ಮಂಗಳೂರು, ಜು.22: ಕರ್ನಾಟಕ ಅನಿವಾಸಿ ಭಾರತೀಯರ ಒಕ್ಕೂಟ ಜಿದ್ದಾ ಘಟಕದ ವತಿಯಿಂದ ಕರ್ನಾಟಕ ಮಾರ್ವಾಡಿ ಯೂತ್ ಫೆಡರೇಶನ್ ಬೆಂಗಳೂರು, ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು, ರೋಶನಿ ನಿಲಯ ಮಂಗಳೂರು ಸಹಯೋಗದೊಂದಿಗೆ ಆಗಸ್ಟ್ 8 ಮತ್ತು 9 ರಂದು ಮಂಗಳೂರಿನ ವೆಲೆನ್ಸಿಯಾ ಜೆಪ್ಪು ಎಂಬಲ್ಲಿರುವ ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶನಿ ನಿಲಯದ ಸಭಾಂಗಣದಲ್ಲಿ ಅಂಗವೈಕಲ್ಯ ವಿಕಲಚೇತನರ ಭವಿಷ್ಯದ ಜೀವನಕ್ಕಾಗಿ ಉಚಿತ ಕೃತಕ ಕೈ-ಕಾಲು ಜೋಡಣಾ ಶಿಬಿರ ನಡೆಯಲಿದೆ.
ಉತ್ತಮ ಗುಣಮಟ್ಟದ ಹಗುರ ಗಾತ್ರದ ಜೈಪುರ್ ಲಿಂಬ್ ನ್ನು ಉಚಿತವಾಗಿ ಶಿಬಿರ ನಡೆಯುವ ದಿನ ಅಳತೆ ತೆಗೆದು ಅಂದೇ ದಿನ ಅಳವಡಿಸಲಾಗುವುದು. ಪರಿಶೀಲನೆ, ಕೃತಕ ಅಂಗಾಂಗ, ಜೋಡಣೆ ಸಂಪೂರ್ಣ ಉಚಿತವಾಗಿದ್ದು, ಯಾವುದೇ ಜಿಲ್ಲೆ ಅಥವಾ ರಾಜ್ಯದ ಬಡ/ಅಶಕ್ತ ಫಲಾನುಭವಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ.
ಶಿಬಿರಕ್ಕೂ ಮುನ್ನ ಅರ್ಹ ಫಲಾನುಭವಿಗಳು ಅಂಗಾಂಗದ ಪೋಟೋ, ಆಧಾರ್ ಕಾರ್ಡ್ ಅಥವಾ ಇತರ ಯಾವುದೇ ದಾಖಲೆ ಮತ್ತು ಸಂಪರ್ಕ ಸಂಖ್ಯೆಯನ್ನು 9019111177 / 9743266456 / 9341111116 ಇದರಲ್ಲಿ ಯಾವುದಾದರೂ ಒಂದು ಸಂಖ್ಯೆಗೆ ವಾಟ್ಸಪ್ ಮೂಲಕ ಶಿಬಿರ ನಡೆಯುವ ಮುಂಚಿತವಾಗಿ ಕಳುಹಿಸಿಕೊಡಬೇಕಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.


Discover more from Coastal Times Kannada
Subscribe to get the latest posts sent to your email.







Discussion about this post