• About us
  • Contact us
  • Disclaimer
Thursday, November 13, 2025
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಪಾರ್ಶ್ವವಾಯು ನಿಯಂತ್ರಣ ಹೇಗೆ? ಚಿಕಿತ್ಸೆ ಏನು?

Coastal Times by Coastal Times
February 12, 2022
in ಆರೋಗ್ಯ
ಪಾರ್ಶ್ವವಾಯು ನಿಯಂತ್ರಣ ಹೇಗೆ? ಚಿಕಿತ್ಸೆ ಏನು?

The patient is Cerebrovascular accident or stroke Caused by hypertension and obesity, sitting in wheelchair him mouse is facial palsy, him wife takes care. Concept of healthcare and medical service

39
VIEWS
WhatsappTelegramShare on FacebookShare on Twitter

ಪಾರ್ಶ್ವವಾಯು (ಸ್ಟ್ರೋಕ್) ಜಗತ್ತಿನಾದ್ಯಂತ ಎಲ್ಲಾ ವರ್ಗದ ಜನರನ್ನು ಬಿಟ್ಟು ಬಿಡದೆ ಕಾಡುತ್ತಿರುವ ಮಾರಣಾಂತಿಕ ರೋಗ. ವಿಶ್ವ ಆರೋಗ್ಯ ಸಂಸ್ಥೆಯ ಅಂಕಿ-ಅಂಶಗಳ ಪ್ರಕಾರ ಹೃದಯಾಘಾತದ ನಂತರ ಜಗತ್ತಿನಲ್ಲಿ ಅತಿ ಹೆಚ್ಚು ಜನರನ್ನು ಕೊಲ್ಲುವ ಮಾರಣಾಂತಿಕ ರೋಗ. ಜಗತ್ತಿನಲ್ಲಿ ಸುಮಾರು 1.8 ಕೋಟಿ ಮಂದಿ ಈ ರೋಗಕ್ಕೆ ಪ್ರತಿವರ್ಷ ತುತ್ತಾಗುತ್ತಿದ್ದಾರೆ. ಐವತ್ತೈದು ಲಕ್ಷ ಜನರು ಈ  ರೋಗದಿಂದ ಪ್ರತಿವರ್ಷ ಸಾವನ್ನಪ್ಪುತ್ತಿದ್ದಾರೆ.

ಭಾರತದಲ್ಲಿಯೂ ಪಾರ್ಶ್ವವಾಯುವಿನ ಹಾವಳಿ ಗಂಭೀರವಾಗಿಯೇ ಇದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಅಧ್ಯಯನದ ಪ್ರಕಾರ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಪಾರ್ಶ್ವವಾಯುನಿಂದ ತುತ್ತಾಗುವವರ ಸಂಖ್ಯೆ ಪ್ರತಿವರ್ಷ ಒಂದು ಲಕ್ಷಕ್ಕೆ 450 ಜನರಷ್ಟು. ಈ ಸಂಖ್ಯೆ ದಾಖಲಾದ ಪ್ರಮಾಣ. ದಾಖಲಾಗದೇ ಉಳಿದ ಸ್ಟ್ರೋಕ್‍ನ ಪ್ರಮಾಣ ಬಹುಶಃ ಇನ್ನೂ ಹೆಚ್ಚಿರಬಹುದು.

ಪಾರ್ಶ್ವವಾಯು ಲಕ್ಷಣಗಳು

ಎಲ್ಲಾ ಕಾಯಿಲೆಗಳಿಗಿಂತಲೂ ಪಾರ್ಶ್ವವಾಯು ಸ್ವಲ್ಪ ವಿಭಿನ್ನ ರೀತಿಯದ್ದು. ಯಾವ ವಯೋಮಾನದವರಿಗೆ ಯಾವಾಗ ಪಾರ್ಶ್ವವಾಯು ಹೊಡೆಯುತ್ತದೆ ಎಂದು ಊಹಿಸುವುದು ಕಷ್ಟ. ಸಾಮಾನ್ಯವಾಗಿ ಮೆದುಳಿನ ಜೀವಕೋಶಗಳಿಗೆ ಹಾನಿಯುಂಟಾದಾಗ ಉದ್ಬವಿಸುವ ದೈಹಿಕ ತೊಂದರೆ ಪಾರ್ಶ್ವವಾಯು. ಇದರ ಸಾಮಾನ್ಯ ಲಕ್ಷಣಗಳೆಂದರೆ ಅಂಗಾಂಗಗಳ ಸ್ವಾಧೀನ ತಪ್ಪುವಿಕೆ, ಸಮತೋಲನ, ಮಾತು ಮತ್ತು ದೃಷ್ಟಿ ಸಾಮರ್ಥ್ಯಗಳು ಮಂಕಾಗುವುದು. ಈ ಲಕ್ಷಣಗಳು ಮೆದುಳಿನ ಹಾನಿಯಾದ ಭಾಗ ಮತ್ತು ಪ್ರಮಾಣದ ಮೇಲೆ ಅವಲಂಬಿತವಾಗಿರುತ್ತದೆ. ಆದ್ದರಿಂದ ಎಲ್ಲ ಪಾರ್ಶ್ವವಾಯು ಪೀಡಿತರಲ್ಲಿ ಒಂದೇ ಬಗೆಯ ಲಕ್ಷಣಗಳು ಕಂಡು ಬರುವುದಿಲ್ಲ. ಮುಖದಲ್ಲಿ ಬದಲಾವಣೆ ಅಥವಾ ಸುಕ್ಕುಗಟ್ಟುವಿಕೆ. ತೋಳಿನ ಬಲ ಕುಂದುವಿಕೆ. ನಿಶ್ಯಕ್ತಿ. ಮಾತನಾಡಲು ತೊಂದರೆ ಆಗುವುದು. ಮುಖ, ತೋಳು, ಕಾಲಿನ ಬಲ ಕ್ಷೀಣಿಸುವುದು. ಅದರಲ್ಲೂ ದೇಹದ ಒಂದು ಬದಿಯ ಅಂಗಾಂಗ ಬಲ ಕ್ಷೀಣಿಸುವುದು. ಗೊಂದಲ, ಮಾತನಾಡಲು ಕಷ್ಟ ಅಥವಾ ಮಾತನ್ನು ಅರ್ಥಮಾಡಿಕೊಳ್ಳಲು ತೊಂದರೆ ಆಗುವುದು, ಕಣ್ಣುಗಳಲ್ಲಿ ಸಮಸ್ಯೆ, ತಲೆತಿರುಗುವಿಕೆ, ಯಾವುದೇ ಕಾರಣವಿಲ್ಲದೆ ತೀವ್ರ ತಲೆನೋವು ಮೊದಲಾದವು ಇದರ ಲಕ್ಷಣಗಳು. ವಯಸ್ಸಾದವರಲ್ಲಿ ಪಾರ್ಶ್ವವಾಯು ಕಂಡುಬಂದರೆ ಆರೈಕೆಯನ್ನು ಹುಷಾರಾಗಿ ಮಾಡಬೇಕು.

ಪಾರ್ಶ್ವವಾಯುವಿನ ಲಕ್ಷಣಗಳು ಶುರುವಾದ ಸಮಯದಿಂದ 4 ರಿಂದ 6 ಗಂಟೆಯ ಸಮಯದೊಳಗೆ ಪೀಡಿತರಿಗೆ ಸೂಕ್ತ ಚಿಕಿತ್ಸೆ ಸಿಕ್ಕಲ್ಲಿ ಸಂಪೂರ್ಣ ಗುಣಹೊಂದುವ ಸಾಧ್ಯತೆ ಇರುತ್ತದೆ. ಆದ್ದರಿಂದ ಪಾರ್ಶ್ವವಾಯು ಪೀಡಿತರನ್ನು ಆದಷ್ಟು ತ್ವರಿತವಾಗಿ ಆಸ್ಪತ್ರೆಗೆ ಸಾಗಿಸುವುದು ಬಹುಮುಖ್ಯವಾದದ್ದು. ಮೆದುಳಿನ ಜೀವಕೋಶಗಳಿಗುಂಟಾಗುವ ಹಾನಿ ಶಾಶ್ವತ ರೀತಿಯದ್ದಾಗಿರುವುದರಿಂದ ಸತ್ತ ಜೀವಕೋಶಗಳು ನಿರ್ವಹಿಸುತ್ತಿದ್ದ ಮೆದುಳಿನ ಕಾರ್ಯ ಕುಂಠಿತಗೊಳ್ಳುತ್ತದೆ ಅಥವಾ ಸ್ಥಗಿತ ಗೊಳ್ಳುತ್ತದೆ. ಮೆದುಳಿನ ರಕ್ತನಾಳ ಹೆಪ್ಪುಗಟ್ಟಿ ಅಥವಾ ಒಡೆದು ಹೋಗಿ ಅದರಿಂದಾಗುವ ನರಮಂಡಲದ ಮೇಲಿನ ಪರಿಣಾಮ ಉಂಟಾಗುತ್ತದೆ.

ಪಾರ್ಶ್ವವಾಯು ಉಂಟಾಗಲು ಕಾರಣಗಳು

ಪಾರ್ಶ್ವವಾಯು ಉಂಟಾಗಲು ರೋಗಿಗೆ ಹಲವಾರು ವೈದ್ಯಕೀಯ ಕಾರಣಗಳು ಇರಬಹುದು. ಅದರಲ್ಲಿ ಮುಖ್ಯವಾದದ್ದು ಅನಿಯಂತ್ರಿತ ರಕ್ತದೊತ್ತಡ, ಅನಿಯಂತ್ರಿತ ಮಧುಮೇಹ, ಹೃದಯದ ಕಾಯಿಲೆ (ಹೃದಯಾಘಾತ, ಅಟ್ರಿಯಲ್ ಫೈಬ್ರಿಲ್ಲೇಶನ್ ಎಂಬ ಹೃದಯದ ಬಡಿತದ ಏರುಪೇರಿನ ಸಮಸ್ಯೆ), ಅಧಿಕ ಕೊಲೆಸ್ಟ್ರಾಲ್ ಪ್ರಮಾಣ, ಧೂಮಪಾನ ಹಾಗೂ ಬೊಜ್ಜು. ಹತ್ತಿರದ ರಕ್ತಸಂಬಂಧಿಗಳಲ್ಲಿ ಚಿಕ್ಕ ವಯಸ್ಸಿನಲ್ಲಿ ಪಾರ್ಶ್ವವಾಯು ಸಂಭವಿಸಿದರೆ ನುರಿತ ತಜ್ಞರಿಂದ ತಪಾಸಣೆಗೆ ಒಳಗಾಗುವುದು ಸೂಕ್ತ. ಸ್ಟ್ರೋಕ್ ರಿಸ್ಕೊಮೀಟರ್ ಎಂಬ ಆಪ್‍ನಿಂದ ಯಾವುದೇ ವ್ಯಕ್ತಿಯು ತನಗಿರುವ ಪಾರ್ಶ್ವವಾಯುವಿನ ಸಂಭವನೀಯತೆಯ ಪ್ರಮಾಣವನ್ನು ಲೆಕ್ಕಹಾಕಬಹುದು. ಪಾರ್ಶ್ವವಾಯು ಸಂಭವಿಸಿದ ಸಮಯದಲ್ಲಿ, ತಕ್ಷಣದ ವೈದ್ಯಕೀಯ ಚಿಕಿತ್ಸೆ ಪಡೆಯುವುದು ಬಹಳ ಮುಖ್ಯ. ತುರ್ತು ಮೂಲಸೌಕರ್ಯ ಹೊಂದಿರುವ ಆಸ್ಪತ್ರೆಗಳಿಗೆ ಸಾಧ್ಯವಾದಷ್ಟು ಬೇಗ ಮತ್ತು ಸುವರ್ಣ ಕಾಲಾವಧಿಯೊಳಗೆ (0 ರಿಂದ 3 /4.5 ಗಂಟೆಗಳವರೆಗೆ) ತಲುಪುವುದು ಅತ್ಯಗತ್ಯ.

ಪಾರ್ಶ್ವವಾಯು ನಿಯಂತ್ರಣ ಹೇಗೆ?

ಪಾರ್ಶ್ವವಾಯುವನ್ನು ತಡೆಗಟ್ಟಲು ಆರೋಗ್ಯಕರ ಆಹಾರ ಸೇವನೆ ಮತ್ತು ಜೀವನಶೈಲಿ ಮಾರ್ಪಾಡು ಪ್ರಮುಖ ಪಾತ್ರ ವಹಿಸುತ್ತದೆ. ಆರೋಗ್ಯಕರ ಆಹಾರವನ್ನು ಸೇವಿಸುವುದು, ಒತ್ತಡ ನಿರ್ವಹಣೆ, ನಿಯಮಿತ ವ್ಯಾಯಾಮ, ಧೂಮಪಾನವನ್ನು ತ್ಯಜಿಸುವುದು ಮತ್ತು ಅತಿಯಾದ ಆಲ್ಕೊಹಾಲ್ ಸೇವನೆಯನ್ನು ತಪ್ಪಿಸುವುದು ಇದನ್ನು ತಡೆಯುವ ಕೆಲವು ವಿಧಾನಗಳು. ಅವಕಾಡೊಗಳಲ್ಲಿ ಫೋಲೇಟ್ ಮತ್ತು ವಿಟಮಿನ್ ಕೆ ತುಂಬಿರುತ್ತವೆ. ಇದು ಕೇಂದ್ರ ನರಮಂಡಲವನ್ನು ಉತ್ತೇಜಿಸುತ್ತದೆ. ಇದು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತದೆ. ಬ್ರೊಕೊಲಿ, ಮೆಗ್ನೀಸಿಯಮ್ ಸಮೃದ್ಧವಾಗಿರುವ ಬಾದಾಮಿ, ಗೋಡಂಬಿ ಮತ್ತು ಆಕ್ರೋಟನ್ನು ಹೆಚ್ಚು ಸೇವಿಸಿ. ಪ್ರತಿದಿನ ಒಂದು ಬೌಲ್ ಓಟ್ ಮೀಲ್ ತಪ್ಪದೆ ಸೇವಿಸಿದರೆ ಕೇಂದ್ರ ನರಮಂಡಲವನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ. ಇದು ಒಟ್ಟಾರೆ ಆರೋಗ್ಯಕ್ಕೂ ಒಳ್ಳೆಯದು.

ಪಾರ್ಶ್ವವಾಯುವಿಗೆ ಚಿಕಿತ್ಸೆ

ಪಾರ್ಶ್ವವಾಯುವಿಗೆ ಆಯುರ್ವೇದದಲ್ಲಿ ಅತ್ಯುತ್ತಮ ಚಿಕಿತ್ಸೆ ಇದೆ. ಔಷಧಿ, ರಸೌಷಧಿ ಚಿಕಿತ್ಸೆ ಮತ್ತು ಪಂಚಕರ್ಮ ಚಿಕಿತ್ಸೆಗಳು ಪರಿಣಾಮಕಾರಿಯಾಗಿ ಇರುತ್ತವೆ. ಕೆಲವು ಸಂಧರ್ಭಗಳಲ್ಲಿ ದೇಹದ ಅರ್ಧ ಭಾಗ ಸಂಪೂರ್ಣ ಪಾರ್ಶ್ವವಾಯುವಿಗೆ ಪೀಡಿತರಾಗಿದ್ದಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯಬೇಕಾಗುತ್ತದೆ.ಆದರೆ ಉಳಿದಂತೆ ಕೈ ಅಥವಾ ಕಾಲು ಒಂದು ಭಾಗ ಪಾರ್ಶ್ವವಾಯುವಿಗೆ ಪೀಡಿತರಾಗಿದ್ದಲ್ಲಿ ಹೊರರೋಗಿ ವಿಭಾಗದಲ್ಲಿ (ಓಪಿಡಿ) ಚಿಕಿತ್ಸೆ ಪಡೆದು ಹೋಗಬಹುದಾಗಿದೆ. ಜೊತೆಗೆ ಪಥ್ಯ ಮತ್ತು ಆಪ್ತ ಸಮಾಲೋಚನೆಗಳಿಂದ ಸರಿಪಡಿಸಬಹುದಾಗಿದೆ. ಮೂರು ತಿಂಗಳ ಕಾಲ ಚಿಕಿತ್ಸೆ ಪಡೆದ ನಂತರ ಅವರ ಸ್ನಾಯುಗಳು ಮತ್ತು ಮಾಂಸಖಂಡಗಳಲ್ಲಿ ಶಕ್ತಿ ಬಂದು ಓಡಾಡಲು ಆಗುತ್ತದೆ.

ಪಾರ್ಶ್ವವಾಯು ಗುಣ ಆಗುವ ಕಾಯಿಲೆ. ಸರಿಯಾದ ಸಮಯದಲ್ಲಿ ಚಿಕಿತ್ಸೆ ಮಾಡಿದರೆ ಇದಕ್ಕೆ ಪರಿಹಾರ ಕಂಡುಕೊಳ್ಳಬಹುದು. ವಿಳಂಬ ಮಾಡದೆ ತತ್‍ಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋದರೆ ಈ ಕಾಯಿಲೆಯನ್ನು ಗುಣಮಾಡಬಹುದು.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

Related


Discover more from Coastal Times Kannada

Subscribe to get the latest posts sent to your email.

Previous Post

ಉಡುಪಿ: ಶ್ರೀಕೃಷ್ಣ ಮಠಕ್ಕೆ ಡಾ| ವೀರೇಂದ್ರ ಹೆಗ್ಗಡೆ ಭೇಟಿ

Next Post

ಉಡುಪಿ: ಹಿಜಾಬ್‌ಗೆ ಪಟ್ಟು, ಮನೆಗೆ ಮರಳಿದ ವಿದ್ಯಾರ್ಥಿನಿಯರು

Related Posts

ಮಂಗಳೂರಿನ ಸರ್ಕಾರಿ ವೆನ್ಲಾಕ್​​ ಆಸ್ಪತ್ರೆಯಲ್ಲಿ ಹೃದ್ರೋಗ ಚಿಕಿತ್ಸೆ ಆರಂಭ; ಬಡವರಿಗೆ ಕಡಿಮೆ ದರದಲ್ಲಿ ಹಾರ್ಟ್ ಟ್ರೀಟ್​ಮೆಂಟ್​
ಆರೋಗ್ಯ

ಮಂಗಳೂರಿನ ಸರ್ಕಾರಿ ವೆನ್ಲಾಕ್​​ ಆಸ್ಪತ್ರೆಯಲ್ಲಿ ಹೃದ್ರೋಗ ಚಿಕಿತ್ಸೆ ಆರಂಭ; ಬಡವರಿಗೆ ಕಡಿಮೆ ದರದಲ್ಲಿ ಹಾರ್ಟ್ ಟ್ರೀಟ್​ಮೆಂಟ್​

October 9, 2025
30
Coldrif Syrup ಕೋಲ್ಡ್ರಿಫ್ ಸಿರಪ್ ಸೇವಿಸಿ 11 ಮಕ್ಕಳ ಸಾವಿನ ಬಳಿಕ ಮಕ್ಕಳಿಗೆ ಕೆಮ್ಮಿನ ಸಿರಪ್ ನೀಡದಂತೆ ಕೇಂದ್ರ ಸರಕಾರ ಆದೇಶ
ಆರೋಗ್ಯ

Coldrif Syrup ಕೋಲ್ಡ್ರಿಫ್ ಸಿರಪ್ ಸೇವಿಸಿ 11 ಮಕ್ಕಳ ಸಾವಿನ ಬಳಿಕ ಮಕ್ಕಳಿಗೆ ಕೆಮ್ಮಿನ ಸಿರಪ್ ನೀಡದಂತೆ ಕೇಂದ್ರ ಸರಕಾರ ಆದೇಶ

October 4, 2025
102
Next Post
ಉಡುಪಿ: ಹಿಜಾಬ್‌ಗೆ ಪಟ್ಟು, ಮನೆಗೆ ಮರಳಿದ ವಿದ್ಯಾರ್ಥಿನಿಯರು

ಉಡುಪಿ: ಹಿಜಾಬ್‌ಗೆ ಪಟ್ಟು, ಮನೆಗೆ ಮರಳಿದ ವಿದ್ಯಾರ್ಥಿನಿಯರು

Discussion about this post

Recent News

3800 ಮಕ್ಕಳ ಹೃದಯ ಶಸ್ತ್ರಚಿಕಿತ್ಸೆ ಮಾಡಿಸಿ ಗಿನ್ನೆಸ್ ದಾಖಲೆ ಮಾಡಿದ ‘ಏನಮ್ಮಿ ಏನಮ್ಮಿ’ ಗಾಯಕಿ ಪಲಕ್ ಮುಚ್ಚಲ್

3800 ಮಕ್ಕಳ ಹೃದಯ ಶಸ್ತ್ರಚಿಕಿತ್ಸೆ ಮಾಡಿಸಿ ಗಿನ್ನೆಸ್ ದಾಖಲೆ ಮಾಡಿದ ‘ಏನಮ್ಮಿ ಏನಮ್ಮಿ’ ಗಾಯಕಿ ಪಲಕ್ ಮುಚ್ಚಲ್

November 12, 2025
30
ಕರಾವಳಿಯ ಪ್ರತಿಭಾನ್ವಿತ ಕಬಡ್ಡಿ ಆಟಗಾರ್ತಿ ಧನಲಕ್ಷ್ಮೀ ಪೂಜಾರಿ ಅವರು ಭಾರತದ ರಾಷ್ಟ್ರೀಯ ಕಬ್ಬಡ್ಡಿ ತಂಡಕ್ಕೆ ಆಯ್ಕೆ

ಕರಾವಳಿಯ ಪ್ರತಿಭಾನ್ವಿತ ಕಬಡ್ಡಿ ಆಟಗಾರ್ತಿ ಧನಲಕ್ಷ್ಮೀ ಪೂಜಾರಿ ಅವರು ಭಾರತದ ರಾಷ್ಟ್ರೀಯ ಕಬ್ಬಡ್ಡಿ ತಂಡಕ್ಕೆ ಆಯ್ಕೆ

November 11, 2025
18
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002


Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

3800 ಮಕ್ಕಳ ಹೃದಯ ಶಸ್ತ್ರಚಿಕಿತ್ಸೆ ಮಾಡಿಸಿ ಗಿನ್ನೆಸ್ ದಾಖಲೆ ಮಾಡಿದ ‘ಏನಮ್ಮಿ ಏನಮ್ಮಿ’ ಗಾಯಕಿ ಪಲಕ್ ಮುಚ್ಚಲ್

3800 ಮಕ್ಕಳ ಹೃದಯ ಶಸ್ತ್ರಚಿಕಿತ್ಸೆ ಮಾಡಿಸಿ ಗಿನ್ನೆಸ್ ದಾಖಲೆ ಮಾಡಿದ ‘ಏನಮ್ಮಿ ಏನಮ್ಮಿ’ ಗಾಯಕಿ ಪಲಕ್ ಮುಚ್ಚಲ್

November 12, 2025
ಕರಾವಳಿಯ ಪ್ರತಿಭಾನ್ವಿತ ಕಬಡ್ಡಿ ಆಟಗಾರ್ತಿ ಧನಲಕ್ಷ್ಮೀ ಪೂಜಾರಿ ಅವರು ಭಾರತದ ರಾಷ್ಟ್ರೀಯ ಕಬ್ಬಡ್ಡಿ ತಂಡಕ್ಕೆ ಆಯ್ಕೆ

ಕರಾವಳಿಯ ಪ್ರತಿಭಾನ್ವಿತ ಕಬಡ್ಡಿ ಆಟಗಾರ್ತಿ ಧನಲಕ್ಷ್ಮೀ ಪೂಜಾರಿ ಅವರು ಭಾರತದ ರಾಷ್ಟ್ರೀಯ ಕಬ್ಬಡ್ಡಿ ತಂಡಕ್ಕೆ ಆಯ್ಕೆ

November 11, 2025
ನ.13: ನವಮಂಗಳೂರು ಬಂದರು ಪ್ರಾಧಿಕಾರ (ಎನ್‌ಎಂಪಿಎ)ಯ ಸುವರ್ಣ ಮಹೋತ್ಸವ ಕಾರ್ಯಕ್ರಮ

ನ.13: ನವಮಂಗಳೂರು ಬಂದರು ಪ್ರಾಧಿಕಾರ (ಎನ್‌ಎಂಪಿಎ)ಯ ಸುವರ್ಣ ಮಹೋತ್ಸವ ಕಾರ್ಯಕ್ರಮ

November 11, 2025
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

%d