ಮಂಗಳೂರು, ಜ.11 : ಮಂಗಳೂರಿನಲ್ಲಿ ಭಾರೀ ಡ್ರಗ್ಸ್ ಮಾಫಿಯಾ ಜಾಲವನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಮಹತ್ವದ ಕಾರ್ಯಾಚರಣೆಯಲ್ಲಿ ಇಬ್ಬರು ವೈದ್ಯರು, ಎಂಬಿಬಿಎಸ್, ಬಿಡಿಎಸ್ ಮಾಡುತ್ತಿದ್ದ ಎಂಟು ಮಂದಿ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.
ಮೂಲತಃ ಇಂಗ್ಲೆಂಡ್ ಪ್ರಜೆಯಾಗಿದ್ದು ಎನ್ಆರ್ ಐ ಕೋಟಾದಲ್ಲಿ ಮಂಗಳೂರಿನಲ್ಲಿದ್ದುಕೊಂಡು ಪ್ರತಿಷ್ಠಿತ ಮೆಡಿಕಲ್ ಕಾಲೇಜಿನಲ್ಲಿ ದಂತ ವೈದ್ಯಕೀಯ ಓದುತ್ತಿರುವ ನೀಲ್ ಕಿಶೋರಿಲಾಲ್ ರಾಮ್ ಜಿ ಈ ಜಾಲದ ಕಿಂಗ್ ಪಿನ್. ಈತನನ್ನು ನಾಲ್ಕು ದಿನಗಳ ಹಿಂದೆ ಬಂಟ್ಸ್ ಹಾಸ್ಟೆಲ್ ಬಳಿಯ ಅಪಾರ್ಟ್ಮೆಂಟ್ ನಲ್ಲಿ ಬಂಧಿಸಲಾಗಿತ್ತಿ. ಈತನ ಮಾಹಿತಿ ಆಧರಿಸಿ ಮಂಗಳವಾರ ಬೆಳಗ್ಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದು ಎರಡು ಪ್ರತಿಷ್ಠಿತ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಮತ್ತು ಇಬ್ಬರು ವೈದ್ಯರನ್ನು ಬಂಧಿಸಿದ್ದಾರೆ. ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಎನ್. ಶಶಿಕುಮಾರ್ ಈ ಅಘಅತಕಾರಿ ಮಾತಿ ನೀಡಿದ್ದಾರೆ.




ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂಗ್ಲೆಂಡ್‌ನ ಪ್ರಜೆ ನೀಲ್‌ಕಿಶೋರ್ ರಾಮ್‌ಜಿ ಷಾ (38), ನಗರದ ಪ್ರತಿಷ್ಠಿತ ವೈದ್ಯಕೀಯ ಕಾಲೇಜಿನ ವೈದ್ಯಕೀಯ ಅಧಿಕಾರಿಯಾಗಿರುವ ಕೇರಳದ ಡಾ.ಸಮೀರ್ (32), ವೈದ್ಯಕೀಯ ಶಸ್ತ್ರಚಿಕಿತ್ಸಕ, ತಮಿಳುನಾಡಿನ ಡಾ.ಮಣಿಮಾರನ್ (28) ಮುತ್ತು (ತಮಿಳುನಾಡು), ವೈದ್ಯ ವಿದ್ಯಾರ್ಥಿನಿಯರಾದ ಕೇರಳದ ನದಿಯಾ ಸಿರಾಜ್ (24), ಮಹಾರಾಷ್ಟ್ರದ ಪುಣೆಯ ಇರಾ ಬಾಸಿನ್ (23), ಪಂಜಾಬಿನ ಚಂಡೀಗಡದ ರಿಯಾ ಚಡ್ಡಾ (22), ಆಂಧ್ರಪ್ರದೇಶದ ವರ್ಷಿಣಿ ಪ್ರಾಥಿ (26), ವೈದ್ಯ ವಿದ್ಯಾರ್ಥಿಗಳಾದ ಚಂಡೀಗಡದ ಭಾನು ದಹಿಯಾ (27), ದೆಹಲಿಯ ಕ್ಷಿತಿಜ್ ಗುಪ್ತ (25) ಹಾಗೂ ಬಂಟ್ವಾಳ ತಾಲ್ಲೂಕಿನ ಮಾರಿಪಳ್ಳದ ಮಹಮ್ಮದ್ ರವೂಫ್ ಅಲಿಯಾಸ್ ಗೌಸ್ (34) ಬಂಧಿತ ಆರೋಪಿಗಳೆಂದು ತಿಳಿಸಿದ್ದಾರೆ.

ಕಿಶೋರಿಲಾಲ್ 15 ವರ್ಷದಿಂದ ಎನ್ಆರ್ ಐ ಕೋಟಾದಲ್ಲಿದ್ದುಕೊಂಡು ಡೆಂಟಲ್ ಕಲಿಯುತ್ತಿದ್ದ. ಪ್ರತಿ ಬಾರಿ ಫೈಲ್ ಆಗಿ ಸದ್ಯಕ್ಕೆ ನಾಲ್ಕನೇ ವರ್ಷದಲ್ಲಿದ್ದಾನೆ. ಬಿಡಿಎಸ್ ಕೋರ್ಸ್ ಕಂಪ್ಲೀಟ್ ಮಾಡದೆ ಮಂಗಳೂರಿನಲ್ಲಿ ಅಪಾರ್ಟ್ಮೆಂಟಲ್ಲಿದ್ದು ಡ್ರಗ್ ಪೆಡ್ಲಿಂಗ್ ಮಾಡುತ್ತಿದ್ದ. ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ವೈದ್ಯರಿಗೆ ಗಾಂಜಾ ಇನ್ನಿತರ ಡ್ರಗ್ಸ್ ಪೂರೈಸುತ್ತಿದ್ದ.
ಮಂಗಳೂರು ನಗರದ ಬಂಟ್ಸ್ ಹಾಸ್ಟೆಲ್ ಪರಿಸರದ ಫ್ಲಾಟ್ ವೊಂದರಲ್ಲಿ ಗಾಂಜಾವನ್ನು ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದರು. ಈ ವೇಳೆ ಖಚಿತ ಮಾಹಿತಿ ಮೇರೆಗೆ ಮಂಗಳೂರು ಸಿಸಿಬಿ ಇನ್ ಸ್ಪೆಕ್ಟರ್ ಶ್ಯಾಮ್ ಸುಂದರ್ ಎಚ್ .ಎಂ. ರವರ ನೇತೃತ್ವದ ಸಿಸಿಬಿ ಪೊಲೀಸರು ದಾಳಿ ನಡೆಸಿ, ನೀಲ್ ಕಿಶೋರಿಲಾಲ್ ರಾಮ್ ಜಿ ಶಾ ಎಂಬಾತನನ್ನು ವಶಕ್ಕೆ ಪಡೆದುಕೊಂಡಿದ್ದರು.
ಆತನಿಂದ ಒಟ್ಟು 2 ಕೆ.ಜಿ. ತೂಕದ ರೂ. 50,000 ಮೌಲ್ಯದ ಗಾಂಜಾ, 2 ಮೊಬೈಲ್ ಫೋನ್, 7,000 ರೂ., ಡಿಜಿಟಲ್ ತೂಕ ಮಾಪನ, ಆಟಿಕೆ ಪಿಸ್ತೂಲು ವಶಪಡಿಸಿಕೊಂಡು ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಅವನು ಕೊಟ್ಟ ಮಾಹಿತಿ ಆದರಿಸಿಉಳಿದ ಆರೋಪಿಗಳನ್ನು ನಗರದ ವಿವಿಧ ಹಾಸ್ಟೆಲ್, ಪಿಜಿ ಹಾಗೂ ಖಾಸಗಿ ನಿವಾಸಗಳಿಂದ ವಶಕ್ಕೆ ಪಡೆದುಕೊಳ್ಳಲಾಗಿದೆ.
Discover more from Coastal Times Kannada
Subscribe to get the latest posts sent to your email.








Discussion about this post