ಕುಂದಾಪುರ, ಸೆ.11: ವಾಕಿಂಗ್ ತೆರಳಿದ್ದ ತಾಯಿ ಮಗ ಹೊಳೆಗೆ ಬಿದ್ದು ಮೃತಪಟ್ಟ ಘಟನೆ ಇಂದು ಬೆಳಗ್ಗೆ ಗಂಗೊಳ್ಳಿ ಸಮೀಪದ ಚುಂಗಿಗುಡ್ಡೆ ಎಂಬಲ್ಲಿ ಬೆಳಗ್ಗೆ 11ಗಂಟೆ ಸುಮಾರಿಗೆ ನಡೆದಿದೆ.
ಪತ್ರಕರ್ತ ನೋಯೆಲ್ ಚುಂಗಿಗುಡ್ಡೆ ಎಂಬವರ ಪತ್ನಿ ರೋಸಾರಿಯೊ ಹಾಗೂ ಮಗ ಶಾನ್(11) ಮೃತಪಟ್ಟ ತಾಯಿ ಮತ್ತು ಮಗ. ಪ್ರತಿದಿನದಂತೆ ಇಂದು ಕೂಡ ಮನೆ ಸಮೀಪದ ಹೊಳೆ ಬದಿ ತಾಯಿ ಮತ್ತು ಮಗ ವಾಕಿಂಗ್ಗೆ ತೆರಳಿದ ವೇಳೆ ದುರಂತ ಸಂಭವಿಸಿದೆ. ವಾಕಿಂಗ್ ವೇಳ ಮಗ ಅಕಸ್ಮಿಕವಾಗಿ ಹೊಳೆಗೆ ಬಿದ್ದಿದ್ದಾನೆ ಎನ್ನಲಾಗಿದೆ. ಮಗನನ್ನು ರಕ್ಷಣೆ ಮಾಡಲು ತಾಯಿ ಕೂಡ ನೀರಿಗೆ ಹಾರಿದರೆನ್ನಲಾಗಿದೆ. ಆದರೇ ನೀರಿನ ಸೆಳವಿಗೆ ಸಿಕ್ಕ ತಾಯಿ ಮಗ ಇಬ್ಬರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಕುಂದಾಪುರ ಅಗ್ನಿಶಾಮಕ ದಳ, ಗಂಗೊಳ್ಳಿ ಪೊಲೀಸ್ ಸಿಬ್ಬಂದಿ ಹಾಗೂ ಸ್ಥಳೀಯರು ಹುಡುಕಾಟ ನಡೆಸಿದರು. ಮೊದಲು ಮಗನ ಮೃತದೇಹ ಪತ್ತೆಯಾಗಿದ್ದು, ನಂತರ ತಾಯಿಯ ಮೃತದೇಹ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
Discover more from Coastal Times Kannada
Subscribe to get the latest posts sent to your email.
Discussion about this post