ಮಂಗಳೂರು (ದಕ್ಷಿಣ ಕನ್ನಡ): ಭಾರತೀಯ ಚಿತ್ರರಂಗದ ದಿಗ್ಗಜ ತಾರೆ ರಜಿನಿಕಾಂತ್ ಮುಖ್ಯಭೂಮಿಕೆಯ ಚಿತ್ರಗಳಿಗೆ ವಿಶ್ವಾದ್ಯಂತ ಅಪಾರ ಸಂಖ್ಯೆಯ ಪ್ರೇಕ್ಷಕರಿದ್ದಾರೆ. ಅವರ ಸಿನಿಮಾದಲ್ಲಿ ನಟಿಸುವುದು ಪ್ರತಿಯೊಬ್ಬ ಕಲಾವಿದನಿಗೂ ಒಂದು ದೊಡ್ಡ ಗೌರವದ ಕ್ಷಣ. ಅಂತಹ ಅಪರೂಪದ ಅವಕಾಶವನ್ನು ಮಂಗಳೂರಿನ ಯುವ ಪ್ರತಿಭೆ ಯಶಸ್ವಿನಿ ದೇವಾಡಿಗ ಪಡೆದುಕೊಂಡಿದ್ದಾರೆ.
ಮಂಗಳೂರಿನಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿ, 2023ರಲ್ಲಿ ಥಾಯ್ಲೆಂಡ್ನಲ್ಲಿ ನಡೆದ ಸ್ಪರ್ಧೆಯಲ್ಲಿ ಮಿಸ್ ಟೀನ್ ಸೂಪರ್ ಗ್ಲೋಬ್ ಕಿರೀಟ ಗೆದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದ ಯಶಸ್ವಿನಿ ದೇವಾಡಿಗ, ಸದ್ಯ ಬೆಂಗಳೂರಿನ ಎಂ.ಎಸ್.ರಾಮಯ್ಯ ಕಾಲೇಜಿನಲ್ಲಿ ಕಾನೂನು ಪದವಿಯ ವ್ಯಾಸಂಗ ಮಾಡುತ್ತಿದ್ದಾರೆ. ಜೊತೆಗೆ, ವೈರಾ ಪೆಜೆಂಟ್ರಿ ಮತ್ತು ಮಾಡೆಲಿಂಗ್ ಶಾಲೆ ಮುನ್ನಡೆಸುತ್ತಿದ್ದಾರೆ. ಇದೀಗ ಜೈಲರ್ 2 ಚಿತ್ರದಲ್ಲಿ ಡ್ಯೂಪ್ ಮೂಲಕ ಗಮನಸೆಳೆದಿದ್ದಾರೆ.ಜೈಲರ್ 2 ಚಿತ್ರದಲ್ಲಿ ಮಂಗಳೂರಿನ ಯಶಸ್ವಿನಿ ದೇವಾಡಿಗ ಅವರು ಬಾಲಿವುಡ್ ನಟಿ ಮತ್ತು ಮಾಡೆಲ್ ಬಾನಿ ಜೆ ಅವರ ಡ್ಯೂಪ್ ಆರ್ಟಿಸ್ಟ್ ಆಗಿ ನಟಿಸಿದ್ದಾರೆ. ಅವರ ಅಭಿನಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ. ಈ ಮೂಲಕ ಯಶಸ್ವಿನಿ ಅವರು ರಜನಿಕಾಂತ್, ಹೃತಿಕ್ ರೋಷನ್, ರಮ್ಯಾಕೃಷ್ಣನ್, ವಿದ್ಯಾಬಾಲನ್ ಅವರಂತಹ ಖ್ಯಾತರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಯಶಸ್ವಿನಿ ಅವರು ಟಾಕ್ಸಿಕ್, ಡೆವಿಲ್, ಕಲ್ಟ್ ಸಿನೆಮಾಗಳಲ್ಲೂ ನಟಿಸಿದ್ದಾರೆ. ಡ್ಯೂಪ್ ಮಾತ್ರವಲ್ಲದೇ ಮುಖ ಪರಿಚಯದೊಂದಿಗೂ ಕೆಲ ಚಿತ್ರಗಳಲ್ಲಿ ನಟಿಸಿದ್ದಾರೆ.
ಮಿಸ್ ಟೀನ್ ಸೂಪರ್ ಗ್ಲೋಬ್ ವಿನ್ನರ್: ಯಶಸ್ವಿನಿ ದೇವಾಡಿಗ ಅವರು ಮಂಗಳೂರಿನಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿ, 2023ರಲ್ಲಿ ಥಾಯ್ಲೆಂಡ್ನಲ್ಲಿ ನಡೆದ ಸ್ಪರ್ಧೆಯಲ್ಲಿ ಮಿಸ್ ಟೀನ್ ಸೂಪರ್ ಗ್ಲೋಬ್ ಕಿರೀಟ ಗೆದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದರು. ಸದ್ಯ ಬೆಂಗಳೂರಿನಲ್ಲಿ ಕಾನೂನು ಪದವಿ ವ್ಯಾಸಂಗ ಮಾಡುತ್ತಿದ್ದಾರೆ.
Related
Discover more from Coastal Times Kannada
Subscribe to get the latest posts sent to your email.
Discussion about this post