ಕುವೈತ್: ಕುವೈತ್ನಲ್ಲಿ ಮಲಯಾಳಿ ಉದ್ಯಮಿಗೆ ಸೇರಿದ ಕಟ್ಟಡವೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, 35 ಮಂದಿ ಸಜೀವದಹನವಾಗಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಮೃತರಲ್ಲಿ ನಾಲ್ವರು ಭಾರತೀಯರಾಗಿದ್ದಾರೆ. ದಕ್ಷಿಣ ಕುವೈತ್‌ನ ಮಂಗಾಫ್ ನಗರದಲ್ಲಿ ಕಟ್ಟಡದಲ್ಲಿ ಅವಘಡ ಸಂಭವಿಸಿದೆ, ಈ ಕಟ್ಟಡದಲ್ಲಿರುವವರು ಹೆಚ್ಚಿನವರು ಮಲಯಾಳಿಗಳು ಎನ್ನಲಾಗಿದೆ. ಮೃತರಲ್ಲಿ ಇಬ್ಬರು ತಮಿಳುನಾಡು ಮತ್ತು ಉತ್ತರ ಭಾರತದವರು ಎನ್ನಲಾಗಿದೆ.
ಕುವೈತ್ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ಕೆಲವು ಗಂಭೀರ ಸ್ಥಿತಿಯಲ್ಲಿರುವ ಎಲ್ಲಾ ಗಾಯಾಳುಗಳನ್ನು ಅಗತ್ಯ ವೈದ್ಯಕೀಯ ಚಿಕಿತ್ಸೆಗಾಗಿ ಹತ್ತಿರದ ಹಲವಾರು ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ. ಕಟ್ಟಡದ ಬೆಂಕಿಯಲ್ಲಿ ಗಾಯಗೊಂಡವರಿಗೆ ಸೂಕ್ತ ವೈದ್ಯಕೀಯ ಆರೈಕೆಯನ್ನು ಒದಗಿಸಲು ವೈದ್ಯಕೀಯ ತಂಡಗಳು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿವೆ ಎಂದು ಸಚಿವಾಲಯ ಹೇಳಿದೆ.
ಅಡುಗೆ ಮನೆಯಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದೆ, ಬೆಂಕಿಯನ್ನು ಕಂಡು ಕೆಲವರು ಅಪಾರ್ಟ್ಮೆಂಟ್ನಿಂದ ಕೆಳಗೆ ಹಾರಿ ಸಾವನ್ನಪ್ಪಿದ್ದಾರೆ, ಇನ್ನೂ ಕೆಲವರು ಬೆಂಕಿಯಲ್ಲೇ ಬೆಂದು ಹೋಗಿದ್ದಾರೆ. ಈ ಕಟ್ಟಡದಲ್ಲಿ ಸುಮಾರು 195 ಮಂದಿ ಸಾವಿಸುತ್ತಿದ್ದರು, ಈ ಕಟ್ಟಡವು ಕೆಜಿ ಅಬ್ರಹಾಂ ಮಾಲಿಕತ್ವದಲ್ಲಿದೆ. ಬೆಂಕಿಯನ್ನು ಹತೋಟಿಗೆ ತರಲಾಗಿದ್ದರೂ, ಇನ್ನೂ ಕೆಲವರು ಒಳಗೆ ಸಿಲುಕಿರುವ ಬಗ್ಗೆ ವರದಿಯಾಗಿದೆ.
Discover more from Coastal Times Kannada
Subscribe to get the latest posts sent to your email.
Discussion about this post