• About us
  • Contact us
  • Disclaimer
Monday, October 26, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಐಷಾರಾಮಿ ಜೀವನಕ್ಕಾಗಿ ನಿಲ್ಲಿಸಿದ್ದ ಬೈಕ್ ಗಳನ್ನು ಕದ್ದು ಮಾರುತ್ತಿದ್ದ ಹದಿಹರೆಯದ ಯುವಕರ ಜಾಲ ಪತ್ತೆ, 3 ಅಪ್ರಾಪ್ತ ಬಾಲಕರು ಸೇರಿ 7 ಆರೋಪಿಗಳು ವಶಕ್ಕೆ

Coastal Times by Coastal Times
October 26, 2026
in ಕ್ರೈಮ್ ನ್ಯೂಸ್
ಐಷಾರಾಮಿ ಜೀವನಕ್ಕಾಗಿ ನಿಲ್ಲಿಸಿದ್ದ ಬೈಕ್ ಗಳನ್ನು ಕದ್ದು ಮಾರುತ್ತಿದ್ದ ಹದಿಹರೆಯದ ಯುವಕರ ಜಾಲ ಪತ್ತೆ, 3 ಅಪ್ರಾಪ್ತ ಬಾಲಕರು ಸೇರಿ 7 ಆರೋಪಿಗಳು ವಶಕ್ಕೆ
6
VIEWS
WhatsappTelegramShare on FacebookShare on Twitter

ಮಂಗಳೂರು, ಅ.25: ಐಷಾರಾಮಿ ಜೀವನ ನಡೆಸುವ ಉದ್ದೇಶದಿಂದ 18-18ರ ಯುವಕರು ಮತ್ತು ಇತರ 18 ವರ್ಷದ ಒಳಗಿನ ಅಪ್ರಾಪ್ತರು ಸೇರಿಕೊಂಡು ಪಾರ್ಕ್ ಮಾಡುತ್ತಿದ್ದ ಬೈಕ್, ಇನ್ನಿತರ ದ್ವಿಚಕ್ರ ವಾಹನಗಳನ್ನು ಕಳವುಗೈದು ಮಾರಾಟ ಮಾಡುತ್ತಿದ್ದ ಜಾಲವನ್ನು ಪೊಲೀಸರು ಭೇದಿಸಿದ್ದು ಮೂವರು ಅಪ್ರಾಪ್ತರು ಸೇರಿ ಒಟ್ಟು ಏಳು ಮಂದಿ ಹದಿಹರೆಯದ ಯುವಕರನ್ನು ಬಂಧಿಸಿದ್ದಾರೆ. ಕಳವುಗೈದ ಆರು ಮತ್ತು ಕೃತ್ಯಕ್ಕೆ ಬಳಸಿದ ಮೂರು ಸೇರಿ ಒಟ್ಟು ಒಂಬತ್ತು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.

ಮಂಗಳೂರು ನಗರ ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ ವೆಲೆನ್ಸಿಯಾ ಜಂಕ್ಷನ್ ಬಳಿಯ ಡಾನ್ ಬಾಸ್ಕೋ ಹಾಸ್ಟೇಲ್ ಬಳಿ ಅ.12ರಂದು ನಿಲ್ಲಿಸಿದ್ದ ಕೆ.ಟಿ.ಎಮ್ ಡ್ಯೂಕ್ ಮೋಟಾರು ಸೈಕಲ್, ಅ.19ರಂದು ಜಪ್ಪು ಮಾರ್ಕೆಟ್ ಬಳಿ ನಿಲ್ಲಿಸಿದ್ದ ಯಮಹಾ ಎಫ್.ಜೆಡ್ ಮೋಟಾರ್ ಸೈಕಲ್, ಅ.21ರಂದು ಅತ್ತಾವರ ಕೆಎಂಸಿ ಆಸ್ಪತ್ರೆಯ ಬಳಿಯಿರುವ ದುರ್ಗಾ ಹೋಟೇಲ್ ಮುಂದೆ ನಿಲ್ಲಿಸಿದ್ದ ಬಜಾಜ್ ಡಿಸ್ಕವರಿ ಬೈಕ್ ಹಾಗೂ ಅ.22ರಂದು ಹೊಯಿಗೆ ಬಜಾರ್ ಭಗವತಿ ಅಪಾರ್ಟ್ಮೆಂಟ್ ಕೆಳಗೆ ನಿಲ್ಲಿಸಿದ್ದ ಕೆ.ಟಿ.ಎಂ. ಡ್ಯೂಕ್ ಬೈಕ್ ಕಳವಾಗಿರುತ್ತದೆ. ಅದೇ ರೀತಿ, ಉಳ್ಳಾಲ ಪೊಲೀಸ್ ಠಾಣೆ ವ್ಯಾಪ್ತಿಯ ದೇರಳಕಟ್ಟೆಯ ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯ ಬಳಿ ಅ.18 ರಂದು ನಿಲ್ಲಿಸಿದ್ದ ರಾಯಲ್ ಎನ್ ಪೀಲ್ಡ್ ಬುಲೆಟ್ ಮೋಟಾರ್ ಸೈಕಲ್ ಹಾಗೂ ಕುತ್ತಾರ್ ಪಂಡಿತ್ ಹೌಸ್ ಬಳಿ ಅ.21ರಂದು ಯಮಹಾ ಎಫ್.ಜೆಡ್ ಮೋಟಾರ್ ಸೈಕಲ್ ಕಳವಾಗಿತ್ತು. ಈ ಸಂಬಂಧ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ 4 ಪ್ರಕರಣಗಳು ಹಾಗೂ ಉಳ್ಳಾಲ ಪೊಲೀಸ್ ಠಾಣೆಯಲ್ಲಿ 2 ಪ್ರಕರಣಗಳು ದಾಖಲಾಗಿತ್ತು.

ದ್ವಿಚಕ್ರ ವಾಹನಗಳ ಕಳವುಗೈದ ಆರೋಪಿಗಳ ಪತ್ತೆಗಾಗಿ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರು ಹಾಗೂ ಅಪರಾಧ ಪತ್ತೆ ಸಿಬ್ಬಂದಿಗಳನ್ನೊಳಗೊಂಡ ವಿಶೇಷ ತಂಡವನ್ನು ರಚಿಸಲಾಗಿತ್ತು. ಸದರಿ ತಂಡವು ತನಿಖೆ ನಡೆಸಿ, ಮಾಹಿತಿ ಸಂಗ್ರಹಿಸುವ ಮೂಲಕ ಒಟ್ಟು 7 ಜನರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿರುತ್ತದೆ.

ಮೂಡುಶೆಡ್ಡೆ ಗ್ರಾಮದ ಮಹಮ್ಮದ್ ಸಿಯಾಮ್ (19), ಮೊಹಮ್ಮದ್ ರಾಹೀಲ್ (18)  ಬೈಕಂಪಾಡಿಯ ತೋಕೂರು ನಿವಾಸಿ ಮುಹಮ್ಮದ್ ನಾಸೀಫ್ @ ನಸೀಫ್ (19) ಮತ್ತು ತಿರುವೈಲು  ನಿವಾಸಿ ನಿಖೀಲ್ (18) ಬಂಧಿತರು. ಬಂಧಿತರಲ್ಲಿ 03 ಕಾನೂನಿನೊಂದಿಗೆ ಸಂಘರ್ಷಕ್ಕೊಳಗಾದ ಬಾಲಕರಾಗಿದ್ದು, ಅವರನ್ನು ಕೌನ್ಸೆಲಿಂಗ್ ಮಾಡಲಾಗಿದೆ.  ಆರೋಪಿಗಳಿಂದ ಕಳವು ಮಾಡಲಾಗಿದ್ದ ಎಲ್ಲಾ 06 ದ್ವಿಚಕ್ರ ವಾಹನಗಳನ್ನು, ಮತ್ತು ಕೃತ್ಯಕ್ಕೆ ಬಳಸಿದ 03 ದ್ವಿಚಕ್ರ ವಾಹನಗಳನ್ನು ವಶಪಡಿಸಿದ್ದು ಇವುಗಳ ಒಟ್ಟು ಅಂದಾಜು ಮೌಲ್ಯ-4.50.000/- ರೂ ಆಗಿರುತ್ತದೆ.

ವಿಚಾರಣೆಯಿಂದ, ಆರೋಪಿಗಳು ಇತರ ದುಶ್ಕೃತ್ಯಗಳಾದ ಸರಗಳ್ಳತನ ಮುಂತಾದ ಕೃತ್ಯಗಳನ್ನು ಎಸಗಿ ಅದರ ಲಾಬಾಂಶದಿಂದ  ಐಷಾರಾಮಿ ಜೀವನ ನಡೆಸುವ ಉದ್ದೇಶದಿಂದ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದರು ಎಂಬುದು ತಿಳಿದುಬಂದಿದೆ. ಬೆಲೆಬಾಳುವ ಮೋಟಾರ್ ಸೈಕಲ್ ಗಳನ್ನು ಗುರಿಯಾಗಿಸಿ, ನಿಲುಗಡೆ ಮಾಡಿದ್ದ ಸ್ಥಳಗಳಿಂದ ಕಳವು ಮಾಡಿ, ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದುದಾಗಿ ತನಿಖೆಯಿಂದ ತಿಳಿದುಬಂದಿರುತ್ತದೆ. ಬಂಧಿತ 4 ಜನ ಆರೋಪಿಗಳನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.

ಪತ್ತೆ ಕಾರ್ಯದಲ್ಲಿ ಮಂ. ದಕ್ಷಿಣ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ರಾಘವೇಂದ್ರ ಬೈಂದೂರು ನೇತೃತ್ವದಲ್ಲಿ ಪಿ.ಎಸ್.ಐ ಗಳಾದ ಮಾರುತಿ, ನವೀನ್, ರೇಖಾ.ಹಾಗೂ ಕ್ರೈಂ ಸಿಬ್ಬಂದಿಗಳಾದ ಲಕ್ಷ್ಮಣ ಸಾಲೋಟಗಿ, ಪುಟ್ಟರಾಮ್, ಲತೇಶ್  ನಾಯ್ಕ್,ಸಾಗರ ದೇವಕತ್ತಿ, ಆಂಜನೇಯ ಕೆ.ಎಸ್, ರೇಣುಕಾ ಎಂ ಅವರು ಭಾಗವಹಿಸಿದ್ದು, ಮಂಗಳೂರು ದಕ್ಷಿಣ ಠಾಣಾ ಅಧಿಕಾರಿ ಸಿಬ್ಬಂದಿಯವರು ಪತ್ತೆ ಕಾರ್ಯಕ್ಕೆ ಸಹಕರಿಸಿದ್ದಾರೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಸರ್ಕಾರಿ ವಸತಿಗೃಹದಲ್ಲಿ ಮಹಿಳೆ ಶಂಕಾಸ್ಪದ ಸಾವು: ಬಂಟ್ವಾಳ ಪೊಲೀಸರಿಂದ ಆರೋಪಿ ಬಂಧನ

Next Post

ಬೆಳ್ತಂಗಡಿ: ಪರಿಶಿಷ್ಟ ಜಾತಿಯ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ; 61 ವರ್ಷದ ವ್ಯಕ್ತಿಯ ಬಂಧನ

Related Posts

ಬೆಳ್ತಂಗಡಿ: ಪರಿಶಿಷ್ಟ ಜಾತಿಯ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ; 61 ವರ್ಷದ ವ್ಯಕ್ತಿಯ ಬಂಧನ
ಕ್ರೈಮ್ ನ್ಯೂಸ್

ಬೆಳ್ತಂಗಡಿ: ಪರಿಶಿಷ್ಟ ಜಾತಿಯ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ; 61 ವರ್ಷದ ವ್ಯಕ್ತಿಯ ಬಂಧನ

October 26, 2026
5
ಸರ್ಕಾರಿ ವಸತಿಗೃಹದಲ್ಲಿ ಮಹಿಳೆ ಶಂಕಾಸ್ಪದ ಸಾವು: ಬಂಟ್ವಾಳ ಪೊಲೀಸರಿಂದ ಆರೋಪಿ ಬಂಧನ
ಕ್ರೈಮ್ ನ್ಯೂಸ್

ಸರ್ಕಾರಿ ವಸತಿಗೃಹದಲ್ಲಿ ಮಹಿಳೆ ಶಂಕಾಸ್ಪದ ಸಾವು: ಬಂಟ್ವಾಳ ಪೊಲೀಸರಿಂದ ಆರೋಪಿ ಬಂಧನ

October 24, 2026
32
Next Post
ಬೆಳ್ತಂಗಡಿ: ಪರಿಶಿಷ್ಟ ಜಾತಿಯ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ; 61 ವರ್ಷದ ವ್ಯಕ್ತಿಯ ಬಂಧನ

ಬೆಳ್ತಂಗಡಿ: ಪರಿಶಿಷ್ಟ ಜಾತಿಯ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ; 61 ವರ್ಷದ ವ್ಯಕ್ತಿಯ ಬಂಧನ

Discussion about this post

Recent News

ಜೈಲರ್ 2 ಚಿತ್ರದಲ್ಲಿ ಬಾಲಿವುಡ್‌ ನಟಿ ಬಾನಿ ಜೆ ಅವರ ಡ್ಯೂಪ್ ಆರ್ಟಿಸ್ಟ್‌ ಆಗಿ ಗಮನ ಸೆಳೆದಿರುವ ಮಂಗಳೂರಿನ ಯಶಸ್ವಿನಿ ದೇವಾಡಿಗ

ಜೈಲರ್ 2 ಚಿತ್ರದಲ್ಲಿ ಬಾಲಿವುಡ್‌ ನಟಿ ಬಾನಿ ಜೆ ಅವರ ಡ್ಯೂಪ್ ಆರ್ಟಿಸ್ಟ್‌ ಆಗಿ ಗಮನ ಸೆಳೆದಿರುವ ಮಂಗಳೂರಿನ ಯಶಸ್ವಿನಿ ದೇವಾಡಿಗ

October 26, 2026
0
ಬೆಳ್ತಂಗಡಿ: ಪರಿಶಿಷ್ಟ ಜಾತಿಯ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ; 61 ವರ್ಷದ ವ್ಯಕ್ತಿಯ ಬಂಧನ

ಬೆಳ್ತಂಗಡಿ: ಪರಿಶಿಷ್ಟ ಜಾತಿಯ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ; 61 ವರ್ಷದ ವ್ಯಕ್ತಿಯ ಬಂಧನ

October 26, 2026
5
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಜೈಲರ್ 2 ಚಿತ್ರದಲ್ಲಿ ಬಾಲಿವುಡ್‌ ನಟಿ ಬಾನಿ ಜೆ ಅವರ ಡ್ಯೂಪ್ ಆರ್ಟಿಸ್ಟ್‌ ಆಗಿ ಗಮನ ಸೆಳೆದಿರುವ ಮಂಗಳೂರಿನ ಯಶಸ್ವಿನಿ ದೇವಾಡಿಗ

ಜೈಲರ್ 2 ಚಿತ್ರದಲ್ಲಿ ಬಾಲಿವುಡ್‌ ನಟಿ ಬಾನಿ ಜೆ ಅವರ ಡ್ಯೂಪ್ ಆರ್ಟಿಸ್ಟ್‌ ಆಗಿ ಗಮನ ಸೆಳೆದಿರುವ ಮಂಗಳೂರಿನ ಯಶಸ್ವಿನಿ ದೇವಾಡಿಗ

October 26, 2026
ಬೆಳ್ತಂಗಡಿ: ಪರಿಶಿಷ್ಟ ಜಾತಿಯ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ; 61 ವರ್ಷದ ವ್ಯಕ್ತಿಯ ಬಂಧನ

ಬೆಳ್ತಂಗಡಿ: ಪರಿಶಿಷ್ಟ ಜಾತಿಯ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ; 61 ವರ್ಷದ ವ್ಯಕ್ತಿಯ ಬಂಧನ

October 26, 2026
ಐಷಾರಾಮಿ ಜೀವನಕ್ಕಾಗಿ ನಿಲ್ಲಿಸಿದ್ದ ಬೈಕ್ ಗಳನ್ನು ಕದ್ದು ಮಾರುತ್ತಿದ್ದ ಹದಿಹರೆಯದ ಯುವಕರ ಜಾಲ ಪತ್ತೆ, 3 ಅಪ್ರಾಪ್ತ ಬಾಲಕರು ಸೇರಿ 7 ಆರೋಪಿಗಳು ವಶಕ್ಕೆ

ಐಷಾರಾಮಿ ಜೀವನಕ್ಕಾಗಿ ನಿಲ್ಲಿಸಿದ್ದ ಬೈಕ್ ಗಳನ್ನು ಕದ್ದು ಮಾರುತ್ತಿದ್ದ ಹದಿಹರೆಯದ ಯುವಕರ ಜಾಲ ಪತ್ತೆ, 3 ಅಪ್ರಾಪ್ತ ಬಾಲಕರು ಸೇರಿ 7 ಆರೋಪಿಗಳು ವಶಕ್ಕೆ

October 26, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d