ಬಂಟ್ವಾಳ ಡಿ 09 :ಡಾಮರು ಕಳ್ಳತನದ ಜಾಲವನ್ನು ಪತ್ತೆ ಹಚ್ಚಿದ ಬಂಟ್ವಾಳ ಗ್ರಾಮಾಂತರ ಠಾಣೆಯ ಪೊಲೀಸರು ತಂಡ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳ ಸಹಿತ ಆರೋಪಿಗಳನ್ನು ಬಂಧಿಸಿದ ಘಟನೆ ನಡೆದಿದೆ.
ಸಿ.ಇ.ಎನ್ ಅಪರಾಧ ಠಾಣೆಯ ಪೊಲೀಸ್ ಉಪನಿರೀಕ್ಷಕ ಮಂಜುನಾಥ್ ಟಿ ಮತ್ತು ಸಿಬ್ಬಂದಿಗಳ ತಂಡ ದಾಳಿ ನಡೆಸಿದ್ದು ಸ್ಥಳದಲ್ಲಿದ್ದವರನ್ನು ವಶಕ್ಕೆ ಪಡೆದು, ವಿಚಾರಿಸಿದಾಗ ಉಡುಪಿಯ ವಿಜಯಕುಮಾರ್ ಶೆಟ್ಟಿ ಅಕ್ರಮ ಜಾಲದ ರೂವಾರಿ ಎನ್ನುವುದು ತಿಳಿದುಬಂದಿತ್ತು. ಆತನ ಸೂಚನೆಯಂತೆ, ಬಂಟ್ವಾಳ ಕಡೇಶ್ವಾಲ್ಯ ಗ್ರಾಮದ ಸುಧಾಕರ ಶೆಟ್ಟಿ@ಸುಧಾಕರ ಕೊಟ್ಟಾರಿ ಎಂಬವರೊಂದಿಗೆ ಸೇರಿ ಈ ಕೃತ್ಯವನ್ನು ನಡೆಸುತ್ತಿರುವುದು ಬೆಳಕಿಗೆ ಬಂದಿರುತ್ತದೆ.
ಮುಂದಿನ ಕಾನೂನು ಕ್ರಮಕ್ಕಾಗಿ ಸ್ಥಳದಲ್ಲಿದ್ದ AP03X6149, KL43C3968, KA19AC4077, KA19AC8686, KA19AA7342, KA19AD6595 ನೋಂದಣಿ ಸಂಖ್ಯೆಯ ಟ್ಯಾಂಕರ್ ಲಾರಿಗಳನ್ನು, 64 ಲಕ್ಷಕ್ಕಿಂತಲೂ ಅಧಿಕ ಮೌಲ್ಯದ ಡಾಮರು , 6ಲಾರಿ ಹಾಗೂ ಕಳ್ಳತನ ಮಾಡಲು ಉಪಯೋಗಿಸಿದ ತೂಕ ಮಾಪನ,ಡಾಮರು ಬಿಸಿಮಾಡಲು ಉಪಯೋಗಿಸಿದ ಗ್ಯಾಸ್ ಸಿಲಿಂಡರ್, ಡಾಂಬರ್ ತುಂಬಿಸುವ ಕಬ್ಬಿಣದ ಟ್ಯಾಂಕ್, 9 ಮೊಬೈಲ್,ಹೀಗೆ ಅನೇಕ ಸೊತ್ತುಗಳನ್ನು ಪೋಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ವಿಜಯ ಕುಮಾರ್ ಶೆಟ್ಟಿ, ಸುಧಾಕರ ಶೆಟ್ಟಿ @ಸುಧಾಕರ, ಮಹಮ್ಮದ್ ಇಮ್ರಾನ್, ಅಶ್ರಪ್ ಎಂ., ವೀರೇಂದ್ರ ಎಸ್.ಆರ್, ಮಾದಸ್ವಾಮಿ, ಪ್ರಭಾಕರನ್, ನವೀನ್ ಕುಮಾರ್, ಮಹಮ್ಮದ್ ನಿಸಾರ್, ಮಹಮ್ಮದ್ ಸಿಹಾಬುದ್ದೀನ್ ಎಂಬವರು ಬಂಧಿತರು.
ಇವರ ವಿರುದ್ದ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಅ.ಕ್ರ 122/2023 ಕಲಂ : 379, 417, 420, 285 ಭಾ.ದ.ಸಂ ಮತ್ತು ಕಲಂ: 23 ಪೆಟ್ರೋಲಿಯಂ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
Discover more from Coastal Times Kannada
Subscribe to get the latest posts sent to your email.
Discussion about this post