ಮಂಗಳೂರು, ಜುಲೈ 10: ನಾಪತ್ತೆಯಾಗಿದ್ದ ಹಿಂದೂ ಯುವತಿ ನಟೋರಿಯಸ್ ಮುಸ್ಲಿಂ ಯುವಕನ ಜತೆ ಇರುವುದು ಪತ್ತೆಯಾಗಿದೆ. ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಹಿಂದೂ ಯುವತಿ ಕಾಣೆಯಾಗಿರುವ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಪ್ರಕರಣದ ಕಾರ್ಯಚರಣೆ ನಡೆಸಿದ ಪಾಂಡೇಶ್ವರ ಠಾಣಾ ಪೊಲೀಸರು, ನಾಪತ್ತೆಯಾಗಿದ್ದ ಯುವತಿಯನ್ನು ಪತ್ತೆ ಮಾಡಿದ್ದಾರೆ. ಆದ್ರೆ, ಆಕೆ ನಟೋರಿಯಸ್ ಮುಸ್ಲಿಂ ಯುವಕ ಮಹಮ್ಮದ್ ಅಶ್ಪಕ್ ಜೊತೆ ಇದ್ದಾಳೆ. ಮಹಮ್ಮದ್ ಅಶ್ಪಕ್ ನಟೋರಿಯಸ್ ಹಿನ್ನಲೆ ಹೊಂದಿದವನು ಎಂದು ತಿಳಿದುಬಂದಿದೆ. ಮಹಮ್ಮದ್ ಅಶ್ಪಕ್ ಈಗಾಗಲೇ ಒಂದು ಮದುವೆಯಾಗಿದ್ದು, ಈತನ ವಿರುದ್ಧ ಕಾಸರಗೋಡು ವಿದ್ಯಾನಗರ ಠಾಣೆಯಲ್ಲಿ 8 ಕ್ರಿಮಿನಲ್ ಪ್ರಕರಣಗಳು ಇವೆ.
ಮಂಗಳೂರಿನ ಕಾಲೇಜಿನಲ್ಲಿ ಕಲಿಯುತ್ತಿದ್ದ ನನ್ನ ಮಗಳನ್ನು ಅಪಹರಣ ಮಾಡಿ ಇಸ್ಲಾಂಗೆ ಮತಾಂತರ ಮಾಡಿದ್ದಾನೆಂದು ಹುಡುಗಿಯ ತಂದೆ ಮಂಗಳೂರು ಪೊಲೀಸ್ ಕಮೀಷನರ್ಗೆ ದೂರು ನೀಡಿದ್ದಾರೆ. ಇನ್ನು ಇದೊಂದು ಲವ್ ಜಿಹಾದ್ ಎಂದು ವಿಶ್ವ ಹಿಂದೂ ಪರಿಷತ್ ಆರೋಪಿಸುತ್ತಿದೆ. ಲವ್ ಜಿಹಾದ್ ಕರಾವಳಿಯಲ್ಲಿ ಹೆಚ್ಚುತ್ತಿದೆ. ಇದರ ವಿರುದ್ಧ ಹಿಂದೂ ಸಮಾಜ ಎಚ್ಚೆತ್ತುಕೊಳ್ಳಬೇಕಾಗಿದೆ. ಪ್ರೀತಿ , ಮದುವೆ ಹೆಸರಲ್ಲಿ ಹಿಂದೂ ಯುವತಿಯರ ಮತಾಂತರ ‘ಲವ್ ಜಿಹಾದ್’ ಗೆ ಕಡಿವಾಣ ಹಾಕಲು ಪ್ರಬಲ ಕಾನೂನು ದೇಶದಲ್ಲಿ ಬರಬೇಕಾಗಿದೆ ಎಂದು ವಿಶ್ವಹಿಂದೂ ಪರಿಷದ್ ಶರಣ್ ಪಂಪ್ವೆಲ್ ಹೇಳಿದ್ದಾರೆ.
ಈ ಸಂಬಂಧ ಯುವತಿ ತಂದೆ ಮತಾಂತರ ಮಾಡಲಾಗಿದೆ ಎಂದು ದೂರು ನೀಡಿದ್ದು, ಈ ಬಗ್ಗೆ ಪೊಲಿಸರು ಏನೆಲ್ಲಾ ಕ್ರಮಕೈಗೊಳ್ಳುತ್ತಾರೆ ಎಂದು ಕಾದುನೋಡಬೇಕಿದೆ. ಇನ್ನು ಹಿಂದೂ ಯುವತಿ ಸ್ವಇಚ್ಛೆಯಿಂದ ಮಹಮ್ಮದ್ ಅಶ್ಪಕ್ ಜೊತೆ ಹೋಗಿದ್ದಾಳಾ? ಅಥವಾ ಅಶ್ಪಕನೇ ಯುವತಿಯನ್ನು ಮನವೊಲಿಸಿ ಕರೆದುಕೊಂಡು ಹೋಗಿದ್ದಾ? ಎನ್ನುವುದು ಪೊಲೀಸ್ ತನಿಖೆ ನಂತರ ತಿಳಿದುಬರಬೇಕಿದೆ.
Discover more from Coastal Times Kannada
Subscribe to get the latest posts sent to your email.
Discussion about this post