ಮಂಗಳೂರು: ಟೀಮ್ ಬೀ-ಹ್ಯೂಮನ್ ವತಿಯಿಂದ ಹ್ಯೂಮ್ಯಾನಿಟಿ ಕಪ್ 2026 ಕ್ರೀಡೆಯ ಮೂಲಕ ಮಾನವೀಯತೆ – ಸೇವೆಯೊಂದಿಗೆ ಬದುಕಿಗೆ ಭರವಸೆ ನೀಡುವ ಧ್ಯೇಯ ದೊಂದಿದೆ. ಈ ಮಾನವೀಯ ಕಾರ್ಯಕ್ಕೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಹಾಗೂ ಅಗತ್ಯ ನಿಧಿ ಸಂಗ್ರಹಿಸುವ ಉದ್ದೇಶದಿಂದ ಹ್ಯೂಮ್ಯಾನಿಟಿ ಕಪ್ 2026” ಕ್ರಿಕೆಟ್ ಪಂದ್ಯಾವಳಿ ಹಮ್ಮಿಕೊಂಡಿದೆ ಎಂದು ಬಿ ಹ್ಯೂಮನ್ ಸಂಘಟನೆಯ ಸಂಸ್ಥಾಪಕ ಆಸಿಫ್ ಸುದ್ದಿ ಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಮಾನವೀಯ ಸೇವೆಯ ಮೂಲಕ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಟೀಮ್ ಬೀ-ಕ್ಯೂಮನ್ ಸಂಸ್ಥೆಯು ಶಿಕ್ಷಣ, ಆರೋಗ್ಯ ಮತ್ತು ಸಾಮಾಜಿಕ ಸೇವಾ ಕ್ಷೇತ್ರಗಳಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಿದೆ. ಆರ್ಥಿಕವಾಗಿ ಹಿಂದುಳಿದ ಹಾಗೂ ಸಂಕಷ್ಟದಲ್ಲಿರುವ ಜನರಿಗೆ ನೆರವು ನೀಡುವುದು ಸಂಸ್ಥೆಯ ಪ್ರಮುಖ ಧೈಯವಾಗಿದೆ. ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ನಿರಂತರ ಡಯಾಲಿಸಿಸ್ ಚಿಕಿತ್ಸೆ ಅತ್ಯಗತ್ಯವಾಗಿದೆ. ಆದರೆ ಚಿಕಿತ್ಸೆಯ ವೆಚ್ಚವನ್ನು ಭರಿಸಲು ಸಾಧ್ಯವಾಗದ ಅನೇಕ ಕುಟುಂಬಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ಇಂತಹ ರೋಗಿಗಳಿಗೆ ನೆರವಾಗುವ ಉದ್ದೇಶದಿಂದ ಬೀ ಹೂಮನ್ ಸಂಸ್ಥೆಯು ಡಯಾಲಿಸಿಸ್ ಚಿಕಿತ್ಸೆಗೆ ಆರ್ಥಿಕ ಸಹಾಯ ಒದಗಿಸುತ್ತಿದೆ ಆಸಿಫ್ ತಿಳಿಸಿದ್ದಾರೆ.
ಪ್ರಸ್ತುತ ಸಂಸ್ಥೆಯು 85 ಡಯಾಲಿಸಿಸ್ ರೋಗಿಗಳಿಗೆ ನೆರವು ನೀಡುತ್ತಿದ್ದು, ಪ್ರತಿ ತಿಂಗಳು ಸುಮಾರು 1,020 ಡಯಾಲಿಸಿಸ್ ಸೆಷನ್ಗಳಿಗೆ Rs.10.20 ಲಕ್ಷ ವೆಚ್ಚ ಮಾಡುತ್ತಿದೆ. ಈ ಸೇವೆಯನ್ನು ಮತ್ತಷ್ಟು ವಿಸ್ತರಿಸಿ ಹೆಚ್ಚುವರಿಯಾಗಿ 55 ರೋಗಿಗಳಿಗೆ ನೆರವು ನೀಡುವ ಗುರಿಯನ್ನು ಸಂಸ್ಥೆ ಹೊಂದಿದೆ. ಇದಕ್ಕಾಗಿ ಪ್ರತಿ ತಿಂಗಳು ಅಂದಾಜು Rs.6.60 ಲಕ್ಷ ಹಾಗೂ ವರ್ಷಕ್ಕೆ Rs,79,20 ಲಕ್ಷ ಅಗತ್ಯವಿದೆ. ಈ ಗುರಿ ಸಾಧನೆಯಾದಲ್ಲಿ ಒಟ್ಟು 140 ರೋಗಿಗಳಿಗೆ ನೆರವು ನೀಡಲು ಸಾಧ್ಯವಾಗಲಿದೆ.
ಈ ಮಾನವೀಯ ಕಾರ್ಯಕ್ಕೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಹಾಗೂ ಅಗತ್ಯ ನಿಧಿ ಸಂಗ್ರಹಿಸುವ ಉದ್ದೇಶದಿಂದ ಹೂಮ್ಯಾನಿಟಿ ಕಪ್ 2026 ಕ್ರಿಕೆಟ್ ಪಂದ್ಯಾವಳಿಯನ್ನು ನವೆಂಬರ್ 20ರಿಂದ 26ರವರೆಗೆ ಮಂಗಳೂರಿನ ನೆಹರು ಮೈದಾನದಲ್ಲಿ ಆಯೋಜಿಸಲಾಗಿದೆ.
ಈ ಪಂದ್ಯಾವಳಿಯು ಕೇವಲ ಕ್ರೀಡಾಕೂಟವಾಗಿರದೆ, ಮಾನವೀಯತೆ, ಒಗ್ಗಟ್ಟು, ಸಹಕಾರ ಮತ್ತು ಸಾಮಾಜಿಕ ಜವಾಬ್ದಾರಿಯ ಸಂದೇಶ ಸಾರುವ ಒಂದು ವಿಶಿಷ್ಟ ಪ್ರಯತ್ನವಾಗಿದೆ. ಕ್ರಿಕೆಟ್ ಮೂಲಕ ಜನರನ್ನು ಒಂದೆಡೆ ಸೇರಿಸಿ, ಸಂಕಷ್ಟದಲ್ಲಿರುವ ಡಯಾಲಿಸಿಸ್ ರೋಗಿಗಳಿಗೆ ನೆರವು ಒದಗಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಪಂದ್ಯಾವಳಿಯ ಮೂಲಕ ಸಂಗ್ರಹವಾಗುವ ದೇಣಿಗೆ ಮತ್ತು ಪ್ರಾಯೋಜಕತ್ವದ ಮೊತ್ತವನ್ನು ಹೆಚ್ಚುವರಿ 55 ರೋಗಿಗಳಿಗೆ ಆರ್ಥಿಕ ನೆರವು ನೀಡಲು ಬಳಸುವ ಗುರಿಯನ್ನು ಸಂಸ್ಥೆ ಹೊಂದಿದೆ.
ಧರ್ಮ, ಜಾತಿ, ಭಾಷೆ ಮತ್ತು ಸಮುದಾಯದ ಭಿನ್ನತೆಗಳನ್ನು ಮೀರಿ ಮಾನವೀಯತೆಯ ಆಧಾರದ ಮೇಲೆ ಎಲ್ಲರೂ ಒಂದಾಗಬೇಕು ಎಂಬ ಸಂದೇಶವನ್ನು ಈ ಪಂದ್ಯಾವಳಿ ಸಾರಲಿದೆ. ಕ್ರೀಡೆಯ ಮೂಲಕ ಮಾನವೀಯ ಸೇವೆಗೆ ಪ್ರೇರಣೆ ನೀಡುವ ಈ ಕಾರ್ಯಕ್ಕೆ ಸಾರ್ವಜನಿಕರು, ದಾನಿಗಳು, ಉದ್ಯಮಿಗಳು, ವಿವಿಧ ಸಂಘ-ಸಂಸ್ಥೆಗಳು ಹಾಗೂ ಕ್ರೀಡಾಭಿಮಾನಿಗಳು ಉದಾರವಾಗಿ ಸಹಕರಿಸುವಂತೆ ಟೀಮ್ ಬೀ ಕ್ಯೂಮನ್ ಮನವಿ ಮಾಡಿದೆ.
ಅಕ್ಟೋಬರ್ 26ರಂದು ಪಾಂಡೇಶ್ವರದ ಫಾರಂ ಫಿಝಾ ನೆಕ್ಸಸ್ ಮಾಲ್ ನಲ್ಲಿ ಸಂಜೆ 6.30ಗಂಟೆಗೆ ಹ್ಯುಮಾನಿಟಿ ಕಫ್ 2026 ಅನಾವರಣ ಕಾರ್ಯಕ್ರಮ ನಡೆಯಲಿದೆ ಎಂದು ಆಸಿಫ್ ತಿಳಿಸಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ಬಿ ಹ್ಯೂಮನ್ ಸಂಘಟನೆಯ ಪದಾಧಿಕಾರಿಗಳಾದ ಸಿರಾಜ್ ಎರ್ಮಾಳ್, ಇಮ್ರಾನ್, ಇಮ್ತಿಯಾಝ್, ಅಬ್ಬಾಸ್ ಮೊದಲಾದವರು ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.







Discussion about this post