ಬೆಳ್ತಂಗಡಿ, ಜ.10: ವಾರದ ಹಿಂದೆ ನಾಪತ್ತೆಯಾಗಿದ್ದ ಮುಸ್ಲಿಂ ಯುವತಿ ಇದೀಗ ಹಿಂದೂ ಯುವಕನ ಜೊತೆ ವಿವಾಹವಾಗಿ ಪತ್ತೆಯಾಗಿದ್ದಾಳೆ. ಹರೀಶ್ ಗೌಡ ಮತ್ತು ಯುವತಿ, ಹಿಂದೂ ಸಂಪ್ರದಾಯದಂತೆ ಕೊತ್ರೊಟ್ಟು ಸತ್ಯನಾರಾಯಣ ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ. ವಿವಾಹದ ಬಳಿಕ ಧರ್ಮಸ್ಥಳ ಪೊಲೀಸ್ ಠಾಣೆಗೆ ಬಂದಿದ್ದಾರೆ.
ಬೆಳ್ತಂಗಡಿ ತಾಲೂಕಿನ ಪಟ್ರಮೆ ನಿವಾಸಿ ಹರೀಶ್ ಗೌಡ ಹಾಗೂ ಮೂಡಬಿದಿರೆಯ ಯುವತಿ ಕಳೆದೊಂದು ವರ್ಷದಿಂದ ಫೇಸ್ಬುಕ್ನಲ್ಲಿ ಪರಿಚಯವಾಗಿ ಪ್ರೀತಿ ಮಾಡಿದ್ದರು. ಬಳಿಕ ಕಂಪ್ಯೂಟರ್ ಕ್ಲಾಸ್ಗೆಂದು ಹೋಗಿದ್ದವಳು ನಾಪತ್ತೆ ಆಗಿದ್ದಳು. ಯುವತಿ ಮನೆಯವರು ಮೂಡಬಿದರೆ ಠಾಣೆಯಲ್ಲಿ ನಾಪತ್ತೆ ಕೇಸ್ ದಾಖಲಿಸಿದ್ದರು.
ಈ ನಡುವೆ ವಾರದ ಹಿಂದೆ ಮೂಡಬಿದಿರೆಯ ಕಂಪ್ಯೂಟರ್ ಕ್ಲಾಸ್ ಗೆ ತೆರಳಿದ್ದ ಯುವತಿ ನಾಪತ್ತೆಯಾಗಿದ್ದಳು. ಈ ಬಗ್ಗೆ ಆಕೆಯ ಪೋಷಕರು ಮೂಡಬಿದಿರೆ ಪೋಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಶುಕ್ರವಾರ ಯುವತಿ ಮತ್ತು ಹರೀಶ್ ಗೌಡ ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ. ಅಲ್ಲದೆ ಬೆಳ್ತಂಗಡಿ ವಿವಾಹ ನೊಂದಣಿ ಕಚೇರಿಯಲ್ಲಿ ವಿವಾಹ ನೊಂದಣಿ ಮಾಡಿಸಿದ್ದಾರೆ. ಯುವತಿ ಪತ್ತೆಯಾದ ವಿಚಾರ ಕೇಳಿ ಬೆಳ್ತಂಗಡಿಗೆ ಆಕೆಯ ಪೋಷಕರು ಆಗಮಿಸಿದ್ದರು. ಆದರೆ ಜೋಡಿ ತಾವು ವಿವಾಹವಾಗಿರುವುದಾಗಿ ಹೇಳಿದ್ದರಿಂದ ಆಕೆಯನ್ನು ಬಿಟ್ಟು ಪೋಷಕರು ತೆರಳಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post