ಮಂಗಳೂರು, ಆಗಸ್ಟ್ 10: ಮುಸ್ಲಿಂ ಯುವಕನೊಂದಿಗೆ ನಾಪತ್ತೆಯಾಗಿದ್ದ ಕೇರಳದ ಕಾಸರಗೋಡಿನ ವಿದ್ಯಾನಗರ ನಿವಾಸಿ ವಿಸ್ಮಯ ಪ್ರಕರಣ ತಿರುವು ಪಡೆದುಕೊಂಡಿದೆ. ಹೈಕೋರ್ಟ್ ಆದೇಶದಂತೆ ಕೇರಳದ ಮೊಹಮ್ಮದ್ ಅಶ್ಫಾಕ್ ವಿಸ್ಮಯಳನ್ನು ಮದುವೆಯಾಗಿದ್ದಾನೆ. ಈ ಕುರಿತು ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪವೆಲ್ ಫೇಸ್ಬುಕ್ ಪೋಸ್ಟ್ ಹಾಕಿದ್ದು, ವಿಸ್ಮಯ ತಂದೆಯ ಬಳಿ ಕ್ಷಮೆಯಾಚಿಸಿದ್ದಾರೆ. ಕೇರಳದ ಕಾಸರಗೋಡಿನ ವಿದ್ಯಾನಗರ ನಿವಾಸಿ ವಿಸ್ಮಯ, ಕ್ರಿಮಿನಲ್ ಹಿನ್ನೆಲೆ ಉಳ್ಳ ಮೊಹಮ್ಮದ್ ಅಶ್ಫಾಕ್ನ ಪ್ರೀತಿ ಬಲೆಗೆ ಬಿದ್ದಿದ್ದಳು. ಮೊಹಮ್ಮದ್ ಅಶ್ಫಾಕ್ನಿಗೆ ಈಗಾಗಲೇ ಒಂದು ಮದುವೆಯಾಗಿದೆ. ಅಲ್ಲದೆ ಮೊಹಮ್ಮದ್ ಅಶ್ಫಾಕ್ನ ವಿರುದ್ಧ ಕಾಸರಗೋಡಿನ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಎಂಟು ಪ್ರಕರಣಗಳು ದಾಖಲಾಗಿವೆ. ಕಾಸರಗೋಡಿನಲ್ಲೇ ವಿಸ್ಮಯ ಮತ್ತು ಆಶ್ಫಕ್ನ ನಡುವೆ ಲವ್ವಿ ಡವ್ವಿ ನಡೆದಿತ್ತು.
ವಿಸ್ಮಯ ತಂದೆ ವಿನೋದ್ ಅವರು ವಿಸ್ಮಯಳನ್ನು ಮಂಗಳೂರಿನ ಉಳ್ಳಾಲದ ಅತ್ತೆ ಮನೆಯಲ್ಲಿ ಇರಿಸಿ ಬಿಸಿಎ ಶಿಕ್ಷಣ ಕೊಡಿಸುತ್ತಿದ್ದರು. ಇಲ್ಲಿಯೂ ಆಕೆಯನ್ನು ಬಿಡದ ಆಶ್ಫಕ್ ಕಳೆದ ಜೂನ್ 6 ರಂದು ಉಳ್ಳಾಲದಿಂದ ವಿಸ್ಮಯ ಕರೆದುಕೊಂಡು ಹೋಗಿದ್ದನು. ವಿದ್ಯಾನಗರ ಠಾಣೆ ಪೊಲೀಸರು ಪತ್ತೆ ಹಚ್ಚಿ ವಿಸ್ಮಯಳನ್ನ ಮನೆಯವರ ಜೊತೆ ಕಳುಹಿಸಿದ್ದರು. ಮತ್ತೆ ಜೂನ್ 30ರಂದು ಆಶ್ಫಕ್ ಉಳ್ಳಾಲದಿಂದ ವಿಸ್ಮಯಳನ್ನು ಅಪಹರಿಸಿ ಕೊಚ್ಚಿಗೆ ಕರೆದುಕೊಂಡು ಹೋಗಿದ್ದನು.
ಮಂಗಳೂರಿನ ಶ್ರೀನಿವಾಸ್ ಕಾಲೇಜಿನಲ್ಲಿ ಬಿಸಿಎ ಕಲಿಯುತ್ತಿದ್ದ ಕಾಸರಗೋಡು ಮೂಲದ ಮಲಯಾಳಿ ಬಿಲ್ಲವ ಸಮುದಾಯದ ವಿದ್ಯಾರ್ಥಿನಿ ವಿಸ್ಮಯಾಳನ್ನು ಕಳೆದ ಜೂನ್ 30ರಂದು ಮೊಹಮ್ಮದ್ ಅಶ್ಫಾಕ್ ಎಂಬಾತ ಅಪಹರಿಸಿದ್ದ ಎಂದು ಪಾಂಡೇಶ್ವರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಕಾಸರಗೋಡು ವಿದ್ಯಾನಗರ ನಿವಾಸಿ ವಿಸ್ಮಯಾ ತಂದೆ ವಿನೋದ್ ಅವರೇ ತನ್ನ ಮಗಳನ್ನು ಅಪಹರಿಸಿದ್ದಾನೆಂದು ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಮೊಹಮ್ಮದ್ ಅಶ್ಫಾಕ್ ಜೊತೆಗೆ ಕಾಸರಗೋಡಿನಲ್ಲೇ ಇದ್ದ ವಿಸ್ಮಯಾಳನ್ನು ಮಂಗಳೂರಿಗೆ ಕರೆತಂದು ಕೌನ್ಸಿಲಿಂಗ್ ಸೆಂಟರಿನಲ್ಲಿ ಇರಿಸಿದ್ದರು.
ಒಂದು ತಿಂಗಳ ಕೌನ್ಸೆಲಿಂಗ್ ಬಳಿಕ ಸ್ವಲ್ಪ ಮಟ್ಟಿಗೆ ಮನಸ್ಸು ಬದಲಿಸಿದ ರೀತಿಯಿದ್ದ ವಿಸ್ಮಯಾಳನ್ನು ಮನೆಯವರೇ ಕರೆದೊಯ್ದಿದ್ದು, ಸಂಬಂಧಿಕರ ಮನೆಯಲ್ಲಿ ಇರಿಸಿಕೊಂಡಿದ್ದರು. ಆದರೆ, ಇದರ ನಡುವೆಯೇ ಮೊಹಮ್ಮದ್ ಅಶ್ಫಾಕ್ ಕೇರಳ ಹೈಕೋರ್ಟಿನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಹಾಕಿದ್ದಾನೆಂದು ಹೇಳಲಾಗುತ್ತಿದ್ದು, ತನ್ನ ಪತ್ನಿಯನ್ನು ಹುಡುಕಿ ಕೊಡುವಂತೆ ಪೊಲೀಸರಿಗೆ ಅರ್ಜಿ ಹಾಕಿದ್ದ. ಕೋರ್ಟ್ ಆದೇಶ ಪ್ರಕಾರ, ವಿದ್ಯಾನಗರ ಪೊಲೀಸರು ವಿಸ್ಮಯಾಳನ್ನು ಪತ್ತೆಹಚ್ಚಿ ಹೈಕೋರ್ಟಿಗೆ ಹಾಜರುಪಡಿಸಿದ್ದರು. ಹೈಕೋರ್ಟಿನಲ್ಲಿ ವಿಸ್ಮಯಾ, ತನ್ನ ಪ್ರಿಯಕರ ಮೊಹಮ್ಮದ್ ಅಶ್ಫಾಕ್ ನನ್ನು ನೋಡುತ್ತಿದ್ದಂತೆ ಆತನನ್ನೇ ಮದುವೆಯಾಗುತ್ತೇನೆ, ಹೆತ್ತವರ ಜೊತೆಗೆ ಹೋಗುವುದಿಲ್ಲ ಎಂದು ಹೇಳಿಕೆ ನೀಡಿದ್ದಾಳೆ.
ಕ್ಷಮೆ ಕೇಳಿದ ಶರಣ್ ಪಂಪವೆಲ್: ‘ಕ್ಷಮಿಸಿ ವಿನೋದ್ ರವರೇ, ನಿಮ್ಮ ಮಗಳನ್ನು ಉಳಿಸಲು ನಮ್ಮಿಂದ ಸಾಧ್ಯವಾಗಿಲ್ಲ’. ಕೇರಳ ಹೈಕೋರ್ಟ್ ಆದೇಶದಂತೆ ವಿಸ್ಮಯಳನ್ನು ನಟೋರಿಯಸ್ ಕ್ರಿಮಿನಲ್ ಮೊಹಮ್ಮದ್ ಆಶ್ಫಕ್ ಮದುವೆಯಾಗಿದ್ದಾನೆ ಎಂದು ಫೇಸ್ಬುಕ್ನಲ್ಲಿ ಫೋಸ್ಟ್ ಹಾಕಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post