• About us
  • Contact us
  • Disclaimer
Tuesday, October 27, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಉದ್ಯೋಗಕ್ಕಾಗಿ ಇಸ್ರೇಲ್‌ಗೆ ತೆರಳಿದ್ದ ಮಂಗಳೂರಿನ ಪಡೀಲ್ ಸಮೀಪದ ಕಣ್ಣೂರು ಕೊಡೆಕ್ಕಲ್ ನಿವಾಸಿ ನಿಗೂಢ ನಾಪತ್ತೆ

Coastal Times by Coastal Times
October 26, 2026
in ಕರಾವಳಿ
ಉದ್ಯೋಗಕ್ಕಾಗಿ ಇಸ್ರೇಲ್‌ಗೆ ತೆರಳಿದ್ದ ಮಂಗಳೂರಿನ ಪಡೀಲ್ ಸಮೀಪದ ಕಣ್ಣೂರು ಕೊಡೆಕ್ಕಲ್ ನಿವಾಸಿ ನಿಗೂಢ ನಾಪತ್ತೆ
58
VIEWS
WhatsappTelegramShare on FacebookShare on Twitter

ಮಂಗಳೂರು: ಮಂಗಳೂರಿನ ಪಡೀಲ್ ಸಮೀಪದ ಕಣ್ಣೂರು ಕೊಡೆಕ್ಕಲ್ ನಿವಾಸಿ ಶಡ್ರಕ್ ಇಮ್ಯಾನುವಲ್(41) ನಾಪತ್ತೆಯಾದ ವ್ಯಕ್ತಿ. ಶಡ್ರಕ್ ಇಮ್ಯಾನುವಲ್ ಅವರು ಮಂಗಳೂರಿನ ನೇಮಕಾತಿ ಸಂಸ್ಥೆಯೊಂದರ ಮೂಲಕ ಅಧಿಕೃತ ಉದ್ಯೋಗ ವೀಸಾ ಪಡೆದುಕೊಂಡು ದಿನಾಂಕ 2025ರ ಮೇ 16ರಂದು ಇಸ್ರೇಲ್‌ಗೆ ಪ್ರಯಾಣ ಬೆಳೆಸಿದ್ದರು. ಅವರು ಇಸ್ರೇಲ್‌ನ ನಜರೆತ್ ಸಮೀಪದ ನೊಫ್ ಹಗಲಿಲ್ ಎಂಬಲ್ಲಿರುವ ಯುಸಿಟಿ ಲಿಕ್ವಿಡ್ ಸೊಲ್ಯೂಷನ್ಸ್ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಕಳೆದ ಹಲವು ದಿನಗಳಿಂದ ನಿಗೂಢವಾಗಿ ನಾಪತ್ತೆಯಾಗಿದ್ದಾರೆ, ಇದರಿಂದ ಆತಂಕಗೊಂಡಿರುವ ಕುಟುಂಬಸ್ಥರು ಮಂಗಳೂರು ನಗರ ಪೊಲೀಸ್ ಆಯುಕ್ತರ ಜೊತೆಗೆ ಇಸ್ರೇಲ್‌ನ ಟೆಲ್ ಅವೀವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೂ ಅಧಿಕೃತ ಇಮೇಲ್ ದೂರು ಸಲ್ಲಿಸಿ ತುರ್ತು ರಕ್ಷಣೆಗೆ ಮನವಿ ಮಾಡಿದ್ದಾರೆ.

ಪತ್ನಿ ಡೇಸಿ ಇಮ್ಯಾನುವಲ್ ಅವರು ನೀಡಿರುವ ಮಾಹಿತಿಯ ಪ್ರಕಾರ, ಶಡ್ರಕ್ ಅವರು ನಿತ್ಯವೂ ಕುಟುಂಬದೊಂದಿಗೆ ವಾಟ್ಸ್‌ಆ್ಯಪ್ ಮೂಲಕ ಸಂಪರ್ಕದಲ್ಲಿದ್ದರು. ಆದರೆ, ಅಕ್ಟೋಬರ್ 16, 2026ರ ಶುಕ್ರವಾರ ರಾತ್ರಿ 8:05ರ ಸುಮಾರಿಗೆ ವಾಟ್ಸ್‌ಆ್ಯಪ್ ವಿಡಿಯೋ ಕಾಲ್ ಮೂಲಕ ಸುಮಾರು 22 ನಿಮಿಷಗಳ ಕಾಲ ಕುಟುಂಬದೊಂದಿಗೆ ಮಾತನಾಡಿದ್ದರು. ಅದಾದ ನಂತರ ಅವರ ಮೊಬೈಲ್ ಸಂಪರ್ಕ ಸಂಪೂರ್ಣವಾಗಿ ಕಡಿದುಹೋಗಿದೆ. ಅಕ್ಟೋಬರ್ 18ರಂದು ಕುಟುಂಬಸ್ಥರು ಹಾಗೂ ಇಸ್ರೇಲ್‌ನಲ್ಲಿರುವ ಅವರ ಸ್ಥಳೀಯ ಸ್ನೇಹಿತರು ನಿರಂತರವಾಗಿ ವಾಟ್ಸ್‌ಆ್ಯಪ್ ಕರೆ ಮಾಡಲು ಪ್ರಯತ್ನಿಸಿದರೂ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಕಂಪನಿಯ ಕೆಲಸದ ಸ್ಥಳದಲ್ಲೂ ಅವರು ಕಾಣಿಸದೆ ಇರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.

ಪತಿ ಸಂಪರ್ಕಕ್ಕೆ ಸಿಗದೆ ಕಂಗಾಲಾದ ಕುಟುಂಬಸ್ಥರು ನೇರವಾಗಿ ಮಂಗಳೂರು ನಗರ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ಲಿಖಿತ ದೂರು ಸಲ್ಲಿಸಿ, ವಿದೇಶಾಂಗ ಸಚಿವಾಲಯ ಹಾಗೂ ರಾಯಭಾರ ಕಚೇರಿಯ ಮುಖಾಂತರ ಪತ್ತೆ ಕಾರ್ಯ ಚುರುಕುಗೊಳಿಸಲು ವಿನಂತಿಸಿಕೊಂಡಿದ್ದಾರೆ. ಕಮಿಷನರ್ ಅವರು ಪ್ರಕರಣದ ಗಂಭೀರತೆ ಪರಿಗಣಿಸಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಕುಟುಂಬ ತಿಳಿಸಿದೆ.

21-10-2026ರಂದು ಟೆಲ್ ಅವೀವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಕೌನ್ಸಿಲರ್ ಅಧಿಕಾರಿಗೆ ಪತ್ನಿ ಡೇಸಿ ಇಮ್ಯಾನುವಲ್ ಅವರು ತುರ್ತು ಇಮೇಲ್ ದೂರು ರವಾನಿಸಿದ್ದಾರೆ. ಪತ್ರದಲ್ಲಿ, ಇಸ್ರೇಲ್ ಸ್ಥಳೀಯ ಪೊಲೀಸರೊಂದಿಗೆ ಸಮನ್ವಯ ಸಾಧಿಸಿ ತಕ್ಷಣವೇ ನಾಪತ್ತೆ ಪ್ರಕರಣ ದಾಖಲಿಸಿ ಶೋಧ ಕಾರ್ಯ ನಡೆಸಬೇಕು. ಶಡ್ರಕ್ ಕೆಲಸ ಮಾಡುತ್ತಿದ್ದ ಯುಸಿಟಿ ಲಿಕ್ವಿಡ್ ಸೊಲ್ಯೂಷನ್ಸ್ ಕಂಪನಿ ಮತ್ತು ನೇಮಕಾತಿ ಏಜೆನ್ಸಿಯನ್ನು ಸಂಪರ್ಕಿಸಿ ಅವರ ಕೊನೆಯ ಸ್ಥಳದ ಮಾಹಿತಿ ಪಡೆಯಬೇಕು. ಅಹಿತಕರ ಘಟನೆಯ ಹಿನ್ನೆಲೆಯಲ್ಲಿ ಅವರು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆಯೇ ಅಥವಾ ಸ್ಥಳೀಯ ಭದ್ರತಾ ಪಡೆಗಳ ವಶದಲ್ಲಿದ್ದಾರೆಯೇ ಎಂಬುದನ್ನು ಪರಿಶೀಲಿಸಿ ಕುಟುಂಬಕ್ಕೆ ನಿರಂತರ ಮಾಹಿತಿ ನೀಡಬೇಕು ಎಂದು ಕಳಕಳಿಯ ವಿನಂತಿ ಮಾಡಿದ್ದಾರೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಜೈಲರ್ 2 ಚಿತ್ರದಲ್ಲಿ ಬಾಲಿವುಡ್‌ ನಟಿ ಬಾನಿ ಜೆ ಅವರ ಡ್ಯೂಪ್ ಆರ್ಟಿಸ್ಟ್‌ ಆಗಿ ಗಮನ ಸೆಳೆದಿರುವ ಮಂಗಳೂರಿನ ಯಶಸ್ವಿನಿ ದೇವಾಡಿಗ

Next Post

ಜಪ್ಪಿನಮೊಗರು ಹಿಟ್ ಎಂಡ್ ರನ್, ಬಸ್ ಡಿಕ್ಕಿಯಾಗಿ ಅಪರಿಚಿತ ಯುವಕ ಮೃತ್ಯು, ಪ್ರಯಾಣಿಕರು ಚಾಲಕನಲ್ಲಿ ಬಸ್ ನಿಲ್ಲಿಸುವಂತೆ ಹೇಳಿದರೂ ಆತ ನಿಲ್ಲಿಸದೆ ನಿರ್ಲಕ್ಷ್ಯ

Related Posts

ಜೈಲರ್ 2 ಚಿತ್ರದಲ್ಲಿ ಬಾಲಿವುಡ್‌ ನಟಿ ಬಾನಿ ಜೆ ಅವರ ಡ್ಯೂಪ್ ಆರ್ಟಿಸ್ಟ್‌ ಆಗಿ ಗಮನ ಸೆಳೆದಿರುವ ಮಂಗಳೂರಿನ ಯಶಸ್ವಿನಿ ದೇವಾಡಿಗ
ಕರಾವಳಿ

ಜೈಲರ್ 2 ಚಿತ್ರದಲ್ಲಿ ಬಾಲಿವುಡ್‌ ನಟಿ ಬಾನಿ ಜೆ ಅವರ ಡ್ಯೂಪ್ ಆರ್ಟಿಸ್ಟ್‌ ಆಗಿ ಗಮನ ಸೆಳೆದಿರುವ ಮಂಗಳೂರಿನ ಯಶಸ್ವಿನಿ ದೇವಾಡಿಗ

October 26, 2026
67
19 ಗಂಟೆ 29 ನಿಮಿಷಗಳಲ್ಲಿ 2,000 ಮೆಹಂದಿ ಕೋನ್‌ಗಳನ್ನು ತಯಾರಿಸಿ ‘ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್’ ದಾಖಲೆ ಬರೆದ ಮಂಗಳೂರಿನ ಶಿವಾನಿ ಪ್ರಸಾದ್
ಕರಾವಳಿ

19 ಗಂಟೆ 29 ನಿಮಿಷಗಳಲ್ಲಿ 2,000 ಮೆಹಂದಿ ಕೋನ್‌ಗಳನ್ನು ತಯಾರಿಸಿ ‘ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್’ ದಾಖಲೆ ಬರೆದ ಮಂಗಳೂರಿನ ಶಿವಾನಿ ಪ್ರಸಾದ್

October 23, 2026
22
Next Post
ಜಪ್ಪಿನಮೊಗರು ಹಿಟ್ ಎಂಡ್ ರನ್, ಬಸ್ ಡಿಕ್ಕಿಯಾಗಿ ಅಪರಿಚಿತ ಯುವಕ ಮೃತ್ಯು, ಪ್ರಯಾಣಿಕರು ಚಾಲಕನಲ್ಲಿ ಬಸ್ ನಿಲ್ಲಿಸುವಂತೆ ಹೇಳಿದರೂ ಆತ ನಿಲ್ಲಿಸದೆ ನಿರ್ಲಕ್ಷ್ಯ

ಜಪ್ಪಿನಮೊಗರು ಹಿಟ್ ಎಂಡ್ ರನ್, ಬಸ್ ಡಿಕ್ಕಿಯಾಗಿ ಅಪರಿಚಿತ ಯುವಕ ಮೃತ್ಯು, ಪ್ರಯಾಣಿಕರು ಚಾಲಕನಲ್ಲಿ ಬಸ್ ನಿಲ್ಲಿಸುವಂತೆ ಹೇಳಿದರೂ ಆತ ನಿಲ್ಲಿಸದೆ ನಿರ್ಲಕ್ಷ್ಯ

Discussion about this post

Recent News

ಖಾಸಗಿ ಶಾಲೆಗಳಿಂದ 100 ಕೋಟಿ ರೂ. ಲಂಚ ಪ್ರಕರಣ; ತಮಿಳುನಾಡಿನ ಡಿಎಂಕೆ ನಾಯಕ ಮಾಜಿ ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಪೊಯ್ಯಮೊಳಿ ಬಂಧನ

ಖಾಸಗಿ ಶಾಲೆಗಳಿಂದ 100 ಕೋಟಿ ರೂ. ಲಂಚ ಪ್ರಕರಣ; ತಮಿಳುನಾಡಿನ ಡಿಎಂಕೆ ನಾಯಕ ಮಾಜಿ ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಪೊಯ್ಯಮೊಳಿ ಬಂಧನ

October 27, 2026
24
ಜಪ್ಪಿನಮೊಗರು ಹಿಟ್ ಎಂಡ್ ರನ್, ಬಸ್ ಡಿಕ್ಕಿಯಾಗಿ ಅಪರಿಚಿತ ಯುವಕ ಮೃತ್ಯು, ಪ್ರಯಾಣಿಕರು ಚಾಲಕನಲ್ಲಿ ಬಸ್ ನಿಲ್ಲಿಸುವಂತೆ ಹೇಳಿದರೂ ಆತ ನಿಲ್ಲಿಸದೆ ನಿರ್ಲಕ್ಷ್ಯ

ಜಪ್ಪಿನಮೊಗರು ಹಿಟ್ ಎಂಡ್ ರನ್, ಬಸ್ ಡಿಕ್ಕಿಯಾಗಿ ಅಪರಿಚಿತ ಯುವಕ ಮೃತ್ಯು, ಪ್ರಯಾಣಿಕರು ಚಾಲಕನಲ್ಲಿ ಬಸ್ ನಿಲ್ಲಿಸುವಂತೆ ಹೇಳಿದರೂ ಆತ ನಿಲ್ಲಿಸದೆ ನಿರ್ಲಕ್ಷ್ಯ

October 27, 2026
50
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಖಾಸಗಿ ಶಾಲೆಗಳಿಂದ 100 ಕೋಟಿ ರೂ. ಲಂಚ ಪ್ರಕರಣ; ತಮಿಳುನಾಡಿನ ಡಿಎಂಕೆ ನಾಯಕ ಮಾಜಿ ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಪೊಯ್ಯಮೊಳಿ ಬಂಧನ

ಖಾಸಗಿ ಶಾಲೆಗಳಿಂದ 100 ಕೋಟಿ ರೂ. ಲಂಚ ಪ್ರಕರಣ; ತಮಿಳುನಾಡಿನ ಡಿಎಂಕೆ ನಾಯಕ ಮಾಜಿ ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಪೊಯ್ಯಮೊಳಿ ಬಂಧನ

October 27, 2026
ಜಪ್ಪಿನಮೊಗರು ಹಿಟ್ ಎಂಡ್ ರನ್, ಬಸ್ ಡಿಕ್ಕಿಯಾಗಿ ಅಪರಿಚಿತ ಯುವಕ ಮೃತ್ಯು, ಪ್ರಯಾಣಿಕರು ಚಾಲಕನಲ್ಲಿ ಬಸ್ ನಿಲ್ಲಿಸುವಂತೆ ಹೇಳಿದರೂ ಆತ ನಿಲ್ಲಿಸದೆ ನಿರ್ಲಕ್ಷ್ಯ

ಜಪ್ಪಿನಮೊಗರು ಹಿಟ್ ಎಂಡ್ ರನ್, ಬಸ್ ಡಿಕ್ಕಿಯಾಗಿ ಅಪರಿಚಿತ ಯುವಕ ಮೃತ್ಯು, ಪ್ರಯಾಣಿಕರು ಚಾಲಕನಲ್ಲಿ ಬಸ್ ನಿಲ್ಲಿಸುವಂತೆ ಹೇಳಿದರೂ ಆತ ನಿಲ್ಲಿಸದೆ ನಿರ್ಲಕ್ಷ್ಯ

October 27, 2026
ಉದ್ಯೋಗಕ್ಕಾಗಿ ಇಸ್ರೇಲ್‌ಗೆ ತೆರಳಿದ್ದ ಮಂಗಳೂರಿನ ಪಡೀಲ್ ಸಮೀಪದ ಕಣ್ಣೂರು ಕೊಡೆಕ್ಕಲ್ ನಿವಾಸಿ ನಿಗೂಢ ನಾಪತ್ತೆ

ಉದ್ಯೋಗಕ್ಕಾಗಿ ಇಸ್ರೇಲ್‌ಗೆ ತೆರಳಿದ್ದ ಮಂಗಳೂರಿನ ಪಡೀಲ್ ಸಮೀಪದ ಕಣ್ಣೂರು ಕೊಡೆಕ್ಕಲ್ ನಿವಾಸಿ ನಿಗೂಢ ನಾಪತ್ತೆ

October 26, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d