• About us
  • Contact us
  • Disclaimer
Sunday, October 25, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾ ಸಮಾವೇಶ ಮುಹೂರ್ತ ಮತ್ತು ಲಾಂಛನ ಬಿಡುಗಡೆ

Coastal Times by Coastal Times
April 9, 2026
in ಕರಾವಳಿ
ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾ ಸಮಾವೇಶ ಮುಹೂರ್ತ ಮತ್ತು ಲಾಂಛನ ಬಿಡುಗಡೆ
27
VIEWS
WhatsappTelegramShare on FacebookShare on Twitter

ಮಂಗಳೂರು: ತನ್ನ ಅಸ್ತಿತ್ವದ ನಲ್ವತ್ತನೇ ವರ್ಷಾಚರಣೆ (1986 – 2026) ಸಂಭ್ರಮದಲ್ಲಿರುವ ಕೊಂಕಣಿಯ ಪ್ರಮುಖ ಸಾಂಸ್ಕೃತಿಕ ಸಂಘಟನೆ ಮಾಂಡ್ ಸೊಭಾಣ್ ತನ್ನ ಧ್ಯೇಯೋದ್ದೇಶಗಳಿಗೆ ಪೂರಕವಾಗಿ ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾ ಸಮಾವೇಶವನ್ನು ಆಯೋಜಿಸುತ್ತಿದೆ. ನವೆಂಬರ್ 03 –15 ರವರೆಗೆ ಮಂಗಳೂರಿನಲ್ಲಿ ನಡೆಯುವ ಈ ಬೃಹತ್ ಕಾರ್ಯಕ್ರಮದ ಮುಹೂರ್ತ ಮತ್ತು ಲಾಂಛನ ಬಿಡುಗಡೆ ಕಾರ್ಯಕ್ರಮವು ಶುಕ್ರವಾರ 10.04.2026 ರಂದು ಶಕ್ತಿನಗರದ ಕಲಾಂಗಣದಲ್ಲಿ ಸಂಜೆ 4.00 ಗಂಟೆಗೆ ನೆರವೇರಲಿದೆ.

ಕರ್ನಾಟಕ ಸರಕಾರದ ವಿಧಾನ ಸಭೆಯ ಸಭಾಧ್ಯಕ್ಷರಾದ ಶ್ರೀ ಯು.ಟಿ. ಖಾದರ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಮಂತ್ರಿ ಶ್ರೀ ದಿನೇಶ್ ಗುಂಡೂರಾವ್ ಲಾಂಛನ ಬಿಡುಗಡೆಗೊಳಿಸುವರು. ಗೌರವ ಅತಿಥಿಗಳಾಗಿ ಮಂಗಳೂರು ದಕ್ಷಿಣ ಶಾಸಕ ಶ್ರೀ ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯ ಶ್ರೀ ಐವನ್ ಡಿಸೋಜ ಹಾಗೂ ಗೋವಾದ ಕಲಾವಿದ ಶ್ರೀ ಮೈಕಲ್ ಗ್ರೇಶಿಯಸ್ ಗೌರವ ಅತಿಥಿಗಳಾಗಿ ಉಪಸ್ಥಿತರಿರುವರು.

ಈ ಸಂಗೀತ ಮಹಾ ಸಮಾವೇಶದಲ್ಲಿ 12 ದಿನ, 12 ಗಂಟೆ, 12 ನಿಮಿಷಗಳ, ಸಮೂಹ ಗಾಯನದ ಅತೀ ದೀರ್ಘ ಸಮಯದ ಗಿನ್ನೆಸ್ ದಾಖಲೆ ರಚಿಸಲು ಪ್ರಯತ್ನಿಸಲಾಗುವುದು. ಈ ಪ್ರಯತ್ನದಲ್ಲಿ ಕರ್ನಾಟಕ, ಗೋವಾ, ಮಹಾರಾಷ್ಟ್ರ, ಕೇರಳ ಮತ್ತಿತರ ರಾಜ್ಯಗಳಿಂದಲೂ ಹಾಗೂ ವಿದೇಶಗಳಿಂದಲೂ 6000 ಕ್ಕೂ ಮಿಕ್ಕಿ ಹಾಡುಗಾರರು ಭಾಗವಹಿಸಲಿದ್ದಾರೆ. ಈ ದಾಖಲೆಯಲ್ಲಿ ಕ್ರೈಸ್ತ, ಜಿಎಸ್‌ಬಿ, ದಾಲ್ದಿ, ಕುಡ್ಮಿ, ಖಾರ್ವಿ, ಸಿದ್ದಿ, ಸಿರಿಯನ್ ಆರ್ಥೊಡಾಕ್ಸ್ ಮತ್ತಿತರ ಸಮುದಾಯಗಳ ಗಾಯಕರು ಸುಮಾರು 5000 ಕೊಂಕಣಿ ಹಾಡುಗಳನ್ನು ಹಾಡಲಿದ್ದಾರೆ. ಆ ದಿನಗಳಲ್ಲಿ ಸಂಗೀತಕ್ಕೆ ಸಂಬಂಧಪಟ್ಟ ವಿವಿಧ ಸಂವಾದ ಗೋಷ್ಟಿಗಳನ್ನು ಆಯೋಜಿಸಲಾಗುವುದು. ಸಂಗೀತದಲ್ಲಿ ಮಹತ್ತರ ಸಾಧನೆಗೈದ ಹಿರಿಯರನ್ನು ಸಮ್ಮಾನಿಸಲಾಗುವುದು, ಕೀರ್ತಿ ಮಂದಿರ ಹಾಗೂ ಸಂಗೀತ ಮತ್ತು ಸಂಸ್ಕೃತಿಗೆ ಸಂಬಂಧಪಟ್ಟ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗುವುದು. ಕೊಂಕಣಿ ಸಂಗೀತಕ್ಕೆ ಮಹೋನ್ನತ ಕೊಡುಗೆ ನೀಡಿದ ಎರಿಕ್ ಒಝೇರಿಯೊ ಅವರಿಗೆ ಅರ್ಪಣೆಯಾಗಿ ಈ ಕಾರ್ಯಕ್ರಮವನ್ನು ನಡೆಯಲಿದೆ.

ತಾವು, ಮಾಧ್ಯಮ ಮಿತ್ರರು ಈ ಮುಹೂರ್ತ ಮತ್ತು ಲಾಂಛನ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿ, ಯುಕ್ತ ಪ್ರಚಾರ ನೀಡಿ ನಮ್ಮನ್ನು ಪ್ರೋತ್ಸಾಹಿಸಬೇಕಾಗಿ ಕೋರಿಕೊಳ್ಳುತ್ತೇವೆ.

ಪತ್ರಿಕಾ ಗೋಷ್ಟಿಯಲ್ಲಿ : • ಲುವಿ ಜೆ ಪಿಂಟೊ (ಅಧ್ಯಕ್ಷರು, ಮಾಂಡ್ ಸೊಭಾಣ್),• ರೊಯ್ ಕ್ಯಾಸ್ತೆಲಿನೊ (ಪಿರ್ಜೆಂತ್, ಕಲಾಂಗಣ್),• ಜೊಯೆಲ್ ಪಿರೇರಾ (ಸಂಗೀತ ನಿರ್ದೇಶಕರು, ಪ್ರ.ವಿ.ಕೊಂ.ಸಂ.ಮಾ.ಸ.),• ಸ್ಟ್ಯಾನಿ ಆಲ್ವಾರಿಸ್ (ಸಂಘಟಕರು, ಮಾಂಡ್ ಸೊಭಾಣ್),• ನವೀನ್ ಲೋಬೊ (ಉಪಾಧ್ಯಕ್ಷರು, ಮಾಂಡ್ ಸೊಭಾಣ್),• ರೊನಾಲ್ಡ್ ಕ್ರಾಸ್ತಾ (ಕಾರ್ಯದರ್ಶಿ, ಮಾಂಡ್ ಸೊಭಾಣ್)

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಉಳ್ಳಾಲ ಆರಿಫ್ ಕೊಲೆ ಪ್ರಕರಣ: 7 ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು

Next Post

ಆಳ್ವಾಸ್ ಪಿಯು ಕಾಲೇಜಿನ ‘ದಿಶಾ’ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಫಸ್ಟ್​​ 600ಕ್ಕೆ 600! ಅಂಕ

Related Posts

19 ಗಂಟೆ 29 ನಿಮಿಷಗಳಲ್ಲಿ 2,000 ಮೆಹಂದಿ ಕೋನ್‌ಗಳನ್ನು ತಯಾರಿಸಿ ‘ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್’ ದಾಖಲೆ ಬರೆದ ಮಂಗಳೂರಿನ ಶಿವಾನಿ ಪ್ರಸಾದ್
ಕರಾವಳಿ

19 ಗಂಟೆ 29 ನಿಮಿಷಗಳಲ್ಲಿ 2,000 ಮೆಹಂದಿ ಕೋನ್‌ಗಳನ್ನು ತಯಾರಿಸಿ ‘ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್’ ದಾಖಲೆ ಬರೆದ ಮಂಗಳೂರಿನ ಶಿವಾನಿ ಪ್ರಸಾದ್

October 23, 2026
22
ನ, 20ರಿಂದ 26ರವರೆಗೆ ಮಂಗಳೂರಿನ ನೆಹರು ಮೈದಾನದಲ್ಲಿ ಬೀ-ಹೂಮನ್ ವತಿಯಿಂದ “ಹೂಮ್ಯಾನಿಟಿ ಕಪ್ 2026” ಕ್ರಿಕೆಟ್ ಪಂದ್ಯಾಟ
ಕರಾವಳಿ

ನ, 20ರಿಂದ 26ರವರೆಗೆ ಮಂಗಳೂರಿನ ನೆಹರು ಮೈದಾನದಲ್ಲಿ ಬೀ-ಹೂಮನ್ ವತಿಯಿಂದ “ಹೂಮ್ಯಾನಿಟಿ ಕಪ್ 2026” ಕ್ರಿಕೆಟ್ ಪಂದ್ಯಾಟ

October 23, 2026
34
Next Post
ಆಳ್ವಾಸ್ ಪಿಯು ಕಾಲೇಜಿನ ‘ದಿಶಾ’ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಫಸ್ಟ್​​ 600ಕ್ಕೆ 600! ಅಂಕ

ಆಳ್ವಾಸ್ ಪಿಯು ಕಾಲೇಜಿನ 'ದಿಶಾ' ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಫಸ್ಟ್​​ 600ಕ್ಕೆ 600! ಅಂಕ

Discussion about this post

Recent News

ಸರ್ಕಾರಿ ವಸತಿಗೃಹದಲ್ಲಿ ಮಹಿಳೆ ಶಂಕಾಸ್ಪದ ಸಾವು: ಬಂಟ್ವಾಳ ಪೊಲೀಸರಿಂದ ಆರೋಪಿ ಬಂಧನ

ಸರ್ಕಾರಿ ವಸತಿಗೃಹದಲ್ಲಿ ಮಹಿಳೆ ಶಂಕಾಸ್ಪದ ಸಾವು: ಬಂಟ್ವಾಳ ಪೊಲೀಸರಿಂದ ಆರೋಪಿ ಬಂಧನ

October 24, 2026
31
19 ಗಂಟೆ 29 ನಿಮಿಷಗಳಲ್ಲಿ 2,000 ಮೆಹಂದಿ ಕೋನ್‌ಗಳನ್ನು ತಯಾರಿಸಿ ‘ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್’ ದಾಖಲೆ ಬರೆದ ಮಂಗಳೂರಿನ ಶಿವಾನಿ ಪ್ರಸಾದ್

19 ಗಂಟೆ 29 ನಿಮಿಷಗಳಲ್ಲಿ 2,000 ಮೆಹಂದಿ ಕೋನ್‌ಗಳನ್ನು ತಯಾರಿಸಿ ‘ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್’ ದಾಖಲೆ ಬರೆದ ಮಂಗಳೂರಿನ ಶಿವಾನಿ ಪ್ರಸಾದ್

October 23, 2026
22
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಸರ್ಕಾರಿ ವಸತಿಗೃಹದಲ್ಲಿ ಮಹಿಳೆ ಶಂಕಾಸ್ಪದ ಸಾವು: ಬಂಟ್ವಾಳ ಪೊಲೀಸರಿಂದ ಆರೋಪಿ ಬಂಧನ

ಸರ್ಕಾರಿ ವಸತಿಗೃಹದಲ್ಲಿ ಮಹಿಳೆ ಶಂಕಾಸ್ಪದ ಸಾವು: ಬಂಟ್ವಾಳ ಪೊಲೀಸರಿಂದ ಆರೋಪಿ ಬಂಧನ

October 24, 2026
19 ಗಂಟೆ 29 ನಿಮಿಷಗಳಲ್ಲಿ 2,000 ಮೆಹಂದಿ ಕೋನ್‌ಗಳನ್ನು ತಯಾರಿಸಿ ‘ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್’ ದಾಖಲೆ ಬರೆದ ಮಂಗಳೂರಿನ ಶಿವಾನಿ ಪ್ರಸಾದ್

19 ಗಂಟೆ 29 ನಿಮಿಷಗಳಲ್ಲಿ 2,000 ಮೆಹಂದಿ ಕೋನ್‌ಗಳನ್ನು ತಯಾರಿಸಿ ‘ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್’ ದಾಖಲೆ ಬರೆದ ಮಂಗಳೂರಿನ ಶಿವಾನಿ ಪ್ರಸಾದ್

October 23, 2026
ಮೂಡುಬಿದಿರೆ: ಬಟ್ಟೆ ಒಣಗಿಸುವಾಗ ಯುವಕನಿಗೆ ಹೈಟೆನ್ಶನ್ ವಿದ್ಯುತ್‌ ತಂತಿ ಸ್ಪರ್ಶ; ರಕ್ಷಣೆಗೆ ಧಾವಿಸಿದ ತಾಯಿ ಸೇರಿ ಇಬ್ಬರೂ ದುರ್ಮರಣ

ಮೂಡುಬಿದಿರೆ: ಬಟ್ಟೆ ಒಣಗಿಸುವಾಗ ಯುವಕನಿಗೆ ಹೈಟೆನ್ಶನ್ ವಿದ್ಯುತ್‌ ತಂತಿ ಸ್ಪರ್ಶ; ರಕ್ಷಣೆಗೆ ಧಾವಿಸಿದ ತಾಯಿ ಸೇರಿ ಇಬ್ಬರೂ ದುರ್ಮರಣ

October 23, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d