• About us
  • Contact us
  • Disclaimer
Tuesday, February 17, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಇತಿಹಾಸ ಪ್ರಸಿದ್ಧ ಕುಲಶೇಖರದ ಶ್ರೀ ವೀರನಾರಾಯಣ ದೇವಸ್ಥಾನದ ಬ್ರಹ್ಮಕಲಶೋತ್ಸವ ಮೇ 21 ರಿಂದ ಆರಂಭ

Coastal Times by Coastal Times
May 11, 2023
in ಕರಾವಳಿ
ಇತಿಹಾಸ ಪ್ರಸಿದ್ಧ ಕುಲಶೇಖರದ ಶ್ರೀ ವೀರನಾರಾಯಣ ದೇವಸ್ಥಾನದ ಬ್ರಹ್ಮಕಲಶೋತ್ಸವ ಮೇ 21 ರಿಂದ ಆರಂಭ
248
VIEWS
WhatsappTelegramShare on FacebookShare on Twitter

ಮಂಗಳೂರು : ಜೀರ್ಣೋದ್ಧಾರಗೊಂಡಿರುವ ಇತಿಹಾಸ ಪ್ರಸಿದ್ಧ ಮಂಗಳೂರಿನ ಕುಲಶೇಖರದ ಶ್ರೀ ವೀರನಾರಾಯಣ ದೇವಸ್ಥಾನ ಪುನರ್ ಪ್ರತಿಷ್ಠಾಪನ ಬ್ರಹ್ಮಕಲಶೋತ್ಸವದ ಅಂಗವಾಗಿ ಮೇ 21ರಿಂದ ಮೊದಲ್ಗೊಂಡು ಮೇ 25ರವರೆಗೆ ವಿಜೃಂಭನೆಯಿಂದ ನಾನಾ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷರು ಹಾಗೂ ಅಧ್ಯಕ್ಷರು ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘ (ರಿ.) ಮಯೂರ್ ಉಳ್ಳಾಲ್ ತಿಳಿಸಿದ್ದಾರೆ.

ಮೇ 11ರ ಗುರುವಾರ ಇಲ್ಲಿನ ಶ್ರೀ ವೀರನಾರಾಯಣ ದೇವಸ್ಥಾನದಲ್ಲಿ ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿದ ಅವರು ಇತಿಹಾಸ ಪ್ರಸಿದ್ಧ ಮಂಗಳೂರಿನ  ಕುಲಶೇಖರದಲ್ಲಿರುವ ಶ್ರೀ ವೀರನಾರಾಯಣ ದೇವಸ್ಥಾನವು ಸರಿ ಸುಮಾರು 800 ವರ್ಷಗಳ ಅತೀ ಪುರಾತನ ದೇವಾಲಯ. ಕುಲಾಲರ ಕುಲದೇವರಾಗಿರುವ ಶ್ರೀ ವೀರನಾರಾಯಣ ದೇವಸ್ಥಾನವು ಈಗ ಬರೋಬ್ಬರಿ 74 ವರ್ಷಗಳ ಬಳಿಕ ಇದೀಗ ಜೀರ್ಣೋದ್ಧಾರ ನೆರವೇರಿ ಬ್ರಹ್ಮಕಲಶದ ಪರ್ವಕಾಲ ಕೂಡಿಬಂದಿದೆ. ವಿಷ್ಣುಸ್ವರೂಪಿ ಶ್ರೀ ವೀರನಾರಾಯಣ ದೇವರ ಸಾನಿಧ್ಯವು ದಕ್ಷಿಣ ಭಾರತದಲ್ಲಿಯೇ ಅತ್ಯಂತ ವಿರಳವಾಗಿರುವ ದೇವಸ್ಥಾನವಾಗಿರುತ್ತದೆ.

ಶ್ರೀ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವು 1946-48ರಲ್ಲಿ ನೆರವೇರಿದ್ದು, ಈಗಾಗಲೇ 74 ವರುಷಗಳು ಕಳೆದಿರುತ್ತದೆ. ಶ್ರೀ ಕ್ಷೇತ್ರದಲ್ಲಿ ಜಳಕದ ಕೆರೆ, ಉಂಬಳಿ ಬರುತ್ತಿದ್ದ ಕೃಷಿಭೂಮಿ ಹಾಗೂ ಕನಕಾಭರಣಗಳು ಇದ್ದವು ಎಂದು ಕಂಡುಬAದಿರುತ್ತದೆ. ಕಾಲಘಟ್ಟದಲ್ಲಿ ಈ ದೇವಾಲಯವು ಶಿಥಿಲಾವಸ್ಥೆಗೆ ತಲುಪಿ ಕ್ಷೇತ್ರವು ಪಾಳು ಬಿದ್ದಿತ್ತು. ಈ ಪಾಳುಬಿದ್ದ ದೇವಾಲಯವು ಹಲವಾರು ವರ್ಷಗಳಿಂದ ಜೀರ್ಣಾವಸ್ಥೆಯಲ್ಲೇ ಉಳಿದುಕೊಂಡಿತ್ತು. ಕುಲಾಲ ಸಮುದಾಯದ ಹಿರಿಯ ಮುಖಂಡರ ನೇತೃತ್ವದಲ್ಲಿ1943ರಿಂದ ಶ್ರೀ ಕ್ಷೇತ್ರದ ಆಡಳಿತವನ್ನು ನಡೆಸಿಕೊಂಡು ಸಮಸ್ತ ಕುಲಾಲ ಸಮುದಾಯದ ಧಾರ್ಮಿಕ ಚಿಂತನೆ ಏಳಿಗೆಗಾಗಿ ನಿತ್ಯ ಪೂಜೆ, ಜಾತ್ರೆ, ಉತ್ಸವಗಳನ್ನು ನಡೆಸಿಕೊಂಡು ಬಂದು ಕ್ಷೇತ್ರದ ಅಭಿವೃದ್ಧಿ ಪಥದತ್ತ ಕೊಂಡೊಯ್ಯುದು 1946ರಿಂದ 1948ರಲ್ಲಿ ದೇವಸ್ಥಾನ ಜೀಣೋದ್ಧಾರಗೊಂಡು ನೂತನ ಗರ್ಭಗುಡಿ ಸುತ್ತುಪೌಳಿ ನಿರ್ಮಿಸಿ ವೈದಿಕ ವಿಧಿವಿಧಾನಗಳೊಂದಿಗೆ ಬ್ರಹ್ಮಕಲಶವನ್ನು ವಿಜೃಂಭನೆಯಿAದ ನೆರವೇರಿಸಿದ್ದಾರೆ. ಇದರ ಜೊತೆಯಲ್ಲಿ ಶ್ರೀ ಕ್ಷೇತ್ರಕ್ಕೆ ಸಂಬoಧಿಸಿದ ನಾಗಸಾನಿಧ್ಯ, ಪರಿವಾರ ದೈವಗಳ ಪ್ರತಿಷ್ಠಾಪನೆ, ಆರಾಧ್ಯ ಮೂರ್ತಿಗೆ ಚಿನ್ನಾಭರಣ, ಚಂದ್ರಮAಡಲ ರಥ, ಎರಡು ಅಂತಸ್ತಿನ ಸುಸಜ್ಜಿತ ಸಮುದಾಯ ಭವನ, ಅರ್ಚಕರ ವಸತಿಗೃಹ ಮೊದಲಾದ ಅಭಿವೃದ್ಧಿ ಕಾರ್ಯಗಳನ್ನು ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘ (ರಿ.) ಮಂಗಳೂರು ಇದರ ಅಧೀನದಲ್ಲಿರುವ ಆಡಳಿತ ಸಮಿತಿ ನಡೆಸಿಕೊಂಡು ಬಂದಿದೆ.

ಜೀರ್ಣೋದ್ಧಾರದ ಪರ್ವಕಾಲ : ಇದರ ಜೊತೆಯಲ್ಲಿ ಶ್ರೀ ಕ್ಷೇತ್ರದಲ್ಲಿ ನಿರಂತರ ವೈದಿಕ ವಿಧಿವಿಧಾನಗಳಿಂದ ಶ್ರೀ ವೀರನಾರಾಯಣ ದೇವರಿಗೆ ಹಾಗೂ ಪರಿವಾರ ದೇವರುಗಳಿಗೆ ಪೂಜೆ, ಪುರಸ್ಥಾರ, ಉತ್ಸವಗಳನ್ನು ಸದಾ ನಿರ್ವಹಿಸುತ್ತಾ ಬಂದಿರುವುದು ಮಾತ್ರವಲ್ಲದೆ, ಶ್ರೀ ಕ್ಷೇತ್ರವು ಉತ್ತಮ ಧಾರ್ಮಿಕ ಕ್ಷೇತ್ರವಾಗಿ ಬೆಳೆದು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ದೇವಾಲಯದ ಗರ್ಭಗುಡಿ ಹಾಗೂ ಸುತ್ತುಪೌಳಿಯ ಶಿಥಿಲಾವಸ್ಥೆಯನ್ನು ತಲುಪಿದುದರಿಂದ ಭಕ್ತಾದಿಗಳ ಆಶಯದಂತೆ ಸಾನಿಧ್ಯವನ್ನು ಜೀರ್ಣೋದ್ದಾರಗೊಳಿಸುವ ಸದುದ್ದೇಶದಿಂದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಶ್ರೀಧಾಮ ಮಾಣಿಲ ಇವರ ಮಾರ್ಗದರ್ಶನದಲ್ಲಿ ಜರಗಿದÀ ಅಷ್ಟಮಂಗಲ ಪ್ರಶ್ನೆಯಲ್ಲಿ ಸಮಗ್ರ ಜೀರ್ಣೋದ್ಧಾರ ಆಗಬೇಕೆಂದು ಕಂಡು ಬಂದಿತ್ತು. ಇದರ ಅಂಗವಾಗಿ ರಾಜರ್ಷಿ ಪದ್ಮವಿಭೂಷಣ ಡಾ.ಡಿ. ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ ಇವರ ಪೂರ್ಣ ಆಶೀರ್ವಾದದೊಂದಿಗೆ 1918 ಅಕ್ಟೋಬರ್ ತಿಂಗಳ ವಿಜಯ ದಶಮಿಯ ಶುಭದಿನದಂದು ಶ್ರೀ ಕ್ಷೇತ್ರದ ಶಿಲಾ ಮುಹೂರ್ತವು ನೆರವೇರಿರುತ್ತದೆ. 2021ರ ಡಿಸೆಂಬರ್ ತಿಂಗಳಲ್ಲಿ ಬಾಲಾಲಯದಲ್ಲಿ ಶ್ರೀ ದೇವರ ಬಿಂಬ ಪ್ರತಿಷ್ಠೆಯನ್ನು ವೈದಿಕ ವಿಧಿವಿಧಾನಗಳೊಂದಿಗೆ ಪ್ರತಿಷ್ಢಾಪಿಸಲಾಯಿತು.

ಗರ್ಭಗುಡಿಯ ಶಿಲಾನ್ಯಾಸ : 2022ರ ಜನವರಿ ತಿಂಗಳಲ್ಲಿ ಗರ್ಭಗುಡಿಯ ಶಿಲಾನ್ಯಾಸ ಕಾರ್ಯಕ್ರಮವನ್ನು ಉಡುಪಿಯ ಶ್ರೀ ಪೇಜಾವರ ಅಧೋಕ್ಷಜ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿವರ ದಿವ್ಯ ಹಸ್ತದಿಂದ ಹಾಗೂ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮಾಣಿಲ ಇವರ ಉಪಸ್ಥಿತಿಯಲ್ಲಿ ನೆರವೇರಿಸಲಾಯಿತು. ಶ್ರೀ ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನ ತೀರ್ಥಸ್ವಾಮೀಜಿಯವರ ದಿವ್ಯ ಹಸ್ತದಲ್ಲಿ, ಶ್ರೀ ಪರಮಹಂಸ ಮೋಹನದಾಸ ಸ್ವಾಮೀಜಿ, ಶ್ರೀರಾಮ ಮಾಣಿಲ ಇವರ ಉಪಸ್ಥಿತಿಯಲ್ಲಿ ವೈದಿಕ ವಿಧಿವಿಧಾನದೊಂದಿಗೆ 2022ರ ಮಾರ್ಚ್ ತಿಂಗಳಲ್ಲಿ ನಿಧಿಕುಂಭ ಮತ್ತು ಷಡಾಧಾರ ಪ್ರತಿಷ್ಠೆ ಕಾರ್ಯಕ್ರಮವು ಸಮಾಜ ಬಂಧುಗಳ ಮತ್ತು ಊರ ಪರವೂರ ಭಕ್ತರ ಸಮ್ಮುಖದಲ್ಲಿ ವಿಜೃಂಭನೆಯಿoದ ನಡೆಯಿತು.

ಸುಮಾರು ಹತ್ತು ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರ : ಉದ್ದೇಶಿತ ಜೀರ್ಣೋದ್ಧಾರದ ಅಂಗವಾಗಿ ನೂತನ ಶಿಲಾಮಯ ಗರ್ಭಗುಡಿ, ಮುಖಮಂಟಪ, ಸುತ್ತುಪೌಳಿ, ನಮಸ್ಕಾರ ಮಂಟಪ, ಜ್ಞಾನ ಮಂದಿರ, ರಾಜಗೋಪುರ ಹಾಗೂ ವಸಂತ ಮಂಟಪದ ನಿರ್ಮಾಣ ವೆಚ್ಚವು ಸುಮಾರು ರೂಪಾಯಿ ಹತ್ತು ಕೋಟಿ ತಗಲಬಹುದೆಂದು ಅಂದಾಜಸಲಾಗಿದೆ. ನೂತನ ಶಿಲಾಮಯ ಗರ್ಭಗುಡಿ, ಸುತ್ತುಪೌಳಿ ಹಾಗೂ ರಾಜಗೋಪುರ, ನಮಸ್ಕಾರ ಮಂಟಪ, ವಸಂತ ಮಂಟಪ, ನಾಗದೇವರ ಸಾನಿಧ್ಯ, ಪಲವಾರ ಶಕ್ತಿಗಳು, ರಂಗಮoಟಪ ಮತ್ತು ಇನ್ನಿತ್ತರ ಕಾಮಗಾರಿಗಳು ನಡೆಸಲಾಗಿದೆ.

ಬೃಹತ್ ಹೊರೆಕಾಣಿಕೆ ಮೆರವಣಿಗೆ : ಮೇ 14ರಂದು ಸಂಜೆ 3.30ರಿಂದ ಕದ್ರಿ ದೇವಸ್ಥಾನದಿಂದ ಮಲ್ಲಿಕಟ್ಟೆ-ನಂತೂರು ಜಂಕ್ಷನ್ ಮೂಲಕ ಶ್ರೀ ಕ್ಷೇತ್ರಕ್ಕೆ ಹೊರೆಕಾಣಿಕೆಯ ಬೃಹತ್ ಭವ್ಯ ಮೆರವಣಿಗೆ ಜರಗಲಿದೆ. ಅವಿಭಜಿತ ಜಿಲ್ಲೆಗಳಿಂದ ಮಾತ್ರವಲ್ಲದೆ ರಾಜ್ಯದ ವಿವಿಧೆಡೆಗಳಿಂದ ಹೊರೆಕಾಣಿಕೆ ಸಮರ್ಪಣೆಯಾಗಲಿದೆ. ಆಕರ್ಷಕ ಟ್ಯಾಬ್ಲೋಗಳು, ಚೆಂಡೆ ವಾದಕಗಳು, ಅತ್ಯಾಕರ್ಷಕ ಬರ್ಕೆ ಹುಲಿವೇಷ, ಕುಣಿತ ಭಜನೆ, ಗೊಂಬೆಕುಣಿತ, ತಾಲೀಮು ಮೆರವಣಿಗೆಗೆ ಮೆರುಗು ನೀಡಲಿದೆ. ಬ್ರಹ್ಮಕಲಶೋತ್ಸವ ಸಮಿತಿಯ ಮಾರ್ಗದರ್ಶಕರು ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ಮಾರ್ಗದರ್ಶನ ಮತ್ತು ಪಾವನಸಾನಿಧ್ಯದಲ್ಲಿ ಹೊರೆಕಾಣಕೆ ಮೆರವಣಿಗೆಗೆ ಚಾಲನೆ ದೊರೆಯಲಿದ್ದು, ಹಲವು ಅತಿಥಿ ಗಣ್ಯರು, ಅವಿಭಜಿತ ಜಿಲ್ಲೆಯ ಕುಲಾಲ ಬಾಂಧವರು, ನಾಡಿನ ಸಮಸ್ತ ಭಕ್ತರು ಮಾತ್ರವಲ್ಲದೆ ಮುಂಬೈ, ಪೂನಾ, ಬೆಂಗಳೂರು, ಮಡಿಕೇರಿ, ಚಿಕ್ಕಮಗಳೂರು ಸೇರಿದಂತೆ ವಿವಿಧ ಕಡೆಗಳಿಂದ ಸಾವಿರಾರು ಮಂದಿ ಭಕ್ತಾಧಿಗಳು ಮೆರವಣಿಗೆಯಲ್ಲಿ ಪಾಲು ಪಡೆಯಲಿದ್ದಾರೆ.

ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ನೇತೃತ್ವದಲ್ಲಿ ವಿವಿಧ ಸಂಘಸoಸ್ಥೆಗಳ ಸಹಕಾರದೊಂದಿಗೆ ಹಸಿರುವಾಣಿ ಹೊರೆ ಕಾಣಿಕೆ ಮೆರವಣಿಗೆ ಅದ್ದೂರಿಯಾಗಿ ನಡೆಯಲಿದೆ. ರಾಜ್ಯದ ನಾನಾ ಭಾಗಗಳಿಂದ ಭಕ್ತರು ಹೊರೆಕಾಣಿಕೆ ಸಮರ್ಪಿಸಲಿದ್ದಾರೆ. ಹೀಗಾಗಿ ಅವಿಭಾಜಿತ ದ.ಕ. ಜಿಲ್ಲೆಯ ವಿವಿಧ ಭಾಗಗಳಿಂದ ಬರುವ ಹೊರೆಕಾಣಿಕೆಯನ್ನು ಪುತ್ತೂರು, ಬೆಳ್ತಂಗಡಿ, ಸುಳ್ಯ ಹಾಗೂ ಉಡುಪಿ, ಮುಲ್ಕಿ, ಬಂಟ್ವಾಳ, ಸುರತ್ಕಲ್, ಕೊಲ್ಯ, ಮಂಜೇಶ್ವರ, ಕಾಸರಗೋಡು ಪ್ರದೇಶಗಳಿಂದ ಹೊರಟು ಅಲ್ಲಿಂದ ಏಕಕಾಲದಲ್ಲಿ ನಂತೂರು ಜಂಕ್ಷನ್ ಮೂಲಕ ಶ್ರೀ ಕ್ಷೇತ್ರಕ್ಕೆ ತಲುಪುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ.

ಪುನರ್ ಪ್ರತಿಷ್ಠೆ : ದಿ. 21ರಂದು ಪೂ.ಗಂ. 9.00ರಿಂದ 9.20ರ ಸಮಯ ನಡೆಯುವ ಮಿಥುನಲಗ್ನ ಸುಮುಹೂರ್ತದಲ್ಲಿ ಶ್ರೀ ವೀರನಾರಾಯಣ ದೇವರ ಪುನರ್ ಪ್ರತಿಷ್ಠೆ ಜರಗಲಿದೆ.

ಬ್ರಹ್ಮಕಲಶಾಭಿಷೇಕ : ದಿ. 24ರಂದು ಪೂ.ಗಂ. 80.5 ರಿಂದ 8.20 ತನಕ ನಡೆಯುವ ಮಿಥುನ ಲಗ್ನ ಸುಮುಹೂರ್ತದಲ್ಲಿ ಶ್ರೀ ದೇವರಿಗೆ ಕ್ಷೇತ್ರದ ತಂತ್ರಿಗಳಾದ ವೇ|ಮೂ| ಬ್ರಹ್ಮಶ್ರೀ ಅನಂತ ಉಪಾಧ್ಯಾಯರ ನೇತೃತ್ವದಲ್ಲಿ ಬ್ರಹ್ಮಕಲಶೋತ್ಸವವು ನೆರವೇರಲಿದೆ.

ಧಾರ್ಮಿಕ ಸಭೆ, ಸಾಂಸ್ಕೃತಿಕ ಕಾರ್ಯಕ್ರಮ : ವಿವಿಧ ವೈದಿಕ, ಧಾರ್ಮಿಕ ಕ್ರಮಗಳೊಂದಿಗೆ ಪ್ರತಿದಿನ ಸಂಜೆ ಧಾರ್ಮಿಸಭೆ ನಡೆಯಲಿದೆ. ಧಾರ್ಮಿಕ ಸಭೆಯ ಬಳಿಕ ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿದೆ.

ಮೇ 14 ರಿಂದ ಮೊದಲ್ಗೊಂಡು ಮೇ 25ರವರೆಗೆ ವಿಜೃಂಭನೆಯಿoದ ಜರಗಲಿರುವ ನವೀಕೃತ ಶಿಲಾಮಯ ದೇಗುಲದ ಪುನರ್ ಪ್ರತಿಷ್ಠೆ ಹಾಗೂ  ಅಷ್ಠಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳಲ್ಲಿ ನಾವೆಲ್ಲರೂ ಸಕ್ರೀಯವಾಗಿ ಪಾಲ್ಗೊಂಡು ಜಗತ್ತಿಗೆ ಪ್ರಚುರಪಡಿಸಬೇಕಾಗಿ ತಮ್ಮಲ್ಲಿ ವಿನಂತಿಸುತ್ತೇವೆ.

ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿರುವವರು : ಮಯೂರ್ ಉಳ್ಳಾಲ್ ಅಧ್ಯಕ್ಷರು : ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘ (ರಿ.) ಮಂಗಳೂರು ಮತ್ತು ಗೌರವಾಧ್ಯಕ್ಷರು ಬ್ರಹ್ಮಕಲಶೋತ್ಸವ ಸಮಿತಿ, ಬಿ. ಪ್ರೇಮಾನಂದ ಕುಲಾಲ್ ಅಧ್ಯಕ್ಷರು, ಪುರುಷೋತ್ತಮ ಕುಲಾಲ್ ಆಡಳಿತ ಮೊಕ್ತೇಸರರು, ದಾಮೋದರ ಎ. ಅಧ್ಯಕ್ಷರು, ಎಂ.ಪಿ. ಬಂಗೇರ  ಗೌರವ ಸಲಹೆಗಾರರು, ಕೆ. ಸುಂದರ ಕುಲಾಲ್ ಅಧ್ಯಕ್ಷರು , ಶ್ರೀಮತಿ ಗೀತಾ ಮನೋಜ್ ಅಧ್ಯಕ್ಷರು , ಗಿರಿಧರ ಜೆ. ಮೂಲ್ಯ ಪ್ರಧಾನ. ಕಾರ್ಯದರ್ಶಿ , ಸುರೇಶ್ ಕುಲಾಲ್ ಕಾರ್ಯಾಧ್ಯಕ್ಷರು , ಜಲಜಾಕ್ಷಿ ಪಿ. ಅಧ್ಯಕ್ಷರು ಮಹಿಳಾ ವಿಭಾಗ ದ.ಕ. ಜಿಲ್ಲಾ ಕುಲಾಲರ ಮಾತೃ ಸಂಘ.

 

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

Related


Discover more from Coastal Times Kannada

Subscribe to get the latest posts sent to your email.

Previous Post

ಉಳ್ಳಾಲ ಸೋಮೇಶ್ವರ ರುದ್ರಪಾದೆಯಿಂದ ಸಮುದ್ರಕ್ಕೆ ಬಿದ್ದು ವಿದ್ಯಾರ್ಥಿನಿ ಮೃತ್ಯು – ಸ್ನೇಹಿತೆ ಮುಂದೆಯೇ ದುರ್ಘಟನೆ

Next Post

ಕುಂಪಲದ ರೂಪದರ್ಶಿ ಪ್ರೇಕ್ಷಾ ಆತ್ಮಹತ್ಯೆ ಪ್ರಚೋದನೆ ಆರೋಪ ಎದುರಿಸುತ್ತಿದ್ದ ಆರೋಪಿ ನೇಣು ಬಿಗಿದು ಸಾವು !

Related Posts

ಫೆ.17ರಂದು ಎಸ್ ಸಿಡಿಸಿಸಿ ಬ್ಯಾಂಕ್ ನಿಂದ ಗ್ರಾಹಕರಿಗೆ ಯುಪಿಐ, ಐಎಂಪಿಎಸ್ ಡಿಜಿಟಲ್ ಬ್ಯಾಂಕಿಂಗ್ ವಿಸ್ತರಿತ ಸೌಲಭ್ಯಕ್ಕೆ ಅಧಿಕೃತ ಚಾಲನೆ
ಕರಾವಳಿ

ಫೆ.17ರಂದು ಎಸ್ ಸಿಡಿಸಿಸಿ ಬ್ಯಾಂಕ್ ನಿಂದ ಗ್ರಾಹಕರಿಗೆ ಯುಪಿಐ, ಐಎಂಪಿಎಸ್ ಡಿಜಿಟಲ್ ಬ್ಯಾಂಕಿಂಗ್ ವಿಸ್ತರಿತ ಸೌಲಭ್ಯಕ್ಕೆ ಅಧಿಕೃತ ಚಾಲನೆ

February 16, 2026
13
ಕುಂದಾಪುರ: ಕೋಡಿ ಸೀವಾಕ್ ಸಮೀಪ “ಸೀವಾಕ್ ರೆಸ್ಟೋ ಕೆಫೆ” ಬಳಿ ಮಹಿಳೆ ಹಾಗೂ ಮೂರು ಮಕ್ಕಳ ರಕ್ಷಣೆ
ಕರಾವಳಿ

ಕುಂದಾಪುರ: ಕೋಡಿ ಸೀವಾಕ್ ಸಮೀಪ “ಸೀವಾಕ್ ರೆಸ್ಟೋ ಕೆಫೆ” ಬಳಿ ಮಹಿಳೆ ಹಾಗೂ ಮೂರು ಮಕ್ಕಳ ರಕ್ಷಣೆ

February 13, 2026
50
Next Post
ಕುಂಪಲದ ರೂಪದರ್ಶಿ ಪ್ರೇಕ್ಷಾ ಆತ್ಮಹತ್ಯೆ ಪ್ರಚೋದನೆ ಆರೋಪ ಎದುರಿಸುತ್ತಿದ್ದ ಆರೋಪಿ ನೇಣು ಬಿಗಿದು ಸಾವು !

ಕುಂಪಲದ ರೂಪದರ್ಶಿ ಪ್ರೇಕ್ಷಾ ಆತ್ಮಹತ್ಯೆ ಪ್ರಚೋದನೆ ಆರೋಪ ಎದುರಿಸುತ್ತಿದ್ದ ಆರೋಪಿ ನೇಣು ಬಿಗಿದು ಸಾವು !

Discussion about this post

Recent News

ಫೆ.17ರಂದು ಎಸ್ ಸಿಡಿಸಿಸಿ ಬ್ಯಾಂಕ್ ನಿಂದ ಗ್ರಾಹಕರಿಗೆ ಯುಪಿಐ, ಐಎಂಪಿಎಸ್ ಡಿಜಿಟಲ್ ಬ್ಯಾಂಕಿಂಗ್ ವಿಸ್ತರಿತ ಸೌಲಭ್ಯಕ್ಕೆ ಅಧಿಕೃತ ಚಾಲನೆ

ಫೆ.17ರಂದು ಎಸ್ ಸಿಡಿಸಿಸಿ ಬ್ಯಾಂಕ್ ನಿಂದ ಗ್ರಾಹಕರಿಗೆ ಯುಪಿಐ, ಐಎಂಪಿಎಸ್ ಡಿಜಿಟಲ್ ಬ್ಯಾಂಕಿಂಗ್ ವಿಸ್ತರಿತ ಸೌಲಭ್ಯಕ್ಕೆ ಅಧಿಕೃತ ಚಾಲನೆ

February 16, 2026
13
T20 ವಿಶ್ವಕಪ್: ಪಂದ್ಯ ಬಹಿಷ್ಕರಿಸುವ ನಾಟಕವಾಡಿದ್ದ ಪಾಕ್​ಗೆ ಭಾರೀ ಮುಖಭಂಗ; ಭಾರತಕ್ಕೆ 61 ರನ್ ಜಯ

T20 ವಿಶ್ವಕಪ್: ಪಂದ್ಯ ಬಹಿಷ್ಕರಿಸುವ ನಾಟಕವಾಡಿದ್ದ ಪಾಕ್​ಗೆ ಭಾರೀ ಮುಖಭಂಗ; ಭಾರತಕ್ಕೆ 61 ರನ್ ಜಯ

February 16, 2026
19
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002


Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಫೆ.17ರಂದು ಎಸ್ ಸಿಡಿಸಿಸಿ ಬ್ಯಾಂಕ್ ನಿಂದ ಗ್ರಾಹಕರಿಗೆ ಯುಪಿಐ, ಐಎಂಪಿಎಸ್ ಡಿಜಿಟಲ್ ಬ್ಯಾಂಕಿಂಗ್ ವಿಸ್ತರಿತ ಸೌಲಭ್ಯಕ್ಕೆ ಅಧಿಕೃತ ಚಾಲನೆ

ಫೆ.17ರಂದು ಎಸ್ ಸಿಡಿಸಿಸಿ ಬ್ಯಾಂಕ್ ನಿಂದ ಗ್ರಾಹಕರಿಗೆ ಯುಪಿಐ, ಐಎಂಪಿಎಸ್ ಡಿಜಿಟಲ್ ಬ್ಯಾಂಕಿಂಗ್ ವಿಸ್ತರಿತ ಸೌಲಭ್ಯಕ್ಕೆ ಅಧಿಕೃತ ಚಾಲನೆ

February 16, 2026
T20 ವಿಶ್ವಕಪ್: ಪಂದ್ಯ ಬಹಿಷ್ಕರಿಸುವ ನಾಟಕವಾಡಿದ್ದ ಪಾಕ್​ಗೆ ಭಾರೀ ಮುಖಭಂಗ; ಭಾರತಕ್ಕೆ 61 ರನ್ ಜಯ

T20 ವಿಶ್ವಕಪ್: ಪಂದ್ಯ ಬಹಿಷ್ಕರಿಸುವ ನಾಟಕವಾಡಿದ್ದ ಪಾಕ್​ಗೆ ಭಾರೀ ಮುಖಭಂಗ; ಭಾರತಕ್ಕೆ 61 ರನ್ ಜಯ

February 16, 2026
ವಿದೇಶದಲ್ಲೇ ಕುಳಿತು ಮಂಗಳೂರು ಯುವತಿಯರಿಗೆ ಗಾಳ: ಗಂಡನ ಪ್ರೇಮ, ಪ್ರೀತಿ, ಪ್ರಣಯದಾಟವನ್ನು ಸ್ವತಃ ಪತ್ನಿಯೇ ಬಟಾ ಬಯಲು

ವಿದೇಶದಲ್ಲೇ ಕುಳಿತು ಮಂಗಳೂರು ಯುವತಿಯರಿಗೆ ಗಾಳ: ಗಂಡನ ಪ್ರೇಮ, ಪ್ರೀತಿ, ಪ್ರಣಯದಾಟವನ್ನು ಸ್ವತಃ ಪತ್ನಿಯೇ ಬಟಾ ಬಯಲು

February 15, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

%d