ಮಂಗಳೂರು: ಸುಮುಖ ಪ್ರೊಡಕ್ಷನ್ಸ್ ಲಾಂಛನದಲ್ಲಿ ತಯಾರಾದ “ತುಡರ್” ತುಳು ಸಿನಿಮಾ ಜೂನ್ 14 ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆ ಕಾಣಲಿದೆ. ಮಂಗಳೂರಿನಲ್ಲಿ ರೂಪವಾಣಿ, ಭಾರತ್ ಸಿನಿಮಾಸ್, ಪಿವಿಆರ್, ಸಿನಿಪೊಲಿಸ್, ಸುರತ್ಕಲ್ ನಲ್ಲಿ ಸಿನಿಗ್ಯಾಲಕ್ಸಿ, ಪಡುಬಿದ್ರೆಯಲ್ಲಿ ಭಾರತ್ ಸಿನಿಮಾಸ್, ಉಡುಪಿಯಲ್ಲಿ ಕಲ್ಪನ, ಭಾರತ್ ಸಿನಿಮಾಸ್, ಮಣಿಪಾಲದಲ್ಲಿ ಐನಾಕ್ಸ್, ಭಾರತ್ ಸಿನಿಮಾಸ್, ಕಾರ್ಕಳದಲ್ಲಿ ಪ್ಲಾನೆಟ್, ರಾಧಿಕಾ, ಪುತ್ತೂರಿನಲ್ಲಿ ಭಾರತ್ ಸಿನಿಮಾಸ್ ಬೆಳ್ತಂಗಡಿಯಲ್ಲಿ ಭಾರತ್ ಚಿತ್ರಮಂದಿರದಲ್ಲಿ ಸಿನಿಮಾ ತೆರೆಕಾಣಲಿದೆ ಎಂದು ಚಿತ್ರತಂಡ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿತು.
ಚಿತ್ರದ ಬಗ್ಗೆ ಮಾತಾಡಿದ ಮೋಹನ್ ರಾಜ್ ಅವರು, “2019ರಲ್ಲಿ ಚಿತ್ರಕ್ಕೆ ಕಥೆ ಬರೆದಿದ್ದು ತುಳು ಚಿತ್ರರಂಗದಲ್ಲಿ ಹೊಸತನ ತರಲು ನಿರ್ಮಾಪಕರು ನೆರವಾಗಿದ್ದಾರೆ. ಚಿತ್ರ ನೋಡಿದ ಪ್ರತಿಯೊಬ್ಬ ಪ್ರೇಕ್ಷಕನೂ ಕೂಡ ನಮ್ಮ ಪ್ರಯತ್ನವನ್ನು ಮೆಚ್ಚಿದ್ದಾರೆ. ಸುಮುಖ ಬ್ಯಾನರ್ ನಲ್ಲಿ ಬಂದಿರುವ ಮೊದಲ ಸಿನಿಮಾ ಇದಾಗಿದ್ದು ಎಲ್ಲರೂ ಸಿನಿಮಾವನ್ನು ಹೊಗಳಿದ್ದಾರೆ. ಇದು ನಮ್ಮ ಕೆಲಸಕ್ಕೆ ಇನ್ನಷ್ಟು ಸ್ಫೂರ್ತಿಯನ್ನು ನೀಡಿದೆ” ಎಂದರು.
ಬಳಿಕ ಮಾತಾಡಿದ ನಾಯಕನಟ ಸಿದ್ಧಾರ್ಥ್ ಶೆಟ್ಟಿ ಅವರು, “ಒಂದೇ ಕುಟುಂಬ ಎನ್ನುವಂತೆ ನಾವೆಲ್ಲರೂ ಒಟ್ಟಿಗೆ ಸೇರಿ ಸಿನಿಮಾವನ್ನು ಮಾಡಿದ್ದೇವೆ. ಸಿನಿಮಾ ಕಥೆ, ಪ್ರತಿಯೊಬ್ಬರ ನಟನೆಯನ್ನು ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ. ಎಲ್ಲ ತುಳುವರು ಜೂ.14ರಂದು ಸಿನಿಮಾ ನೋಡುವ ಮೂಲಕ ನಮ್ಮನ್ನು ಪ್ರೋತ್ಸಾಹಿಸಿ” ಎಂದರು.
ನಿರ್ದೇಶಕ ತೇಜೇಶ್ ಪೂಜಾರಿ ಮಾತನಾಡಿ, “ನಾನು ಬಾಲಿವುಡ್ ನಲ್ಲಿ ಕಳೆದ 25 ವರ್ಷಗಳಿಂದ ಸಿನಿಮಾಗಳಲ್ಲಿ ತೊಡಗಿದ್ದೇನೆ. ತುಳು ಚಿತ್ರರಂಗದ ಬಗ್ಗೆ ಹೆಚ್ಚೇನೂ ತಿಳಿದಿರಲಿಲ್ಲ. ಆದರೆ ಸಹ ನಿರ್ದೇಶಕ ಎಲ್ಟನ್ ನನ್ನನ್ನು ಇಲ್ಲಿಗೆ ಕರೆತಂದರು. ಈ ಸಿನಿಮಾವನ್ನು ಪ್ರೀತಿಯಿಟ್ಟು ಮಾಡಿದ್ದೇವೆ. ಎಲ್ಲರೂ ಸಿನಿಮಾ ನೋಡಿ ಹರಸಿ” ಎಂದರು.
ಈಗಾಗಲೇ ತುಡರ್ ಸಿನಿಮಾ ವಿದೇಶ ಸಹಿತ ಮಂಗಳೂರು, ಉಡುಪಿ, ಪುತ್ತೂರು, ಸುರತ್ಕಲ್, ಪಡುಬಿದ್ರೆಯಲ್ಲಿ ಪ್ರೀಮಿಯರ್ ಶೋ ಪ್ರದರ್ಶನಗೊಂಡು ಪ್ರೇಕ್ಷಕರ ವ್ಯಾಪಕ ಶ್ಲಾಘನೆಗೆ ಪಾತ್ರವಾಗಿದೆ. ಉತ್ತಮ ಚಿತ್ರಕತೆಯನ್ನೊಳಗೊಂಡ ಸಿನಿಮಾ ಕುಟುಂಬ ವರ್ಗದವರನ್ನು ಆಕರ್ಷಿಸಿದೆ. ನಾಯಕ ನಟ ಸಿದ್ದಾಥ್೯ ಶೆಟ್ಟಿ ಮೊದಲ ಪ್ರಯತ್ನದಲ್ಲೇ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕ ವಿಲ್ಸನ್ ರೆಬೆಲ್ಲೋ, ವಿದ್ಯಾ, ಸಂಪತ್, ಹರೀಶ್ ಶೆಟ್ಟಿ, ನಟ ಸಿದ್ಧಾರ್ಥ್ ಶೆಟ್ಟಿ, ವಿಕಾಸ್ ಪುತ್ರನ್, ಉದಯ್ ಪೂಜಾರಿ, ಮೋಹನ್ ರಾಜ್, ನಿರ್ದೇಶಕ ತೇಜೇಶ್ ಪೂಜಾರಿ, ಹಂಚಿಕೆದಾರ ಸಚಿನ್ ಎಸ್. ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಸಿನಿಮಾ ತಂಡ: ಸಿನಿಮಾಕ್ಕೆ ವಿಲ್ಸನ್ ರೆಬೆಲ್ಲೊ, ಹರೀಶ್ ಶೆಟ್ಟಿ, ವಿದ್ಯಾ ಸಂಪತ್ ಬಂಡವಾಳ ಹೂಡಿದ್ದಾರೆ. ತೇಜೇಶ್ ಪೂಜಾರಿ ಎಲ್ಟನ್ ಮಸ್ಕರೇನಸ್ ನಿರ್ದೇಶಕರಾಗಿದ್ದು ಕಥೆ, ಚಿತ್ರಕಥೆ, ಸಂಭಾಷಣೆ ಸಾಹಿತ್ಯ: ಮೋಹನ್ ರಾಜ್. ಸಂಗೀತ: ಪ್ಯಾಟ್ಟ್ಸನ್ ಪಿರೇರಾ , ಸಾಯೀಶ್ ಭಾರದ್ವಾಜ್ ಛಾಯಾಗ್ರಹಣ: ಚಂತೂ ಮೆಪ್ಪಯುರು, ಪ್ರೊಡಕ್ಷನ್ ಮ್ಯಾನೇಜರ್ ಕಾರ್ತಿಕ್ ರೈ ಅಡ್ಯನಡ್ಕ, ನೃತ್ಯ ಸಂಯೋಜಕ ವಿಜೇತ್ R ನಾಯಕ್, ಸಂಕಲನ ಗಣೇಶ್ ನೀರ್ಚಾಲ್, ಪ್ರಚಾರ ವಿನ್ಯಾಸ ದೇವಿ ನಿರ್ವಹಿಸಿದ್ದಾರೆ. ತುಡರ್ ಸಿನಿಮಾಕ್ಕೆ ಮಂಗಳೂರು ಮತ್ತು ಉಡುಪಿಯ ಆಸುಪಾಸಿನಲ್ಲಿ ಸುಮಾರು 35 ದಿನಗಳ ಕಾಲ ಚಿತ್ರೀಕರಣ ನಡೆದಿದೆ.
ತಾರಾಗಣದಲ್ಲಿ ಸಿದ್ಧಾರ್ಥ್ ಎಚ್ ಶೆಟ್ಟಿ, ದೀಕ್ಷಾ ಭಿಷೇ, ಅರವಿಂದ ಬೋಳಾರ್, ರೂಪ ವರ್ಕಾಡಿ, ಸದಾಶಿವ ಅಮೀನ್, ನಮಿತಾ ಕೂಳೂರು, ಎಲ್ಟನ್ ಮಶ್ಚರೇನ್ಹಸ್, ವಿಕಾಸ್ ಪುತ್ರನ್, ಪ್ರಜ್ವಲ್ ಶೆಟ್ಟಿ, ಹರ್ಷಿತಾ ಶೆಟ್ಟಿ, ರಾಧೇಶ್ ಶೆಣೈ ಅನ್ವಿತಾ ಸಾಗರ್, ಜಯಶೀಲ, ಉಮೇಶ್ ಮಿಜಾರ್, ಅಶೋಕ್ ಕುಮಾರ್ , ಉದಯ ಪೂಜಾರಿ, ಮೋಹನ್ ರಾಜ್ ಇದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post