ಮಂಗಳೂರು: ಬಂಟರ ಯಾನೆ ನಾಡವರ ಮಾತೃ ಸಂಘದ ವತಿಯಿಂದ ಎಪ್ರಿಲ್ 12ರಂದು ಬಹಿರಂಗ ಅಧಿವೇಶನ ಹಾಗೂ ಪ್ರಶಸ್ತಿ ಪ್ರದಾನ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಎಪ್ರಿಲ್ 12 ರವಿವಾರ ಬೆಳಗ್ಗೆ 9 ಗಂಟೆಗೆ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಅಧಿವೇಶನ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಅಜಿತ್ ಕುಮಾರ್ ಮಾಲಾಡಿ ಸುದ್ದಿಗೋಷ್ಠಿ ಯಲ್ಲಿಂದು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ವಿಶ್ವಜಿತ್ ಶೆಟ್ಟಿ ಸವಣೂರು ಹಾಗೂ ರಾಜೇಶ್ ರೈ ಕಲ್ಲಂಗಳ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.ಕೆ. ಮೋಹನದೇವ್ ಆತ್ಮ,ಡಾ. ಎಂ.ಕೆ. ಶೈಲಜಾ ಆಳ್ವ ಅವರ ಉಪಸ್ಥಿತಿಯಲ್ಲಿ, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಕೊಡಿಯಾಲ್ ಗುತ್ತು ಅಧ್ಯಕ್ಷತೆ ವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಡಾ. ಕೆ. ನಾಗಪ್ಪ ಆಳ್ವ ಮತ್ತು ಕಲ್ಯಾಣಿ ಆಳ್ವ ಅವರ ಸ್ಮರಣಾ ರ್ಥವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರಿಗೆ ಪ್ರಶಸ್ತಿ ಪ್ರದಾನ ಮತ್ತು ಸನ್ಮಾನ ನಡೆಯಲಿದೆ.
ಪ್ರಶಸ್ತಿ ಪುರಸ್ಕೃತ ಸ್ವೀಕರಿಸುವವರು: ವೈದ್ಯಕೀಯ ಕ್ಷೇತ್ರ: ಡಾ. ಸತೀಶ್ ಭಂಡಾರಿ, ಶಿಕ್ಷಣ ಕ್ಷೇತ್ರ: ಪ್ರೊ. ವಸಂತ್ ಶೆಟ್ಟಿ ಮುಳ್ಳಾಡ್, ಸಾಹಿತ್ಯ: ಕೆ. ಉಷಾ ಪಿ. ರೈ, ಸಂಗೀತ: ಗುರುಕಿರಣ್ ಶೆಟ್ಟಿ, ನೃತ್ಯ: ನಯನ ವಿ. ರೈ ಕುಧ್ಯಾಡಿ, ದೇಶ ಸೇವೆ: ಲೆಫ್ಟಿನೆಂಟ್ ಕರ್ನಲ್ ಅಜಿತ್ ಕುಮಾರ್ ಶೆಟ್ಟಿ,ಕ್ರೀಡೆ: ಪ್ರಶಾಂತ್ ರೈ (ಕಬಡ್ಡಿ), ಚಿಂತನ್ ಎಸ್. ಶೆಟ್ಟಿ (ಈಜು).
ಸನ್ಮಾನಿಸಲ್ಪಡುವವರು: ಕೈಗಾರಿಕೆ: ವಿವೇಕ್ ಶೆಟ್ಟಿ ಬೊಳ್ಯಗುತ್ತುಸಾಂಸ್ಕೃತಿಕ ಕ್ಷೇತ್ರ: ಪ್ರಕಾಶ್ ಭಂಡಾರಿಧಾರ್ಮಿಕ ಕ್ಷೇತ್ರ: ಕೆ.ಕೆ. ಶೆಟ್ಟಿ ಕುತ್ತಿಕಾರ್ಕೈಗಾರಿಕಾ ಕ್ಷೇತ್ರ: ಕರುಣಾಕರ ಎಂ. ಶೆಟ್ಟಿಸಹಕಾರಿ ಕ್ಷೇತ್ರ: ಡಾ. ದೇವಿಪ್ರಸಾದ್ ಶೆಟ್ಟಿ,ಅತಿಥ್ಯ ಉದ್ಯಮ: ವೇಣುಗೋಪಾಲ್ ಎಲ್. ಶೆಟ್ಟಿ,ನಿರ್ಮಾಣ ಕ್ಷೇತ್ರ: ಮುಗೋಡಿ ಸುಧಾಕರ ಶೆಟ್ಟಿ, ಸಂಶೋಧನೆ: ಡಾ. ನವೀನ್‌ಚಂದ್ರ ಶೆಟ್ಟಿ, ದೈವಾರಾಧನೆ: ಡಾ. ಅಶೋಕ್ ಆಳ್ವ, ಸಮಾಜ ಸೇವೆ: ಕೆಂಚನೂರು ಸೋಮಶೇಖರ ಶೆಟ್ಟಿ,ಶಿಕ್ಷಣ ಕ್ಷೇತ್ರ: ದಿನೇಶ್ ಆಳ್ವ,ಕೃಷಿ ಕ್ಷೇತ್ರ: ಸದಾಶಿವ ಶೆಟ್ಟಿ ,ಕೃಷಿ ಅಭಿವೃದ್ಧಿ: ಡಾ. ಸರಿತಾ ಹೆಗ್ಡೆ,ಉತ್ಪಾದನಾ ಕ್ಷೇತ್ರ: ರವೀಂದ್ರನಾಥ ಮಾರ್ಲ,ವಿಶೇಷ ಸನ್ಮಾನ :ಕೊಡಿಯಾಲ್‌ಗುತ್ತು ಭಾಸ್ಕರ ರೈ ಸ್ಮರಣಾ ರ್ಥವಾಗಿ ಕಲಾ ಕ್ಷೇತ್ರದಲ್ಲಿ ಸಾಧನೆಗೈದ ಪಿ. ಕಿಶನ್ ಹೆಗ್ಡೆ (ಯಕ್ಷಗಾನ ಸಂಚಾಲಕರು) ಅವರಿಗೆ ಸನ್ಮಾನ ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಹೇಮನಾಥ ಶೆಟ್ಟಿ ಕಾವು, ಕೆ.ಎಂ. ಶೆಟ್ಟಿ, ಕೋಶಾಧಿಕಾರಿ ಸಿ.ಎ .ರಾಮ್ ಮೋಹನ್ ರೈ, ಪ್ರಧಾನ ಕಾರ್ಯದರ್ಶಿ ಎಸ್ .ಸಂಜೀವ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.







Discussion about this post