ಮಂಗಳೂರು: ಇತ್ತೀಚೆಗೆ ಒಂದು ಭೀಕರ ಅಪಘಾತ ನಡೆದಿತ್ತು. ಪಿಕಪ್ ವಾಹನವೊಂದು ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ದಾರುಣವಾಗಿ ಮೃತಪಟ್ಟಿದ್ದರು. ಆದರೆ ಇದು ಅಪಘಾತವಲ್ಲ, ಕೊಲೆ ಎನ್ನುವುದು ಬಯಲಾಗಿದೆ. ಕೊಲೆ ಮಾಡಿರುವ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಉದ್ದೇಶ ಪೂರ್ವಕವಾಗಿ ಡಿಕ್ಕಿ ಹೊಡೆದಿರುವುದಾಗಿ ಒಪ್ಪಿಕೊಂಡಿದ್ದಾನೆ.
ಉಳ್ಳಾಲ ತಾಲೂಕಿನ ಕಿನ್ಯಾ ಗ್ರಾಮದ ಉಕ್ಕುಡ ನಿವಾಸಿ ಇಸ್ಮಾಯಿಲ್ ಅವರ ಮಗ ಮೊಹಮ್ಮದ್ ಝುನೈದ್ (23) ಹಾಗೂ ಆತನ ನೆರೆಮನೆಯ ಸ್ನೇಹಿತ ಮೊಹಮ್ಮದ್ ಅಫ್ರಾಝ್ (23) ಕೊಲೆಯಾದ ಯುವಕರು.
ಪೊಲೀಸರ ಬಳಿ ತಪ್ಪೊಪ್ಪಿಕೊಂಡ ಆರೋಪಿ : ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಕುರ್ನಾಡು ಎಂಬಲ್ಲಿ ಮೊನ್ನೆ ಸಂಜೆ ಪಿಕಪ್ ವಾಹವ ಒಂದು ಸ್ಕೂಟರ್ಗೆ ಡಿಕ್ಕಿ ಹೊಡೆದು ಇಬ್ಬರನ್ನು ಕೊಲ್ಲಲಾಗಿತ್ತು. ಕಿನ್ಯ ಅರೆಬಿನಗರ ನಿವಾಸಿ ಮಹಮ್ಮದ್ ಅಫ್ರಾಜ್ (23) ಮತ್ತು ಕಿನ್ಯ ಉಕ್ಕುಡ ನಿವಾಸಿ ಜುನೈದ್ (23) ದಾರುಣ ಸಾವನ್ನಪ್ಪಿದ್ದರು. ಕೊಲೆ ಪ್ರಕರಣ ದಾಖಲಿಸಿಕೊಂಡ ಕೊಣಾಜೆ ಪೊಲೀಸರು ಇಂದು ಆರೋಪಿ ಹಫೀಜ್ನನ್ನು ಬಂಧಿಸಿದ್ದಾರೆ. ಆರೋಪಿ ಉದ್ದೇಶ ಪೂರ್ವಕವಾಗಿ ಡಿಕ್ಕಿ ಹೊಡೆದಿದ್ದಾಗಿ ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾನೆ.
ಬದ್ರುದ್ಧೀನ್ ಎಂಬಾತನ ಮೊಬೈಲ್ ಅನ್ನು ಜುನೈದ್ ಮತ್ತು ಅಫ್ರಾಜ್ ತೆಗೆದುಕೊಂಡಿರುತ್ತಾರೆ. ಈ ಮೊಬೈಲ್ನ್ನು ಹಫೀಜ್ ಕೇಳಿರುತ್ತಾನೆ. ಈ ವಿಚಾರವಾಗಿ ಮಾತನಾಡಲು ರಂಜಡ್ಕ ಕ್ರಾಸ್ನಲ್ಲಿರುವ ಫೀಲ್ಡ್ಗೆ ಇಬ್ಬರು ಸ್ಕೂಟರ್ನಲ್ಲಿ ಬಂದಿದ್ದಾರೆ. ಮೂವರು ಮಾತನಾಡಿರುತ್ತಾನೆ. ಈ ವೇಳೆ ಮಾತಿಗೆ ಮಾತು ಬೆಳೆದು ಪರಸ್ಪರ ಹೊಡೆದಾಡಿಕೊಂಡಿದ್ದಾರೆ.

ಪಿಕಪ್ ವಾಹನದಿಂದ ಡಿಕ್ಕಿ : ಇನ್ನು ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ನೀಡಿರುವ ಮಾಹಿತಿ ಪ್ರಕಾರ, ಜುನೈದ್ ಮತ್ತು ಅಫ್ರಾಜ್, ಹಫೀಜ್ಗೆ ಹೆಲ್ಮೆಟ್ಯಿಂದ ಹೊಡೆಯುತ್ತಾರೆ. ಬಳಿಕ ಜುನೈದ್ ಮತ್ತು ಅಫ್ರಾಜ್ ಅಲ್ಲಿಂದ ಸ್ಕೂಟರ್ನಲ್ಲಿ ಪರಾರಿ ಆಗುತ್ತಾರೆ. ಫೀಲ್ಡ್ ಸಮೀಪದಲ್ಲೇ ಇದ್ದ ಮನೆಗೆ ಓಡಿ ಹೋದ ಹಫೀಜ್ ತನ್ನ ಪಿಕಪ್ ವಾಹನದಲ್ಲಿ ಸ್ಕೂಟರ್ನ್ನು ಹಿಂಬಾಲಿಸಿಕೊಂಡು ಹೋಗಿ ಡಿಕ್ಕಿ ಹೊಡೆಯುತ್ತಾನೆ. ಸ್ಥಳದಲ್ಲೇ ಜುನೈದ್ ಮತ್ತು ಅಫ್ರಾಜ್ ಸಾವನ್ನಪ್ಪುತ್ತಾರೆ. ಅಲ್ಲಿಂದ ಹಫೀಜ್ ತನ್ನ ಪಿಕಪ್ ವಾಹನ ಬಿಟ್ಟು ಅಲ್ಲಿಂದ ಪರಾರಿಯಾಗುತ್ತಾನೆ.
ಇನ್ನು ಮೊಬೈಲ್ನಲ್ಲಿ ಇರುವ ರಹಸ್ಯದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹಫೀಜ್ಗೆ ಗಾಂಜಾ ನಂಟಿತ್ತು ಎನ್ನುವ ಮಾಹಿತಿ ಕೂಡ ಲಭ್ಯವಾಗಿದೆ. ಆತ ಗಾಂಜಾ ವ್ಯವಹಾರ ಮಾಡಿಕೊಂಡಿದ್ದ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಹಫೀಜ್ನನ್ನು ಡ್ರಗ್ಸ್ ಟೆಸ್ಟ್ಗೆ ಒಳಪಡಿಸಿದ್ದಾರೆ. ಗಾಂಜಾ ಡೀಲ್ ಬಗ್ಗೆ ಸಾಕ್ಷಿ ಮೊಬೈಲ್ನಲ್ಲಿ ಇತ್ತು ಎನ್ನುವ ಮಾಹಿತಿ ಕೂಡ ಸಿಕ್ಕಿದೆ. ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ. ಈ ಬದ್ರುದ್ದೀನ್ ಯಾರು, ಆತನ ಮೊಬೈಲ್ ಈ ಯುವಕರ ಕೈಸೇರಿದ್ದು ಏಕೆ, ಆ ಮೊಬೈಲ್ ಹಫೀಜ್ಗೆ ಏಕೆ ಬೇಕಿತ್ತು ಎಂಬ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.
Discover more from Coastal Times Kannada
Subscribe to get the latest posts sent to your email.







Discussion about this post