• About us
  • Contact us
  • Disclaimer
Friday, July 24, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಬಂಟ್ವಾಳದ ಬೋಳಂತೂರು ಗಣೇಶೋತ್ಸವ ಮೆರವಣಿಗೆಯಲ್ಲಿ ಸಿಹಿ ತಿಂಡಿ-ಪಾನೀಯ ನೀಡದಂತೆ ಮಸೀದಿಗೆ ಪತ್ರ; ಸೌಹಾರ್ದತೆಗೆ ಬ್ರೇಕ್!,

Coastal Times by Coastal Times
September 10, 2024
in ಕರಾವಳಿ
ಬಂಟ್ವಾಳದ ಬೋಳಂತೂರು ಗಣೇಶೋತ್ಸವ ಮೆರವಣಿಗೆಯಲ್ಲಿ ಸಿಹಿ ತಿಂಡಿ-ಪಾನೀಯ ನೀಡದಂತೆ ಮಸೀದಿಗೆ ಪತ್ರ; ಸೌಹಾರ್ದತೆಗೆ ಬ್ರೇಕ್!,
56
VIEWS
WhatsappTelegramShare on FacebookShare on Twitter

ಮಂಗಳೂರು, ಸೆಪ್ಟೆಂಬರ್ 9: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಬೋಳಂತೂರು ಗಣೇಶೋತ್ಸವದಲ್ಲಿ ಹಿಂದೂ ಮುಸ್ಲಿಂ -ಸೌಹಾರ್ದತೆಗೆ ಬ್ರೇಕ್ ಬಿದ್ದಿದೆ! ಕೋಮು ಸೂಕ್ಷ್ಮ ಪ್ರದೇಶವಾಗಿ ಗುರುತಿಸಿಕೊಂಡಿರುವ ಜಿಲ್ಲೆಯ ಈ ಭಾಗದಲ್ಲಿ ಕಳೆದ ವರ್ಷ ಗಣೇಶೋತ್ಸವ ಮೆರವಣಿಗೆ ವೇಳೆ ಮುಸ್ಲಿಮರು ಸಿಹಿ ತಿಂಡಿ, ಪಾನೀಯ ಹಂಚಿದ್ದರು. ಆ ಮೂಲಕ ಸೌಹಾರ್ದತೆ ಮೆರೆದಿದ್ದು ಸುದ್ದಿಯಾಗಿತ್ತು. ಆದರೆ, ಈ ಬಾರಿ ಕಳೆದ ವರ್ಷದಂತೆ ಸಿಹಿ ತಿಂಡಿ, ಪಾನೀಯ ಹಂಚಬಾರದು ಎಂದು ಗಣೇಶೋತ್ಸವ ಆಯೋಜಿಸುವ ಸಮಿತಿಯವರೇ ಮುಸ್ಲಿಂ ಸಮುದಾಯದವರಿಗೆ ಪತ್ರ ಬರೆದಿದ್ದಾರೆ.

ಮಸೀದಿಯೊಂದಕ್ಕೆ ಗಣೇಶೋತ್ಸವ ಆಯೋಜಕರು ಬರೆದ ಪತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಕಳೆದ ವರ್ಷ ಮುಸಲ್ಮಾನ ಸಮಾಜ ಬಾಂಧವರು ಹಂಚಿದ ಸಿಹಿ ತಿಂಡಿ ತಿಂದು ನಮ್ಮ ಕೆಲವು ಮಕ್ಕಳು ಅಸ್ವಸ್ಥರಾಗಿದ್ದಾರೆ. ಹೀಗಾಗಿ ಈ ಬಾರಿ ಗಣೇಶೋತ್ಸವ ಮೆರವಣಿಗೆಯಲ್ಲಿ ಸಿಹಿ ತಿಂಡಿ, ತಂಪು ಪಾನೀಯ ಹಂಚಬೇಡಿ ಎಂದು ಶ್ರೀ ಸಿದ್ಧಿವಿನಾಯಕ ವಿಶ್ವಸ್ಥ ಮಂಡಳಿಯಿಂದ ಬೋಳಂತೂರು ಮಸೀದಿಗೆ ಪತ್ರ ಬರೆದು ಮನವಿ ಮಾಡಲಾಗಿದೆ.

ಕಳೆದ ವರ್ಷ ಮಾತ್ರವಲ್ಲದೆ, ಕಳೆದ ಕೆಲವು ವರ್ಷಗಳಿಂದ ಗಣೇಶೋತ್ಸವ ಮೆರವಣಿಗೆ ವೇಳೆ ಮುಸ್ಲಿಂ ಸಮಾಜದವರು ಸಿಹಿ ತಿಂಡಿ ಹಂಚುತ್ತಿರುವುದು ನಡೆದುಬಂದಿದೆ. ಆದರೆ, ಈ ಬಾರಿ ತಂಪು ಪಾನೀಯ, ಸಿಹಿ ತಿಂಡಿ ಸೇವಿಸಿದ ಹಿಂದೂ ಮಕ್ಕಳು ಅಸ್ವಸ್ಥರಾದ ಆರೋಪದಲ್ಲಿ ಅದಕ್ಕೆ ಅವಕಾಶ ನಿರಾಕರಿಸಲಾಗಿದೆ. ಇದರಿಂದಾಗಿ ಎರಡು ಸಮುದಾಯಗಳ ನಡುವಣ ಸಾಮರಸ್ಯ ಕೆಡುವ ಆತಂಕವೂ ಎದುರಾಗಿದೆ. ಸಿದ್ಧಿವಿನಾಯಕ ವಿಶ್ವಸ್ಥ ಮಂಡಳಿಯು ಮಸೀದಿಗೆ ಬರೆದಿರುವ ಪತ್ರದ ಬಗ್ಗೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧ ಚರ್ಚೆಯಾಗುತ್ತಿದೆ.

ಪತ್ರದಲ್ಲೇನಿದೆ? : ‘‘ಕಳೆದ ವರ್ಷದ ಸಾರ್ವಜನಿಕ ಗಣೇಶೋತ್ಸವದ ಮೆರವಣಿಗೆ ಸಂದರ್ಭದಲ್ಲಿ ಪಾನೀಯ ಮತ್ತು ಸಿಹಿತಿಂಡಿ ವಿತರಣೆಯನ್ನು ತಮ್ಮ ಸಮಾಜ ಬಾಂಧವರು ನೀಡಿರುತ್ತಾರೆ. ಅದನ್ನು ಸ್ವೀಕರಿಸಿದ ನಮ್ಮ ಕೆಲವು ಮಕ್ಕಳು ಅಸ್ವಸ್ಥರಾಗಿರುತ್ತಾರೆ. ಇದರಿಂದ ನಮ್ಮ ಸಾಮರಸ್ಯ ಕೆಡುತ್ತದೆ. ಇದರ ಮುಂಜಾಗೃತೆಗಾಗಿ ತಮ್ಮಲ್ಲಿ ಮನವಿ ಮಡುವುದೇನೆಂದರೆ, ಇನ್ನು ಮುಂದಕ್ಕೆ ಶೋಭಾಯಾತ್ರೆಯಲ್ಲಿ ತಮ್ಮ ಸಮಾಜ ಬಾಂಧವರು ಯಾವುದೇ ಪಾನೀಯ ಹಾಗೂ ತಿಂಡಿ ತಿನಸುಗಳನ್ನು ನೀಡಬಾರದಾಗಿ ಈ ಮೂಲಕ ವಿನಂತಿಸುತ್ತೇವೆ. ಆದ್ದರಿಂದ ನಮ್ಮ ಶೋಭಾಯಾತ್ರೆಗೆ ನಿಮ್ಮ ಎಲ್ಲಾ ಸಮಾಜ ಬಾಂಧವರು ಮೇಲಿನ ವಿಷಯಕ್ಕೆ ಸಹಕರಿಸುವಂತೆ ನಿಮ್ಮಲ್ಲಿ ಈ ಮೂಲಕ ಮನವಿ ಮಾಡುತ್ತೇವೆ’’ ಎಂದು ಸಿದ್ಧಿವಿನಾಯಕ ವಿಶ್ವಸ್ಥ ಮಂಡಳಿ ಬರೆದಿದ್ದು ಎನ್ನಲಾದ ವೈರಲ್ ಆಗಿರುವ ಪತ್ರದಲ್ಲಿ ಉಲ್ಲೇಖವಾಗಿದೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಕಿನ್ನಿಗೋಳಿ ; ರಸ್ತೆ ದಾಟುವಾಗ ತಾಯಿಯ ಮೇಲೆ ಮಗುಚಿ ಬಿದ್ದ ಆಟೋ, ಅಮ್ಮನ ಉಳಿಸಲು ಆಟೋವನ್ನೇ ಎತ್ತಿದ ಮಗಳು, ವಿಡಿಯೋ ವೈರಲ್

Next Post

ಬೇಕರಿ ಐಟಂ ಬಾಕ್ಸ್​ಗಳಲ್ಲಿ ಥೈಲ್ಯಾಂಡ್​ನಿಂದ ಬೆಂಗಳೂರಿಗೆ ಡ್ರಗ್ಸ್ ಸಪ್ಲಾಯಿ ಓರ್ವ ಸೆರೆ, ರೂ.1.22 ಕೋಟಿ ಮೌಲ್ಯದ ಹೈಡ್ರೋ ಗಾಂಜಾ ವಶ

Related Posts

ಸ್ವಯಂಚಾಲಿತವಾಗಿ ಚಲಿಸುವ ‘ಶ್ರೀ-ವಾಹನ್’ ಎಂಬ ಅತ್ಯಾಧುನಿಕ ಆಟೋನಾಮಸ್ ವಾಹನ ತಯಾರಿಸಿದ ಮಂಗಳೂರಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳು
ಕರಾವಳಿ

ಸ್ವಯಂಚಾಲಿತವಾಗಿ ಚಲಿಸುವ ‘ಶ್ರೀ-ವಾಹನ್’ ಎಂಬ ಅತ್ಯಾಧುನಿಕ ಆಟೋನಾಮಸ್ ವಾಹನ ತಯಾರಿಸಿದ ಮಂಗಳೂರಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳು

July 23, 2026
2
ಆಗಸ್ಟ್ 8, 9; ಮಂಗಳೂರಿನಲ್ಲಿ ಉಚಿತ ಕೃತಕ ಕೈ-ಕಾಲು ಜೋಡಣಾ ಶಿಬಿರ, ಅರ್ಹ ಫಲಾನುಭವಿಗಳಿಗೆ ಹೆಸರು ನೋಂದಾಯಿಸಲು ಮನವಿ
ಕರಾವಳಿ

ಆಗಸ್ಟ್ 8, 9; ಮಂಗಳೂರಿನಲ್ಲಿ ಉಚಿತ ಕೃತಕ ಕೈ-ಕಾಲು ಜೋಡಣಾ ಶಿಬಿರ, ಅರ್ಹ ಫಲಾನುಭವಿಗಳಿಗೆ ಹೆಸರು ನೋಂದಾಯಿಸಲು ಮನವಿ

July 22, 2026
229
Next Post
ಬೇಕರಿ ಐಟಂ ಬಾಕ್ಸ್​ಗಳಲ್ಲಿ ಥೈಲ್ಯಾಂಡ್​ನಿಂದ ಬೆಂಗಳೂರಿಗೆ ಡ್ರಗ್ಸ್ ಸಪ್ಲಾಯಿ ಓರ್ವ ಸೆರೆ, ರೂ.1.22 ಕೋಟಿ ಮೌಲ್ಯದ ಹೈಡ್ರೋ ಗಾಂಜಾ ವಶ

ಬೇಕರಿ ಐಟಂ ಬಾಕ್ಸ್​ಗಳಲ್ಲಿ ಥೈಲ್ಯಾಂಡ್​ನಿಂದ ಬೆಂಗಳೂರಿಗೆ ಡ್ರಗ್ಸ್ ಸಪ್ಲಾಯಿ ಓರ್ವ ಸೆರೆ, ರೂ.1.22 ಕೋಟಿ ಮೌಲ್ಯದ ಹೈಡ್ರೋ ಗಾಂಜಾ ವಶ

Discussion about this post

Recent News

ಸ್ವಯಂಚಾಲಿತವಾಗಿ ಚಲಿಸುವ ‘ಶ್ರೀ-ವಾಹನ್’ ಎಂಬ ಅತ್ಯಾಧುನಿಕ ಆಟೋನಾಮಸ್ ವಾಹನ ತಯಾರಿಸಿದ ಮಂಗಳೂರಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳು

ಸ್ವಯಂಚಾಲಿತವಾಗಿ ಚಲಿಸುವ ‘ಶ್ರೀ-ವಾಹನ್’ ಎಂಬ ಅತ್ಯಾಧುನಿಕ ಆಟೋನಾಮಸ್ ವಾಹನ ತಯಾರಿಸಿದ ಮಂಗಳೂರಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳು

July 23, 2026
2
ಬಂಟ್ವಾಳ: ಫರಂಗಿಪೇಟೆಯ ಕೆನರಾ ಬ್ಯಾಂಕ್ ನಲ್ಲಿ ನಡೆದ ಕಳ್ಳತನ ಪ್ರಕರಣ -ಪ್ರಮುಖ ಆರೋಪಿಯ ಬಂಧನ

ಬಂಟ್ವಾಳ: ಫರಂಗಿಪೇಟೆಯ ಕೆನರಾ ಬ್ಯಾಂಕ್ ನಲ್ಲಿ ನಡೆದ ಕಳ್ಳತನ ಪ್ರಕರಣ -ಪ್ರಮುಖ ಆರೋಪಿಯ ಬಂಧನ

July 23, 2026
50
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಸ್ವಯಂಚಾಲಿತವಾಗಿ ಚಲಿಸುವ ‘ಶ್ರೀ-ವಾಹನ್’ ಎಂಬ ಅತ್ಯಾಧುನಿಕ ಆಟೋನಾಮಸ್ ವಾಹನ ತಯಾರಿಸಿದ ಮಂಗಳೂರಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳು

ಸ್ವಯಂಚಾಲಿತವಾಗಿ ಚಲಿಸುವ ‘ಶ್ರೀ-ವಾಹನ್’ ಎಂಬ ಅತ್ಯಾಧುನಿಕ ಆಟೋನಾಮಸ್ ವಾಹನ ತಯಾರಿಸಿದ ಮಂಗಳೂರಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳು

July 23, 2026
ಬಂಟ್ವಾಳ: ಫರಂಗಿಪೇಟೆಯ ಕೆನರಾ ಬ್ಯಾಂಕ್ ನಲ್ಲಿ ನಡೆದ ಕಳ್ಳತನ ಪ್ರಕರಣ -ಪ್ರಮುಖ ಆರೋಪಿಯ ಬಂಧನ

ಬಂಟ್ವಾಳ: ಫರಂಗಿಪೇಟೆಯ ಕೆನರಾ ಬ್ಯಾಂಕ್ ನಲ್ಲಿ ನಡೆದ ಕಳ್ಳತನ ಪ್ರಕರಣ -ಪ್ರಮುಖ ಆರೋಪಿಯ ಬಂಧನ

July 23, 2026
ಸುಳ್ಯದಲ್ಲಿ ವಿವಾಹಿತ ಮಹಿಳೆ ಶಂಕಾಸ್ಪದ ಸಾವು ಪ್ರಕರಣ ; ಅತ್ತೆ, ಮಾವ, ನಾದಿನಿಯ ಬಂಧನ

ಸುಳ್ಯದಲ್ಲಿ ವಿವಾಹಿತ ಮಹಿಳೆ ಶಂಕಾಸ್ಪದ ಸಾವು ಪ್ರಕರಣ ; ಅತ್ತೆ, ಮಾವ, ನಾದಿನಿಯ ಬಂಧನ

July 23, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d