಚರಣೆ-ಬಂಧಿಗಳಲ್ಲಿ ಸಹೋದರತ್ವ, ಗೌರವ ಹಾಗೂ ಭರವಸೆಯ ಸಂದೇಶ ಸಾರಿದ ರಾಖಿ ಹಬ್ಬ

ಜಿಲ್ಲಾ ಕಾರಾಗೃಹದಲ್ಲಿ ಪಿಎಂಐ ಮಂಗಳೂರು ಘಟಕದಿಂದ ರಕ್ಷಾಬಂಧನ ಆಚರಣೆ-ಬಂಧಿಗಳಲ್ಲಿ ಸಹೋದರತ್ವ, ಗೌರವ ಹಾಗೂ ಭರವಸೆಯ ಸಂದೇಶ ಸಾರಿದ ರಾಖಿ ಹಬ್ಬ

August 29, 2026
77
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಮಂಗಳೂರು: ಮೆಸ್ಕಾಂನಲ್ಲಿ 390 ಪವರ್‌ಮೇನ್ ಗಳ ನೇಮಕ, ಇನ್ನೂ ಕೂಡಾ165 ಮಂದಿಯನ್ನು ನೇಮಕ ಮಾಡಲಾಗುವುದು: ಹರೀಶ್ ಕುಮಾರ್

ಮಂಗಳೂರು: ಮೆಸ್ಕಾಂನಲ್ಲಿ 390 ಪವರ್‌ಮೇನ್ ಗಳ ನೇಮಕ, ಇನ್ನೂ ಕೂಡಾ165 ಮಂದಿಯನ್ನು ನೇಮಕ ಮಾಡಲಾಗುವುದು: ಹರೀಶ್ ಕುಮಾರ್

August 30, 2026
ಜಿಲ್ಲಾ ಕಾರಾಗೃಹದಲ್ಲಿ ಪಿಎಂಐ ಮಂಗಳೂರು ಘಟಕದಿಂದ ರಕ್ಷಾಬಂಧನ ಆಚರಣೆ-ಬಂಧಿಗಳಲ್ಲಿ ಸಹೋದರತ್ವ, ಗೌರವ ಹಾಗೂ ಭರವಸೆಯ ಸಂದೇಶ ಸಾರಿದ ರಾಖಿ ಹಬ್ಬ

ಜಿಲ್ಲಾ ಕಾರಾಗೃಹದಲ್ಲಿ ಪಿಎಂಐ ಮಂಗಳೂರು ಘಟಕದಿಂದ ರಕ್ಷಾಬಂಧನ ಆಚರಣೆ-ಬಂಧಿಗಳಲ್ಲಿ ಸಹೋದರತ್ವ, ಗೌರವ ಹಾಗೂ ಭರವಸೆಯ ಸಂದೇಶ ಸಾರಿದ ರಾಖಿ ಹಬ್ಬ

August 29, 2026
ಕ್ರಿಕೆಟ್ ಆಸ್ಟ್ರೇಲಿಯಾ ಅನಯಾ ಬಂಗಾರ್​ಗೆ ಆಡುವ ಅವಕಾಶ; ಮಹಿಳಾ ಆಟಗಾರ್ತಿಯರ ವಿರೋಧ

ಕ್ರಿಕೆಟ್ ಆಸ್ಟ್ರೇಲಿಯಾ ಅನಯಾ ಬಂಗಾರ್​ಗೆ ಆಡುವ ಅವಕಾಶ; ಮಹಿಳಾ ಆಟಗಾರ್ತಿಯರ ವಿರೋಧ

August 29, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d