• About us
  • Contact us
  • Disclaimer
Saturday, September 12, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ವಯಸ್ಸು 30 ಅಂತ ಯಾಮಾರಿಸಿ ಯುವಕನನ್ನು ಮದ್ವೆಯಾದ 52ರ ಆಂಟಿ! ಮೇಕಪ್‌ ನೋಡಿ ಮೋಸ ಹೋದ ಹುಡುಗ

Coastal Times by Coastal Times
July 11, 2022
in ರಾಷ್ಟ್ರೀಯ ಸುದ್ದಿ
ವಯಸ್ಸು 30 ಅಂತ ಯಾಮಾರಿಸಿ ಯುವಕನನ್ನು ಮದ್ವೆಯಾದ 52ರ ಆಂಟಿ! ಮೇಕಪ್‌ ನೋಡಿ ಮೋಸ ಹೋದ ಹುಡುಗ
303
VIEWS
WhatsappTelegramShare on FacebookShare on Twitter

ತಿರುಪತಿ, ಆಂಧ್ರಪ್ರದೇಶ: ಮದುವೆ  ಸ್ವರ್ಗದಲ್ಲೇ  ನಿಶ್ಚಯವಾಗುತ್ತದೆ ಅಂತಾರೆ. ಆದ್ರೆ ಇಲ್ಲಿ ಮದುವೆ ಮೇಕಪ್‌ನಿಂದಾಗಿ  ನಿಶ್ಚಯವಾಗಿತ್ತು. ತಾನು 30ರ ತರುಣಿ  ಅಂತ ಪೋಸ್ ಕೊಡುತ್ತಿದ್ದ 52ರ ವಯಸ್ಸಿನ ಆಂಟಿ  ಈ ಕಥೆಯ ಕೇಂದ್ರ ಬಿಂದು. ಈಕೆ 30ರ ಹುಡುಗಿಯಂತೆ ಸ್ಪೆಷಲ್ ಆಗಿ ಮೇಕಪ್ ಮಾಡಿಕೊಂಡು, ಮದುವೆಯಾಗದ ನವ ತರುಣರನ್ನು  ಯಾಮಾರಿಸ್ತಾ ಇದ್ದಳು. ಒಂದಲ್ಲ, ಎರಡಲ್ಲ ಅಂತ ಮೂರು ಮದುವೆ ಆಗಿದ್ದಾಳೆ. ಇದೀಗ ಮೂರನೇ ಮದುವೆ ವೇಳೆ ಆಕೆಯ ಆಧಾರ್ ಕಾರ್ಡ್  ನೋಡಿ ಆಕೆ ನಿಜವಾದ ವಯಸ್ಸು ಗೊತ್ತಾಗಿದೆ. ಆಕೆಗೆ 30 ವರ್ಷ ವಯ್ಸಸಲ್ಲ, 52 ವರ್ಷ ಅನ್ನೋದು ಗೊತ್ತಾಗಿದೆ. ಮೇಕಪ್‌ ಹಾಕಿದ್ದ ಆಕೆಯ ಅಂದ ನೋಡಿ ಮೆಚ್ಚಿಕೊಂಡು ಮದುವೆಯಾಗಿದ್ದ 3ನೇ ಗಂಡ  ಈಗ ತಲೆ ಮೇಲೆ ಕೈ ಹೊತ್ತುಕೊಂಡು ಕುಳಿತಿದ್ದಾನೆ. ಆಂಧ್ರ ಪ್ರದೇಶದ ತಿರುಪತಿಯಲ್ಲಿ ಮಹಿಳೆಯೊಬ್ಬಳು ಭರ್ಜರಿ ಮೇಕಪ್ ಮಾಡಿಕೊಂಡು ತಾನು ಯುವತಿ ಅಂತ ಯಾಮಾರಿಸಿದ್ದಾಳೆ. ಶರಣ್ಯಾ ಎಂಬ 52 ವರ್ಷದ ಮಹಿಳೆ 30ರ ಯುವಕವನ್ನು ಯಾಮಾರಿಸಿದ್ದಾಳೆ ಎನ್ನುವ ಆರೋಪ ಕೇಳಿ ಬಂದಿದೆ.

ಬ್ರೋಕರ್‌ಗಳ ಮೂಲಕ ಸಂಪರ್ಕಕ್ಕೆ ಬಂದ ಮಹಿಳೆ ; ತಮಿಳುನಾಡು ರಾಜ್ಯದ ತಿರುವಳ್ಳೂರು ಜಿಲ್ಲೆಯ ಪುದುಪ್ಪೆಟ್‌ನಲ್ಲಿ 65 ವರ್ಷದ ಇಂದ್ರಾಣಿ ಎಂಬ ಮಹಿಳೆ, ತಮ್ಮ ಮಗನೊಂದಿಗೆ ವಾಸಿಸುತ್ತಿದ್ದರು. ಈಕೆಯ 30 ವರ್ಷದ ಮಗ ಖಾಸಗಿ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾನೆ. ಈತ ಈಗಾಗಲೇ ಮದುವೆಯಾಗಿ ವಿಚ್ಛೇದನ ಪಡೆದಿದ್ದ. ಹೀಗಾಗಿ ಇಂದ್ರಾಣಿ ತನ್ನ ಮಗನಿಗೆ ಮತ್ತೊಂದು ಮದುವೆ ಮಾಡಲು ಯೋಚಿಸುತ್ತಿದ್ದರು. ಹೀಗಿರುವಾಗ ಬ್ರೋಕರ್‌ಗಳ ಮೂಲಕ ಮಗನಿಗೆ ಹುಡುಗಿ ಹುಡುಕೋದಕ್ಕೆ ಶುರು ಮಾಡಿದ್ದಾರೆ. ಶರಣ್ಯಾ ಸೌಂದರ್ಯಕ್ಕೆ ಮನಸೋತ ವರನ ಮನೆಯವರು ತಕ್ಷಣ ಮದುವೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಆ ಬಳಿಕ ತಿರುವಳ್ಳೂರಿನಲ್ಲಿ ಅದ್ಧೂರಿಯಾಗಿ ಮದುವೆ ಮಾಡಿದ್ದರು. ಮೇಲಾಗಿ ವಧುವಿಗೆ 25 ಸವರ ಚಿನ್ನ ನೀಡಿ ಮದುವೆ ಮಾಡಿಸಿ, ಉಡುಗೊರೆ ನೀಡಿದ್ದಾರೆ.

ಮದುವೆಯಾದ ಕೆಲವು ದಿನಗಳ ನಂತರ, ಶರಣ್ಯ ತನ್ನ ಗಂಡ ಮತ್ತು ಅತ್ತೆ ಮೇಲೆ ಅಧಿಕಾರ ಚಲಾಯಿಸಲು ತೊಡಗಿದ್ದಾಳೆ. ಗಂಡನ ಸಂಪಾದನೆಯನ್ನೆಲ್ಲ ತನ್ನ ಕೈಯಲ್ಲಿಟ್ಟುಕೊಂಡು, ಪತಿ ಹಾಗೂ ಅತ್ತೆ ಹೆಸರಲ್ಲಿರುವ ಆಸ್ತಿಯನ್ನು ತನ್ನ ಹೆಸರಿಗೆ ಬರೆಸುವಂತೆ ಒತ್ತಾಯಿಸುತ್ತಿದ್ದಳು. ಇದೇ ಕಾರಣಕ್ಕೆ ಇಂದ್ರಾಣಿಯನ್ನು ಮನೆಯಿಂದ ಹೊರಕ್ಕೆ ಹಾಕಿದ್ದಾಳೆ.

ಆಧಾರ್ ಕಾರ್ಡ್‌ನಿಂದ ಮಹಿಳೆಯ ಬಣ್ಣ ಬಯಲು ; ಕೊನೆಗೆ ಒಂದು ದಿನ ಆಕೆಯ ಕಿರಿಕಿರಿ ಸಹಿಸಲು ಸಾಧ್ಯವಾಗದೇ, ಪತಿ ಆಕೆಯ ಹೆಸರಿಗೆ ತನ್ನ ಆಸ್ತಿಯನ್ನೆಲ್ಲ ವರ್ಗಾಯಿಸಲು ಮುಂದಾಗಿದ್ದಾನೆ. ಈ ವೇಳೆ ಆಧಾರ್ ಕಾರ್ಡ್ ನೀಡುವಂತೆ ಕೇಳಿದ್ದಾನೆ. ಇದಾದ ತಕ್ಷಣ ಶರಣ್ಯ ತನ್ನ ಪತಿಗೆ ಆಧಾರ್ ಕಾರ್ಡ್ ನೀಡಿದ್ದಾಳೆ. ಕೇರಾಫ್ ನಲ್ಲಿ ರವಿ ಎಂದು ಬರೆದಿದ್ದರಿಂದ ಇಂದ್ರಾಣಿ ಮತ್ತು ಅವರ ಮಗ ಅನುಮಾನಗೊಂಡು ಪೊಲೀಸರಿಗೆ ದೂರು ನೀಡಿದ್ದರು. ಅವರು ನೀಡಿದ ಆಧಾರ್ ಕಾರ್ಡ್ ಹಾಗೂ ದಾಖಲೆಗಳನ್ನು ಆಧರಿಸಿ ತನಿಖೆ ನಡೆಸಿದ ಪೊಲೀಸರಿಗೆ ಬೆಚ್ಚಿಬೀಳಿಸುವ ಸಂಗತಿಗಳು ಬೆಳಕಿಗೆ ಬಂದಿವೆ. ಮಹಿಳೆ ಶರಣ್ಯ ವಯಸ್ಸು 30 ಅಲ್ಲ, 52 ಎನ್ನುವುದು ಆಧಾರ್ ಕಾರ್ಡ್‌ನಿಂದ ಗೊತ್ತಾಗಿದೆ. ಸಾಲದ್ದಕ್ಕೆ ಆಕೆ ಈ ಮೊದಲೇ 2 ಮದುವೆಯಾಗಿದ್ದು, ಇದು ಮೂರನೇ ಮದುವೆ ಎನ್ನುವುದು ಬೆಳಕಿಗೆ ಬಂದಿದೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading…

Related

Discover more from Coastal Times Kannada

Subscribe to get the latest posts sent to your email.

Previous Post

ಮಂಗಳೂರು: ತ್ಯಾಗ ಬಲಿದಾನದ ಹಬ್ಬವಾದ ಬಕ್ರೀದ್‌ ಶ್ರದ್ಧಾ ಭಕ್ತಿಯಿಂದ ಆಚರಣೆ

Next Post

ಗುಡ್ಡೆ ಕುಸಿತದಿಂದ ಅಪಾಯಕ್ಕೆ ಸಿಲುಕಿದ ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಿದ ಜೆ.ಆರ್. ಲೋಬೊ

Related Posts

ಬ್ರಿಕ್ಸ್ 2026 ಶೃಂಗಸಭೆಯಲ್ಲಿ ಭಾಗವಹಿಸಲು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತಕ್ಕೆ ಆಗಮನ; ಇಂದು ಪ್ರಧಾನಿ ಮೋದಿ ಜೊತೆ ಸಭೆ
ರಾಷ್ಟ್ರೀಯ ಸುದ್ದಿ

ಬ್ರಿಕ್ಸ್ 2026 ಶೃಂಗಸಭೆಯಲ್ಲಿ ಭಾಗವಹಿಸಲು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತಕ್ಕೆ ಆಗಮನ; ಇಂದು ಪ್ರಧಾನಿ ಮೋದಿ ಜೊತೆ ಸಭೆ

September 11, 2026
12
ತಿರುವನಂತಪುರಂ: ನಿಂತಿದ್ದ ಲಾರಿಗೆ ಕಾರು ಡಿಕ್ಕಿ – ಎಂಟು ಮಂದಿ ಎಂಜಿನಿಯರಿಂಗ್ ವಿದ್ಯಾರ್ಥಿಗಳು ದುರ್ಮರಣ
ರಾಷ್ಟ್ರೀಯ ಸುದ್ದಿ

ತಿರುವನಂತಪುರಂ: ನಿಂತಿದ್ದ ಲಾರಿಗೆ ಕಾರು ಡಿಕ್ಕಿ – ಎಂಟು ಮಂದಿ ಎಂಜಿನಿಯರಿಂಗ್ ವಿದ್ಯಾರ್ಥಿಗಳು ದುರ್ಮರಣ

September 5, 2026
98
Next Post
ಗುಡ್ಡೆ ಕುಸಿತದಿಂದ ಅಪಾಯಕ್ಕೆ ಸಿಲುಕಿದ ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಿದ ಜೆ.ಆರ್. ಲೋಬೊ

ಗುಡ್ಡೆ ಕುಸಿತದಿಂದ ಅಪಾಯಕ್ಕೆ ಸಿಲುಕಿದ ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಿದ ಜೆ.ಆರ್. ಲೋಬೊ

Discussion about this post

Recent News

ಮುಲ್ಕಿಯ ಆದಿ ಕಿಲ್ಪಾಡಿ ಕೊರ್ದಬ್ಬು ದೈವಸ್ಥಾನದಲ್ಲಿ ನಡೆದ ಕಳ್ಳತನ ಪ್ರಕರಣ: ನಾಲ್ವರು ಅಂತರ್ ಜಿಲ್ಲಾ ಕಳ್ಳರ ಬಂಧನ

ಮುಲ್ಕಿಯ ಆದಿ ಕಿಲ್ಪಾಡಿ ಕೊರ್ದಬ್ಬು ದೈವಸ್ಥಾನದಲ್ಲಿ ನಡೆದ ಕಳ್ಳತನ ಪ್ರಕರಣ: ನಾಲ್ವರು ಅಂತರ್ ಜಿಲ್ಲಾ ಕಳ್ಳರ ಬಂಧನ

September 11, 2026
40
ಮಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧಿತ ಎಂಡಿಎಂಎ ಹಾಗೂ ಗಾಂಜಾ ಸೇವನೆ ಮಾಡಿ ತೂರಾಡುತ್ತಿದ್ದ ಒಟ್ಟು 6 ಮಂದಿ ಆರೋಪಿಗಳ ಬಂಧನ

ಮಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧಿತ ಎಂಡಿಎಂಎ ಹಾಗೂ ಗಾಂಜಾ ಸೇವನೆ ಮಾಡಿ ತೂರಾಡುತ್ತಿದ್ದ ಒಟ್ಟು 6 ಮಂದಿ ಆರೋಪಿಗಳ ಬಂಧನ

September 11, 2026
59
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಮುಲ್ಕಿಯ ಆದಿ ಕಿಲ್ಪಾಡಿ ಕೊರ್ದಬ್ಬು ದೈವಸ್ಥಾನದಲ್ಲಿ ನಡೆದ ಕಳ್ಳತನ ಪ್ರಕರಣ: ನಾಲ್ವರು ಅಂತರ್ ಜಿಲ್ಲಾ ಕಳ್ಳರ ಬಂಧನ

ಮುಲ್ಕಿಯ ಆದಿ ಕಿಲ್ಪಾಡಿ ಕೊರ್ದಬ್ಬು ದೈವಸ್ಥಾನದಲ್ಲಿ ನಡೆದ ಕಳ್ಳತನ ಪ್ರಕರಣ: ನಾಲ್ವರು ಅಂತರ್ ಜಿಲ್ಲಾ ಕಳ್ಳರ ಬಂಧನ

September 11, 2026
ಮಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧಿತ ಎಂಡಿಎಂಎ ಹಾಗೂ ಗಾಂಜಾ ಸೇವನೆ ಮಾಡಿ ತೂರಾಡುತ್ತಿದ್ದ ಒಟ್ಟು 6 ಮಂದಿ ಆರೋಪಿಗಳ ಬಂಧನ

ಮಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧಿತ ಎಂಡಿಎಂಎ ಹಾಗೂ ಗಾಂಜಾ ಸೇವನೆ ಮಾಡಿ ತೂರಾಡುತ್ತಿದ್ದ ಒಟ್ಟು 6 ಮಂದಿ ಆರೋಪಿಗಳ ಬಂಧನ

September 11, 2026
ಸೆ.19: ಕಾಞಂಗಾಡ್‌ನ  ಹೊಸದುರ್ಗ ನಿತ್ಯಾನಂದ ಆಶ್ರಮದಲ್ಲಿ ಪುಸ್ತಕ ಬಿಡುಗಡೆ

ಸೆ.19: ಕಾಞಂಗಾಡ್‌ನ ಹೊಸದುರ್ಗ ನಿತ್ಯಾನಂದ ಆಶ್ರಮದಲ್ಲಿ ಪುಸ್ತಕ ಬಿಡುಗಡೆ

September 11, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d