ಮಂಗಳೂರು: ಬ್ಲೇಡ್ ಕಂಪೆನಿಯೊಂದು ಪಿಗ್ಮಿ ಹೆಸರಿನಲ್ಲಿ ಬಡವರ ಲಕ್ಷಾಂತರ ರೂ. ಹಣವನ್ನು ಗುಳುಂ ಮಾಡಿ ಕಚೇರಿಗೆ ಬೀಗ ಜಡಿದು ಪರಾರಿಯಾಗಿದೆ. ಹಣ ಕಟ್ಟಿದವರು ಕಳೆದ ಕೆಲ ವರ್ಷದಿಂದ ನಗರದ ಪಿವಿಎಸ್ ಬಿಲ್ಡಿಂಗ್ ನಲ್ಲಿ ಕಾರ್ಯಾಚರಿಸುತ್ತಿದ್ದ ರಾಯಲ್ ಟ್ರಾವಂಕೂರು ಫಾರ್ಮರ್ಸ್ ಪ್ರೊಡ್ಯೂಸರ್ ಕಂಪೆನಿ ವಂಚಿಸಿರುವ ಸಂಸ್ಥೆ. ಹಣ ಕಟ್ಟಿದವರು ಸಂಸ್ಥೆಯ ಈ ಕಚೇರಿಗೆ ಬಂದು ನೋಡಿದಾಗಲೇ ಅವರಿಗೆ ತಾವು ಮೋಸ ಹೋದದ್ದು ತಿಳಿದದ್ದು.
ರಾಯಲ್ ಟ್ರಾವಂಕೂರು ಫಾರ್ಮರ್ಸ್ ಪ್ರೊಡ್ಯೂಸರ್ ಹೆಸರಲ್ಲಿ ಸಂಸ್ಥೆ ಈ ನಕಲಿ ಕಂಪನಿ ಪ್ರಾರಂಭಗೊಂಡಿದ್ದು, ಕಂಪೆನಿಯ ಸಿಬ್ಬಂದಿಗಳ ಬೆಣ್ಣೆ ಮಾತಿಗೆ ಮರುಳಾದ, ಸಣ್ಣ ಪುಟ್ಟ ಉದ್ಯೋಗ ಮಾಡುವವರು, ಕೂಲಿ ಕಾರ್ಮಿಕರು, ಬೀದಿ ವ್ಯಾಪಾರಿಗಳು , ಸಣ್ಣ ಪುಟ್ಟ ವ್ಯಾಪಾರಿಗಳು ದಿನನಿತ್ಯ ಈ ಸಂಸ್ಥೆಯ ಪಿಗ್ಮಿಗೆ ಹಣ ಕಟ್ಟಿದ್ದಾರೆ. ಭವಿಷ್ಯದಲ್ಲಿ ತೊಂದರೆ ತಾಪತ್ರಯ ಎದುರಾದಾಗ ಅಥಾವ ಮನೆಯ ಶುಭ ಕಾರ್ಯಕ್ಕೆ ಅಥಾವ ಇನ್ನಿತ್ತರ ಹಣದ ಅವಶ್ಯಕತೆಗಳಿಗೆ ಉಪಯೋಗಕ್ಕೆ ಬರಬಹುದೆಂದು ಬಡಪಾಯಿಗಳು ಹಣ ಕಟ್ಟಿದ್ದರು. ಈ ವರ್ಷದ ನವೆಂಬರ್ ಅಂತ್ಯದ ಬಳಿಕ ಫಿಗ್ಮಿ ಕಲೆಕ್ಟರ್ ಬಾರದಿದ್ದರಿಂದ ಹಣ ಕಟ್ಟಿದವರು ಆತನಿಗೆ ಫೋನ್ ಮಾಡಿದ್ದಾರೆ. ಆದರೆ ಅದು ಸ್ವಿಚ್ ಆಫ್ ಆಗಿತ್ತು. ಅನುಮಾನ ಬಂದು ಕಚೇರಿಗೆ ಬಂದು ನೋಡಿದಾಗ ಕಂಪನಿಯು ಬೀಗ ಜಡಿದು ದುಡ್ಡಿನೊಂದಿಗೆ ಪರಾರಿಯಾಗಿರುವುದು ಬೆಳಕಿಗೆ ಬಂದಿದೆ.
ಹೆಚ್ಚಿನ ಮಂದಿಗೆ ಸಂಸ್ಥೆಯಲ್ಲಿ ಸಮಸ್ಯೆ ಆಗಿರುವ ಮಾಹಿತಿ ಇಲ್ಲ. ಹೀಗಾಗಿ ಪೊಲೀಸ್ ದೂರು ನೀಡಲು ಬಂದಿಲ್ಲ. ಹಲವಾರು ಮಂದಿ 40-50 ಸಾವಿರ ಅಂತ ಹಣ ಕಳಕೊಂಡಿದ್ದಾರೆ ಎಂದು ಅಬ್ದುಲ್ ಅಜೀಜ್ ತಿಳಿಸಿದ್ದಾರೆ. ರಾಯಲ್ ಟ್ರಾವಂಕೂರ್ ಹಣಕಾಸು ಸಂಸ್ಥೆ 2021ರಲ್ಲಿ ಆರಂಭಗೊಂಡಿದ್ದು ಕೇರಳದ ಕಣ್ಣೂರಿನಲ್ಲಿ ಪ್ರಧಾನ ಕಚೇರಿ ಹೊಂದಿದೆ. ಕಾಸರಗೋಡು, ಕಣ್ಣೂರು ಸೇರಿದಂತೆ ಉತ್ತರ ಕೇರಳದ ಹಲವು ಕಡೆಗಳಲ್ಲಿ ಶಾಖಾ ಕಚೇರಿಯಿದ್ದು, ಕರ್ನಾಟಕದ ಮಂಗಳೂರು ಮತ್ತು ತೊಕ್ಕೊಟ್ಟಿನಲ್ಲಿ ಕಳೆದ ವರ್ಷ ಕಚೇರಿ ಆರಂಭಿಸಿತ್ತು. ರಾಹುಲ್ ಚಕ್ರಪಾಣಿ ಎಂಬವರು ಸಂಸ್ಥೆಯ ಎಂಡಿ ಆಗಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post