ಒಂದು ಕಡೆ ಉಚಿತ ವಿದ್ಯುತ್ ಎಂದು ಸರ್ಕಾರ ಘೋಷಣೆ ಮಾಡಿದ್ದು, ಅದಕ್ಕೆ ಷರತ್ತುಗಳನ್ನು ವಿಧಿಸಿದೆ. ಉಚಿತ ವಿದ್ಯುತ್ ಪಡೆಯುವ ಮೊದಲೇ ರಾಜ್ಯದ ಜನತೆಗೆ ವಿದ್ಯುತ್ ದರ ಏರಿಕೆಯ ಶಾಕ್ ತಗುಲಿದೆ. 200 ರೂಪಾಯಿ ವಿದ್ಯುತ್ ಬಿಲ್ ಬರುತ್ತಿದ್ದದ್ದು ಜೂನ್‌ನಲ್ಲಿ 600 ರೂಪಾಯಿ ಬಂದಿದ್ದರೆ, 500 ರೂಪಾಯಿ ಕಟ್ಟುತ್ತಿರುವವರು, ಜೂನ್‌ನಲ್ಲಿ 1500-1800 ರೂಪಾಯಿವರೆಗೆ ವಿದ್ಯುತ್ ಬಿಲ್ ಕಂಡು ಶಾಕ್ ಆಗಿದ್ದಾರೆ.
ರಾಜ್ಯ ಸರ್ಕಾರ ಉಚಿತ ವಿದ್ಯುತ್ ಕೊಡ್ತೀವಿ ಎಂದು ಬೆಲೆ ಏರಿಕೆಯ ಬರೆ ಹಾಕಿದೆ ಎಂದು ಹಲವು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯಾದ್ಯಂತ ಹಲವರು ಸಾಮಾಜಿಕ ಮಾಧ್ಯಮಗಳಲ್ಲಿ ವಿದ್ಯುತ್ ಬಿಲ್ ಫೋಟೊ ಹಂಚಿಕೊಂಡಿದ್ದು, ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಬಿಜೆಪಿ ಸರ್ಕಾರದ ಅವಧಿಯಲ್ಲೇ ಬೆಲೆ ಏರಿಕೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಈಗ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಈ ಬಾರಿ ದುಬಾರಿ ಬಿಲ್ ಬಂದಿರುವುದಕ್ಕೆ ಕಾರಣ ನೀಡಿದ್ದಾರೆ.
ಏಪ್ರಿಲ್ ತಿಂಗಳಿನಿಂದಲೇ ಏರಿಕೆಯ ಬರೆ! :ಮಹಾಂತೇಶ ಬೀಳಗಿ ನೀಡಿರುವ ಮಾಧ್ಯಮ ಪ್ರಕಟಣೆ ಪ್ರಕಾರ, ಮೇ 12ರಂದು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ವಿದ್ಯುತ್ ದರ ಏರಿಕೆ ಮಾಡಿದೆ. ಪ್ರತಿ ಯುನಿಟ್‌ಗೆ 70 ಪೈಸೆಯಂತೆ ದರ ಹೆಚ್ಚಳ ಮಾಡಲಾಗಿದೆ. ಮೇ ತಿಂಗಳ ಬಿಲ್‌ನಲ್ಲಿ ಹೊಸ ದರದಂತೆ ಬಿಲ್ ಬಂದಿದೆ, ಆದರೆ ದರ ಏರಿಕೆ ಏಪ್ರಿಲ್ ತಿಂಗಳಿನಿಂದ ಅನ್ವಯ ಆಗುವ ಕಾರಣ ಏಪ್ರಿಲ್‌ನ ಬಾಕಿಯನ್ನು ಈ ಬಾರಿ ಬಿಲ್‌ನಲ್ಲಿ ಸೇರಿಸಲಾಗಿದೆ ಎಂದು ಹೇಳಿದ್ದಾರೆ.
100 ಯುನಿಟ್ ಮೇಲ್ಪಟ್ಟು ಬಳಕೆ ಮಾಡಿದರೆ 7 ರೂಪಾಯಿ : ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಸೂಚನೆ ಪ್ರಕಾರ ಎರಡು ಶ್ರೇಣಿಗಳಲ್ಲಿ ವಿದ್ಯುತ್ ದರ ನಿಗದಿಪಡಿಸಲಾಗಿದೆ. 100 ಯುನಿಟ್ ಒಳಗೆ ವಿದ್ಯುತ್ ಬಳಕೆ ಮಾಡಿದೆ ಪ್ರತಿ ಯುನಿಟ್‌ಗೆ 4.75 ರೂಪಾಯಿ ದರ ನಿಗದಿಪಡಿಸಲಾಗಿದೆ, 100 ಯುನಿಟ್‌ಗಿಂತ ಹೆಚ್ಚು ವಿದ್ಯುತ್ ಬಳಕೆ ಮಾಡಿದರೆ ಪ್ರತಿ ಯುನಿಟ್‌ಗೆ 7 ರೂಪಾಯಿಯಂತೆ ದರ ನಿಗದಿಪಡಿಸಲಾಗಿದೆ.
ಈ ಮೊದಲು ಮೂರು ಶ್ರೇಣಿಗಳಲ್ಲಿ ದರ ನಿಗದಿಪಡಿಸಲಾಗಿತ್ತು. 50 ಯುನಿಟ್‌ವರೆಗೆ 4.15 ರೂಪಾಯಿ, 50-100 ಯುನಿಟ್‌ವರೆಗೆ 5.6 ರೂಪಾಯಿ ಹಾಗೂ 100 ಯೂನಿಟ್ ಮೀರಿದರೆ 7.15 ರೂಪಾಯಿ ದರ ವಿಧಿಸಲಾಗುತ್ತಿತ್ತು. ಈಗ ಎರಡು ಶ್ರೇಣಿಗಳಲ್ಲಿ ದರ ನಿಗದಿ ಮಾಡಿದ್ದು, ಅದರಂತೆ ಬಿಲ್ ನೀಡಲು ಕೆಇಆರ್‌ಸಿ ಮೇ 12 ರಂದು ಹೊರಡಿಸಿರುವ ಆದೇಶದಲ್ಲಿ ಹೇಳಿದೆ ಎಂದು ಮಹಾಂತೇಶ ಬೀಳಗಿ ಹೇಳಿದ್ದಾರೆ.ಇನ್ನು ಹೊಸ ದರ ಪರಿಷ್ಕರಣೆ ಆದೇಶದಲ್ಲಿ 50 ಕಿಲೋ ವ್ಯಾಟ್ ವಿದ್ಯುತ್ ಮಜೂರಾತಿ ಲೋಡ್‌ಗೆ 110 ರೂಪಾಯಿ ಮತ್ತು 50 ಕಿಲೋ ವ್ಯಾಟ್ ಮೇಲ್ಪಟ್ಟ ವಿದ್ಯುತ್ ಮಂಜೂರಾತಿ ಲೋಡ್‌ಗೆ 210 ರೂ ನಿಗದಿತ ಶುಲ್ಕ ನಿಗದಿ ಮಾಡಿದೆ ಈ ಎಲ್ಲಾ ಕಾರಣಗಳಿಂದ ಜೂನ್ ತಿಂಗಳು ವಿದ್ಯುತ್ ಬಿಲ್ ದುಪ್ಪಟ್ಟಾಗಿದೆ ಎಂದು ಹೇಳಲಾಗಿದೆ.
Discover more from Coastal Times Kannada
Subscribe to get the latest posts sent to your email.
Discussion about this post