ಮಂಗಳೂರು,ಸೆ 12 : ನಗರದ ಕುಲಶೇಖರ ಕೊರ್ಡೆಲ್ ಧರ್ಮಕೇಂದ್ರಕ್ಕೆ ಈಗ 150 ವರ್ಷಗಳ ಸಂಭ್ರಮ. ಪವಿತ್ರ ಶಿಲುಬೆಯ ಆಶ್ರಯದಲ್ಲಿ ಈ ಅವಧಿಯಲ್ಲಿ ಜನತೆ ಪಡೆದ ವರಗಳು ಅಪಾರ. ಈ ಸಂಭ್ರಮಾಚರಣೆಯನ್ನು ಸೆಪ್ಟಂಬರ್ 14 ಹಾಗೂ 17 ರಂದು ಕೃತಜ್ಞತಾ ಬಲಿಪೂಜೆಯೊಂದಿಗೆ ನೆರವೇರಿಸಲು ಹೋಲಿ ಕ್ರಾಸ್ ಧರ್ಮಕೇಂದ್ರವು ನಿರ್ಧರಿಸಿದೆ ಎಂದು ಧರ್ಮಕೇಂದ್ರದ ಪ್ರಧಾನ ಧರ್ಮಗುರು ಫಾ.ಕ್ಲಿಫರ್ಡ್ ಫೆರ್ನಾಂಡಿಸ್ ತಿಳಿಸಿದ್ದಾರೆ.
ಧರ್ಮಕೇಂದ್ರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ. 14ರಂದು ಈ ಧರ್ಮಕೇಂದ್ರವು ಚಾರಿತ್ರಿಕ ಘಟನಯ 150 ವರುಷಗಳ ಸಂಭ್ರಮವನ್ನು ಭಕ್ತಿಪೂರ್ವಕವಾಗಿ ಆಚರಿಸಲಿದೆ. ಅದಕ್ಕಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈಗಾಗಲೇ ಯುವಜನರ ದಿನ, ದಂಪತಿಗಳ ದಿನ, ಶಿಕ್ಷಕರ ಹಾಗೂ ಆರೋಗ್ಯ ಕಾರ್ಯಕರ್ತರ ದಿನಗಳನ್ನು ಆಚರಿಸಲಾಗಿದ. ಸ. 14 ರಂದು ಸಂಜೆ 5.30 ಕ್ಕೆ ಮಂಗಳೂರು ಧರ್ಮಕ್ಷೇತ್ರದ ಪ್ರಧಾನ ಗುರು ಮೊ, ಮ್ಯಾಕ್ಸಿಮ್ ಮೊರೊನ್ಮಾ ಅವರು ಕೃತಜ್ಞತಾ ಬಲಿಪೂಜೆಯನ್ನು ಅರ್ಪಿಸುವರು. ಬಳಿಕ ಧರ್ಮಕೇಂದ್ರದಲ್ಲಿ ಸೇವೆ ನೀಡಿದ ಎಲ್ಲಾ ಮುಖ್ಯ ಸ್ಮರ, ಕಾರ್ಯದರ್ಶಿಗಳ, ವಾರ್ಡ್ ಮುಖ್ಯ ಸ್ಮರ ಹಾಗೂ ಬೆನಫ್ಯಾಕ್ಟರ್, ಫೌಂಡರ್ ಗಳ ದಿನವನ್ನು ಆಚರಿಸಲಾಗುವುದು, ಸೆ.17 ರಂದು ಹಬ್ಬದ ಸಂಭ್ರಮ. ಸಂಜೆ 5.30ಕ್ಕೆ ಮಂಗಳೂರಿನ ಧರ್ಮಾಧ್ಯಕ್ಷ ಅ. ವಂ. ಡಾ. ಪೀಟರ್ ಪಾವ್ ಸಲ್ಮಾನಾ ಅವರು ಕೃತಜ್ಞತಾ ಬಲಿಪೂಜೆಯನ್ನು ಆರ್ಪಿಸುವರು. ಅಂದು ಈ ಕೇಂದ್ರದಲ್ಲಿ ಸೇವೆ ಸಲ್ಲಿಸಿದ ಎಲ್ಲಾ ಧರ್ಮಗುರುಗಳ ಹಾಗೂ ಇತರ ಧಾರ್ಮಿಕ ವ್ಯಕ್ತಿಗಳ ದಿನವನ್ನಾಗಿ ಆಚರಿಸಲಾಗುವುದು. ಮುಂದಿನ ದಿನಗಳಲ್ಲಿ ಹಿರಿಯ ನಾಗರಕರ ದಿನ, ವಿಕಲಚೇತನರ ದಿನ, ಕ್ರೀಡಾಕೂಟ, ಫ್ಯಾನ್ಸಿ ಫೆಟ್, ಅನಿವಾಸಿ ಭಾರತೀಯರ ದಿನ, ಸರ್ವ ಧರ್ಮ ಕೂಟ ಇತ್ಯಾದಿ ನಡೆಸಲು ಉದ್ದೇಶಿಸಲಾಗಿದೆ.
ಅಮರ ಫ್ರಾದ್ ಸ್ವಾಮಿ : ವಂ. ಅಲೆಕ್ಸಾಂಡರ್ ದೂಬ್ಬಾ ಫ್ರಾನ್ಸಿನಿಂದ ಮಂಗಳೂರಿಗೆ ಬಂದಿದ್ದು, 1865ರಿಂದ 1877ರ ವರೆಗೆ ಮಿಲಾಗ್ರಿಸ್ ಧರ್ಮಕೇಂದ್ರದಲ್ಲಿ ತಮ್ಮ ಅಮೂಲ್ಯ ಸೇವೆಯನ್ನು ಸಲ್ಲಿಸಿದರು. ಅಲ್ಲಿಂದ ಅವರು ತಮ್ಮ ವ್ಯಾಪ್ತಿಯೊಳಗೆ ಬರುವ ಕುಲಶೇಖರ, ಬೋಂದೆಲ್, ಕೆಲರಾಯ್, ವಾಮಂಜೂರು, ವಾಲೆನ್ಸಿಯಾ, ನಾಗೋರಿ ಮುಂತಾದ ಪ್ರದೇಶಗಳ ಜನರ ಸೇವೆಗಾಗಿ ಕಾಲ್ನಡಿಗೆಯಲ್ಲೇ ಪಯಣಿಸುತ್ತಿದ್ದರು. ಈಗ ಈ ಎಲ್ಲಾ ಪ್ರದೇಶಗಳು ಸ್ವತಂತ್ರ ಧರ್ಮಕೇಂದ್ರಗಳಾಗಿವೆ. ಹಾಗೆ ಪಯಣಿಸುವಾಗ ಅವರು ಕೇವಲ ಕ್ರೈಸ್ತರ ಸೇವೆ ಮಾತ್ರ ಮಾಡದೆ, ಎಲ್ಲಾ ಜನರ ಒಳಿತಿಗಾಗಿ ಶ್ರಮಿಸಿದರು. ಅನೇಕ ಜನರ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸಿ ತಮ್ಮ ಕೈಲಾದ ಸಹಾಯವನ್ನು ನೀಡಿದ್ದರು. ಕೊಂಕಣಿ ಹಾಗೂ ತುಳು ಭಾಷೆಯನ್ನು ಕಲಿತರು. ತಮ್ಮ ವಿಶ್ವಾಸದ ಪ್ರಾರ್ಥನೆಯ ಮೂಲಕ ಜನರ ರೋಗರುಜಿನಗಳನ್ನು ಗುಣವಡಿಸಿದರು, ಕೃಷಿಯ ಫಸಲು ಹಚ್ಚಾಗುವಂತೆಯೂ ಆಶೀರ್ವದಿಸಿದರು. ಅವರ ಆಳವಾದ ಆಧ್ಯಾತ್ಮಿಕ ಜೀವನವನ್ನು ನೋಡಿದ ಜನರು ಅವರನ್ನು ಒಬ್ಬ ಸಂತನಂತೆ ಕಂಡಿದ್ದರು. ಅವರ ಕರುಣಾಮಯಿ ಹೃದಯ ಎಲ್ಲಾ ಜನರನ್ನು ಅವರಲ್ಲಿ ಸೆಳೆಯಿತು. ಈ ಕಾರಣದಿಂದಲೇ ಅವರು ಕೆಥೋಲಿಕ್ ಕ್ರೈಸ್ತರಿಗೆ ಒಲವಿನ ‘ಫ್ರಾಡ್‌ಸಾಯ’ ಆದರೆ ತುಳುವರಿಗೆ ‘ಕುಲಾರ್ದ ಅ ಆದರು. ಈ ಹೆಸರುಗಳು ಈಗಲೂ ಪ್ರಚಲಿತವಾಗಿವೆ. ಕುಲಶೇಖರ ದೇವಾಲಯದ ಶಂಕು ಸ್ಥಾಪನೆ ಮಾಡಿ ಮುಂದಿನ ನಾಲ್ಕು ವರ್ಷಗಳ ಕಾಲ, ಕಟ್ಟಡ ನಿರ್ಮಾಣದ ಜಾಗೆ, ಸುಂದರ ಹಾಗೂ ವಿಶಾಲವಾದ ಪ್ರದೇಶವನ್ನು ಸಜ್ಜುಗೊಳಿಸಿದರು. ಪಿತ್ರಾರ್ಜಿತ ಆಸ್ತಿಯಿಂದ ಹಾಗೂ ಧರ್ಮಾಧ್ಯಕ್ಷರಿಂದ ದೊರೆತ ಒಟ್ಟು 60,000 ಫಾಕ್ಗಳನ್ನು ಈ ಎಲ್ಲಾ ಕೆಲಸಗಳಿಗೆ ವಿನಿಯೋಗಿಸಿದರು. ಕೆಲಸ ಅರ್ಥದಲ್ಲಿರುವಾಗಲೇ, 1877 ರಲ್ಲಿ ಕೊಲೆರಾ ರೋಗಿಗಳ ಶುಶೂಷೆಯಲ್ಲಿ ತೊಡಗಿಸಿಕೊಂಡ ಸಂದರ್ಭದಲ್ಲಿ ಅದೇ ರೂಗಳ ಬಲಿಯಾದರು. 1877 ಡಿಸೆಂಬರ್ 11 ರಂದು ಅವರು ದೇವರ ಪಾದ ಸೇರಿದರು. ಅವರ ಇಚ್ಚೆಯಂತೆ ಮರುದಿನ ಅವರನ್ನು ಕುಲಶೇಖರದಲ್ಲಿ ಅವರೇ ಸಿದ್ರಪಡಿಸಿಟ್ಟಿದ ಸಮಾಧಿಯಲ್ಲಿ ಇರಿಸಲಾಯಿತು. ಅಂತಯೇ ಅಂದಿನಿಂದಲೇ ಈ ಕುಲಶೇಖರದ ಭೂಮಿ ಪಾವನವಾಯಿತು. ತಂಡೋಪತಂಡವಾಗಿ ಅವರ ಸಮಾಧಿಗೆ ಭೇಟಿ ನೀಡಿ ಅನೇಕ ವರಗಳನ್ನು ಪಡೆಯಲಾರಂಭಿಸಿದರು. ಅವರು ಪವಾಡಪುರಷರಂದೇ ಪ್ರಸಿದ್ಧರಾದರು. ಅವರ ಸಮಾಧಿಯ ಮಣ್ಣು ಅನೇಕರ ರೋಗಗಳು ಗುಣವಡಿಸುವಲ್ಲಿ ಸಹಕಾರಿಯಾಗಿದೆ. ಇದೇ ನಂಬಿಕೆ ಹಾಗು ಭಕ್ತಿಯು ಈಗಲೂ ಜನರಲ್ಲಿದ್ದು, ಈ ಪುಣ್ಯ ಸಮಾಧಿಯ ಭೇಟಿಗಾಗಿ ಜನರು ನಿರಂತರವಾಗಿ ಬರುತ್ತಿದಾರ, ಫ್ರಾಡ್‌ಸ್ವಾಮಿಯವರು ಇಲ್ಲಿ ಅಮರರಾಗಿದ್ದಾರೆ. ಪ್ರತಿ ವರ್ಷ ಡಿಸೆಂಬರ್ 11ರಂದು ಫ್ರಾದ್ ಸ್ವಾಮಿ ಪುಣ್ಯ ಸ್ಮರಣೆಯ ಅಂಗವಾಗಿ ಸ್ಥಾವಕರ ದಿನವನ್ನು ಆಚರಿಸಲಾಗುತ್ತದೆ.
ಸುದ್ದಿ ಗೋಷ್ಠಿಯಲ್ಲಿ ಅನಿಲ್ ಡೇಸಾ,ಡಾ.ಲವಿನಾ ಡಿಮೆಲ್ಲೊ,ರೂತ್ ಕ್ಯಾಸ್ತಲಿನೊ, ಎಲಿಯಾಸ್ ಫೆರ್ನಾ೦ಡೀಸ್ ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post