ತಿರುಪತಿ, ಆಂಧ್ರಪ್ರದೇಶ: ಮದುವೆ ಸ್ವರ್ಗದಲ್ಲೇ ನಿಶ್ಚಯವಾಗುತ್ತದೆ ಅಂತಾರೆ. ಆದ್ರೆ ಇಲ್ಲಿ ಮದುವೆ ಮೇಕಪ್‌ನಿಂದಾಗಿ ನಿಶ್ಚಯವಾಗಿತ್ತು. ತಾನು 30ರ ತರುಣಿ ಅಂತ ಪೋಸ್ ಕೊಡುತ್ತಿದ್ದ 52ರ ವಯಸ್ಸಿನ ಆಂಟಿ ಈ ಕಥೆಯ ಕೇಂದ್ರ ಬಿಂದು. ಈಕೆ 30ರ ಹುಡುಗಿಯಂತೆ ಸ್ಪೆಷಲ್ ಆಗಿ ಮೇಕಪ್ ಮಾಡಿಕೊಂಡು, ಮದುವೆಯಾಗದ ನವ ತರುಣರನ್ನು ಯಾಮಾರಿಸ್ತಾ ಇದ್ದಳು. ಒಂದಲ್ಲ, ಎರಡಲ್ಲ ಅಂತ ಮೂರು ಮದುವೆ ಆಗಿದ್ದಾಳೆ. ಇದೀಗ ಮೂರನೇ ಮದುವೆ ವೇಳೆ ಆಕೆಯ ಆಧಾರ್ ಕಾರ್ಡ್ ನೋಡಿ ಆಕೆ ನಿಜವಾದ ವಯಸ್ಸು ಗೊತ್ತಾಗಿದೆ. ಆಕೆಗೆ 30 ವರ್ಷ ವಯ್ಸಸಲ್ಲ, 52 ವರ್ಷ ಅನ್ನೋದು ಗೊತ್ತಾಗಿದೆ. ಮೇಕಪ್ ಹಾಕಿದ್ದ ಆಕೆಯ ಅಂದ ನೋಡಿ ಮೆಚ್ಚಿಕೊಂಡು ಮದುವೆಯಾಗಿದ್ದ 3ನೇ ಗಂಡ ಈಗ ತಲೆ ಮೇಲೆ ಕೈ ಹೊತ್ತುಕೊಂಡು ಕುಳಿತಿದ್ದಾನೆ. ಆಂಧ್ರ ಪ್ರದೇಶದ ತಿರುಪತಿಯಲ್ಲಿ ಮಹಿಳೆಯೊಬ್ಬಳು ಭರ್ಜರಿ ಮೇಕಪ್ ಮಾಡಿಕೊಂಡು ತಾನು ಯುವತಿ ಅಂತ ಯಾಮಾರಿಸಿದ್ದಾಳೆ. ಶರಣ್ಯಾ ಎಂಬ 52 ವರ್ಷದ ಮಹಿಳೆ 30ರ ಯುವಕವನ್ನು ಯಾಮಾರಿಸಿದ್ದಾಳೆ ಎನ್ನುವ ಆರೋಪ ಕೇಳಿ ಬಂದಿದೆ.
ಬ್ರೋಕರ್‌ಗಳ ಮೂಲಕ ಸಂಪರ್ಕಕ್ಕೆ ಬಂದ ಮಹಿಳೆ ; ತಮಿಳುನಾಡು ರಾಜ್ಯದ ತಿರುವಳ್ಳೂರು ಜಿಲ್ಲೆಯ ಪುದುಪ್ಪೆಟ್‌ನಲ್ಲಿ 65 ವರ್ಷದ ಇಂದ್ರಾಣಿ ಎಂಬ ಮಹಿಳೆ, ತಮ್ಮ ಮಗನೊಂದಿಗೆ ವಾಸಿಸುತ್ತಿದ್ದರು. ಈಕೆಯ 30 ವರ್ಷದ ಮಗ ಖಾಸಗಿ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾನೆ. ಈತ ಈಗಾಗಲೇ ಮದುವೆಯಾಗಿ ವಿಚ್ಛೇದನ ಪಡೆದಿದ್ದ. ಹೀಗಾಗಿ ಇಂದ್ರಾಣಿ ತನ್ನ ಮಗನಿಗೆ ಮತ್ತೊಂದು ಮದುವೆ ಮಾಡಲು ಯೋಚಿಸುತ್ತಿದ್ದರು. ಹೀಗಿರುವಾಗ ಬ್ರೋಕರ್‌ಗಳ ಮೂಲಕ ಮಗನಿಗೆ ಹುಡುಗಿ ಹುಡುಕೋದಕ್ಕೆ ಶುರು ಮಾಡಿದ್ದಾರೆ. ಶರಣ್ಯಾ ಸೌಂದರ್ಯಕ್ಕೆ ಮನಸೋತ ವರನ ಮನೆಯವರು ತಕ್ಷಣ ಮದುವೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಆ ಬಳಿಕ ತಿರುವಳ್ಳೂರಿನಲ್ಲಿ ಅದ್ಧೂರಿಯಾಗಿ ಮದುವೆ ಮಾಡಿದ್ದರು. ಮೇಲಾಗಿ ವಧುವಿಗೆ 25 ಸವರ ಚಿನ್ನ ನೀಡಿ ಮದುವೆ ಮಾಡಿಸಿ, ಉಡುಗೊರೆ ನೀಡಿದ್ದಾರೆ.
ಮದುವೆಯಾದ ಕೆಲವು ದಿನಗಳ ನಂತರ, ಶರಣ್ಯ ತನ್ನ ಗಂಡ ಮತ್ತು ಅತ್ತೆ ಮೇಲೆ ಅಧಿಕಾರ ಚಲಾಯಿಸಲು ತೊಡಗಿದ್ದಾಳೆ. ಗಂಡನ ಸಂಪಾದನೆಯನ್ನೆಲ್ಲ ತನ್ನ ಕೈಯಲ್ಲಿಟ್ಟುಕೊಂಡು, ಪತಿ ಹಾಗೂ ಅತ್ತೆ ಹೆಸರಲ್ಲಿರುವ ಆಸ್ತಿಯನ್ನು ತನ್ನ ಹೆಸರಿಗೆ ಬರೆಸುವಂತೆ ಒತ್ತಾಯಿಸುತ್ತಿದ್ದಳು. ಇದೇ ಕಾರಣಕ್ಕೆ ಇಂದ್ರಾಣಿಯನ್ನು ಮನೆಯಿಂದ ಹೊರಕ್ಕೆ ಹಾಕಿದ್ದಾಳೆ.
ಆಧಾರ್ ಕಾರ್ಡ್‌ನಿಂದ ಮಹಿಳೆಯ ಬಣ್ಣ ಬಯಲು ; ಕೊನೆಗೆ ಒಂದು ದಿನ ಆಕೆಯ ಕಿರಿಕಿರಿ ಸಹಿಸಲು ಸಾಧ್ಯವಾಗದೇ, ಪತಿ ಆಕೆಯ ಹೆಸರಿಗೆ ತನ್ನ ಆಸ್ತಿಯನ್ನೆಲ್ಲ ವರ್ಗಾಯಿಸಲು ಮುಂದಾಗಿದ್ದಾನೆ. ಈ ವೇಳೆ ಆಧಾರ್ ಕಾರ್ಡ್ ನೀಡುವಂತೆ ಕೇಳಿದ್ದಾನೆ. ಇದಾದ ತಕ್ಷಣ ಶರಣ್ಯ ತನ್ನ ಪತಿಗೆ ಆಧಾರ್ ಕಾರ್ಡ್ ನೀಡಿದ್ದಾಳೆ. ಕೇರಾಫ್ ನಲ್ಲಿ ರವಿ ಎಂದು ಬರೆದಿದ್ದರಿಂದ ಇಂದ್ರಾಣಿ ಮತ್ತು ಅವರ ಮಗ ಅನುಮಾನಗೊಂಡು ಪೊಲೀಸರಿಗೆ ದೂರು ನೀಡಿದ್ದರು. ಅವರು ನೀಡಿದ ಆಧಾರ್ ಕಾರ್ಡ್ ಹಾಗೂ ದಾಖಲೆಗಳನ್ನು ಆಧರಿಸಿ ತನಿಖೆ ನಡೆಸಿದ ಪೊಲೀಸರಿಗೆ ಬೆಚ್ಚಿಬೀಳಿಸುವ ಸಂಗತಿಗಳು ಬೆಳಕಿಗೆ ಬಂದಿವೆ. ಮಹಿಳೆ ಶರಣ್ಯ ವಯಸ್ಸು 30 ಅಲ್ಲ, 52 ಎನ್ನುವುದು ಆಧಾರ್ ಕಾರ್ಡ್‌ನಿಂದ ಗೊತ್ತಾಗಿದೆ. ಸಾಲದ್ದಕ್ಕೆ ಆಕೆ ಈ ಮೊದಲೇ 2 ಮದುವೆಯಾಗಿದ್ದು, ಇದು ಮೂರನೇ ಮದುವೆ ಎನ್ನುವುದು ಬೆಳಕಿಗೆ ಬಂದಿದೆ.
Discover more from Coastal Times Kannada
Subscribe to get the latest posts sent to your email.
Discussion about this post