• About us
  • Contact us
  • Disclaimer
Wednesday, July 22, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಮೆಡಿಕಲ್‌ ಕಾಲೇಜು ವಿದ್ಯಾರ್ಥಿಗಳ ಕೇವಲ ಡ್ರಗ್ಸ್‌ ಮಾಫೀಯಾ ಮಾತ್ರವಲ್ಲ, ಲಿವಿಂಗ್‌ ಟುಗೆದರ್‌, ಸೆಕ್ಸ್‌ ಮತ್ತು ಗರ್ಲ್‌ಫ್ರೆಂಡ್‌ಗಳನ್ನು ನಶೆಗೆ ಎಳೆಯುವ ಕರಾಳ ಲೋಕ

Coastal Times by Coastal Times
January 12, 2023
in ಕ್ರೈಮ್ ನ್ಯೂಸ್
ಮಂಗಳೂರಿನ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳ ಗಾಂಜಾ ದಂಧೆ ; ಇಬ್ಬರು ವೈದ್ಯರು ಸೇರಿ ಹತ್ತು ಮಂದಿ ಎಂಬಿಬಿಎಸ್, ಬಿಡಿಎಸ್ ವಿದ್ಯಾರ್ಥಿಗಳ ಬಂಧನ
255
VIEWS
WhatsappTelegramShare on FacebookShare on Twitter

ಮಂಗಳೂರು: ಮಂಗಳೂರಿನ ಮೆಡಿಕಲ್‌ ಕಾಲೇಜುಗಳಲ್ಲಿ ಬೆಳಕಿಗೆ ಬಂದಿರುವ ಗಾಂಜಾ ಡ್ರಗ್ಸ್‌ ದಂಧೆಯಲ್ಲಿ ಕೇವಲ ಮಾದಕ ಲೋಕ ಮಾತ್ರವಲ್ಲ, ಲಿವಿಂಗ್‌ ಟುಗೆದರ್‌, ಸೆಕ್ಸ್‌ ಮತ್ತು ಗರ್ಲ್‌ಫ್ರೆಂಡ್‌ಗಳನ್ನು ನಶೆಗೆ ಎಳೆಯುವ ಕರಾಳ ಲೋಕವೂ ಬೆಳಕಿಗೆ ಬಂದಿದೆ.

ಮಂಗಳೂರು ಪೊಲೀಸರು ಗಾಂಜಾ ಬಲೆಯಲ್ಲಿ ಬಿದ್ದಿದ್ದ, ಪೆಡ್ಲರ್‌ಗಳಾಗಿ ಕೆಲಸ ಮಾಡುತ್ತಿದ್ದ ನಾಲ್ವರು ವೈದ್ಯಕೀಯ ವಿದ್ಯಾರ್ಥಿನಿಯರು, ಇಬ್ಬರು ವಿದ್ಯಾರ್ಥಿಗಳು ಮತ್ತು ಇಬ್ಬರು ವೈದ್ಯರು ಸೇರಿದಂತೆ 10 ಜನರನ್ನು ಬಂಧಿಸಿದ್ದಾರೆ. ಇವರು ಕೆಎಂಸಿ ಅತ್ತಾವರ, ಕೆ.ಎಂ.ಸಿ ಮಣಿಪಾಲ, ಯೇನೆಪೋಯಾ ದೇರಳಕಟ್ಟೆ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಮತ್ತು ವೈದ್ಯರಾಗಿದ್ದಾರೆ. ಹತ್ತು ಮಂದಿಯಲ್ಲಿ ಇಬ್ಬರು ಗಾಂಜಾ ಪೆಡ್ಲರ್‌ಗಳು.

ಬಂಧಿತ ವಿದ್ಯಾರ್ಥಿನಿಯರು ; ಡಾ. ನದಿಯಾ ಸಿರಾಜ್(24), ಡಾ.ವರ್ಷಿಣಿ ಪ್ರತಿ(26), ಡಾ.ರಿಯಾ ಚಡ್ಡ(22), ಡಾ.ಹೀರಾ ಬಸಿನ್(23).

ವೈದ್ಯ ವಿದ್ಯಾರ್ಥಿಗಳು: ಡಾ. ಭಾನು ದಹಿಯಾ(27), ಡಾ.ಕ್ಷಿತಿಜ್ ಗುಪ್ತ(23) ಬಂಧನ,

ಬಂಧಿತ ವೈದ್ಯರು: ಡಾ.ಸಮೀರ್(32), ಮಣಿ‌ಮಾರನ್ ಮುತ್ತು(28) ,

ಬಂಧಿತ ಇತರರು ಸ್ಥಳೀಯರು ; ಮಹಮ್ಮದ್ ರವೂಪ್ ಅಲಿಯಾಸ್ ಗೌಸ್(34), ಇಂಗ್ಲೆಂಡ್‌ ಮೂಲದ ಪೆಡ್ಲರ್‌ ನೀಲ್ ಕಿಶೋರಿಲಾಲ್ ರಾಮ್ ಜೀ.

ಬಂಧಿತ ಹತ್ತು ಮಂದಿಯನ್ನು ತಡರಾತ್ರಿವರೆಗೂ ಪೊಲೀಸರು ತೀವ್ರ ವಿಚಾರಣೆಗೆ ಗುರಿಪಡಿಸಿದ್ದಾರೆ. ಈ ವೇಳೆ ಆರೋಪಿಗಳು ಇನ್ನೂ ಹಲವರ ಹೆಸರುಗಳನ್ನು ಹೇಳಿದ್ದು, ಅವರನ್ನೂ ಪೊಲೀಸರು ವಿಚಾರಣೆಗೆ ಒಳಪಡಿಸುವ ಸಾಧ್ಯತೆಗಳಿವೆ. ವೈದ್ಯರು, ವೈದ್ಯ ವಿದ್ಯಾರ್ಥಿಗಳು ಮತ್ತು ಪೆಡ್ಲರ್‌ ಆಗಿರುವ ನೀಲ್‌ ಇನ್ನೂ ಹಲವರು ತಮ್ಮ ಜಾಲದಲ್ಲಿರುವುದಾಗಿ ಹೇಳಿದ್ದಾರೆ. ನೀಲ್‌ ಇನ್ನೂ ಮೂರ್ನಾಲ್ಕು ಕಾಲೇಜುಗಳ ಹೆಸರು ಹೇಳಿರುವುದು ಮಂಗಳೂರಿನ ಶೈಕ್ಷಣಿಕ ಲೋಕದಲ್ಲಿ ಆತಂಕವನ್ನು ಸೃಷ್ಟಿಸಿದೆ.

ಲಿವಿಂಗ್‌ ಟುಗೆದರ್‌ ; ಈಗ ಬಂಧನಕ್ಕೆ ಒಳಗಾಗಿರುವ ವೈದ್ಯಕೀಯ ವಿದ್ಯಾರ್ಥಿನಿಯರು ಮಾದಕ ನಶೆಗೆ ಬೀಳಲು ಮುಖ್ಯ ಕಾರಣ ಅವರು ಲಿವಿಂಗ್‌ ಟುಗೆದರ್‌ ಸಂಬಂಧವನ್ನು ಹೊಂದಿರುವುದು ಎಂದು ತನಿಖೆ ವೇಳೆ ಬಯಲಾಗಿದೆ. ಇವರಲ್ಲಿ ಹೆಚ್ಚಿನವರು ಬೇರೆ ಬೇರೆ ರಾಜ್ಯಗಳಿಂದ ಬಂದವರಾಗಿದ್ದು, ಇಲ್ಲಿ ತಮಗೆ ಪರಿಚಯವಾಗುವ ಯುವಕರ ಜತೆ ಲಿವಿಂಗ್‌ ಟುಗೆದರ್‌ ಅಂತ ಒಂದೇ ರೂಮಿನಲ್ಲಿ ಇರುತ್ತಾರೆ. ಇಲ್ಲಿ ಸೆಕ್ಸ್‌ ಮತ್ತು ಮಾದಕ ನಶೆಯ ಲೋಕಗಳು ತೆರೆದುಕೊಳ್ಳುತ್ತವೆ.

ಒಮ್ಮೆ ಈ ಜಾಲಕ್ಕೆ ಪ್ರವೇಶ ಮಾಡಿದವರಿಗೆ ಹಿಂದೆ ಬರಲು ಸಾಧ್ಯವಾಗದೆ ಹುಡುಗರು ಹೇಳಿದಂತೆ ಕೇಳಿಕೊಂಡಿರಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಹೀಗಾಗಿ ಅವರು ಶಾಶ್ವತವಾಗಿ ಅವರ ಗುಲಾಮರಂತೆ ಇರಬೇಕಾಗುತ್ತದೆ. ಮಂಗಳೂರಿನ ಹಲವು ಅಪಾರ್ಟ್ಮೆಂಟ್‌ಗಳಲ್ಲಿ ಲಿವಿಂಗ್ ಟುಗೆದರ್ ಹೆಸರಿನಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಜತೆಯಾಗಿ ವಾಸ ಮಾಡುತ್ತಿದ್ದು, ಅಲ್ಲಿ ಬಾಯ್ ಫ್ರೆಂಡ್ ಗಳಿಂದ ಗಾಂಜಾ ಮತ್ತು ಇನ್ನಿತರ ಮಾದಕಗಳ ರುಚಿ ಸವಿಯುತ್ತಾರೆ ಎಂದು ತನಿಖೆ ವೇಳೆ ತಿಳಿದುಬಂದಿದೆ. ಮೊದಲು ಸ್ವಲ್ಪ ಮಟ್ಟಿಗೆ ಚಟ ಹೊಂದಿದವರು ಈಗ ಮತ್ತೆ ದಾಸರಾಗುತ್ತಾರೆ ಎಂದು ತಿಳಿದುಬಂದಿದೆ.

ಇದೀಗ ಬಂಧಿತರಿಂದ ಪೊಲೀಸರು ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುತ್ತಿದ್ದು, ಇನ್ನಷ್ಟು ಮಂದಿಯನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಮಂಗಳೂರಿನ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳ ಗಾಂಜಾ ದಂಧೆ ; ಇಬ್ಬರು ವೈದ್ಯರು ಸೇರಿ ಹತ್ತು ಮಂದಿ ಎಂಬಿಬಿಎಸ್, ಬಿಡಿಎಸ್ ವಿದ್ಯಾರ್ಥಿಗಳ ಬಂಧನ

Next Post

ಮಂಗಳೂರು: ಗಾಂಜಾ ಮಾರಾಟ ಪ್ರಕರಣ, ಇಬ್ಬರು ಮೆಡಿಕಲ್ ವಿದ್ಯಾರ್ಥಿಗಳು ಸೇರಿ ಮತ್ತೆ ಮೂವರ ಸೆರೆ

Related Posts

ಮಂಗಳೂರು ಮನೆ ರಿಪೇರಿ ಕೆಲಸಕ್ಕೆ ಬಂದಿದ್ದ ಯುಪಿ ಮೂಲದ ಕಾರ್ಮಿಕನಿಂದ 49 ಗ್ರಾಂ ಚಿನ್ನ ಕಳ್ಳತನ: 6 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಜಪ್ತಿ
ಕ್ರೈಮ್ ನ್ಯೂಸ್

ಮಂಗಳೂರು ಮನೆ ರಿಪೇರಿ ಕೆಲಸಕ್ಕೆ ಬಂದಿದ್ದ ಯುಪಿ ಮೂಲದ ಕಾರ್ಮಿಕನಿಂದ 49 ಗ್ರಾಂ ಚಿನ್ನ ಕಳ್ಳತನ: 6 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಜಪ್ತಿ

July 22, 2026
35
ಮಂಗಳೂರಿನಲ್ಲಿ ಅಕೌಂಟ್ ದಂಧೆ ಬಯಲಿಗೆ: ಯುವಕನ ಅಕೌಂಟ್ ಬಳಸಿ ಕೋಟಿ ಕೋಟಿ ಸೈಬರ್ ವಂಚನೆ: ಪ್ರಕರಣ ದಾಖಲು
ಕ್ರೈಮ್ ನ್ಯೂಸ್

ಮಂಗಳೂರಿನಲ್ಲಿ ಅಕೌಂಟ್ ದಂಧೆ ಬಯಲಿಗೆ: ಯುವಕನ ಅಕೌಂಟ್ ಬಳಸಿ ಕೋಟಿ ಕೋಟಿ ಸೈಬರ್ ವಂಚನೆ: ಪ್ರಕರಣ ದಾಖಲು

July 22, 2026
53
Next Post
ಮಂಗಳೂರು: ಗಾಂಜಾ ಮಾರಾಟ ಪ್ರಕರಣ, ಇಬ್ಬರು ಮೆಡಿಕಲ್ ವಿದ್ಯಾರ್ಥಿಗಳು ಸೇರಿ ಮತ್ತೆ ಮೂವರ ಸೆರೆ

ಮಂಗಳೂರು: ಗಾಂಜಾ ಮಾರಾಟ ಪ್ರಕರಣ, ಇಬ್ಬರು ಮೆಡಿಕಲ್ ವಿದ್ಯಾರ್ಥಿಗಳು ಸೇರಿ ಮತ್ತೆ ಮೂವರ ಸೆರೆ

Discussion about this post

Recent News

ಮಂಗಳೂರು ಮನೆ ರಿಪೇರಿ ಕೆಲಸಕ್ಕೆ ಬಂದಿದ್ದ ಯುಪಿ ಮೂಲದ ಕಾರ್ಮಿಕನಿಂದ 49 ಗ್ರಾಂ ಚಿನ್ನ ಕಳ್ಳತನ: 6 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಜಪ್ತಿ

ಮಂಗಳೂರು ಮನೆ ರಿಪೇರಿ ಕೆಲಸಕ್ಕೆ ಬಂದಿದ್ದ ಯುಪಿ ಮೂಲದ ಕಾರ್ಮಿಕನಿಂದ 49 ಗ್ರಾಂ ಚಿನ್ನ ಕಳ್ಳತನ: 6 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಜಪ್ತಿ

July 22, 2026
35
ಆಗಸ್ಟ್ 8, 9; ಮಂಗಳೂರಿನಲ್ಲಿ ಉಚಿತ ಕೃತಕ ಕೈ-ಕಾಲು ಜೋಡಣಾ ಶಿಬಿರ, ಅರ್ಹ ಫಲಾನುಭವಿಗಳಿಗೆ ಹೆಸರು ನೋಂದಾಯಿಸಲು ಮನವಿ

ಆಗಸ್ಟ್ 8, 9; ಮಂಗಳೂರಿನಲ್ಲಿ ಉಚಿತ ಕೃತಕ ಕೈ-ಕಾಲು ಜೋಡಣಾ ಶಿಬಿರ, ಅರ್ಹ ಫಲಾನುಭವಿಗಳಿಗೆ ಹೆಸರು ನೋಂದಾಯಿಸಲು ಮನವಿ

July 22, 2026
166
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಮಂಗಳೂರು ಮನೆ ರಿಪೇರಿ ಕೆಲಸಕ್ಕೆ ಬಂದಿದ್ದ ಯುಪಿ ಮೂಲದ ಕಾರ್ಮಿಕನಿಂದ 49 ಗ್ರಾಂ ಚಿನ್ನ ಕಳ್ಳತನ: 6 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಜಪ್ತಿ

ಮಂಗಳೂರು ಮನೆ ರಿಪೇರಿ ಕೆಲಸಕ್ಕೆ ಬಂದಿದ್ದ ಯುಪಿ ಮೂಲದ ಕಾರ್ಮಿಕನಿಂದ 49 ಗ್ರಾಂ ಚಿನ್ನ ಕಳ್ಳತನ: 6 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಜಪ್ತಿ

July 22, 2026
ಆಗಸ್ಟ್ 8, 9; ಮಂಗಳೂರಿನಲ್ಲಿ ಉಚಿತ ಕೃತಕ ಕೈ-ಕಾಲು ಜೋಡಣಾ ಶಿಬಿರ, ಅರ್ಹ ಫಲಾನುಭವಿಗಳಿಗೆ ಹೆಸರು ನೋಂದಾಯಿಸಲು ಮನವಿ

ಆಗಸ್ಟ್ 8, 9; ಮಂಗಳೂರಿನಲ್ಲಿ ಉಚಿತ ಕೃತಕ ಕೈ-ಕಾಲು ಜೋಡಣಾ ಶಿಬಿರ, ಅರ್ಹ ಫಲಾನುಭವಿಗಳಿಗೆ ಹೆಸರು ನೋಂದಾಯಿಸಲು ಮನವಿ

July 22, 2026
ಮಂಗಳೂರಿನಲ್ಲಿ ಅಕೌಂಟ್ ದಂಧೆ ಬಯಲಿಗೆ: ಯುವಕನ ಅಕೌಂಟ್ ಬಳಸಿ ಕೋಟಿ ಕೋಟಿ ಸೈಬರ್ ವಂಚನೆ: ಪ್ರಕರಣ ದಾಖಲು

ಮಂಗಳೂರಿನಲ್ಲಿ ಅಕೌಂಟ್ ದಂಧೆ ಬಯಲಿಗೆ: ಯುವಕನ ಅಕೌಂಟ್ ಬಳಸಿ ಕೋಟಿ ಕೋಟಿ ಸೈಬರ್ ವಂಚನೆ: ಪ್ರಕರಣ ದಾಖಲು

July 22, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d