ಉಳ್ಳಾಲ, ಮೇ 11: ಎರಡು ವರುಷಗಳ ಹಿಂದೆ ಕುಂಪಲದ ಆಶ್ರಯ ಕಾಲನಿಯ ಮನೆಯಲ್ಲಿ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ರೂಪದರ್ಶಿ ಪ್ರೇಕ್ಷ ಸಾವಿಗೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿದ್ದ ಯುವಕ ನೇಣು ಬಿಗಿದು ಆತ್ಮಹತ್ಯೆಗೈದಿದ್ದಾನೆ.
ಕುತ್ತಾರು,ಮುಂಡೋಳಿ ನಿವಾಸಿ ಯತಿರಾಜ್ ಗಟ್ಟಿ(20)ಆತ್ಮ ಹತ್ಯೆಗೈದ ಯುವಕ.ಯತಿರಾಜ್ ತನ್ನ ಮನೆಯ ಹಿಂದಿನ ಚಿಕ್ಕಮ್ಮನ ಮನೆಯ ಎದುರಿನ ಸಿಟ್ ಔಟ್ನ ಕಬ್ಬಿಣದ ಹುಕ್ಸ್ ಒಂದಕ್ಕೆ ನೇಣು ಬಿಗಿದು ಆತ್ಮ ಹತ್ಯೆಗೈದಿದ್ದಾನೆ.ನಿನ್ನೆ ರಾತ್ರಿ 11 ರ ವೇಳೆ ಮನೆಗೆ ಬಂದಿದ್ದ ಯತಿರಾಜ್ ಚಿಕ್ಕಮ್ಮ ಮನೆಯಲ್ಲಿರದ ವೇಳೆ ನೇಣು ಬಿಗಿದಿದ್ದಾನೆ.

ಇಂದು ಬೆಳಿಗ್ಗೆ ಯತಿರಾಜ್ ನ ಮಾವ ಹುಡುಕಾಡಿದಾಗ ಆತ್ಮಹತ್ಯೆಗೈದಿರುವುದು ಬೆಳಕಿಗೆ ಬಂದಿದೆ.ಕೂಡಲೆ ಮನೆಮಂದಿ ನೇಣು ಕುಣಿಕೆಯನ್ನ ಕಡಿದರೂ ಅದಾಗಲೇ ಯತಿರಾಜ್ ಮೃತಪಟ್ಟಿದ್ದ.ಸ್ಥಳಕ್ಕೆ ಬಂದ ಉಳ್ಳಾಲ ಪೊಲೀಸರು ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

2021 ರ ಮಾರ್ಚ್ 10 ರಂದು ಕುಂಪಲದ ಆಶ್ರಯ ಕಾಲನಿ ನಿವಾಸಿ ರೂಪದರ್ಶಿ ಪ್ರೇಕ್ಷಾ ಎಂಬವರು ತನ್ನ ಮನೆಯ ಕೋಣೆಯೊಳಗೆ ನೇಣು ಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಈ ಸಂದರ್ಭ ಯುವತಿಯ ಪೋಷಕರ ದೂರಿನಂತೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದ ಆರೋಪದಡಿ ಉಳ್ಳಾಲ ಪೊಲೀಸರು ಯತಿರಾಜನನ್ನು ಬಂಧಿಸಿದ್ದರು. ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ ಯತಿರಾಜ್ ನ್ಯಾಯಾಲಯದಲ್ಲಿ ಈಗಲೂ ಪ್ರಕರಣ ಎದುರಿಸುತ್ತಿದ್ದರೆನ್ನಲಾಗಿದೆ.
Discover more from Coastal Times Kannada
Subscribe to get the latest posts sent to your email.







Discussion about this post